• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಲಾ ದಿನಗಳ ನೆನಪಿನಂಗಳಕ್ಕೆ ಜಾರಿಸುವ ಕ್ರಿಸ್ಮಸ್ ಹಬ್ಬ

By ವನಿತ.ವೈ.ಜೈನ್
|

ಬಂತು ಬಂತು ಕ್ರಿಸ್ಮಸ್, ಕೇಕಿನ ಹಬ್ಬ ಕ್ರಿಸ್ ಮಸ್, ತಂದ್ತು, ತಂದ್ತು ರಜೆ, ಒಂದು ವಾರ ಮಜಾ... ಹೀಗೆ ಹಾಡ್ತಾ ಕುಣಿತಾ ಇದ್ದೋರು ನಾವು. ಎಲ್ಲಾ ಮಕ್ಕಳಿಗೂ ವರ್ಷದಲ್ಲಿ ಎರಡು ಬಾರಿ ರಜಾ ಸಿಕ್ಕಿದ್ರೆ ನಮ್ಮ ಶಾಲೆಗೆ ಮಾತ್ರ ವರ್ಷದಲ್ಲಿ ಮೂರು ಬಾರಿ. ಹೇಗೆ ಗೊತ್ತಾಗಿಲ್ವ ಕ್ರಿಸ್ಮಸ್ ರಜಾನೂ ಸೇರಿ. ಎಲ್ ಕೆಜಿಯಿಂದ ಪಿಯುಸಿವರೆಗೂ ಕ್ರಿಶ್ಚಿಯನ್ ಇನ್ಸ್ ಟಿಟ್ಯೂಟ್ ನಲ್ಲಿ ಕಲಿತ ನನಗೆ ಕ್ರಿಸ್ ಮಸ್ ಅಂದ್ರೆ ಏನೋ ಒಂದು ಥರ ಖುಷಿ.

ಆ ಕ್ಯಾಂಡಲ್ ಬೆಳಕು, ಬಿಳಿ ವಸ್ತ್ರ, ಸ್ಟಾರ್, ಕ್ರಿಸ್ತನ ಹುಟ್ಟಿನಿಂದ ಸಾವಿನವರೆಗೂ ಕಳೆದ ಕ್ಷಣಗಳನ್ನು ಕಿಲ ಕಿಲ ನಗುವ ಕ್ರಿಸ್ತ, ಹಲವು ಕುರಿಗಳ ಮಂದೆ, ಹಸಿರು ಹೊಲ, ಹೀಗೆ ಸುಂದರವಾಗಿ ನಿರ್ಮಿಸಿದ ಗೋದಳಿ ಮೂಲಕ ಇಡೀ ಕ್ರಿಸ್ತ ಲೋಕವೇ ಅವತರಿಸಿ ಬಿಡುತ್ತಿತ್ತು. ಅಯ್ಯೋ ಇದನ್ನೆಲ್ಲಾ ನೋಡ್ಬೇಕು ಅಂತಾನೇ ನಾವು ಊರಿಗೆಲ್ಲೂ ಹೋಗ್ತಿರಲಿಲ್ಲ ಕಂಡ್ರೀ. ನಮ್ಮೆಲ್ಲಾ ಸ್ನೇಹಿತರು ಹಿಂದಿನ ದಿನವೇ ಮಾತಾಡಿಕೊಂಡು ಗೋದಳಿ ಅದನ್ನೆಲ್ಲಾ ಮಾಡುವ ಸ್ಥಳ ನೋಡಿಕೊಂಡು, ಕ್ರಿಸ್ ಮಸ್ ಪ್ರಯುಕ್ತ ಕೊಡುವ ಹಣ್ಣೋ, ಕೇಕ್ ಹಿಡಿದುಕೊಂಡು ನಮ್ಮ ಶಾಲೆಯಲ್ಲಿ ಕ್ರಿಸ್ ಮಸ್ ಹಬ್ಬ ಅಂತ ಇಡೀ ಬೀದಿಗೂ ಹೇಳ್ತಾ ಮನೆ ಸೇರ್ತಿದ್ವಿ.[ಕಣ್ಮನಗಳಿಗೆ ಮುದ ನೀಡುವ ಕ್ರಿಸ್ಮಸ್ ಸಿದ್ಧತೆ ಜೋರೋ ಜೋರು]

