ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮತ್ತು ದಸರಾ ಬಗ್ಗೆ ನೀವೆಷ್ಟು ಬಲ್ಲಿರಿ?

By Prasad
|
Google Oneindia Kannada News

Mysore Dasara Quiz
ಮೈಸೂರು, ಅ. 5 : ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಭವೋಪೇತ ದಸರೆಗೆ ದಿನಗಣನೆ ಪ್ರಾರಂಭವಾಗಿದೆ. ಮೈಸೂರಿನ ಸುತ್ತ ನೋಡತಕ್ಕ ಸ್ಥಳಗಳ ಜೊತೆಗೆ ಅದರ ಬಗ್ಗೆ ತಿಳಿದುಕೊಳ್ಳುವುದೂ ಸಾಕಷ್ಟಿದೆ.

ಮೈಸೂರಿನ ದಸರಾ ಬಗ್ಗೆ ತಿಳಿಯುತ್ತ ಸಾಗಿದಂತೆ ಅದರ ನಾವು ಕಾಣುವ ಅಂದ ಮತ್ತಷ್ಟು ಹೆಚ್ಚುತ್ತ ಹೋಗುತ್ತದೆ. ಇದರ ಬಗ್ಗೆ ಎರಡನೇ ಮಾತೇ ಇಲ್ಲ. ಈ ಕಾರಣದಿಂದಾಗಿ ಮೈಸೂರು ದಸರಾ ಚಟುವಟಿಕೆಗಳಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳುವ ಪ್ರಯತ್ನದ ಅಂಗವಾಗಿ ದಸರಾ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಉತ್ತರಗಳನ್ನು ಪ್ರಶ್ನಾವಳಿ ಪ್ರಕಟವಾದ ಎರಡು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿ ಸಹಾಯ ಕೇಂದ್ರಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಕೆಳಗಿನ ಪ್ರಶ್ನೆಗಳ ಉತ್ತರಗಳನ್ನು ಅಕ್ಟೋಬರ್ 7ರೊಳಗೆ ತಲುಪಿಸಬೇಕು.

5.10.2010ರ ದಸರಾ ಪ್ರಶ್ನಾವಳಿಗಳು

1. ಚಾಮರಾಜೇಶ್ವರ ದೇವಾಲಯ ಎಲ್ಲಿದೆ?
2. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ದಸರಾ ಮಹೋತ್ಸವ ಉದ್ಘಾಟಿಸಿದ ವರ್ಷ?
3. ಮೈಸೂರು ಯಾವ ಹೂವಿಗೆ ಪ್ರಸಿದ್ಧಿ?
4. ಶಿವನಸಮುದ್ರದ ಹತ್ತಿರವಿರುವ ಜಲಪಾತಗಳು ಯಾವುವು?
5. ದಸರಾದ ಯಾವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುವರು?
6. ದಸರಾ ಗಜಪಯಣ ಎಲ್ಲಿಂದ ಆರಂಭವಾಗುತ್ತದೆ?
7. ದಸರಾ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ನಾಡಿನ ಹೆಸರಾಂತ ಸಂಗೀತಗಾರರಿಗೆ ನೀಡುವ ಪ್ರಶಸ್ತಿ ಯಾವುದು?
8. ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ಜರಗುವ ಪರಂಪರಾಗತ ಕಾಳಗಕ್ಕೆ ಏನೆಂದು ಹೆಸರು?
9. ಚಾಮುಂಡಿ ಬೆಟ್ಟಕ್ಕೆ ಎಷ್ಟು ಮೆಟ್ಟಿಲುಗಳಿವೆ?
10. ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನು ಕಂಡೆ ಇದು ಯಾವ ಚಿತ್ರದ ಗೀತೆ?

ಈ ಎಲ್ಲ ಪ್ರಶ್ನೆಗಳಿಗೆ ನಮ್ಮ ದಸರಾ ವಿಭಾಗದಲ್ಲಿ ಪ್ರಕಟವಾದ ಲೇಖನಗಳಲ್ಲಿ ಹುಡುಕಿದರೆ ಉತ್ತರ ಸಿಗಬಹುದು, ಪ್ರಯತ್ನಿಸಿ. ಉತ್ತರಗಳನ್ನು ನಮಗೂ ಬರೆದು ತಿಳಿಸಬಹುದು. ಈ ಮುಖಾಂತರ ನಮಗೆ ತಿಳಿದ ವಿಷಯಗಳನ್ನು ನಮ್ಮ ಓದುಗರೊಂದಿಗೂ ಹಂಚಿಕೊಳ್ಳೋಣ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ</a> | <a href=ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" title="ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" />ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X