ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬರಲಿದ್ದಾನೆ ಶ್ರೀಕೃಷ್ಣ, 50 ಹೆಸರುಗಳ ಅರ್ಥ

By ವಿಶ್ವಾಸ. ಸೋಹೋನಿ
|
Google Oneindia Kannada News

ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಪ್ರತಿವರ್ಷವು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಆಗಸ್ಟ್ 25 ಸಾಕ್ಷಿಯಾಗಲಿದೆ.

ಬಾಲ್ಯದಲ್ಲಿ ಗೋವರ್ಧನ ಗಿರಿ ಎತ್ತಿದ ಶ್ರೀ ಕೃಷ್ಣನಿಂದ ಹಿಡಿದು ಕುರುಕ್ಷೇತ್ರದ ಮಾರ್ಗದರ್ಶಕ ಶ್ರೀ ಕೃಷ್ಣನವೆರೆಗೂ ಪಾತ್ರಗಳು ಬದಲಾಗುತ್ತವೆ. ಆದರೆ ವ್ಯಕ್ತಿತ್ವ ಬೆಳೆಯುತ್ತಾ ಸಾಗುತ್ತದೆ. [ಉಡುಪಿಯಲ್ಲಿ ವೈಭವೋಪೇತ ವಿಟ್ಲಪಿಂಡಿ ಉತ್ಸವ]

ಕೃಷ್ಣನ 50 ವಿಶೇಷ ನಾಮಗಳು ಮತ್ತು ಅರ್ಥ
1. ಕೃಷ್ಣ : ಎಲ್ಲರನ್ನೂ ತನ್ನ ಕಡೆ ಆಕರ್ಷಣೆ ಮಾಡಿಕೊಳ್ಳುವವನು.
2. ಗಿರಿಧರ: ಪರ್ವತವನ್ನು ಎತ್ತಿ ಹಿಡಿದವನು.
3. ಮುರಳೀಧರ : ಮುರಳಿಯನ್ನು ನುಡಿಸುವವನು.
4. ಪಿತಾಂಬರಧಾರಿ : ಹಳದಿ ವಸ್ತ್ರವನ್ನು ಧರಿಸಿದವನು.
5. ಮಧುಸೂದನ : ಮಧು ಎಂಬ ದೈತ್ಯನನ್ನು ಸಂಹಾರ ಮಾಡಿದವನು.
6. ಯಶೋದ ದೇವಕಿ ನಂದನ : ಯಶೋದ ಹಾಗೂ ದೇವಕಿಯರಿಗೆ ಸಂತೋಷವನ್ನು ನೀಡುವ ಪ್ರಿಯ ಪುತ್ರ.
7. ಗೋಪಾಲ : ಗೋವುಗಳು ಅಥವಾ ಪೃಥ್ವಿಯ ಪಾಲನೆ ಮಾಡುವವನು.

