ದೇವಿ ಒಲಿಸಿಕೊಳ್ಳಲು ಈ ಬಣ್ಣದ ಬಟ್ಟೆ ಧರಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ಬಣ್ಣವೂ ಒಂದೊಂದು ಪ್ರಭಾವವನ್ನು ಹೊಂದಿರುತ್ತದೆ. ಹಾಗೆಯೇ ದೇವಿಯನ್ನು ಒಲಿಸಿಕೊಳ್ಳಲೂ ಸಹ ಕೆಲವು ರಾಶಿಯವರಿಗೆ ಕೆಲವು ಬಣ್ಣಗಳು ಸಹಾಯ ಮಾಡುತ್ತದೆ. ಈ ಬಣ್ಣಗಳ ಸಹಾಯದಿಂದ ಕಾಳಿಯನ್ನು ಪ್ರಸನ್ನಗೊಳಿಸುವುದು ಸಾಧ್ಯವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಕನ್ಯಾರಾಶಿ: ಕನ್ಯಾರಾಶಿಯಲ್ಲಿ ಹುಟ್ಟಿದವರು ಕಾಳಿಯ ಕರುಣೆ ಪಡೆಯಬೇಕೆಂದರೆ ಹಸಿರು ಬಣ್ಣದ, ಬಿಳಿ ಬಣ್ಣದ ಅಥವಾ ತಿಳಿಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬೇಕು. ಆಗ ತಾಯಿ ಬೇಗ ಒಲಿದು ಆಶೀರ್ವಾದ ಕರುಣಿಸುವಳು.
ತುಲಾ: ಈ ರಾಶಿಯ ವ್ಯಕ್ತಿಗಳು ಬಿಳಿ ಅಥವಾ ಯಾವುದೇ ತಿಳಿಯಾದ ಬಣ್ಣದ ಬಟ್ಟೆ ಧರಿಸಿ ದೇವಿಯನ್ನು ಆರಾಧಿಸಿದರೆ ತುಲಾ ರಾಶಿಯವರ ಜೀವನವನ್ನು ಹಸನಾಗಿಸುವಂತೆ ಮಾಡುವಳು ಎಂದಿದೆ ಜ್ಯೋತಿಷ್ಯ.
ವೃಶ್ಚಿಕ: ಈ ರಾಶಿಯಲ್ಲಿ ಹುಟ್ಟಿದವರು ಒಂಭತ್ತು ದಿನಗಳ ಕಾಲ ಕೆಂಪು, ಕೆಂಪಿಗೆ ಸಂಬಂಧ ಇನ್ನಿತರ ಬಣ್ಣ ಮತ್ತು ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ದಿನವೂ ದೇವಿಯನ್ನು ಪೂಜಿಸಿದರೆ ಅವರಿಗೆ ದೇವಿ ಬಹು ಬೇಗನೆ ಒಲಿಯುವಳು.
ಧನಸ್ಸು: ಚಾಮುಂಡಿಯ ಆಯುಧಗಳಲ್ಲಿ ಒಂದಾಗಿರುವ ಧನಸ್ಸು ರಾಶಿಯ ಜನರು ಹಳದಿ ಬಣ್ಣದ ಬಟ್ಟೆಯನ್ನು ತೊಟ್ಟರೆ ದೇವಿಗೆ ತುಂಬಾ ಇಷ್ಟವಾಗುತ್ತದೆ. ಹಳದಿ ಬಣ್ಣ ಮತ್ತು ತಿಳಿ ಬಣ್ಣವನ್ನು ಹಾಕಿಕೊಂಡು ಪೂಜಿಸಿದರೆ ದೇವಿ ಪ್ರಸನ್ನಗೊಳ್ಳುವಳು.
ಮಕರ: ಕಾಳಿ ಒಲಿಸಿಕೊಳ್ಳಲು ನೀಲಿ ಬಲು ಸೂಕ್ತವಾದ ಬಣ್ಣ. ಈ ರಾಶಿಯವರು ನೀಲಿಗೆ ಸಂಬಂಧಪಟ್ಟ ಯಾವುದೇ ಬಣ್ಣವನ್ನು ತೊಟ್ಟುಕೊಂಡು ದೇವಿಯನ್ನು ಆರಾಧಿಸಿದರೆ ಬೇಗ ಫಲ ನೀಡುವುದು.
ಕುಂಭ: ಕುಂಭ ರಾಶಿಯವರು ದುರ್ಗೆಯನ್ನು ಒಲಿಸಿಕೊಳ್ಳಲು ಕಪ್ಪು ಅಥವಾ ಕಡು ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟು ಒಂಭತ್ತು ದಿನ ದೇವಿಯನ್ನು ಪ್ರಾರ್ಥಿಸಿಕೊಂಡರೆ ಸಾಕು, ದೇವಿ ತನ್ನ ಸಹಾಯ ಹಸ್ತವನ್ನು ಚಾಚುವಳು.
ಮೀನ: ಮೀನ ರಾಶಿಯನ್ನು ಹೊಂದಿದವರು ದೇವಿಯ ಹಾರೈಕೆ, ಆಶೀರ್ವಾದ ಹೊಂದಿ ತಮ್ಮ ಜೀವನದ ಕಷ್ಟಕಾರ್ಪಣ್ಯದಿಂದ ಹೊರಬರಲು ಕೇಸರಿ, ಹಳದಿ ಅಥವಾ ತಿಳಿ ಬಣ್ಣದ ಬಟ್ಟೆ ಧರಿಸಿ ಮನಸ್ಪೂರ್ವಕವಾಗಿ ಪ್ರಾರ್ಥಿಸಿಕೊಳ್ಳಬೇಕು.