ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ : ಇಲ್ಲಿವೆ ಸರಕಾರಿ ಸವಲತ್ತುಗಳು

By Staff
|
Google Oneindia Kannada News

Mysore Palace
ಬೆಂಗಳೂರು, ಸೆ. 16 : ದಸರಾ ಹಬ್ಬವನ್ನು ಕರ್ನಾಟಕ ಸರ್ಕಾರವು 'ನಾಡಹಬ್ಬ' ವೆಂದು ಘೋಷಿಸಿರುತ್ತದೆ. ದಸರಾ ಹಬ್ಬದ ಅಂಗವಾಗಿ ಹಾಗೂ ಇತರ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮ್ಯಸೂರು ಪ್ರಾಂತ್ಯದ ಎಡೆಗೆ ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆಯು ಅನೇಕ ಚಟುವಟಿಕೆಗಳನ್ನು
ಹಮ್ಮಿಕೊಂಡಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಐದು ದಿನಗಳವರೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸೋದ್ಯಮ ನಿಗಮ ವತಿಯಿಂದ ಈ ಚಾರ್ಟರ್ ವಿಮಾನ ಸಂಚಾರವನ್ನು ಪ್ರವಾಸಿಗರಿಗಾಗಿ ಹಾಗೂ ಇತರ ಸಾರ್ವಜನಿಕರಿಗಾಗಿ ವಿಶೇಷವಾದ (ರಿಯಾಯಿತಿ) ದರದಲ್ಲಿ ಬೆಂಗಳೂರಿನಿಂದ-ಮೈಸೂರಿಗೆ ವಿಮಾನ ಪ್ರವಾಸ ಏರ್ಪಡಿಸಲಾಗುವುದು ಎಂದರು.

ಈ ವಿಮಾನ ಪ್ರವಾಸವು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಅಂದರೆ, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಸೋಮನಾಥಪುರ, ಶ್ರೀರಂಗಪಟ್ಟಣ, ಬೃಂದಾವನ ಗಾರ್ಡನ್ ಮತ್ತು ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿರುವ ಹೋಟೆಲ್ ಮಯೂರ ರಿವರ್ ವ್ಯೂ ನಲ್ಲಿ ಒಂದು ದಿನದ ವಾಸ್ತವ್ಯವನ್ನು ಒಳಗೊಂಡಿರುತ್ತದೆ.

ಈ ಎಲ್ಲಾ ಸೌಲಭ್ಯವು ಪ್ರಕಟಿಸಿದ ದರದಲ್ಲಿ ಸೇರಿದ್ದು, ಪ್ರವಾಸಿಗರನ್ನು ಬಾದಾಮಿ ಹೌಸ್ ಬಳಿಯಿಂದ ಕರೆದೊಯ್ದು ಪ್ರವಾಸದ ನಂತರ ಮತ್ತೆ ಬಾದಾಮಿ ಹೌಸ್ ಬಳಿಗೆ ತಂದು ಬಿಡಲಾಗುವುದು. ಇದಕ್ಕೆ ತಗಲಲಿರುವ ಅಂದಾಜು ವೆಚ್ಚಗಳು ಹೀಗಿವೆ. ಸ್ಮಾರಕಗಳಿಗೆ ಪ್ರವೇಶ ಶುಲ್ಕ, ಮಧ್ಯಾಹ್ನದ ಹಾಗೂ ರಾತ್ರಿಯ ಊಟ ಮತ್ತು ವಾಸ್ತವ್ಯದ ವೆಚ್ಚ ಸೇರಿ ಒಬ್ಬರಿಗೆ ರೂ. 5500, ಇಬ್ಬರಿಗೆ ರೂ.9,900 ಹಾಗೂ ಮೂವರಿಗೆ ರೂ.13,900 ಗಳಾಗಿರುತ್ತವೆ. ಒಂದೇ ಕುಟುಂಬದ ನಾಲ್ಕು ಜನರಿಗೆ ರೂ.17,900 ಗಳಾಗಲಿದೆ ಎಂದರು.

