ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಟದಲ್ಲಿ ಉದುರಿವೆ ಆಗಸದ ನಕ್ಷತ್ರಗಳು

|
Google Oneindia Kannada News

Ideas For Garden Decoration during Christmas
ಕ್ರಿಸ್ಮಸ್ ಅಂದಾಕ್ಷಣ ನೆನೆಪಿಗೆ ಬರುವುದು ಸಾಂತಾ ಕ್ಲಾಸ್ ಮತ್ತು ಮನೆಯಲ್ಲಿ ತೂಗು ಹಾಕುವ ಬಣ್ಣ-ಬಣ್ಣದ ನಕ್ಷತ್ರ ಹಾಗೂ ಅಲಂಕಾರಿತ ಕ್ರಿಸ್ಮಸ್ ಗಿಡ. ಈ ಹಬ್ಬದ ಸಂದರ್ಭದಲ್ಲಿ ಆಕಾಶದಲ್ಲಿರುವ ನಕ್ಷತ್ರಗಳನ್ನೇ ನಾಚಿಸುವಂತೆ ಮನೆ-ಮನೆಗಳಲ್ಲಿ ನಕ್ಷತ್ರ ಮಿನುಗುತ್ತಿರುತ್ತವೆ.

ಕ್ರಿಶ್ಚಿಯನ್ನರ ಒಡೆಯನಾದ ಯೇಸು ಕ್ರಿಸ್ತನನ್ನು ಆರಾಧಿಸುವುದು ಮತ್ತು ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದೇ ಈ ಅಲಂಕಾರದ ಉದ್ದೇಶ. ಈ ಹಬ್ಬವನ್ನು ವಿಶೇಷವಾಗಿ ಆಚರಿಸಲು, ಮನೆಯ ಆವರಣ ಮತ್ತು ತೋಟವನ್ನು ಒಪ್ಪವಾಗಿ ಅಲಂಕಾರ ಮಾಡಲು ನಾನಾ ವಿಧಾನಗಳಿವೆ. ಇವು ನಿಮ್ಮ ಹೂ ತೋಟವನ್ನು ತಾರಾ ತೋಟವನ್ನಾಗಿ ಮಾಡುತ್ತದೆ. ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ಅಲಂಕಾರ ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಲೈಟಿಂಗ್ : ಅಲಂಕಾರ ಎಂದ ಮೇಲೆ ಬೆಳಕು ಇರಲೇಬೇಕು. ಅದಕ್ಕಾಗಿ ವಿಧವಿಧದ ಲೈಟ್ ಗಳು ಲಭ್ಯವಿದೆ. ಅವುಗಳನ್ನು ಬಳಸಿ ಮನೆಗೆ ಮೆರುಗು ತರಬಹುದು. ಅದರಲ್ಲೂ ರೋಪ್ ಲೈಟ್ ನಿಂದ ತೋಟವನ್ನು ಅಲಂಕರಿಸಿದರೆ ತೋಟ ಇನ್ನೂ ಸುಂದರವಾಗಿರುತ್ತೆ.

ಬಲ್ಬ್ : ಅನೇಕ ವಿನ್ಯಾಸದ ಬಲ್ಬ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇವುಗಳನ್ನು ಬಳಸಿ ತೋಟದ ಅಲಂಕಾರ ಹೆಚ್ಚಿಸಬಹುದು. ಸುಂದರವಾದ, ಅನೇಕ ಬಣ್ಣದ ಬಲ್ಬ್ ಗಳನ್ನು ಕ್ರಿಸ್ಮಸ್ ಗಿಡಕ್ಕೆ ಜೋಡಿಸಿ ಅಲಂಕರಿಸಬಹುದು.

ಹೂಗಳು : ಬಲ್ಬ್ ಅಥವಾ ಲೈಟ್ ಗಳು ರಾತ್ರಿಗೆ ಚೆಂದ. ಹಗಲಿನಲ್ಲಿ ಕೂಡ ಗಿಡ ಆಕರ್ಷಕವಾಗಿ ಕಾಣಲು ಹೂವಿನ ಅಲಂಕಾರ ಮಾಡಬಹುದು. ಅಲಂಕರಿಸಲು ನೈಸರ್ಗಿಕ ಹೂ ಅಷ್ಟೆ ಅಲ್ಲ ಪ್ಲಾಸ್ಟಿಕ್ ಹೂವನ್ನೂ ಬಳಸಬಹುದು. ಪ್ಲಾಸ್ಟಿಕ್ ಹೂವಿನಿಂದ ಅಲಂಕರಿಸುವುದರ ಒಂದು ಪ್ರಯೋಜನವೆಂದರೆ ಅಲಂಕಾರ ಹೊಸ ವರ್ಷಕ್ಕೂ ಹಾಗೆ ಇರುತ್ತದೆ, ನೈಸರ್ಗಿಕ ಹೂಗಳು ಬಾಡಿ ಹೋಗಿರುತ್ತವೆ.

ಚೆಂಡು ಮತ್ತು ರಿಬ್ಬನ್ : ಹೊಳೆಯುವಂತಹ ಚೆಂಡು ಮತ್ತು ಕೆಂಪು ರಿಬ್ಬನ್ ಬಳಸಿ ಅಲಂಕಾರ ಮಾಡಿದರೆ ತೋಟ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈ ರೀತಿಯ ಅಲಂಕಾರವನ್ನು ಬಾಗಿಲಿನವರೆಗೆ ಮಾಡಿ ಮಧ್ಯದಲ್ಲಿ ಚಿಕ್ಕ ಗಿಫ್ಟ್ ಬಾಕ್ಸ್ ಗಳನ್ನು ನೇತು ಹಾಕಿದರೆ ತೋಟ ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಮಿರ ಮಿರನೆ ಮಿನುಗುತ್ತಿರುತ್ತವೆ.

English summary
You have to decorate the house and garden for the eve of Christmas and New year. There are several ideas to decorate the garden such as lighting, balloons, flowers etc. Here are few simple ideas to decorate the garden for Christmas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X