ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಹಬ್ಬ : ಖಾಸಗಿ ಪ್ರಾಯೋಜಕತ್ವಕ್ಕೆ ಅಸ್ತು

By Staff
|
Google Oneindia Kannada News

Manivannan
ಮೈಸೂರು, ಸೆ. 6 : ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಸರಕಾರದ ಅನುದಾನದ ಜೊತೆಗೆ ಖಾಸಗಿ ಪ್ರಾಯೋಜಕರನ್ನು ಆಹ್ವಾನಿಯಲಾಯಿತು. ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿವಿಧ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಈ ಅಹ್ವಾನ ನೀಡಿದರು.

ದಸರಾ ಅಂಗವಾಗಿ ನಡೆಯಲಿರುವ ಅರಮನೆ ಕಾರ್ಯಕ್ರಮ, ಯುವ ದಸರಾ, ಕ್ರೀಡಾಕೂಟ, ಗ್ರಾಮೀಣ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಲು ಟಿವಿಎಸ್, ಬನ್ನಾರಿ ಅಮ್ಮನ್ ಶುಗರ್ಸ್, ಎಸ್ ಬಿಎಂ, ಸಿಂಡಿಕೇಟ್, ಎಸ್ ಬಿಐ, ರೀಡ್ ಅಂಡ್ ಟೇಲರ್, ಏರ್ ಟೇಲ್ ಸೇರಿದಂತೆ ಹಲವು ಕಂಪನಿಗಳು ಮುಂದಾಗಿವೆ.

ಸಭೆಯಲ್ಲಿ ಮಾಚವಾಡಿದ ಜಿಲ್ಲಾಧಿಕಾರಿ ಮಣಿವಣ್ಣನ್ ಅವರು, ಯುವ ದಸರಾ ಕಾರ್ಯಕ್ರಮಕ್ಕೆ 3 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಇದಕ್ಕಾಗಿ 90 ಲಕ್ಷ ರುಪಾಯಿ ಖರ್ಚಾಗುವ ನಿರೀಕ್ಷೆ ಇದೆ. ಅರಮನೆ ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1.5 ಲಕ್ಷ ಮಂದಿ ಸೇರಲಿದ್ದು, 60 ಲಕ್ಷ ರುಪಾಯಿ ಖರ್ಚಾಗುವ ಅಂದಾಜಿದೆ. ಕ್ರೀಡೆಗೆ 1 ಲಕ್ಷ ಮುಂದಿ ಸೇರಲಿದ್ದು, 30 ಲಕ್ಷ ರುಪಾಯಿ ವ್ಯಯವಾಗಲಿದೆ. ಸೈಕ್ಲಿಂಗ್ ಸ್ಪರ್ಧೆಯಲ್ಲಿ 1 ಲಕ್ಷ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X