ಮಾರನೇ ದಿನ ನಾವು ಹುಡುಗ ಹುಡುಗಿಯರು ಒಟ್ಟಾಗಿ ನಮ್ಮ ಶಾಲಾ ಗುರುಗಳು, ಸಿಸ್ಟರ್ಸ್ ಮಾಡಿಟ್ಟಿದ್ದ ಗೋದುಲಿ ನೋಡಲು ಹೋಗ್ತಿದ್ವಿ. ಅಯ್ಯೋ ಅದಕ್ಕಿಂತ ಹೆಚ್ಚಾಗಿ ಅಂದಿನ ದಿನ ಹಿಂದಿನ ದಿನ ಕೊಟ್ಟಿರುವುದಕ್ಕಿಂತ ತುಂಬಾ ದೊಡ್ಡ ಪೀಸ್ ಕೇಕ್, ಖಾರ ಎಲ್ಲಾ ಕೊಡ್ತಿದ್ರು. ಆಗ ಮಕ್ಕಳಾಗಿದ್ವಿ ನೋಡಿ. ಸಹಜವಾಗಿಯೇ ಎಲ್ಲಾ ಮಕ್ಕಳಂತೆ ನಾವು ಕೇಕ್, ಚಾಕಲೇಟ್ ಹುಡುಕಿಕೊಂಡು ಹೋಗ್ತಿದ್ವಿ. ಒಟ್ಟಿನಲ್ಲಿ ಆಕಾಶ ಕಳಚಿ ಬೀಳುವ ಸ್ಥಿತಿಯಲ್ಲಿದ್ದರೂ ಬೆಳಿಗ್ಗೆ 10 ಗಂಟೆಗೆಲ್ಲಾ ನಾವು ಶಾಲೆ ಚರ್ಚ್ ಮುಂದೆ ಹಾಜರಿ ಹಾಕಿರ್ತಿದ್ವಿ, ಅವರಂತೆ ಹೊಸ ಬಟ್ಟೆ ಅಲ್ಲಾದಿದ್ರೂ ತೊಳೆದ ಬಟ್ಟೆ ತೊಟ್ಟು.

ನಾವು ಕ್ರಿಸ್ ಮಸ್ ಹಬ್ಬಕ್ಕೆಂದೇ ಡ್ಯಾನ್ಸ್, ಹಾಡು ತಯಾರಿ ನಡೆಸಿ ಫಾದರ್, ಮದರ್ ಮುಂದೆ ಸೈ ಎನಿಸಿಕೊಳ್ಳಲು ಒಬ್ಬೊಬ್ಬರಗಿಂತ ಭಿನ್ನವಾಗಿಯೇ ನೃತ್ಯ ಕಲಿತಿದ್ವಿ. ರಾತ್ರಿ 11 ರ ಸುಮಾರಿಗೆ ಎಲ್ಲರ ಹತ್ತಿರ ಭೇಷ್ ಎನಿಸಿಕೊಂಡು ಮನೆಗೆ ಬರ್ತಿದ್ವಿ ಹೀಗಿತ್ತು ನಮ್ಮ ಕ್ರಿಸ್ ಮಸ್.. ಇದು ಕ್ರಿಸ್ ಮಸ್ ದಿನ ಮಾತು.[ಕುಸ್ವಾರ್ ತಿನಿಸು ತಿನ್ನಲು ಮಂಗ್ಳೂರು ಕ್ರಿಸ್ಮಸ್ ಹಬ್ಬದಲ್ಲಿ ಪಾಲ್ಗೊಳ್ಳಿ]

ನಮ್ಮ ಶಾಲೆಯಲ್ಲಿ ಕ್ರಿಸ್ಮಸ್ ಹೇಗಿತ್ತು?

ನಾನು ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಶಿವಮೊಗ್ಗದ ಸಾನ್ ಜೋಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಮ್ಮಲ್ಲಿ ಕ್ರಿಸ್ ಮಸ್ ತಯಾರಿ ಶುರುವಾಗುತ್ತಿದ್ದು ಡಿಸೆಂಬರ್ ತಿಂಗಳ ಪ್ರಾರಂಭದಲ್ಲಿ ಹಲವು ಗೇಮ್ ಗಳ ಮೂಲಕ. ಅದರಲ್ಲೂ 7ನೇ ತರಗತಿಯಲ್ಲಿಯೇ ಕ್ರಿಸ್ ಮಸ್ ಒಂದು ಥರ ಡಿಫರೆಂಟ್ ಅನುಭವ. ಇಂದಿಗೂ ಒಬ್ಬರೇ ಕೂತು ನೆನಪುಗಳ ಮೆಲುಕು ಹಾಕಿದಾಗ ಆ ದಿನಗಳು ಮತ್ತೆ ಬೇಕು ಅನಿಸುತ್ತೆ. ಇಂದಿನವರೆಗೂ ಶಾಲಾ ಶಿಕ್ಷಕರಿಗೆ ಶುಭಾಶಯ ಹೇಳುವುದು ತಪ್ಪಿಲ್ಲ.

