ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮ್ಯಾರಿಂದ ಯುವ ದಸರಾಕ್ಕೆ ಚಾಲನೆ

By Staff
|
Google Oneindia Kannada News

ಮೈಸೂರು, ಸೆ. 20: ಐದು ದಿನಗಳ ಕಾಲ ನಡೆಯುವ ಯುವ ದಸರಾ ಕಾರ್ಯಕ್ರಮವನ್ನು ಇಂದು ಸಂಜೆ ನಟಿ ರಮ್ಯ ಉದ್ಘಾಟಿಸಲಿದ್ದಾರೆ ಎಂದು ಯುವದಸರಾ ಉಪ ಸಮಿತಿ ಮುಖ್ಯಸ್ಥೆ ಯಶಸ್ವಿನಿ ಸೋಮಶೇಖರ್ ಹೇಳಿದರು. ಬಾಲಿವುಡ್ ನಲ್ಲಿ ಬಿಸಿಯಾಗಿರುವ ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಅವರು ಯುವ ದಸರಾಕ್ಕೆ ಚಾಲನೆ ನೀಡುವರೆಂದು ಈ ಮುಂಚೆ ಪ್ರಕಟಿಸಲಾಗಿತ್ತು. ಆದರೆ , ಅವರು ಅಲಭ್ಯರಾಗಿದ್ದಾರೆ ಎಂದು ಯುವ ದಸರಾ ಸಮಿತಿ ಹೇಳಿದೆ.

ಮಹಾರಾಜಾ ಕಾಲೇಜು ಮೈದಾನದಲ್ಲಿ ಸೆ.20 ರಿಂದ ಸೆ. 25ರ ವರೆಗೂ ಪ್ರತಿದಿನ ಸಂಜೆ 6 ರಿಂದ 10 ಗಂಟೆವರೆಗು ಯುವ ದಸರಾ ಕಾರ್ಯಕ್ರಮಗಳು ನಡೆಯಲಿದೆ. ವಾಯ್ಸ್ ಆಫ್ ಮೈಸೂರು ಸಂಗೀತ ಶೋಧ ಕಾರ್ಯಕ್ರಮ ಈ ಬಾರಿಯ ಆಕರ್ಷಣೆಯಾಗಿದೆ. ಶ್ರೇಯಾ ಘೋಷಾಲ್, ರಘು ದೀಕ್ಷಿತ್, ಶಾನ್, ಮನೋಮೂರ್ತಿ, ಕುನಾಲ್ ಗಂಜಾವಾಲ ಹಾಗೂ ಎಸ್ಪಿ ಬಾಲಸುಬ್ರಮಣ್ಯಂ ಅವರು ಯುವದಸರಾದ ಸಂಗೀತ ಸಂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹ್ಯಾಫ್ ಮ್ಯಾರಥಾನ್

ಪ್ರತಿ ವರ್ಷದಂತೆ ರಾಜ್ಯ ದಸರಾ ಕೂಟದ ಸಂದರ್ಭದಲ್ಲಿ ದಿನಾಂಕ 24.9.2009 ರಂದು ಬೆಳಗ್ಗೆ 8.30ಗಂಟೆಗೆ ಅರಮನೆ ಉತ್ತರ ದ್ವಾರದಿಂದ ಪ್ರಾರಂಭವಾಗಲಿದೆ. 21.1 ಕಿ.ಮೀ. ದೂರದ ಹಾಫ್ ಮ್ಯಾರಥಾನ್ ಓಟವನ್ನು ಪುರುಷರು ಮತ್ತು ಮಹಿಳೆಯರಿಗಾಗಿ, 12 ಕಿ.ಮೀ. ಓಟವನ್ನು ಕಾಲೇಜು ಬಾಲಕರಿಗೆ, 6 ಕಿ.ಮೀ. ಓಟವನ್ನು ಕಾಲೇಜು ಬಾಲಕಿಯರಿಗೆ ಮತ್ತು ಪ್ರೌಢಶಾಲಾ ಬಾಲಕರಿಗೆ ಹಾಗೂ 3 ಕಿ.ಮೀ. ಓಟವನ್ನು ಪ್ರೌಢಶಾಲಾ ಬಾಲಕಿಯರಿಗೆ ನಡೆಸಲಾಗುವುದು.

ಈ ಹಾಫ್ ಮ್ಯಾರಥಾನ್ ಓಟದ ವಿಜೇತರಿಗೆ ಕಳೆದ ಸಾಲಿನಲ್ಲಿ ನೀಡಿದಂತೆ 21.1 ಕಿ.ಮೀ. ಓಡಿದ ಮೊದಲ ಆರು ಸ್ಥಾನ ಪಡೆದ ಪುರುಷ ಮತ್ತು ಮಹಿಳಾ ಕ್ರೀಡಾ ಪಟುಗಳಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುವುದು. ಬಹುಮಾನದ ಮೊತ್ತ ಮೊದಲನೇ ಸ್ಥಾನ ರು.30,000, ಎಡರನೇ ಸ್ಥಾನ ರು.25,000, ಮೂರನೇ ಸ್ಥಾನ ರು.20,000, ನಾಲ್ಕನೇ ಸ್ಥಾನ ರು.15,000, ಐದನೇ ಸ್ಥಾನ ರು.10,000 ಮತ್ತು ಆರನೇ ಸ್ಥಾನ ರು.5,000ಗಳು. ಹಾಗೂ ಕಾಲೇಜು ಬಾಲಕ ಬಾಲಕಿಯರು ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಮೊದಲು ಮೂರು ಸ್ಥಾನ ಪಡೆದ ಕ್ರೀಡಾಪಟುಗಳಿಗೆ ರೂ.1500, ರೂ.1000, ರೂ.500ಗಳಂತೆ ನಗೆದು ಬಹುಮಾನ ನೀಡಲಾಗುವುದು. ಅಲ್ಲದೆ ಈ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಓಟ ಪೂರೈಸಿದ ಮೊದಲ 200 ಕ್ರಿಡಾಪಟುಗಳಿಗೆ ಪ್ರಮಾಣ ಪತ್ರವನ್ನು ಹಾಗೂ ಟಿ ಶರ್ಟ್‌ಗಳನ್ನು ನೀಡಲಾಗುವುದು.

ಈ ಓಟದ ಪ್ರವೇಶವು ಉಚಿತವಾಗಿದ್ದು, ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 23.9.2009 ರಂದು ಮಧ್ಯಾಹ್ನ 3 ಗಂಟೆಗೆ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ನೊಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗೆ ದೂರವಾಣಿ 2564179 ಸಂಪರ್ಕಿಸಲು ಕೋರಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X