ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿದರಕ್ಕಿ ಬಿರಿಯಾನಿ, ಗಸಗಸೆ ಪಾಯಸ, ಇದು ದಸರಾ ವಿಶೇಷ

By ಮನಸ್ವಿನಿ, ನಾರಾವಿ
|
Google Oneindia Kannada News

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಜನಪ್ರಿಯ ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಪದ್ಧತಿಗಳನ್ನು ಉಣಬಡಿಸುವುದು ಈ ಬಾರಿಯೂ ಮುಂದುವರೆದಿದೆ. ಇತ್ತ ಮನೆಮನೆಗಳಲ್ಲಿ ಸಾಂಪ್ರದಾಯಿಕ ಆಚರಣೆ ವಿಧಿ ವಿಧಾನಗಳು ಪಾಡ್ಯದಿಂದ ಆರಂಭವಾಗಿ ದಶಮಿ ತನಕ ನಡೆಯಲಿದೆ.

ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ! ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ!

ಅತ್ತ ಮೈಸೂರಿನಲ್ಲಿ ಈ ಬಾರಿಯೂ ದಸರಾ ಪ್ರಯುಕ್ತ ಸೆಪ್ಟೆಂಬರ್ 21 ರಿಂದ 28 ರವರೆಗೆ ಆಹಾರ ಮೇಳ ನಡೆಯಲಿದ್ದು, ಸ್ಕೌಟ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್‍ನಲ್ಲಿ ನಡೆಯಲಿದೆ. ಮೇಳದಲ್ಲಿ 10 ಜಿಲ್ಲೆಗಳ ಬುಡಕಟ್ಟು ಸಮುದಾಯದವರು ಭಾಗವಹಿಸಿ ಬುಡಕಟ್ಟು ಆಹಾರವನ್ನು ನಗರ ಪ್ರದೇಶಿಗರಿಗೆ ಉಣಬಡಿಸಲಿದ್ದಾರೆ.

Recommended Video

Dasara 2017 : Special Foods For Dasara Festival | Oneindia Kannada

ವೈಭವದ ದಸರಾ ವಿಶೇಷ ಪುಟ

ಆದಿವಾಸಿ ಬುಡಕಟ್ಟು ಆಹಾರ ಪದ್ಧತಿಯಂತೆ ತಯಾರಿಸಿದ ಬಂಬೂ ಬಿರಿಯಾನಿ ಈ ಬಾರಿಯೂ ಆಕರ್ಷಣೆ ಪಡೆದುಕೊಳ್ಳುವ ನಿರೀಕ್ಷೆಯಿದೆ.ಈ ಉದ್ದೇಶದಿಂದ ಮೂರು ಕಡೆಗಳಲ್ಲಿ ಆಹಾರ ಮೇಳ ನಡೆಯಲಿದೆ. ಆಹಾರ ಮೇಳದ ಇನ್ನಷ್ಟು ವಿವರ ಹಾಗೂ ಯಾವ ಯಾವ ಪಾಯಸ ಈ ಹತ್ತು ದಿನಗಳಲಿ ಮಾಡುತ್ತಾರೆ ಎಂಬ ವಿವರ ಮುಂದಿದೆ..

ಬುಡಕಟ್ಟು ಆಹಾರ ಮೇಳ

ಬುಡಕಟ್ಟು ಆಹಾರ ಮೇಳ

ಈ ಬಾರಿಯೂ ಆದಿವಾಸಿಗಳು ಆಗಮಿಸಿ ರುಚಿಕಟ್ಟಾದ, ಆರೋಗ್ಯಕರವಾದ, ಪೌಷ್ಠಿಕವಾದ ದಸರಾ ಪ್ರಯುಕ್ತ ಸೆಪ್ಟೆಂಬರ್ 21 ರಿಂದ 28 ರವರೆಗೆ ಆಹಾರ ಮೇಳ ಈ ಬಾರಿ ಸ್ಕೌಟ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್‍ನಲ್ಲಿ ನಡೆಯಲಿದೆ. ಮೇಳದಲ್ಲಿ 10 ಜಿಲ್ಲೆಗಳ ಬುಡಕಟ್ಟು ಸಮುದಾಯದವರು ಭಾಗವಹಿಸಲಿದೆ. ಬುಡಕಟ್ಟು ಆಹಾರವನ್ನು ಸಿದ್ಧಪಡಿಸಲಿದ್ದಾರೆ.

ಆಹಾರ ಮೆನು

ಆಹಾರ ಮೆನು

ಬಂಬೂ ಬಿರಿಯಾನಿ, ಮುತ್ತಿಗೆ ಹಾಳೆ, ರಾಗಿ ರೊಟ್ಟಿ, ಕುಂಬಳಕಾಯಿ, ಅವೆ ಕಾಳು ಗೊಜ್ಜು, ಬತ್ತದ ಪಾಯಸ, ಮಾಗಡಿ ಬೇರು-ಟೀ-ಕಾಫಿ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಿದ್ದಾರೆ. ಆಹಾರ ಮೇಳದಲ್ಲಿ ಬುಡಕಟ್ಟು ಜನರ ಆಹಾರ ಪದ್ಧತಿಗಳನ್ನು ಉಣಬಡಿಸುವುದು ಈ ಬಾರಿಯೂ ಮುಂದುವರೆದಿದೆ.

ಪಾಡ್ಯಕ್ಕೆ ಏನು ಪಾಯಸ?

