ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಯುವ ದಸರಾದಲ್ಲಿ ನಟ ಶಿವ ರಾಜಕುಮಾರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 3: ಮೈಸೂರು ದಸರಾದ ಆಕರ್ಷಣೆಯಲ್ಲೊಂದಾದ ಯುವ ದಸರಾಕ್ಕೆ ಸೋಮವಾರ ಸಂಜೆ 5.30ಕ್ಕೆ ಚಾಲನೆ ನೀಡುತ್ತಿದ್ದು, ಅ.9ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಯುವದಸರಾಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ಸಂಜೆ ವೇಳೆಗೆ ಸರ್ವ ರೀತಿಯಲ್ಲೂ ಸಜ್ಜಾಗಲಿದೆ. ಮೈದಾನಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಿದ್ದು, ಆಸನ ವ್ಯವಸ್ಥೆ ಮಾಡಲಾಗಿದೆ.

ಯುವ ದಸರಾಗೆ ಶಾಸಕ ವಾಸು ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದು, ಸಚಿವರಾದ ಎಚ್.ಎಸ್.ಮಹದೇವಪ್ರಸಾದ್, ಸಂತೋಷ್ ಲಾಡ್ ಭಾಗವಹಿಸಲಿದ್ದಾರೆ. ನಟ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಇನ್ನಷ್ಟು ಮೆರುಗು ನೀಡಲಿದೆ.[ಗಾಂಧೀಜಿಗೂ ಪ್ರಿಯವಾಗಿತ್ತಂತೆ ಮೈಸೂರು!]

Mysuru yuva dasara inaugurate on Monday evening

ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದ್ದು, ಯುವ ಸಂಭ್ರಮದಿಂದ ಆಯ್ಕೆಯಾದ 36 ತಂಡಗಳು ಪ್ರದರ್ಶನ ನೀಡಲಿವೆ. ಏಳು ದಿನಗಳ ಕಾಲ ನಿತ್ಯ ಸಂಜೆ 6ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 10ರವರೆಗೆ ನಡೆಯಲಿದೆ. 6ರಿಂದ 7 ಗಂಟೆವರೆಗೆ ವಿದ್ಯಾರ್ಥಿಗಳು, 7ರಿಂದ 8ರವರೆಗೆ ಸ್ಥಳೀಯ ಕಲಾವಿದರು. 8ರಿಂದ 10ರವರೆಗೆ ಪ್ರಮುಖ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮಕ್ಕೆ ಅಂದಾಜು 1 ಕೋಟಿಗಿಂತ ಹೆಚ್ಚು ಖರ್ಚಾಗಲಿದ್ದು, ಕಲಾವಿದರಿಗೆ 49 ಲಕ್ಷ, ಸಿಸಿ ಟಿವಿಗೆ 90 ಸಾವಿರ, ಪ್ರಿಂಟಿಂಗ್ ವೆಚ್ಚ 90 ಸಾವಿರ, ಜಾಹೀರಾತು ಹಾಗೂ ಪ್ರಚಾರ ವೆಚ್ಚ 90 ಸಾವಿರ, ಆಹಾರಕ್ಕೆ 5 ಲಕ್ಷ, ನಿರೂಪಕರಿಗೆ 1 ಲಕ್ಷ ನೀಡಲಿದ್ದು, ಫೋಟೋ ಹಾಗೂ ವಿಡಿಯೋಗೆ 90 ಸಾವಿರ ಖರ್ಚು ಮಾಡಲಾಗುತ್ತಿದೆ.[ಮೈಸೂರು ದಸರಾ ಗಜಪಡೆಗಳಿಗೆ ನಡೆಯುತ್ತಿದೆ ರಾಜಾತಿಥ್ಯ!]

ಟಿವಿಎಸ್ ಕಾರ್ಖಾನೆಯವರು 8.5 ಲಕ್ಷ, ಕೆನರಾ ಬ್ಯಾಂಕ್ 3.5 ಲಕ್ಷ ಹಾಗೂ ಎಸ್ ಬಿಐ ನೆನಪಿನ ಕಾಣಿಕೆಯ ಪ್ರಾಯೋಜಕತ್ವ ವಹಿಸಿಕೊಂಡಿವೆ. ಯುವ ಸಂಭ್ರಮಕ್ಕೆ 39 ಲಕ್ಷ 33 ಸಾವಿರ ಖರ್ಚಾಗಲಿದೆ.

ಯುವ ದಸರಾದಲ್ಲಿ ಪಾಲ್ಗೊಳ್ಳುವ ಕಲಾವಿದರ ಪೈಕಿ ಕನ್ನಡದ ರಘು ದೀಕ್ಷಿತ್ ತಂಡಕ್ಕೆ 8.5 ಲಕ್ಷ ನೀಡಿದ್ದು, ಇದನ್ನು ಟಿವಿಎಸ್ ಕಂಪೆನಿ ವಹಿಸಿಕೊಂಡಿದೆ. ಶಾಲ್ಮಲಿ ಖೋಲ್ಗಡೆ ತಂಡಕ್ಕೆ 9 ಲಕ್ಷ, ಟಿಪ್ಪು ಮತ್ತು ತಂಡಕ್ಕೆ 8.5 ಲಕ್ಷ, ಕೋಕ್ ಸ್ಟುಡಿಯೋಗೆ 8.5 ಲಕ್ಷ, ಜಾವೇದ್ ಅಲಿ ತಂಡಕ್ಕೆ 8.5 ಲಕ್ಷ, ಬಿನ್ನಿ ದಯಾಳ್ ತಂಡಕ್ಕೆ 13.5 ಲಕ್ಷ ನೀಡಲಾಗುತ್ತಿದೆ. ಈ ಪೈಕಿ 10 ಲಕ್ಷವನ್ನು ದಸರಾ ಉಪ ಸಮಿತಿಯಿಂದ ನೀಡಿದ್ದರೆ, ಉಳಿದ 3.5 ಲಕ್ಷ ಪ್ರಾಯೋಜಕರು ನೀಡಿದ್ದಾರೆ.[ಅಂಬಾರಿ ಹೊರಲು ಸೈ ಎನಿಸಿಕೊಂಡ ಅರ್ಜುನ!]

ಯುವ ದಸರಾವು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಗುತ್ತಿದ್ದು, 800 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 40 ಸಿಸಿಟಿವಿ ಅಳವಡಿಸಲಾಗಿದೆ. ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಹಾಗೂ ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ವಿಐಪಿ, ವಿವಿಐಪಿ ಸೇರಿದಂತೆ ಜನಪ್ರತಿನಿಧಿಗಳಿಗೆ ವಿಶೇಷ ಸೇರಿದಂತೆ ಒಟ್ಟು 15 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಮೈದಾನದ ವಿವಿಧೆಡೆ 6 ಎಲ್‍ಇಡಿ ಸ್ಕ್ರೀನ್, ಸೌಂಡ್ ಸಿಸ್ಟಮ್, ಡಿಲೆ ಸ್ಪೀಕರ್ ಅವಳವಡಿಸಲಾಗಿದೆ.

English summary
Mysuru yuva dasara inaugurate on Monday evening 5.30. Cultural activities scheduled till October 9th. Actor Shivaraj kumar will pariticipate in yuva dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X