ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ ಮಸ್ ದಿನ ಬರುವ ಸಾಂತಾ ಕ್ಲಾಸ್ ಬಗ್ಗೆ ಎಷ್ಟು ಗೊತ್ತು?

|
Google Oneindia Kannada News

ವರ್ಷದ ಅಂತ್ಯದಲ್ಲಿ, ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವ ಯೋಜನೆ ರೂಪಿಸುತ್ತಿರುವಾಗ ಬರುವ ಹಬ್ಬ ಕ್ರಿಸ್ ಮಸ್. ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ಸಮುದಾಯದವರು ಅಂದು ಚರ್ಚ್‌ಗಳಿಗೆ ಭೇಟಿ ನೀಡುತ್ತಾರೆ. ಮಕ್ಕಳಿಗೆ ಕ್ರಿಸ್ ಮಸ್ ಹಬ್ಬ ಎಂದರೆ ಅಚ್ಚು ಮೆಚ್ಚು. ವರ್ಷದ ಕೊನೆಯಲ್ಲಿ ಬರುವ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿರುತ್ತವೆ.

ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'! ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'!

ಕ್ರಿಸ್ ಮಸ್ ಹಬ್ಬದ ಆಕರ್ಷಣೆಗಳಲ್ಲಿ ಕ್ರಿಸ್ ಮಸ್ ಟ್ರೀ, ಕೇಕ್, ವಿವಿಧ ಬಗೆಯ ಗ್ರೀಟಿಂಗ್ ಕಾರ್ಡ್‌ಗಳು ಸೇರಿವೆ. ಆದರೆ, ಹಬ್ಬದ ಪ್ರಮುಖ ಆಕರ್ಷಣೆ ಸಾಂತಾ ಕ್ಲಾಸ್. ಮಕ್ಕಳಿಗೆ ಸಾಂತಾ ಕ್ಲಾಸ್ ಎಂದರೆ ಅಚ್ಚುಮೆಚ್ಚು, ಮಕ್ಕಳನ್ನು ನೋಡಲು ಆತ ಯಾವತ್ತೂ ಬರಿಗೈಯಲ್ಲಿ ಬರುವುದಿಲ್ಲ.

 ಕ್ರಿಸ್ ಮಸ್ ಸೊಗಸಿಗೆ ಸಿಲಿಕಾನ್ ಸಿಟಿಯ ಬಿನ್ನಾಣ! ಕ್ರಿಸ್ ಮಸ್ ಸೊಗಸಿಗೆ ಸಿಲಿಕಾನ್ ಸಿಟಿಯ ಬಿನ್ನಾಣ!

Welcome Santa Claus Legendary Christian Saint

ಬಿಳಿ ಗಡ್ಡ, ಕೆಂಪು ಟೋಪಿ ಧರಿಸಿ ಬರುವ ಸಾಂತಾ ಕ್ಲಾಸ್ ಉಡುಗೊರೆ, ಸಿಹಿ ತಿಂಡಿಗಳನ್ನು ಹೊತ್ತ ಚೀಲವನ್ನು ಎತ್ತಿಕೊಂಡು ಬರುತ್ತಾನೆ. ಮಕ್ಕಳೂ ಸಹ ಸಾಂತಾ ಕ್ಲಾಸ್ ರೀತಿ ಉಡುಪು ಧರಿಸಿ ಆತನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಮಕ್ಕಳಿಗೆ ಉಡುಗೊರೆ ಕೊಡುವ ಆತ, ಸಿಹಿ ತಿಂಡಿಗಳನ್ನು ನೀಡಿ ಅವರ ಜೊತೆ ಸಂಭ್ರಮಿಸುತ್ತಾನೆ.

ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !

ಮಕ್ಕಳು ಸಹ ಸಾಂತಾ ಕ್ಲಾಸ್ ರೀತಿ ಉಡುಪು ಧರಿಸಿ ಸಂಭ್ರಮಿಸುತ್ತಾರೆ. ಮಾರುಕಟ್ಟೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಸಾಂತಾ ಕ್ಲಾಸ್ ಮಾದರಿಯ ಹಲವಾರು ಬಗೆಯ ಉಡುಪುಗಳು ಬಂದಿರುತ್ತವೆ. ಹಾಗಾದರೆ ಸಾಂತಾ ಕ್ಲಾಸ್ ಯಾರು?. ಕೇವಲ ಮಕ್ಕಳಿಗೆ ಉಡುಗೊರೆ ಕೊಡುವ ಬರುವ ವ್ಯಕ್ತಿ ಎಂದುಕೊಂಡರೆ ತಪ್ಪು.