ಇಡೀ ಶಾಲೆಯಲ್ಲಿ ನಮ್ಮ ತರಗತಿ ಬಹಳ ಜೋರು, ಕಿಲಾಡಿ, ಆಟ, ಪಾಠ, ಗಲಾಟೆ ಎಲ್ಲದರಲ್ಲೂ. ಯಾರಾದ್ರು ನೀವು ಅಂದ್ರೆ ನಿಮ್ಮ ಅಪ್ಪ ಅಂತ ಹೇಳಿ ಬರುವಷ್ಟು. ಆದ್ರೆ ಹೀಗೆ ಎಲ್ಲೂ ಹೇಳಿಲ್ಲ ಬಿಡಿ. ಅದಿರ್ಲಿ, ನಾವು 5ನೇ ತರಗತಿಗೆ ಬರ್ತಾ ಇದ್ದ ಹಾಗೆ ನಾವು ಯಾವಾಗ 7ನೇ ತರಗತಿಗೆ ಬರ್ತಿವಪ್ಪಾ ಎಂದು ನಾವು, ನಾವುಗಳೇ ಕೈ ಕೈ ಹಿಸುಕಿಕೊಳ್ತಿದ್ವಿ. ಇದಕ್ಕೆಲ್ಲಾ ಮೂಲ ಕಾರಣ ಕ್ರಿಸ್ ಮಸ್ ಹಬ್ಬ ಅಂದ್ರೆ ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ. ಇದು ಮಾತ್ರ ಸತ್ಯ.[ವಿಶೇಷ ಲೇಖನ: ಮಕ್ಕಳಿಗೆ ಮುದ ನೀಡುವ ಕ್ರಿಸ್ಮಸ್, ಸಾಂತಾಕ್ಲಾಸ್]

ಕ್ರಿಸ್ಮಸ್ ಹಬ್ಬಕ್ಕಾಗಿ ಯಾವ ಆಟ ಆಡ್ತಿದ್ವಿ?

ನಮ್ಮ ಶಾಲೆಯಲ್ಲಿ ನಮ್ಮ ಗುರುಗಳು ವಿದ್ಯಾರ್ಥಿಗಳೊಂದಿಗೆ ಕ್ರಿಸ್ ಮಸ್ ಗೇಮ್ ಆಡ್ತಾ ಇದ್ರು. ಕೇವಲ 7ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಮಾತ್ರ. ಅವರ ಜೊತೆ ನಾವು ಆಟ ಆಡ್ಬೇಕು ಅಂದ್ರೆ ನಾವು ಏಳನೇ ಕ್ಲಾಸಿಗೆ ಬರ್ಬೇಕಿತ್ತು. ಅದು ಅಲ್ದೇ ಹುಡುಗರ ಗಿಫ್ಟ್ ಹುಡುಗಿಯರಿಗೆ, ಹುಡುಗಿಯರ ಗಿಫ್ಟ್ ಹುಡುಗರಿಗೆ, ಜೊತೆಗೆ ಗುರುಗಳ ಗಿಫ್ಟ್ ಮಕ್ಕಳಿಗೆ, ಮಕ್ಕಳ ಗಿಫ್ಟ್ ಗುರುಗಳಿಗೆ ವಿನಿಮಯವಾಗುತ್ತಿದ್ದುದು ಇದೇ ಹಬ್ಬದಲ್ಲಿ ಮಾತ್ರ. ಎಲ್ಲಾ ಗುರುಗಳು, ಆಯಾ ಆಂಟಿ, ವಿದ್ಯಾರ್ಥಿಗಳ ಹೆಸರನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಕ್ರಿಸ್ ಮಸ್ ಫ್ರೆಂಡ್ ಅಂತ ಆಡ್ತಿದ್ವಿ.

