• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 Day 3: ನವರಾತ್ರಿ 3ನೇ ದಿನ ಸೆ. 28, ಚಂದ್ರಘಂಟಾ ಪೂಜೆ ಮಹತ್ವ, ಮುಹೂರ್ತ, ಮಂತ್ರ

|
Google Oneindia Kannada News

ನವರಾತ್ರಿ ಒಂಬತ್ತು ದಿನಗಳು ಆಚರಿಸುವ ಮಂಗಳಕರ ಹಬ್ಬ. ನವರಾತ್ರಿ ಈಗಾಗಲೇ ಆರಂಭವಾಗಿದ್ದು ಇಂದು ಎರಡನೇ ದಿನ. ದೇಶದಾದ್ಯಂತ ಬಹಳಷ್ಟು ವೈಭವದಿಂದ ನವರಾತ್ರಿಯನ್ನು ಆಚರಿಸಲಾಗುತ್ತಿದೆ. ಹಿಂದೂ ಹಬ್ಬವಾದ ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಈ ವರ್ಷ ನವರಾತ್ರಿಯ ಮೂರನೇ ದಿನದಂದು(ಸೆಪ್ಟೆಂಬರ್ 28) ಶುಕ್ಲ ತೃತೀಯದಲ್ಲಿ ಭಕ್ತರು ಚಂದ್ರಘಂಟಾ ದೇವಿಯನ್ನು ಪೂಜಿಸುತ್ತಾರೆ. ಅವಳು ದುರ್ಗಾ ದೇವಿಯ ಮೂರನೇ ರೂಪ. ಅವಳ ಹಣೆಯಲ್ಲಿ ಗಂಟೆಯಂತೆ ಕಾಣುವ ಅರ್ಧಚಂದ್ರನಿಂದ ಕಂಗೊಳಿಸುವುದರಿಂದ ಆಕೆಯನ್ನು ದೇವಿ ಚಂದ್ರಘಂಟಾ ಎಂದು ಕರೆಯುತ್ತಾರೆ.

ಚಂದ್ರಘಂಟಾ ಹುಲಿಯ ಮೇಲೆ ಕುಳಿತಿದ್ದಾಳೆ. ತನ್ನ ನಾಲ್ಕು ಎಡಗೈಗಳಲ್ಲಿ ತ್ರಿಶೂಲ, ಗದಾ, ಖಡ್ಗ, ಶಂಕು ಮತ್ತು ಕಮಂಡಲವನ್ನು ಹಿಡಿದ್ದಾಳೆ ಮತ್ತು ನಾಲ್ಕು ಬಲಗೈಗಳಲ್ಲಿ ಕಮಲ, ಬಾಣ, ಧನುಷ್ ಹಿಡಿದಿದ್ದು ಇನ್ನೊಂದು ಕೈಯನ್ನು ಹುಲಿಯ ಮೇಲೆ ಮತ್ತೊಂದು ಕೈಯಿಂದ ಆಶೀರ್ವಾದ ನೀಡಿದ್ದಾಳೆ. ಆಕೆಯ ಐದನೇ ಎಡಗೈ ವರದ ಮುದ್ರೆಯಲ್ಲಿದೆ ಮತ್ತು ಐದನೇ ಬಲಗೈ ಅಭಯ ಮುದ್ರೆಯಲ್ಲಿದೆ ಎಂದು ಹೇಳಲಾಗುತ್ತದೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿ ನೆಲೆಸುತ್ತದೆ.

Navratri 2022 Day 2: ನವರಾತ್ರಿ 2ನೇ ದಿನ ಸೆ. 27, ಬ್ರಹ್ಮಚಾರಿಣಿ ಪೂಜೆ ಮಹತ್ವ, ಮುಹೂರ್ತ, ಮಂತ್ರNavratri 2022 Day 2: ನವರಾತ್ರಿ 2ನೇ ದಿನ ಸೆ. 27, ಬ್ರಹ್ಮಚಾರಿಣಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

ನವರಾತ್ರಿ 2022 ದಿನ 3 : ಪೂಜಾ ವಿಧಿ

ನವರಾತ್ರಿ 2022 ದಿನ 3 : ಪೂಜಾ ವಿಧಿ

ಚಂದ್ರಘಂಟಾ ದೇವಿಯ ವಿಗ್ರಹವನ್ನು ಕೇಸರ (ಕೇಸರಿ), ಗಂಗಾಜಲ (ಪವಿತ್ರ ನೀರು) ಮತ್ತು ಕೇವ್ರಾ (ಹೂವಿನ ನೀರು) ನಲ್ಲಿ ಸ್ನಾನ ಮಾಡಿ ಮರದ ಮೇಜಿನ ಮೇಲೆ ಇರಿಸುವ ಮೂಲಕ ಪೂಜೆ ಪ್ರಾರಂಭವಾಗುತ್ತದೆ. ನಂತರ ಅವಳನ್ನು ಚಿನ್ನದ ಬಣ್ಣದ ಬಟ್ಟೆಗಳನ್ನು ಹೊದಿಸಿ ಮತ್ತು ಅವಳಿಗೆ ಹಳದಿ ಹೂವುಗಳು, ಕಮಲಗಳು, ಸಿಹಿತಿಂಡಿಗಳು, ಪಂಚಾಮೃತವನ್ನು ಅರ್ಪಿಸಲಾಗುತ್ತದೆ.

