ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್ಮಸ್ ಟ್ರೀ ಮನೆಯೊಳಗಿಡುವುದು ಅಪಾಯ

|
Google Oneindia Kannada News

ಮನೆಯೊಳಗಡೆ ತಂದಿಟ್ಟ ಕ್ರಿಸ್ಮಸ್ ಟ್ರೀ ನಿಮ್ಮ ಹಬ್ಬದ ಸಡಗರ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಆದರೆ ಆ ಸಂಭ್ರಮದ ಜತೆಜತೆಗೇ ಕಸಿವಿಸಿ ಉಂಟುಮಾಡುವ ಸುದ್ದಿಯೊಂದು ಬಂದಿದೆ. ದೀಪಾವಳಿಯಂದು ಪಟಾಕಿಯಿಂದ ಉಂಟಾಗುವ ಅಪಾಯದಂತೆ ಕ್ರಿಸ್ಮಸ್ ಟ್ರೀ ಕೂಡ ಡೇಂಜರ್ ಕಣ್ರಿ.

ಕ್ರಿಸ್ಮಸ್ ಗಿಡದಿಂದ ಅಂಥಾ ಅಪಾಯ ಏನಿದೆ ಅಂತೀರಾ? ಕ್ರಿಸ್ಮಸ್ ಗಿಡದಿಂದ ನಿಮ್ಮ ಆರೋಗ್ಯ ಹದಗೆಡಬಹುದು ಎನ್ನುತ್ತಾರೆ ಸಂಶೋಧಕರು.

ಡಿಸೆಂಬರ್ ತಿಂಗಳಿನಲ್ಲಿ ಉಸಿರಾಟ ಸಮಸ್ಯೆಯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಡೆಸಿದ ಸಂಶೋಧನೆಯಿಂದ ಈ ಅಂಶ ಬೆಳಕಿಗೆಬಂದಿದೆ. ಡಿಸೆಂಬರ್ ತಿಂಗಳಿಗೂ, ಉಸಿರಾಟಕ್ಕೂ ಎಲ್ಲಿದೆ ಲಿಂಕ್ ಅಂತೀರಾ? ಆ ಲಿಂಕ್ ಕ್ರಿಸ್ಮಸ್ ಗಿಡದಲ್ಲಿದೆ.

ಹೌದು. ಕ್ರಿಸ್ಮಸ್ ಗಿಡದಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಖಚಿತವಾಗಿದೆ. ಇದನ್ನು ಕ್ರಿಸ್ಮಸ್ ಟ್ರೀ ಸಿಂಡ್ರೋಮ್ ಎನ್ನುತ್ತಾರೆ. ಅಪ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ ನಡೆಸಿದ ಹೊಸ ಅಧ್ಯಯನ ಕ್ರಿಸ್ಮಸ್ ಗಿಡದಿಂದ ಉಸಿರಾಟದ ತೊಂದರೆ, ಅಲರ್ಜಿ, ಕೆಮ್ಮು, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ತಲೆದೋರುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.

ಕ್ರಿಸ್ಮಸ್ ಗಿಡವಾದ ಪೈನ್ ಟ್ರೀ ನ ಮೇಲಿನ ಸಣ್ಣ ಸಣ್ಣ ಧೂಳಿನ ಕಣಗಳು ಗಾಳಿಯಲ್ಲಿ ಸೇರಿಕೊಂಡು ಅದನ್ನು ಸೇವಿಸಿದ ಮನುಷ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಸ್ತಮಾ ಇದ್ದವರಿಗಂತು ಇದು ಹೆಚ್ಚು ಅಪಾಯಕಾರಿ ಎಂದು ತಿಳಿಸಿದ್ದಾರೆ.

28 ಕ್ರಿಸ್ಮಸ್ ಗಿಡದ ಚರ್ಮ ಮತ್ತು ಎಲೆಗಳನ್ನು ಪರಿಶೀಲಿಸಿದಾಗ 53 ರೀತಿಯ ಧೂಳಿನ ಕಣಗಳು ಕಂಡುಬಂದವು. ಇದರಿಂದ ಮೂಗಿನಲ್ಲಿ ತುರಿಕೆ, ಕಣ್ಣಿನಲ್ಲಿ ನೀರು ಸುರಿಯುವುದು, ಉಸಿರಾಟದಲ್ಲಿ ತೊಂದರೆ, ಎದೆ ನೋವು, ಸುಸ್ತಾಗುವಿಕೆ, ಕೆಮ್ಮು ಮತ್ತು ನಿದ್ದೆಯಲ್ಲಿ ಅಸಮತೋಲನ ಶೇಕಡಾ 70 ರಷ್ಟು ಕಂಡು ಬರುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ದೀರ್ಘಕಾಲಿಕ ಶ್ವಾಸಕೋಶದ ತೊಂದರೆಯನ್ನೂ ಉಂಟುಮಾಡುತ್ತದಂತೆ.

ಕ್ರಿಸ್ಮಸ್ ಸಮಯದಲ್ಲಿ ಅದನ್ನು ಬೆಚ್ಚಗಿನ ಸ್ಥಳದಲ್ಲಿ ಇಡುವುದರಿಂದ ಅನಾರೋಗ್ಯದ ಸಾಧ್ಯತೆ ಇನ್ನೂ ಹೆಚ್ಚು ಎಂದಿದ್ದಾರೆ.
ಗಾಳಿಯ ಮೂಲಕ ಈ ಧೂಳಿನ ಕಣಗಳು 35 ಕ್ಯುಬಿಕ್ ಫೀಟ್ ಗೆ 800 ಇದ್ದದ್ದು 5000ಕ್ಕೆ ಏರಿಕೆಯಾಗುತ್ತದೆ.

ಸಂಶೋಧನೆ ಕೈಗೊಂಡಿದ್ದ ಡಾ. ಲಾರೆನ್ಸ್ ಕರ್ಲಾಂಡ್ ಸ್ಕೈ ಕ್ರಿಸ್ಮಸ್ ಗಿಡಕ್ಕೂ ಮತ್ತು ಉಸಿರಾಟದ ತೊಂದರೆಯುಳ್ಳ ರೋಗಿಗಳಿಗೂ ನೇರ ಸಂಬಂಧ ಕಂಡುಬಂದಿದ್ದಾಗಿ ತಿಳಿಸಿದ್ದಾರೆ. ಆದ್ದರಿಂದ ಕ್ರಿಸ್ಮಸ್ ಗಿಡವನ್ನು ಮನೆಗೆ ತರುವ ಮುನ್ನ ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿದರೆ ಅಥವಾ ಕೃತಕ ಗಿಡವನ್ನು ಇಟ್ಟರೆ ಈ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದೂ ಸಲಹೆ ನೀಡಿದ್ದಾರೆ.

English summary
Christmas tree may bring joy to festival. But it also bring some respiratory problems with it. A new study by Upstate Medical University has blamed Christmas trees for triggering a range of health complaints from wheezing and coughing to lethargy and insomnia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X