ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾಕ್ಕೆ ಜಗಮಗಿಸುವ ದೀಪಾಲಂಕಾರ

By Staff
|
Google Oneindia Kannada News

Mysore Palace
ಬೆಂಗಳೂರು, ಸೆ. 18 : ಮೈಸೂರು ದಸರಾ ಎಂದಾಕ್ಷಣ ಜಗಜಗಿಸುವ ವಿದ್ಯತ್ ದೀಪಗಳ ಸರಮಾಲೆ, ಅಲಂಕೃತಗೊಂಡ ಉದ್ಯಾನವನಗಳು, ಸಿಂಗರಿಸಿದ ಕಟ್ಟಡಗಳು, ವೃತ್ತಗಳು ಹಾಗೂ ರಸ್ತೆಗಳು ನೆನಪಾಗುತ್ತವೆ. ನವರಾತ್ರಿಯ ಸಂಭ್ರಮದಲ್ಲಿ ಮೈಸೂರು ನಗರ ಕಿನ್ನರ ಲೋಕವಾಗಿ ಮಾರ್ಪಾಡಾಗುವುದನ್ನು ನೋಡುವುದೇ ಸೊಬಗು.

ಪ್ರತಿವರ್ಷವೂ ಅಲಂಕೃತಗೊಳ್ಳುವ ಹೊಸ ಸಯ್ಯಾಜಿರಾವ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ಚೌಕ, ಆಯಕಟ್ಟಿನ ವೃತ್ತಗಳು, ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ಸಾಗುವ ರಸ್ತೆ, ಬೆಟ್ಟದ ಮೇಲೆ ಪ್ರವಾಸಿಗರನ್ನು ಆಕರ್ಷಿಸುವ 'ಸುಸ್ವಾಗತ', ನಂಜನಗೂಡು ರಸ್ತೆ, ಬೆಂಗಳೂರು ರಸ್ತೆ, ಹರ್ಷ ರಸ್ತೆಯಲ್ಲಿನ ಕರ್ಜನ್ ಪಾರ್ಕ್-3, ಕೆ.ಆರ್.ವೃತ್ತದಿಂದ ಬಸವೇಶ್ವರ ವೃತ್ತದವರೆರೆಗಿನ ರಸ್ತೆ, ಮಹದೇಶ್ವರ ರಸ್ತೆ (ಹಾರ್ಡಿಂಜ್ ವೃತ್ತದಿಂದ ಟೆರಿಷಿಯನ್ ಕಾಲೇಜ್‌ವರೆವಿಗೆ).

ಹರ್ಷ ರಸ್ತೆ ಮತ್ತು ಹಳೇ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಹೊಂದಿರುವ ಅಶೋಕ ರಸ್ತೆ, ಅರಮನೆಯಿಂದ ಪೌಂಟೆನ್ ವೃತ್ತ, ಹುಣಸೂರು ರಸ್ತೆ, ಇರ್ವಿನ್ ರಸ್ತೆ, ಜೆ.ಎಲ್.ಬಿ.ರಸ್ತೆ, ನ್ಯೂ ಮೈಸೂರು ಬೆಂಗಳೂರು ರಸ್ತೆ, ಮೈಸೂರು ಮೃಗಾಲಯದ ಸುತ್ತಮುತ್ತ, ಎಸ್.ಪಿ.ಕಛೇರಿ ಸುತ್ತ ಮುತ್ತ, ಉತ್ತನಹಳ್ಳಿ, ದೇವಸ್ತಾನ, ಚೆಲುವಾಂಬ ಉದ್ಯಾನವನ, ಸ್ವಾತಂತ್ಯ್ರ ಹೋರಾಟಗಾಋಆರ ಉದ್ಯಾನವನ (ಸುಬ್ಬರಾಯನ ಕೆರೆ ಉದ್ಯಾನವನ), ಜಗನ್ಮೋಹನ ಅರಮನೆ, ಶಿವರಾಂಪೇಟೆ, ವಿನೋಬಾ ರಸ್ತೆ, ಪೂರ್ವ, ಪಶ್ಚಿಮ ಕಾಂತರಾಜೇ ಅರಸ್ ರಸ್ತೆ, ಅಗ್ರಹಾರ ವೃತ್ತ, ಮಿಲಾದ್ ಉದ್ಯಾನವನ, ಧನ್ವಂತರಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ರಾಮಲಿಂಗೇಶ್ವರ ಉದ್ಯಾನವನ (ವಿದ್ಯಾರಣ್ಯಪುರಂ), ಮಹಾತ್ಮಗಾಂಧಿ ರಸ್ತೆ, ಅಂಬೇಡ್ಕರ್ ಉದ್ಯಾನವನ, ನಟನಾ ರಂಗಮಂಟಪ, ಇವುಗಳೆಲ್ಲವೂ ದೀಪಾಲಂಕಾರಗೊಳ್ಳಲಿವೆ.

