ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ ಗೆ ರೆಡಿ ಮಾಡಿ ಎಗ್ ನಾಗ್ ರೆಸಿಪಿ

|
Google Oneindia Kannada News

Eggnog Recipe
ಎಗ್ ನಾಗ್ ಕ್ರಿಸ್ಮಸ್ ಹಬ್ಬಕ್ಕೆ ಮಾಡುವ ಸ್ಪೆಷಲ್ ತಿಂಡಿ. ಈ ಸಾಂಪ್ರದಾಯಿಕ ತಿಂಡಿ ಕ್ರಿಸ್ಮಸ್ ಹಬ್ಬದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಮೊಟ್ಟೆ ಬಳಸಿ ಮಾಡುವ ಈ ತಿಂಡಿಯನ್ನು ಸುಲಭವಾಗಿ ತಯಾರಿಸಬಹುದು. ಎಗ್ ನಾಗ್ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಎಗ್ ನಾಗ್ ಗೆ ಬೇಕಾಗುವ ಪದಾರ್ಥಗಳು:
* 12 ಮೊಟ್ಟೆ (ಬಿಳಿ ಮತ್ತು ಹಳದಿ ಭಾಗವನ್ನು ಬೇರ್ಪಡಿಸಿರಬೇಕು)
* 6 ಕಪ್ ಹಾಲು
* 2 ಕಪ್ ಕ್ರೀಂ
* 2 ಕಪ್ ಸಕ್ಕರೆ
* 2 ಕಪ್ ಬಾರ್ಬನ್ ವಿಸ್ಕಿ
* 1/2 ಕಪ್ ಬ್ರಾಂದಿ
* 2 ಚಮಚ ಜಾಕಾಯಿ ಪುಡಿ

ಎಗ್ ನಾಗ್ ರೆಸಿಪಿ ಮಾಡುವ ವಿಧಾನ:
* ಮೊಟ್ಟೆಯ ಹಳದಿ ಭಾಗವನ್ನು ಸಕ್ಕರೆ ಬೆರೆಸಿ ಚೆನ್ನಾಗಿ ಕಲೆಸಬೇಕು.
* ಬಾರ್ಬನ್ ಮತ್ತು ಬ್ರಾಂದಿ ಮಿಶ್ರಣವನ್ನು ಬೆರೆಸಬೇಕು.
* ಈಗ ಆಲ್ಕೊಹಾಲ್ ಮತ್ತು ಮೊಟ್ಟೆಯ ಮಿಶ್ರಣವನ್ನು 4-5 ಗಂಟೆ ಫ್ರಿಡ್ಜ್ ನಲ್ಲಿಡಬೇಕು.
* ಬಡಿಸುವ ಅರ್ಧ ಗಂಟೆ ಮುನ್ನ ತೆಗೆದಿಟ್ಟರೆ ಸಾಕು. ಅದಕ್ಕೆ ಹಾಲು ಹಾಕಿ ಜಾಕಾಯಿ ಪುಡಿಯನ್ನು ಬೆರೆಸಬೇಕು.
* ಪ್ರತ್ಯೇಕ ಬಟ್ಟಲಿನಲ್ಲಿ ಮೊಟ್ಟೆ ಬಿಳಿ ಭಾಗ ಮತ್ತು ಕ್ರೀಮನ್ನು ಚೆನ್ನಾಗಿ ಬೆರೆಸಬೇಕು.
* ಈಗ ಮೊಟ್ಟೆ ಬಿಳಿ ಭಾಗದ ಮಿಶ್ರಣವನ್ನು ತಯಾರಿಸಿಟ್ಟುಕೊಂಡ ಹಳದಿ ಮಿಶ್ರಣದೊಂದಿಗೆ ಬೆರೆಸಿ ಕದಡಬೇಕು. ಈಗ ಎಗ್ ನಾಗ್ ರೆಸಿಪಿ ರೆಡಿಯಾಗಿದೆ.

English summary
Eggnog as a recipe is neither simple nor complex. As a Christmas cocktail, homemade eggnog has an elaborate recipe. The traditional recipe for homemade eggnog makes use of alcohol. This easy Christmas recipe for cocktail can also be served as dessert as it is sweet and creamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X