ಬಣ್ಣ: ರಾಯಲ್ ಬ್ಲೂ

ಬಣ್ಣ: ರಾಯಲ್ ಬ್ಲೂ

ನೀಲಿ ಬಣ್ಣವು ಶ್ರೀಮಂತಿಕೆ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ.

ಮಂತ್ರ

ಓಂ ದೇವೀ ಚಂದ್ರಘಂಟಾಯೈ ನಮಃ॥

ಶುಭ ಮುಹೂರ್ತ

ದೃಕ್ ಪಂಚಾಂಗದ ಪ್ರಕಾರ, ಶುಭ ಸಮಯವು 02:28 am (ಸೆಪ್ಟೆಂಬರ್ 28) ಕ್ಕೆ ಪ್ರಾರಂಭವಾಗುತ್ತದೆ ಮತ್ತು 01:27 am (ಸೆಪ್ಟೆಂಬರ್ 29) ಕ್ಕೆ ಕೊನೆಗೊಳ್ಳುತ್ತದೆ. ಬ್ರಹ್ಮ ಮುಹೂರ್ತದ ಶುಭ ಮುಹೂರ್ತವು ಬೆಳಿಗ್ಗೆ 04:36 ಕ್ಕೆ ಪ್ರಾರಂಭವಾಗಿ 05:24 ಕ್ಕೆ ಕೊನೆಗೊಳ್ಳುತ್ತದೆ. ರಾಹು ಕಾಲದ ಅಶುಭ ಸಮಯ ಮಧ್ಯಾಹ್ನ 03:12 ರಿಂದ 04:42 ರವರೆಗೆ ಇರುತ್ತದೆ.

Navratri 2022 Day 2: ನವರಾತ್ರಿ ಎರಡನೇ ದಿನ ಸೆ. 27ರಂದು ಮಾಡುವ ವಿಶೇಷ ಖಾದ್ಯಗಳುNavratri 2022 Day 2: ನವರಾತ್ರಿ ಎರಡನೇ ದಿನ ಸೆ. 27ರಂದು ಮಾಡುವ ವಿಶೇಷ ಖಾದ್ಯಗಳು

ನವರಾತ್ರಿ 2022 ದಿನದ ಮಹತ್ವ

ನವರಾತ್ರಿ 2022 ದಿನದ ಮಹತ್ವ

ಪಾರ್ವತಿ ದೇವಿಯ ಮೂರನೇ ರೂಪವು ಶಾಂತಿಯುತವಾಗಿದೆ. ಈ ರೂಪದಲ್ಲಿ ದೇವಿಯು ತನ್ನ ಎಲ್ಲಾ ಆಯುಧಗಳೊಂದಿಗೆ ಯುದ್ಧಕ್ಕೆ ಸಿದ್ಧಳಾಗಿದ್ದಾಳೆ. ಹಿಂದೂ ಲಿಪಿಗಳ ಪ್ರಕಾರ, ಅವಳ ಹಣೆಯ ಮೇಲೆ ಚಂದ್ರನ ಗಂಟೆಯ ಶಬ್ದವು ತನ್ನ ಭಕ್ತರಿಂದ ಎಲ್ಲಾ ದುಷ್ಟಶಕ್ತಿಗಳನ್ನು ಹೊರಹಾಕುತ್ತದೆ ಎಂದು ನಂಬಲಾಗಿದೆ.

ದುರ್ಗಾದೇವಿಯ ಮೂರನೇ ಅವತಾರವೇ ಚಂದ್ರಘಂಟಾ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರೆ ಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರ ಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಶಿವನ ರೂಪ ಬದಲಾಯಿಸಲು ಚಂದ್ರಘಂಟೆಯಾದ ಪಾರ್ವತಿ

ಶಿವನ ರೂಪ ಬದಲಾಯಿಸಲು ಚಂದ್ರಘಂಟೆಯಾದ ಪಾರ್ವತಿ

ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಜನಿಸಿದ ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ತಪಸ್ಸಿಗೆ ಮೆಚ್ಚಿ ಶಿವ ಪಾರ್ವತಿಯನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾನೆ. ಹಿಮವಾನನ ಅರಮನೆಯಲ್ಲಿ ಮದುವೆಯ ಏರ್ಪಾಡುಗಳು ನಡೆಯುತ್ತವೆ.