Different Names of Sri Krishna with meaning Part 1

8. ಗೋವಿಂದ : ಹಸುಗಳ ರಕ್ಷಕ.
9. ಶ್ರೀನಾಥ : ಲಕ್ಷ್ಮಿಗೆ ಆನಂದ ಕೊಡುವವನು.
10. ಕುಂಜ ವಿಹಾರಿ : ಕುಂಜ ಎಂಬ ಹೂದೋಟದಲ್ಲಿ ವಿಹಾರ ಮಾಡುವವನು.
11. ಚಕ್ರಧಾರಿ: ಸುದರ್ಶನ ಚಕ್ರ, ಜ್ಙಾನ ಚಕ್ರ, ಶಕ್ತಿ ಚಕ್ರ ಧರಿಸುವವನು.
12. ಶ್ಯಾಮ : ಕಪ್ಪು ವರ್ಣದವನು.
13. ಮಾಧವ : ಮಾಯಾಪತಿ.
14. ಮುರಾರಿ : ಮುರ ಎಂಬ ದೈತ್ಯನನ್ನು ಸೋಲಿಸಿದವನು.
15. ಅಸುರಾರಿ : ಅಸುರರನ್ನು ಸೋಲಿಸಿದವನು.
16. ಬನವಾರಿ : ಹೂದೋಟಗಳಲ್ಲಿ ವಿಹರಿಸುವವನು.
17. ಮುಕುಂದ : ನಿಧಿಗಳನ್ನು ಇಟ್ಟುಕೊಂಡಿರವವನು.
18. ಯೋಗೀಶ್ವರ : ಯೋಗಿಗಳ ಈಶ್ವರ. [ಶ್ರೀ ಕೃಷ್ಣ ಜಯಂತಿಯಂದು ಪೂಜೆ ಮಾಡುವುದು ಹೇಗೆ?]
19. ಗೊಪೇಶ : ಗೋಪಿಗಳ ಈಶ.
20. ಹರಿ : ದು:ಖವನ್ನು ದೂರಮಾಡುವವನು.
21. ಮದನ : ಸುಂದರ.
22. ಮನೋಹರ : ಮನಸ್ಸನ್ನು ಆಕರ್ಷಿಸುವವನು.
23. ಮೋಹನ : ಸಮ್ಮೋಹನ ಮಾಡುವವನು.
24. ಜಗದೀಶ : ಜಗತ್ತಿನ ಮಾಲೀಕ.
25. ಪಾಲನಹಾರ : ಸರ್ವರ ಲಾಲನೆ ಪಾಲನೆ ಮಾಡುವವನು.
26. ಕಂಸಾರಿ : ಕಂಸನನ್ನು ಸಂಹರಿಸಿದವನು.
27. ರುಕ್ಮಿಣಿ ವಲ್ಲಭ : ರುಕ್ಮಿಣಿಯ ಪತಿ.
28. ಕೇಶವ : ಕೇಶ ಎಂಬ ದೈತ್ಯನ ಸಂಹಾರ ಮಾಡಿದವನು. ನೀರಿನ ಮೇಲೆ ವಾಸ ಮಾಡುವವನು.
29. ವಾಸುದೇವ : ವಸುದೇವನ ಪುತ್ರ.
30. ರಣಛೋರ : ರುದ್ರಭೂಮಿಯಲ್ಲಿ ಇರುವವನು.
31. ಗುಢಾಕೇಶ : ನಿದ್ರೆಯ ಮೇಲೆ ವಿಜಯಿಯಾದವನು.
32. ಋಷಿಕೇಶ : ಇಂದ್ರಿಯಗಳನ್ನು ಜಯಿಸಿದವನು.
33. ಸಾರಥಿ : ಅರ್ಜುನನ ರಥದ ಸಾರಥಿ.
34. ಪೂರ್ಣಪರಬ್ರಹ್ಮ : ದೇವತೆಗಳಿಗೂ ಮಾಲೀಕ.
35. ದೇವೇಶ : ದೇವಗಳ ಈಶ.
36. ನಾಗ ನಥಿಯ : ಕಲಿನಾಗವನ್ನು ಕೊಂದವನು.
37. ವೃಷ್ಣಿಪತಿ : ಆ ಕುಲದಲ್ಲಿ ಹುಟ್ಟಿದವನು.
38. ಯದುಪತಿ : ಯಾದವರ ಮಾಲೀಕ.
39. ಯದುವಂಶಿ : ಯದು ವಂಶದ ಅವತಾರ.
40. ದ್ವಾರಕಾಧೀಶ : ದ್ವಾರಕೆಯ ಮಾಲೀಕ.
41. ನಾಗರ : ಸುಂದರ.
42. ಛಲೀಯ : ಛಲ (ಹಠ) ಮಾಡುವವನು.
43. ಮಥುರಾ ಗೋಕುಲವಾಸಿ : ಈ ಸ್ಥಳಗಳ ನಿವಾಸಿ.
44. ವಲ್ಲಭ : ಸದಾ ಆನಂದದಲ್ಲಿ ಇರುವವನು.
45. ದಾಮೋದರ : ಹೊಟ್ಟೆಗೆ ಹಗ್ಗ ಕಟ್ಟಿಸಿಕೊಂಡವವನು.
46. ಅಘಹಾರಿ : ಪಾಪಗಳನ್ನು ಹರಿಸುವವನು.
47. ಸಖ : ಅರ್ಜುನ ಮತ್ತು ಸುಧಾಮನ ಮಿತ್ರ.
48. ರಾಸರಚಯ್ಯ : ರಾಸ(ಒಂದು ಪ್ರಕಾರದ ನೃತ್ಯ) ರಚಿಸಿದವನು.
49. ಅಚ್ಯುತ : ಅವನ ಧಾಮದಿಂದ ಮರಳಿ ಹೋಗಲು ಸಾಧ್ಯವಿಲ್ಲ.
50. ನಂದಲಾಲ : ನಂದನ ಪುತ್ರ.

English summary
This time to be at the birth of Krishna Janmashtami (August 25, 2016) with special circumstances will be fruitful. Here are Different Names of Sri Krishna with meaning. Lord Krishna, one of the most revered Gods of Hindu religion is known by many names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X