ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರಿಗೆ ಮೈಸೂರು ದಸರಾ ಕ್ವಿಜ್

By Mahesh
|
Google Oneindia Kannada News

Mysore DC Office
ಮೈಸೂರು, ಸೆ. 29:ಮೈಸೂರು ದಸರಾ ಮಹೋತ್ಸವ ಚಟುವಟಿಕೆಗಳಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳುವ ಪ್ರಯತ್ನದ ಅಂಗವಾಗಿ "ದಸರಾ ಕ್ವಿಜ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಮುಖ ದಿನಪತ್ರಿಕೆಗಳಲ್ಲಿ ಸೆಪ್ಟೆಂಬರ್28ರಿಂದ ಅಕ್ಟೋಬರ್ 5 ರವರೆಗೆ ಪ್ರತಿದಿನ ದಸರಾಗೆ ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ನೀಡಲಾಗುವುದು. ಆಯಾದಿನದ ಪ್ರಶ್ನೆಗಳಿಗೆ ಸರಿಯುತ್ತರ ಕಳುಹಿಸಿದವರ ಪೈಕಿ ಐವರನ್ನು (05 ಜನರನ್ನು) ಆಯ್ಕೆ ಮಾಡಿ ಬಹುಮಾನ ನೀಡಲಾಗುವುದು.

ಉತ್ತರಗಳನ್ನು ಪ್ರಶ್ನಾವಳಿ ಪ್ರಕಟವಾದ ಎರಡು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿ Help Deskಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಮಾಹಿತಿಗೆ ಸಂಪರ್ಕಿಸಿ :(0821) - 2422302

29/09/2010ರ ದಸರಾ ಕ್ಚಿಜ್ ಪ್ರಶ್ನಾವಳಿಗಳು

* ಚಾಮರಾಜ ಒಡೆಯರ್ ಜನ್ಮಸ್ಥಳ ಯಾವ ಜಿಲ್ಲೆಯಲ್ಲಿದೆ?
* ಅಂಬಾವಿಲಾಸ ಅರಮನೆ ವಿಸ್ತೀರ್ಣ ಎಷ್ಟು?
* ಮೈಸೂರು ಅರಸರ ಮೂಲ ಪುರುಷ ಯಾರು?
* ಚಿನ್ನದ ಅಂಬಾರಿಯಲ್ಲಿ ಕೊನೆಸಲ ಜಂಬೂಸವಾರಿ ಮಾಡಿದ ಅರಸರು ಯಾರು?
* ಸಂತ ಫಿಲೋಮಿನ ಚರ್ಚ್‌ನ ಅವಳಿ ಗೋಪುರಗಳ ಎತ್ತರ ಎಷ್ಟು?
* "ಶ್ರೀ ಚಾಮುಂಡೇಶ್ವರಿ" ಕೀರ್ತನೆಯ ರಾಜವಂಶಸ್ಥ ಕತೃ ಯಾರು?
* ವಿಜಯನಗರ ಅರಸರು ನವರಾತ್ರಿ ಉತ್ಸವಗಳನ್ನು ವೀಕ್ಷಿಸುತ್ತಿದ್ದ ಸ್ಥಳ ಯಾವುದು?
* ಚಾಮುಂಡಿ ಬೆಟ್ಟದ ಮೇಲಿರುವ ದೊಡ್ಡ ನಂದಿಯನ್ನು ಯಾರು ಉಡುಗೊರೆಯಾಗಿ ನೀಡಿದವರು?
* ಅಂಬಾವಿಲಾಸ ಅರಮನೆ ಯಾವಾಗ ಪೂರ್ಣಗೊಂಡಿತು?
* ಜಂಬೂಸವಾರಿ ಸಾಗುವ ಮಾರ್ಗದ ಉದ್ದ ಎಷ್ಟು?
(ಇಂದಿನ ಉತ್ತರಗಳನ್ನು 01.10.2010ರ ಸಂಜೆ 5 ಗಂಟೆಯೊಳಗೆ ತಲುಪಿಸಲು ಸೂಚಿಸಲಾಗಿದೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X