ಪಾಡ್ಯಕ್ಕೆ ಏನು ಪಾಯಸ?

ಸಾಂಪ್ರದಾಯಿಕ ಆಚರಣೆ ವಿಧಿ ವಿಧಾನಗಳು ಪಾಡ್ಯದಿಂದ ಆರಂಭವಾಗಿ ದಶಮಿ ತನಕ ಮನೆಮನೆಗಳಲ್ಲೂ ಪಾಯಸ, ಸಿಹಿ ತಿನಿಸುಗಳು ಹಬ್ಬದ ಆಕರ್ಷಣೆಯಾಗಲಿವೆ. ಪಾಡ್ಯದ ದಿನ ಗಸಗಸೆ ಪಾಯಸ ಮಾಡುತ್ತಾರೆ. ಮಿಕ್ಕಂತೆ ದುರ್ಗಾಷ್ಟಮಿಗೆ ಹಯಗ್ರೀವ, ಹೆಸರುಬೇಳೆ ಪಾಯಸ, ಪಾಡ್ಯ, ದಶಮಿ ದಿನದಂದು ಬೇಳೆ ಒಬ್ಬಟ್ಟು ಮಾಡುತ್ತಾರೆ. ಮಧ್ಯೆ ಮಧ್ಯೆ ಆಂಬೊಡೆ, ಚಿತ್ರಾನ್ನ ಇದ್ದೇ ಇರುತ್ತದೆ.

ಗಸಗಸೆ ಪಾಯಸ ಮಾಡುವ ವಿಧಾನ

ಗಸಗಸೆ ಪಾಯಸ ಮಾಡುವ ವಿಧಾನ

* ಬಾಣಲೆಯಲ್ಲಿ 1 ಕಪ್ ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
*ಅಕ್ಕಿಯನ್ನು (ಕನಿಷ್ಠ 2 ಗಂಟೆಗಳ ಕಾಲ)ನೀರಿನಲ್ಲಿ ನೆನಸಿ.
*ತೆಂಗಿನಕಾಯಿಯನ್ನು ಪೂರ್ತಿ ತುರಿದು ಮಿಕ್ಸಿಗೆ ಹಾಕಿ ತೆಂಗಿನ ಹಾಲನ್ನು ಶೇಖರಿಸಿ.
*ಹುರಿದ ಗಸಗಸೆ, ಪುಡಿಮಾಡಿದ ಏಲಕ್ಕಿ, ತೆಂಗಿನ ಹಾಲು, ನೆನೆಸಿದ ಅಕ್ಕಿಯನ್ನು ನುಣ್ಣಗೆ ರುಬ್ಬಿ. ಅಗತ್ಯವಿದ್ದಷ್ಟು ನೀರನ್ನು ಹಾಕಿ
*ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸುತ್ತಿರಿ.
*ಬೆಲ್ಲದ ನೀರನ್ನು ಮಿಶ್ರಣಕ್ಕೆ ಬೆರೆಸಿರಿ. ಆಗಾಗ ಕೆದುಕುತ್ತಿರಿ. (ಏಲಕ್ಕಿಪುಡಿಯನ್ನು ಬಳಸದಿದ್ದರೆ ಎಸಳುಗಳನ್ನು ಹಾಗೆ ಬೇಕಾದರೂ ಹಾಕಬಹುದು)
* ಗೋಡಂಬಿ, ದ್ರಾಕ್ಷಿ ಸೇರಿಸಿ ಇನ್ನಷ್ಟು ಸಿಹಿ ಹೆಚ್ಚಿಸಬಹುದು. ಹೆಚ್ಚಿನ ವಿವರ ಇಲ್ಲಿ ಓದಿ

ಯಾವೆಲ್ಲ ಸಿಹಿ ತಿಂಡಿ ಮಾಡಬಹುದು

ಯಾವೆಲ್ಲ ಸಿಹಿ ತಿಂಡಿ ಮಾಡಬಹುದು

ದಸರಾ ಸಂದರ್ಭದಲ್ಲಿ ಮನೆಯಲ್ಲಿ ಗಸಗಸೆ ಪಾಯಸ, ಅಕ್ಕಿ ಕಡಲೇಬೆಳೆ, ಅವಲಕ್ಕಿ, ರವೆ, ಗೋಧಿ ನುಚ್ಚಿನ ಪಾಯಸ, ಸೀಮೆ ಅಕ್ಕಿ, ಹೆಸರುಬೇಳೆ, ಗೋಧಿ ಶ್ಯಾವಿಗೆ, ಈಗ ಲೇಟೆಸ್ಟ್ ಸಿರಿ ಧಾನ್ಯಗಳಲ್ಲಿ ಸಾಮೆ ಪಾಯಸ ಒಂದು ದಿನ ಮಾಡಬಹುದು. ಜತೆಗೆ ಹಯಗ್ರೀವ, ಆಂಬೊಡೆ, ಒಬ್ಬಟ್ಟು, ಕೊಸಂಬರಿ, ಚಿತ್ರಾನ್ನ ತಪ್ಪಿಸಬೇಡಿ.. ಇನ್ನಷ್ಟು ಪಾಯಸಗಳ ಬಗ್ಗೆ ಇಲ್ಲಿ ಓದಿ

English summary
Mysuru Dasara Special : The bamboo biryani is ready to catch dinner lovers at this huge food festival organised by State scouts and guides team from September 21 to 28 during the Mysuru Dasara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X