ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು: ಮೈಸೂರು, ಅ. 01 : ಮೈಸೂರು ದಸರಾ ಗುರುವಾರ ಬೆಳಗ್ಗೆ ಉದ್ಘಾಟನೆಗೊಂಡ ನಂತರ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ಗೂ ಚಾಲನೆ ಸಿಕ್ಕಿದೆ. ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಸಿಂಹ ಪೂಜೆ ನೆರವೇರಿಸಿ ಪ್ರದಕ್ಷಿಣೆ ನಡೆಸುವ ಮೂಲಕ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್‍ ಗೆ ಚಾಲನೆ ನೀಡಿದರು.

ಶನಿವಾರ ನಿಗದಿತ ಮುಹೂರ್ತದಲ್ಲಿ ಬೆಳಗ್ಗೆ 5.50 ರಿಂದ 6.10ರ ಶುಭಲಗ್ನದಲ್ಲಿ ಆಸನಕ್ಕೆ ಸಿಂಹ ಮತ್ತು ಮೆಟ್ಟಿಲುಗಳನ್ನು ಜೋಡಿಸಿ ಪೂಜಾ ಕಾರ್ಯ ನಡೆಸಲಾಯಿತು. ಆ ನಂತರ ಚಾಮುಂಡಿಬೆಟ್ಟ, ಪರಕಾಲ ಮಠ, ಸೇರಿದಂತೆ ವಿವಿಧ ದೇವಾಲಯಗಳಿಂದ ಬಂದಿದ್ದ ಶೇಷ ಪ್ರಸಾದ ಮತ್ತು ಶೇಷ ವಸ್ತ್ರಗಳನ್ನು ಸ್ವೀಕರಿಸಿದರು. [ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ]

Pravet Darbar

ಇದೇ ಸಂದರ್ಭ ರಾಣಿ ತ್ರಿಷಿಕಾ ದೇವಿ ಮಹಾರಾಜ ಯದುವೀರ್ ಒಡೆಯರ್ ಪಾದಪೂಜೆ ನೆರವೇರಿಸಿದರು. ಪಳಪಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು ಅಲ್ಲದೆ, ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ ಯದುವೀರ್ ದರ್ಬಾರ್ ಹಾಲ್‍ ಗೆ ಬರುತ್ತಿದ್ದಂತೆಯೇ ಇಂದ್ರನ ಐಭೋಗವನ್ನು ನೆನಪಿಸುವಂತಿತ್ತು. [ದಸರಾ ವಿಶೇಷ: ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಹಾರಾಟ!]

ದರ್ಬಾರ್‍ ಗೆ ಆಗಮಿಸಿದ ಯದುವೀರ್ ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾದರು. [ಮೈಸೂರು ದಸರಾ ಪೂಜಾ ವಿಧಿವಿಧಾನಗಳ ಸಂಪೂರ್ಣ ವಿವರಣೆ ಇಲ್ಲಿದೆ!]

ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬಂತು.ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತದೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ.

English summary
Private Darbar begins in Mysore amba vilas palace on Saturday, Oct 01. Private Darbar one of the attractions of the Mysore Dasara celebrations, which reminds the glory of Mysore King. Special pooja performs for Sword of Wodeyar Yaduveer during private durbar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X