ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ: ಲೋಹದ ಹಕ್ಕಿಗಳ ಅದ್ಭುತ ಹಾರಾಟ

By Staff
|
Google Oneindia Kannada News

ಮೈಸೂರು, ಸೆ. 22: ಬಾನಂಗಳದಲ್ಲಿ ಹಾರಾಡುವ ಲೋಹದ ಹಕ್ಕಿಗಳಿಂದ ರೋಮಾಂಚನಗೊಳಿಸುವ ಮೈನವಿರೇಳಿಸುವ ವೈವಿಧ್ಯಮಯ ವೈಮಾನಿಕ ಪ್ರದರ್ಶನವನ್ನು ಸೆಪ್ಟಂಬರ್ 22 ಮತ್ತು 24ರಂದು ಬನ್ನಿಮಂಟಪದಲ್ಲಿ ಆಯೋಜಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವೈಮಾನಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೊದಲ ದಿನದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ಸೈನಿಕರು ತಮ್ಮ ಕುಶಲ ಕಲೆಯನ್ನು ಪ್ರದರ್ಶಿಸಿದರು. ಸೂಪರ್ ಜೆಟ್ ಸೂರ್ಯ ಕಿರಣ್ ಹಾಗೂ ಲಘು ಏರ್ ಕ್ರಾಫ್ಟ್ ಸಾರಾಂಗ್ ಅತಿವೇಗದ ಹಾರಾಟ ಪ್ರದರ್ಶನ ನೀಡಿದವು. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಜನರನ್ನು ಈ ಬಾರಿಯ ವೈಮಾನಿಕ ಪ್ರದರ್ಶನ ಆಕರ್ಷಿಸುತ್ತಿದೆ ಎಂದು ದಸರಾ ವೈಮಾನಿಕ ಪ್ರದರ್ಶನ ಉಪ ಸಮಿತಿಯ ಸಲಹೆಗಾರ, ಮುಖ್ಯಸ್ಥ ಪಾಲಯ ಹೇಳಿದರು.

ಕಾರ್ಯಕ್ರಮದ ಆಕರ್ಷಣೆ ಹೀಗಿದೆ:
*3 ಯುದ್ದ ವಿಮಾನಗಳಿಂದ ಫ್ಲೈ ಫಾಸ್ಟ್
*3 ಸಾರಿಗೆ ವಿಮಾನಗಳಿಂದ ಫ್ಲೈ ಫಾಸ್ಟ್
*1 ಚೇತಕ್ ವಿಮಾನದಿಂದ ಸ್ಥಿರ (ಸ್ಟ್ಯಾಟಿಕ್) ಪ್ರದರ್ಶನ
*ಹೆಲಿಕಾಪ್ಟರ್‌ನಿಂದ ಪುಷ್ಪ ವೃಷ್ಟಿ
*ಒಂದು ಮಿಗ್-8 ಸ್ಥಿರ (ಸ್ಟ್ಯಾಟಿಕ್) ಪ್ರದರ್ಶನ
*ಸ್ಕೈ ಡೈವಿಂಗ್, ಸ್ಲಿತರಿಂಗ್ ಹಾಗೂ ಸ್ಟೀ ಪ್ರದರ್ಶನ
*ಸಾರಂಗ್ ತಂಡದಿಂದ ಬನ್ನಿಮಂಟಪದ ಮೈದಾನದ ಮೇಲೆ ವೈಮಾನಿಕ ಪ್ರದರ್ಶನ
*ಏರ್ ವಾರಿಯರ್ ಡ್ರಿಲ್ ತಂಡದಿಂದ ಬನ್ನಿಮಂಟಪ ಮೈದಾನದಲ್ಲಿ ಪ್ರದರ್ಶನ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಎಂ ಎಸ್ ಲೋಕೇಶ್,
ಮುಖ್ಯ ಆಡಳಿತಾಧಿಕಾರಿ, ಕಾವಾ, ಮೈಸೂರು.
ದೂರವಾಣಿ: +91 821243831
ಫ್ಯಾಕ್ಸ್: + 918212330001
ಮೊಬೈಲ್: +919342182006

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X