ಕ್ರಿಸ್ ಮಸ್ ಫ್ರೆಂಡ್ ಆಟ ಆಡಿದ ಮೇಲೆನೇ ಇರೋದು ಮಜಾ. ಯಾಕಂದ್ರೆ ಅವರಿಗೆ ಬಂದಿರುವ ಹೆಸರನ್ನು ಯಾರಿಗೂ ಹೇಳುವಂತಿಲ್ಲ. ಒಟ್ಟಿನಲ್ಲಿ 25 ದಿನ ಗಿಫ್ಟ್ ಗಾಗಿ ಕಾಯಬೇಕಿತ್ತು. ಸ್ನೇಹಿತರು ನಿನಗೆ ಯಾರು ಬಂದಿದ್ದಾರೆ ಅಂತ ಕೇಳಿದ್ರೆ ನೀನೇ ಕಣೆ/ಕಣೋ ಎಂದು ಹೇಳಿ ಅವರಲ್ಲೂ ಏನೋ ಒಂದು ಕುತೂಹಲ ಮೂಡಿಸಿ ಅಲ್ಲಿಗೆ ಕೈ ಬಿಡ್ತಿದ್ವಿ. ನಮಗೆಲ್ಲಾ ಸುಮಾರು 23 ದಿನ ಗಿಫ್ಟ್ ಕೊಡೋದೇ ಚಿಂತೆ. ಟೀಚರ್ ಹೆಸರು ಬಂದ್ರಂತೂ ಮುಗೀತು ಕಥೆ. ಆದ್ರೆ ಗುರುಗಳು ಮೊದಲೇ ಹೇಳ್ದ ಹಾಗೆ ತುಂಬಾ ಬೆಲೆ ಬಾಳುವ ಗಿಫ್ಟ್ ಕೊಡುವಂತಿರಲಿಲ್ಲ. ಕೊಡುವಷ್ಟು ನಾವು ಅನುಕೂಲಸ್ಥರಾಗಿರಲಿಲ್ಲ ಆ ಮಾತು ಬೇರೆ ಬಿಡಿ.[ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯಗಳು]

ಅಂತು ಇಂತೂ ಡಿಸೆಂಬರ್ 24ನೇ ತಾರೀಖು ಬಂದೇ ಬಿಡುತ್ತದೆ. ಗಿಫ್ಟ್ ವಿನಿಮಯದ ಸಂಭ್ರಮ. ನಮ್ಮ ಭಾವನೆ ಕಟ್ಟೆ ಒಡೆಯುವ ಘಳಿಗೆ. ಅಪ್ಪಿ ತಬ್ಬಿ ಮುದ್ದಾಡುವ, ಬದುಕಿನಲ್ಲಿ ಮುಂದೆದೂ ಬಾರದ ಕ್ಷಣ ಆ ಏಳನೇ ತರಗತಿಯ ಕ್ರಿಸ್ ಮಸ್ ಫ್ರೆಂಡ್. ಯಾವುದೇ ಆಧುನಿಕತೆಯ ಸೋಗಿಲ್ಲದೆ ಸಂತೋಷ, ದುಃಖ ಒಮ್ಮೆಲೆ ಉಕ್ಕಿ ಬರುವ, ಸ್ನೇಹಿತರು, ಗುರುಗಳನ್ನು ತೊರೆದು ಮುಂದಿನ ಬದುಕಿಗೆ ಹೊಸ ಆಶಾವಾದ ತುಂಬುವ ಕ್ರಿಸ್ ಮಸ್ ಫ್ರೆಂಡ್ ಆಟ ಮತ್ತೆ ಮತ್ತೆ ಬೇಕೆನಿಸುತ್ತೆ. ಕ್ರಿಸ್ ಮಸ್ ಬಂದಾಗಲೆಲ್ಲಾ ನನ್ನಲ್ಲಿ ಅದಮ್ಯ ಉತ್ಸಾಹ ಪುಟಿದೇಳುತ್ತೆ. ಹಾಗಿತ್ತು ನಮ್ಮ ಶಾಲೆಯ ಕ್ರಿಸ್ಮಸ್ ಆಚರಣೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Christmas is not just the birthday of Jesus Christ, the lonely God of christian community. It is a festival of joy, thanks giving, togetherness and indelible memories of childhood. The author goes down the memory lane of school days. Forget the present, savour the past.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more