ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿ 2020; ನವರಾತ್ರಿ ಹಬ್ಬದಲ್ಲಿ ದೇವಿಯ ಆರಾಧನೆಯ ಮಹತ್ವ

By Lekhaka
|
Google Oneindia Kannada News

ನವರಾತ್ರಿ- ಇದು ಹಬ್ಬಗಳ ಕಾಲ. ಸಾಲು ಸಾಲು ಹಬ್ಬಗಳನ್ನು ಬರಮಾಡಿಕೊಳ್ಳುವ ನವರಾತ್ರಿಯನ್ನು ಭಾರತದಲ್ಲಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಆಚರಣೆಯ ಹಿಂದೆ ಹಲವು ನಂಬಿಕೆಗಳೂ ಇವೆ. ಈ ಆಚರಣೆ ದೈವೀ ಶಕ್ತಿಯ ಧ್ಯೋತಕವೆಂದೇ ಭಾವಿಸಿ ಭಿನ್ನ ರೂಪಗಳಲ್ಲಿ ದುರ್ಗಾ ಮಾತೆಯನ್ನು ಆರಾಧಿಸುತ್ತಾರೆ. ಈ ಬಾರಿ ಅಕ್ಟೋಬರ್ 17 ರಿಂದ ಅ. 26 ರವರೆಗೆ ನವರಾತ್ರಿ ಇದ್ದು, ಈ ಒಂಬತ್ತೂ ದಿನಗಳಲ್ಲಿ ದೇವಿ ದುರ್ಗಾ ಮಾತೆಯ ಒಂಬತ್ತು ಅವತಾರಗಳಲ್ಲಿ ಅಲಂಕರಿಸಿ ಪೂಜಿಸುತ್ತಾರೆ. ಬನ್ನಿ, ನವರಾತ್ರಿಯ ಬಗ್ಗೆ ಇನ್ನಷ್ಟು ಸಂಗತಿಗಳನ್ನು ತಿಳಿದುಕೊಳ್ಳೋಣ...

ಈ ಒಂಬತ್ತೂ ರಾತ್ರಿಗಳಲ್ಲಿ ದುರ್ಗೆಯ ಒಂಬತ್ತು ಅವತಾರಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ ಪೂಜೆಯಿಂದ ಆರಂಭಗೊಂಡು ನಂತರ ಬ್ರಹ್ಮಚಾರಿ, ಚಂದ್ರಘಂಟ, ಕುಶ್ಮಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಲರಾತ್ರಿ, ಮಹಾ ಗೌರಿ ಹಾಗೂ ಸಿದ್ಧಿಧಾತ್ರಿ ಅಲಂಕಾರದಲ್ಲಿ ದೇವಿ ಕಂಗೊಳಿಸುತ್ತಾಳೆ. ಈ ಪ್ರತಿ ರೂಪ-ಅವತಾರಕ್ಕೂ ಒಂದು ಶಕ್ತಿಯಿದೆ ಎಂದು ಭಾವಿಸುತ್ತಾರೆ.

ಮೈಸೂರು ದಸರಾ: ದುರ್ಗಾಮಾತೆ ಶಾಂತಿಗೆ ನಡೆಯುವ ವಜ್ರಮುಷ್ಠಿ ಕಾಳಗಮೈಸೂರು ದಸರಾ: ದುರ್ಗಾಮಾತೆ ಶಾಂತಿಗೆ ನಡೆಯುವ ವಜ್ರಮುಷ್ಠಿ ಕಾಳಗ

ನವರಾತ್ರಿಯ ಪೂಜೆಯ ಮಹತ್ವ
ದುರ್ಗಾ ದೇವಿಯ ಒಂಬತ್ತು ಅವತಾರಗಳಿಗೆ ಈ ನವರಾತ್ರಿಗಳನ್ನು ಮೀಸಲಿಡಲಾಗುತ್ತದೆ. ಒಂದೊಂದು ದಿನದೊಂದಿಗೆ ಒಂದೊಂದು ದೇವಿಯ ಸ್ವರೂಪ, ಶಕ್ತಿ ಮೈದಾಳುತ್ತದೆ.

Navratri 2020 Date Puja Timings Significance And Importance in Kannada

ಮೊದಲ ದಿನವು ದೇವಿಯನ್ನು ಶೈಲ ಪುತ್ರಿಯ ಅವತಾರದಲ್ಲಿ ಪೂಜಿಸಲಾಗುತ್ತದೆ. ಶೈಲಪುತ್ರಿಯು ಶಿವನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಾಳೆ. ನಂದಿ ಮೇಲೆ ಸವಾರಿ ಮಾಡುತ್ತಾ, ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುವಂತೆ ದೇವಿಯನ್ನು ಅಲಂಕರಿಸಲಾಗುತ್ತದೆ.

ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಪೂಜಿಸಲಾಗುತ್ತದೆ. ಮೋಕ್ಷ ಹಾಗೂ ಶಾಂತಿ ಸೌಹಾರ್ದತೆಯ ಅವತಾರವಾಗಿ ಈ ದೇವಿ ಕಾಣಿಸಿಕೊಳ್ಳುತ್ತಾಳೆ.

 ನವರಾತ್ರಿ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ ನವರಾತ್ರಿ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ

ಮೂರನೇ ದಿನ ಚಂದ್ರಘಂಟ ರೂಪದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ದೇವಿಯ ಹಣೆಯ ಮೇಲೆ ಅರ್ಧ-ಚಂದ್ರನಿದ್ದು, ಸೌಂದರ್ಯ ಹಾಗೂ ಧೈರ್ಯದ ಸಂಕೇತವಾಗಿ ದೇವಿ ಇರುತ್ತಾಳೆ.

ನಾಲ್ಕನೇ ದಿನ ಕುಶ್ಮಂಡ ರೂಪದಲ್ಲಿ ಪೂಜಿಸಲಾಗುತ್ತದೆ. ಭೂಮಿಯ ಮೇಲಿನ ಸಸ್ಯವರ್ಗವನ್ನು ಈ ದೇವಿ ಪ್ರತಿನಿಧಿಸುತ್ತಾಳೆ.

ಐದನೇ ದಿನ ಸ್ಕಂದಮಾತಾ ರೂಪದಲ್ಲಿದ್ದು, ಸ್ಕಂದ (ಕಾರ್ತಿಕೇಯ)ನ ತಾಯಿಯಾಗಿ ಕಾಣಿಸಿಕೊಳ್ಳುತ್ತಾಳೆ. ತನ್ನ ಮಗುವನ್ನು ರಕ್ಷಿಸುವಲ್ಲಿ ತಾಯಿಯ ಶಕ್ತಿಯನ್ನು ತೋರುವ ಧ್ಯೋತಕವಾಗಿದೆ.

ಆರನೇ ಅವತಾರ ಕಾತ್ಯಾಯಿನಿಯಾಗಿದ್ದು, ಈಕೆ ಯೋಧ ದೇವತೆ ಎಂದೇ ಪ್ರಸಿದ್ಧಿ.

ಏಳನೇ ದಿನವು ಕಲರಾತ್ರಿ ದೇವಿಯದ್ದಾಗಿದೆ. ಕಣ್ಣಿನಲ್ಲಿ ಉಗ್ರತೆ ತುಂಬಿಕೊಂಡಿರುವ ಈ ದೇವಿಗೆ ಬಿಳಿ ಬಣ್ಣದಲ್ಲಿ ಅಲಂಕಾರ ಮಾಡಲಾಗುತ್ತದೆ. ಉಗ್ರವಾಗಿದ್ದರೂ, ತನ್ನ ಭಕ್ತರಿಗೆ ಅಭಯವನ್ನು ಈಕೆ ನೀಡುತ್ತಾಳೆ. ಅವರ ರಕ್ಷಣೆಗೆ ನಿಲ್ಲುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

ಎಂಟನೇ ದಿನ ಮಹಾಗೌರಿಯ ದಿನವಾಗಿದ್ದು, ಬುದ್ಧಿ ಹಾಗೂ ಶಾಂತಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ.

ಒಂಬತ್ತನೇ ದಿನ ಸಿದ್ಧಿಧಾತ್ರಿ ಇದ್ದು, ಈಕೆ ಹಲವು ಶಕ್ತಿಗಳನ್ನು ತನ್ನ ಭಕ್ತರಿಗೆ ನೀಡುತ್ತಾಳೆ ಎಂಬ ನಂಬಿಕೆಯಿದೆ.

ಕೊನೆಯ ದಿನ ದೇವಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆಯನ್ನು ಸಲ್ಲಿಸಿ, ವಿಸರ್ಜನೆ ಮಾಡಲಾಗುವುದು.

English summary
Navratri is one of India's most significant festivals. The auspicious occasion of Navratri will commence this year from October 17 and end on October 26 with Vijay Dashami and Durga visarjan. here is a detail on the importance of festival...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X