ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ ಹಬ್ಬದ ಕುರಿತ ಸೋಜಿಗ ಸ್ವಾರಸ್ಯಗಳು

|
Google Oneindia Kannada News

Interesting and Funny facts about Christmas
ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ಉದ್ದವಾದ ಬಿಳಿಗಡ್ಡ, ದೊಡ್ಡಹೊಟ್ಟೆಯ, ಮುಖ ತುಂಬಾ ನಗುವಿನ, ಉದ್ದವಾದ ಕೆಂಪು ದೋಲೆ, ಕೆಂಪು ಟೋಪಿ ಧರಿಸಿದ ಸಾಂತಾಕ್ಲಾಸ್ ನೆನಪಾಗುತ್ತಾನೆ. ಚಕ್ಕುಲಿ, ಚಿಪ್ಸ್, ಲಾಡು, ವೈನ್, ಕೇಕ್, ಭಕ್ಷ್ಯ ಭೋಜನ ನೆನಪಾಗುತ್ತದೆ.

ಸಾಲು ಸಾಲು ಕ್ರಿಸ್ಮಸ್ ಟ್ರೀಗಳ ಝಲಕು, ಪಟಾಕಿ ಬೆಳಕುಗಳ ಚಿತ್ತಾರ, ಹೊಸ ಬಟ್ಟೆ ಧರಿಸಿದ ಮಕ್ಕಳ, ಯುವತಿಯರ ಚಿತ್ರ ಕಣ್ಮುಂದೆ ಬರುತ್ತದೆ. ಚರ್ಚಿನಲ್ಲಿ ಪ್ರಾಥನೆ, ಗಂಟೆಗಳ ಸದ್ದು ಕೇಳಿಸುತ್ತದೆ. ಶುಭಾಶಯಗಳ ವಿನಿಮಯ ಕಿವಿ ಮತ್ತು ಮನಸ್ಸು ತುಂಬುತ್ತದೆ. ಗ್ರೀಟಿಂಗ್ ಕಾರ್ಡ್, ಹೂವು ಬೊಕೆಗಳು, ಕೇಕ್ ಗಳು ಹಬ್ಬದ ಸಡಗರ ಹೆಚ್ಚಿಸುತ್ತವೆ.

ಕ್ರಿಸ್ಮಸ್ ಹಬ್ಬದ ಇತಿಹಾಸದಲ್ಲಿ ಸಾಕಷ್ಟು ಸ್ವಾರಸ್ಯ, ಸೋಜಿಗಗಳು ಕಾಣುತ್ತವೆ. ಅಚ್ಚರಿಯೆಂದರೆ ಒಂದು ಕಾಲದಲ್ಲಿ ಕೆಲವು ದೇಶಗಳು ಕ್ರಿಸ್ಮಸ್ ಹಬ್ಬವನ್ನು ಬ್ಯಾನ್ ಮಾಡಿದ್ದವು. ಕ್ರಿಸ್ಮಸ್ ಕುರಿತ ಕೆಲವು ಸ್ವಾರಸ್ಯ ಸಂಗತಿಗಳು ಇಲ್ಲಿವೆ. ಸಾಂತಾಕ್ಲಾಸ್ ಎಲ್ಲಿಂದ ಬಂದ ಮುಂತಾದ ಸಂಗತಿಗಳು ಅಚ್ಚರಿ ತರಿಸುತ್ತವೆ.