ವಿಶೇಷವಾಗಿ ದಿವಂಗತ ಜಯಚಾಮರಾಜೇಂದ್ರ ಒಡೆಯರ್‌ರವರ ಆಕೃತಿಯನ್ನು ವಿದ್ಯತ್ ದೀಪಗಳೊಂದಿಗೆ ಬಿಂಬಿಸಲಾಗುತ್ತಿದೆ. ನಗರದ ರೈಲು ನಿಲ್ದಾನದಿಂದ ಇರ್ವಿನ್ ರಸ್ತೆ ಮೂಲಕ ಹಾರ್ಡಿಂಜ್ ವೃತ್ತದವರೆಗಿನ ರಸ್ತೆ, ಮಿಲೇನಿಯಮ್ ವೃತ್ತದಿಂದ ಜೆ.ಎಸ್.ಎಸ್. ದಂತ ಕಾಲೇಜು ಮೂಲಕ ಬೆಂಗಳೂರು ರಸ್ತೆಯ ಟೋಲ್ಗೆಟ್‌ವರೆಗಿನ ರಸ್ತೆ, ಬಿ,ಎನ್.ರಸ್ತೆಯ ಫೈವ್ ಲೈಟ್ ವೃತ್ತದಿಂದ ನಗರ ಬಸ್ ನಿಲ್ದಾಣದವರೆಗಿನ ರಸ್ತೆ, ರಾಮಸ್ವಾಮಿ ವೃತ್ತದಿಂದ ಚಾiರಾಜ ಜೋಡಿರಸ್ತೆಯ ಮೂಲಕ ಜೆ.ಎಸ್.ಎಸ್. ವೃತ್ತದ ವರೆಗಿನ ರಸ್ತೆ, ಜಿಲ್ಲಾ ಪಂಚಾಯತ್ ಕಛೇರಿಯಿಂದ ಕೃಷ್ಣರಾಜೇಂದ್ರ ಬೂಲ್ವಾರ್ಡ ಮೂಲಕ ವಿನೋಬಾ ರಸ್ತೆಯಲ್ಲಿರುವ ಕಮಾನಿನವರೆಗಿನ ರಸ್ತೆಗಳು ಅಲಂಕಾರಗೊಳ್ಳಲಿವೆ.

ವಿಶೇಷತೆಗಳು

ಮಾತೃಮಂಡಳಿ ವೃತ್ತ, ಸುಭಾಷ್‌ನಗರ ಪಾರ್ಕ್, ಸಿದ್ಧಿಕ್ ನಗರ ಪಾರ್ಕ್, ವಿಶ್ವಮಾನವ ಪಾರ್ಕ್, ಮಾರುತಿ ವೃತ್ತ, ನ್ಯೂ ಕಾಂತರಾಜ್ ಅರಸ್ ರಸ್ತೆ, ಕೆ.ಜಿ.ಕೊಪ್ಪಲ್, ವಿಶ್ವಮಾನವ ಜೋಡಿ ರಸ್ತೆ, ಕುಕ್ಕರಹಳ್ಳಿ ಟ್ಯಾಂಕ್ ರಸ್ತೆಯ ಮರಗಳಿಗೆ ದೀಪಾಲಂಕಾರ, ನೆಹರು ಪಾರ್ಕ್ ಉದಯಗಿರಿ, ಕೆ.ಆರ್.ಪಾರ್ಕ್ ಮಂಡಿಮೊಹಲ್ಲಾ, ದಸರಾ ದೀಪಾಲಂಕಾರ ಇತಿಹಾಸದಲ್ಲೇ ಕಳೆದ ವರ್ಷದಲ್ಲೇ ಬನ್ನಿಮಂಟಪ ಹಾಗೂ ಜಂಬೂ ಸವಾರಿ ಮಾರ್ಗದ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಚಾಮುಂಡಿ ಬೆಟ್ಟದ ದೇಗುಲದ ಬಳಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಡಚಣೆ ರಹಿತ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ, 14 ಸಂಖ್ಯೆ ವಿದ್ಯುತ್ ಜನರೇಟರ್‌ಗಳನ್ನು ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಸೊಬಗು ಮೂಡಿಸುವ ಸಲುವಾಗಿ, ಸಾಲುಮರಗಳು ಬಹುವರ್ಣಗಳ, ಹೆಚ್ಚಿನ ಮೆಟಲ್ ಹ್ಯಾಲೈಡ್ ದೀಪಗಳೊಂದಿಗೆ ಮತ್ತು ದೀಪಗಳ ಸರಮಾಲೆಗಳೊಂದಿಗೆ ಆಕರ್ಷಣೀಯವಾಗಲಿವೆ. ದಸರಾ ದೀಪಾಲಂಕಾರ ಉಪಸಮಿತಿ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತಗಳ ಸಹಯೋಗದಲ್ಲಿನ ಈ ಬಾರಿಯ ಪ್ರಯತ್ನ, ಪ್ರವಾಸಿಗರು ಮತ್ತು ಮೈಸೂರು ಜನತೆಯ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ. ಈ ಬಾರಿ ಒಟ್ಟು 1,63,000 ಬಲ್ಬ್‌ಗಳು, 3250 ಮೆಟಲ್ ಅಲೈಡ್ ಲ್ಯಾಂಪ್ಸ್, ಮತ್ತು 12 ವಿಶೇಷ ಬೆಳಕಿನ ಗಣಕೀಕೃತ ದೀಪಗಳನ್ನು ಉಪಯೋಗಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X