ನಂತರದ ದಿನಗಳಲ್ಲಿ, ರಾಜ್ಯ ಪ್ರವಾಸೋದ್ಯಮ ನಿಗಮವು ಈ ರೀತಿಯ ಚಾರ್ಟರ್ ವಿಮಾನದ ಪ್ಯಾಕೇಜ್ ಟೂರುಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಇದನ್ನು ಮೈಸೂರಿನಿಂದ ಆರಂಭಿಸಿ, ವಾರಾಂತ್ಯಗಳಲ್ಲಿ ಇತರ ನಗರಗಳಾದ ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಮತ್ತು ಗೋವಾಗಳಿಂದಲೂ ನಡೆಸಲು ಉದ್ದೇಶಿಸಿದೆ. ಈ ಪ್ಯಾಕೇಜ್ ಟೂರುಗಳಿಗೆ ಪ್ರವಾಸಿಗರಿಂದ ದೊರೆಯಬಹುದಾದ ಉತ್ತೇಜನ ಹಾಗೂ ಪ್ರತಿಕ್ರಿಯೆಯನ್ನು ಅವಲಂಬಿಸಿ ಈ ವಿಶೇಷ ಪ್ರವಾಸಗಳನ್ನು ಪ್ರತಿ ವಾರದಲ್ಲೂ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದು ಜನಾರ್ದನರೆಡ್ಡಿ ಹೇಳಿದರು.

ಅದೇ ಮಾದರಿಯಲ್ಲಿ, ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ನಿಗಮದ ಮೂಲಕ ಈ ಚಾರ್ಟರ್ ವಿಮಾನ ಸಂಚಾರವನ್ನು ಜನವರಿ 2010 ರಲ್ಲಿ ಹಂಪಿಯಲ್ಲಿ ನಡೆಯಲಿರುವ 500 ನೇ ವರ್ಷದ ಶ್ರೀ ಕೃಷ್ಣದೇವರಾಯರ ಸಿಂಹಾಸನಾರೋಹಣ ಉತ್ಸವ ಸಂದರ್ಭದಲ್ಲಿ ಬೆಂಗಳೂರಿನಿಂದ ಹಂಪಿಗೆ ನಡೆಸಲು ಉದ್ದೇಶಿಸಿದೆ. ಇದಲ್ಲದೆ, ಒಂದು ವಿಶೇಷ ಪ್ಯಾಕೇಜ್‌ನ ಅಡಿಯಲ್ಲಿ ಜನವರಿ 2010 ರ ಮಾಹೆಯಲ್ಲಿ ಹಂಪಿಗೆ ವಿಮಾನ ಸಂಚಾರ ಆರಂಭಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ತೋರಣಗಲ್ ನಲ್ಲಿರುವ ವಿಮಾನ ನಿಲ್ದಾಣವನ್ನು ಬಳಸಲಾಗುವುದು. ತದನಂತರ, ಪ್ರವಾಸೋದ್ಯಮ ಇಲಾಖೆಯು ನಿಗಮದ ವತಿಯಿಂದ ಇಂತಹ ಚಾರ್ಟರ್ ವಿಮಾನಗಳ ಪ್ರವಾಸವನ್ನು ಇತರ ಪ್ರವಾಸಿ ಕೇಂದ್ರಗಳಿಂದ ಅಂದರೆ, ಚೆನ್ನೈ, ದೆಹಲಿ, ಮುಂಬೈ ಮತ್ತು ಗೋವಾ ಗಳಿಂದ ವಾರಾಂತ್ಯಗಳಲ್ಲಿ ಆರಂಭಿಸಲು ಹಾಗೂ ಪ್ರವಾಸಿಗರಿಂದ ದೊರಕುವ ಪ್ರತಿಕ್ರಿಯೆಯನ್ನು ಆಧರಿಸಿ ನಿರಂತರವಾಗಿ ನಡೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X