Welcome Santa Claus Legendary Christian Saint

ಇತಿಹಾಸದ ಪುಸ್ತಕಗಳ ಪ್ರಕಾರ ಸೇಂಟ್ ನಿಕೋಲಸ್ ಎಂಬ ವ್ಯಕ್ತಿಯಿಂದಾಗಿ ಸಾಂತಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟಿದೆ. ಕ್ರಿ. ಪೂ 300ರಲ್ಲಿ ಟರ್ಕಿಯ ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ ಇದ್ದ. ಆಗರ್ಭ ಶ್ರೀಮಂತನಾಗಿದ್ದ ನಿಕೋಲಸ್‌ಗೆ ಜನರ ಬಗ್ಗೆ ಅಪಾರವಾದ ಕಾಳಜಿ ಇತ್ತು. ಯಾವ ಜನರು ಕಷ್ಟಪಡಬಾರದು ಎಂದು ಆತ ಬಯಸುತ್ತಿದ್ದ.

ಜನರು ಅದರಲ್ಲಿಯೂ ಮಕ್ಕಳು ಸದಾ ಖುಷಿಯಾಗಿರಬೇಕು ಎಂದು ಅವರಿಗೆ ಬೇರೆ ಬೇರೆ ಉಡುಗೊರೆ, ಸಿಹಿ ತಿಂಡಿಗಳನ್ನು ನೀಡುತ್ತಿದ್ದ. ನಿಕೋಲಸ್ 17ನೇ ವಯಸ್ಸಿಗೆ ಪಾದ್ರಿಯಾದ. ಬಳಿಕ ತನ್ನ ಜೀವನದುದ್ದಕ್ಕೂ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಲೇ ಇದ್ದ.

ನಿಕೋಲಸ್ ನಿಧನದ ನಂತರ ಚರ್ಚ್‌ನಲ್ಲಿದ್ದ ಆತನ ಅನುಯಾಯಿಗಳು ಈ ಸಂಪ್ರದಾಯವನ್ನು ಮುಂದುವರೆಸಿದರು. ಕ್ರಿಸ್ ಮಸ್ ದಿನ ಗಮನ ಸೆಳೆಯುವಂತಹ ವೇಷಗಳನ್ನು ತೊಟ್ಟು ಮಕ್ಕಳಿಗೆ ಮಧ್ಯರಾತ್ರಿಯನ್ನು ಉಡುಗೊರೆಗಳನ್ನು ನೀಡುತ್ತಾ ಬಂದರು. ಕ್ರಮೇಣ ಈ ಪದ್ಧತಿ ವಿಶ್ವದ ಇತರ ರಾಷ್ಟ್ರಗಳಿಗೆ ಪರಿಚಯವಾಯಿತು.

ಮಕ್ಕಳ ಬಳಿ ಹೋಗುವಾಗ ನಿಕೋಲಸ್ ಕೆಂಪು ಬಣ್ಣದ ಬಟ್ಟೆ ತೊಡುತ್ತಿದ್ದ. ಕ್ರಿಸ್ ಮಸ್ ದಿನ ಆತ ಉಡುಗೊರೆ, ಸಿಹಿ ತಿಂಡಿಗಳ ಚೀಲ ಹೊತ್ತು ಮಕ್ಕಳ ಬಳಿ ಹೋಗುತ್ತಿದ್ದ. ಮಕ್ಕಳು ಆತನ ಬಿಳಿ ಗಡ್ಡವನ್ನು ಮುದ್ದಿಸುತ್ತಿದ್ದರು. ಆತನ ನಿಧನದ ನಂತರವೂ ಈ ಪದ್ಧತಿ ಮುಂದುವರೆಯಿತು.

ಕ್ರಿಸ್ ಮಸ್ ದಿನ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಸೆಲೆಬ್ರಿಟಿಗಳು ಸಾಂತಾ ಕ್ಲಾಸ್ ರೀತಿ ಉಡುಪು ತೊಟ್ಟು ಅನಾಥಶ್ರಮಗಳಿಗೆ ಭೇಟಿ ಕೊಟ್ಟು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಹಲವಾರು ಕ್ರಿಕೆಟಿಗರು ಕ್ರಿಸ್ ಮಸ್ ದಿನ ಸಾಂತಾ ಕ್ಲಾಸ್ ವೇಷ ತೊಟ್ಟು ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಾರೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕ್ರಿಸ್ ಮಸ್ ಸಂಭ್ರಮದಲ್ಲಿ ಬಡ ಮಕ್ಕಳಿಗೆ ಸಹಾಯಕವಾಗುವ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

English summary
In the time of Christmas we will welcome Santa Claus legendary figure who bringing gifts to children. Popular image is based on traditions associated with Saint Nicholas a 4th-century Christian saint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X