ಸ್ಮಶಾನವಾಸಿಯಾದ ಶಿವನು ತನ್ನ ಭಯಾನಕ ರೂಪದಲ್ಲೇ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುತ್ತಾನೆ. ಬೂದಿಯಿಂದ ಮುಚ್ಚಲ್ಪಟ್ಟ ಶರೀರ, ಕೊರಳಿನಲ್ಲಿ ಸುತ್ತಿದ ಹಾವುಗಳು, ಗಂಟಿನಂತಿರುವ ಜಟೆಧಾರಿಯಾದ ಶಿವ, ಅವನೊಂದಿಗೆ ದೆವ್ವಗಳು, ಪಿಶಾಚ, ಗಣಗಳು, ಋಷಿಮುನಿಗಳು, ಅಘೋರಿಗಳನ್ನು ಒಳಗೊಂಡ ವಿಚಿತ್ರ ಮೆರವಣಿಗೆಯನ್ನು ನೋಡಿ, ಪಾರ್ವತಿಯ ತಾಯಿ ಮೂರ್ಛೆ ಹೋಗುತ್ತಾಳೆ. ವಿವಾಹಕ್ಕೆಂದು ಸೇರಿದ್ದವರು ಶಿವನ ರೂಪ, ಅವನ ಗಣಗಳನ್ನು ನೋಡಿ ಆಘಾತವನ್ನು ಅನುಭವಿಸುತ್ತಾರೆ. ಇದನ್ನು ಕಂಡ ಪಾರ್ವತಿಯು ಶಿವನಿಗೆ ಮುಜುಗರವಾಗದಿರಲೆಂದು ಭಯಾನಕ ರೂಪವಾಗಿ ಚಂದ್ರಘಂಟೆಯಾಗಿ ಪರಿವರ್ತನೆಯಾಗುತ್ತಾಳೆ.


ಚಿನ್ನದ ಮೈಬಣ್ಣವನ್ನು ಹೊಂದಿದ ಚಂದ್ರ ಘಂಟೆಯು ಹತ್ತು ಕೈಗಳನ್ನು ಹೊಂದುತ್ತಾಳೆ. ಒಂಭತ್ತು ಎಂಟು ಕೈಗಳಲ್ಲಿ ತ್ರಿಶೂಲ, ಗದೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ, ಕಮಂಡಲ ಹಾಗೂ ಒಂದು ತೋಳಿನಲ್ಲಿ ಅಭಯ ಮುದ್ರೆಯಿಂದ, ಸಿಂಹವಾಹಿನಿಯಾಗಿ ರೂಪ ತಾಳುತ್ತಾಳೆ. ತನ್ನ ಭಕ್ತರಿಗೆ ತಾಯಿಯಂತೆ ಆದಿಶಕ್ತಿಯು ಸಹಾನುಭೂತಿಯನ್ನು ತೋರುತ್ತಾಳೆ. ಕೆಟ್ಟವರಿಗೆ ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಚಂದ್ರಘಂಟೆಯ ರೂಪತಾಳಿದ ಪಾರ್ವತಿಯು ಶಿವನಿಗೆ ಸುಂದರವಾದ ವರನ ರೂಪವನ್ನು ತಾಳಲು ಪ್ರೇರೇಪಿಸುತ್ತಾಳೆ. ಪಾರ್ವತಿಯ ಮಾತಿಗೆ ಒಪ್ಪಿದ ಶಿವನು ಸುಂದರ ರೂಪತಾಳುತ್ತಾನೆ.

English summary
Dasara Festival- Navaratri 3st day on September 28th. Goddess Chandraghanta is worshipped on this day. Know about the puranas describing Chandraghanta and the significance of worshipping her. ದುರ್ಗೆಯ ನವ ಅವತಾರಗಳಲ್ಲಿ ಒಬ್ಬಳು. ಈಕೆಯೇ ಪಾರ್ವತಿ. ಪರ್ವತರಾಜ ಹಿಮವಂತನ ಮಗಳು ಚಂದ್ರಘಂಟಾ. ಚಂದ್ರಘಂಟಾ ಹುಲಿಯ ಮೇಲೆ ಕುಳಿತಿದ್ದಾಳೆ. ತನ್ನ ನಾಲ್ಕು ಎಡಗೈಗಳಲ್ಲಿ ತ್ರಿಶೂಲ, ಗದಾ, ಖಡ್ಗ, ಶಂಕು ಮತ್ತು ಕಮಂಡಲವನ್ನು ಹಿಡಿದ್ದಾಳೆ ಮತ್ತು ನಾಲ್ಕು ಬಲಗೈಗಳಲ್ಲಿ ಕಮಲ, ಬಾಣ, ಧನುಷ್ ಹಿಡಿದಿದ್ದು ಇನ್ನೊಂದು ಕೈಯನ್ನು ಹುಲಿಯ ಮೇಲೆ ಮತ್ತೊಂದು ಕೈಯಿಂದ ಆಶೀರ್ವಾದಿಸುವುದನ್ನು ಈ ದೇವತೆಯನ್ನು ಚಿತ್ರಿಸಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X