ಕ್ರಿಸ್ಮಸ್ ಸೋಜಿಗ

* ಗ್ರೀಕ್ ಅಕ್ಷರದಲ್ಲಿ ಎಕ್ಸ್ ಮೊದಲಾಕ್ಷರ. ಕ್ರಿಸ್ಮಸ್(Xmas) ಹೆಸರು ಆರಂಭವಾಗಲು ಇದೇ ಕಾರಣವಂತೆ.
* 1643ರಲ್ಲಿ ಇಂಗ್ಲೆಂಡ್ ಸಂಸತ್ತು ಕ್ರಿಸ್ಮಸ್ ಆಚರಣೆಯನ್ನು ರದ್ದುಗೊಳಿಸಿತು.
* ಇಂಗ್ಲೆಂಡಿನಲ್ಲಿ 1949ರಿಂದ್ 1960ರವರೆಗೆ ಕ್ರಿಸ್ಮಸ್ ಹರ್ಷಗೀತೆಯನ್ನು ರದ್ದುಗೊಳಿಸಲಾಗಿತ್ತು. ಕೇವಲ ಪ್ರಾಥನೆಗಷ್ಟೇ ಕ್ರಿಸ್ಮಸ್ ಸೀಮಿತವಾಗಿತ್ತು.
* ಮೊದಲ ಕ್ರಿಸ್ಮಸ್ ಧಾರ್ಮಿಕ ಹರ್ಷಗೀತ ಕರೊಲ್ ಪರಿಚಯಿಸಿದ ಪಾದ್ರಿ ಹೆಸರು ಸೇಂಟ್ ಫ್ರಾನ್ಸಿಸ್.
* ಡಿಸೆಂಬರ್ 26 ಸ್ಟಿಫನ್ ದಿನ. ಇದು ಬಾಕ್ಸಿಂಗ್ ದಿನ ಕೂಡ ಹೌದು. ಆ ದಿನ ಕೆಲವು ದೇಶಗಳಲ್ಲಿ ಹಣ ಸಂಗ್ರಹಿಸಿ ಬಡಬಗ್ಗರಿಗೆ ಹಂಚಲಾಗುತ್ತದೆ.
* ಕ್ರಿಸ್ಮಸ್ ಮರ ಕುರಿತ ಮೊದಲ ಮುದ್ರಿತ ದಾಖಲೆ 1531ರಲ್ಲಿ ರಚಿಸಲ್ಪಟ್ಟಿತ್ತು.
* 1983ರವರೆಗೆ ಕ್ರಿಸ್ಮಸ್ ಗೆ ಸರಕಾರಿ ರಜೆಯಿರಲಿಲ್ಲ. ಅಮೆರಿಕದ ಅಲಬಾಮ ರಾಜ್ಯವು 1983ರಲ್ಲಿ ಕ್ರಿಸ್ಮಸ್ ಗೆ ರಜೆ ನೀಡಲು ಆರಂಭಿಸಿತ್ತು.
* ಕ್ರಿಸ್ಮಸ್ ಕುರಿತಾದ ಮೊದಲ ಅಂಚೆ ಚೀಟಿ ತಯಾರಿಸಿದ್ದು ಆಸ್ಟ್ರಿಯಾ ದೇಶ.
* ಕೆಲವು ಪಾದ್ರಿಗಳು ಪ್ರಕಾರ ಮೆರ್ರಿ ಕ್ರಿಸ್ಮಸ್ ಅಂತ ಶುಭಾಶಯ ಹೇಳುವುದು ತಪ್ಪು. ಹ್ಯಾಪಿ ಕ್ರಿಸ್ಮಸ್ ಅನ್ನಬೇಕಂತೆ. ಯಾಕೆಂದರೆ ಮೆರ್ರಿ ಎಂಬ ಪದಕ್ಕೆ ಕುಡಿಯುವುದು ಎಂಬ ಒಳಾರ್ಥವಿದೆ ಎನ್ನುವುದು ಅವರ ಅಭಿಪ್ರಾಯ.
* ಅಮೆರಿಕದಲ್ಲಿ ಮೊದಲ ಕ್ರಿಸ್ಮಸ್ ಹರ್ಷಗೀತೆಯನ್ನು ಬರೆದದ್ದು ಮಿನಿಸ್ಟರ್ ಜಾನ್ ಡಿ ಬ್ರಡೊರ್. ಜೀಸಸ್ ಈಸ್ ಬಾರ್ನ್ ಎಂಬ ಹಾಡನ್ನು ಆತ ರಚಿಸಿದ್ದ.
* ಮುಂಜಾನೆಯ ಕ್ರಿಸ್ಮಸ್ ಗಂಟೆಯ ಸದ್ದು ಸಂರಕ್ಷಕ ಬರುವ ಸಂಕೇತವಂತೆ. ಬೆಲ್ ಸದ್ದು ಕ್ರಿಸ್ತನ ಜನನದ ಸಂಕೇತ ಕೂಡ ಹೌದು.
* ಎಲ್ಲರ ನೆಚ್ಚಿನ ಸಾಂತಾಕ್ಲಾಸ್ ಕಲ್ಪನೆ ಪರಿಚಯಿಸಿದ್ದು ಸೇಂಟ್ ನಿಕೊಲಾಸ್. ಈತ ನಾಲ್ಕನೇ ಶತಮಾನದಲ್ಲಿದ್ದ ವ್ಯಕ್ತಿ. ಬಡವರು, ಬಲ್ಲದರಿಗೆ ಸಾಂತಾಕ್ಲಾಸ್ ವೇಷದಲ್ಲಿ ಉಡುಗೊರೆ ನೀಡಲು ಈ ವೇಷ ಧರಿಸಲಾಯಿತು. ಸಾಂತಾಕ್ಲಾಸ್ ನನ್ನು ಕೋಕೊಕೋಲಾ ಕಂಪನಿಯು ಉತ್ಪನ್ನಗಳ ಜಾಹೀರಾತಿಗೂ ಬಳಸಿತ್ತು.

English summary
Here are many Interesting and Funny facts about Christmas. How Christmas name came? How Santa Clause came into picture? Who wrote Christmas song? What is the significance of bell ringing? etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X