ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

|
Google Oneindia Kannada News

ಮುಂಬೈ, ಆ.01: ಮಹಾರಾಷ್ಟ್ರದ ಮೊದಲ ಝಿಕಾ ವೈರಸ್ ಸೋಂಕಿನ ಪ್ರಕರಣವು ಪುಣೆ ಜಿಲ್ಲೆಯಿಂದ ವರದಿಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹಾಗೆಯೇ ಪುಣೆ ಜಿಲ್ಲಾಡಳಿತವು ಝಿಕಾ ವೈರಸ್‌ ಸೋಂಕಿನ ಕಾರಣದಿಂದಾಗಿ ಜನರು ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ. ಈ ಝಿಕಾ ಸೋಂಕಿಗೆ ಒಳಗಾದ ಮಹಿಳಾ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಸೋಂಕಿನ ಮೊದಲ ಪ್ರಕರಣವು ಪುಣೆ ಜಿಲ್ಲೆಯ ಪುರಂದರ್ ತಹಸಿಲ್‌ನಲ್ಲಿ ಪತ್ತೆಯಾಗಿದೆ. ಪುರಂದರ ತಹಸಿಲ್‌ನ ಬೆಲ್ಸರ್ ಹಳ್ಳಿಯ 50 ವರ್ಷದ ಮಹಿಳೆ ಜುಲೈ ಮಧ್ಯದಲ್ಲಿ ಜ್ವರದಿಂದ ಬಳಲುತ್ತಿದ್ದರು. ಬಳಿಕ ಝಿಕಾ ವೈರಸ್‌ನ ಪರೀಕ್ಷೆ ನಡೆಸಿದಾಗ ಆಕೆಯಲ್ಲಿ ಝಿಕಾ ವೈರಸ್‌ ಇರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಜುಲೈ 30 ರಂದು ನಡೆಸಿದ ಪರೀಕ್ಷೆಯಲ್ಲಿ ಮಹಿಳೆಯಲ್ಲಿ ಚಿಕೂನ್ ಗುನ್ಯಾ ಕೂಡಾ ಪತ್ತೆಯಾಗಿದೆ. "ಆಕೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಯಾವುದೇ ಲಕ್ಷಣಗಳಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಪತ್ತೆಮಹಾರಾಷ್ಟ್ರದಲ್ಲಿ ಮೊದಲ ಝಿಕಾ ವೈರಸ್‌ ಪ್ರಕರಣ ಪತ್ತೆ

ಕುಟುಂಬದಲ್ಲಿನ ಮೂವರು ಸದಸ್ಯರಲ್ಲಿ, ಮಹಿಳೆಗೆ ಝಿಕಾ ಮತ್ತು ಚಿಕೂನ್ ಗುನ್ಯಾ ಸಹ ಸೋಂಕು ತಗುಲಿದೆ. ಆಕೆಯ ಮಗಳಿಗೆ ಚಿಕೂನ್ ಗುನ್ಯಾ ಜ್ವರವಿದ್ದು, ಆಕೆಯ ಮಗನಿಗೆ ಯಾವುದೇ ಸೋಂಕು ಇರಲಿಲ್ಲ. ಆದರೆ ಒಂದೇ ಕುಟುಂಬದ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಕಣ್ಗಾವಲು ಅಧಿಕಾರಿ ಡಾ.ಪ್ರದೀಪ್ ಅವಟೆ ತಿಳಿಸಿದ್ದಾರೆ. ಹಾಗೆಯೇ "ವಿಜ್ಞಾನಿ ಡಾ ಯೋಗೀಶ್ ಗುರವ್ ಮಾರ್ಗದರ್ಶನದಲ್ಲಿ ಎನ್ಐವಿ ತಂಡವು ಗ್ರಾಮಕ್ಕೆ ಭೇಟಿ ನೀಡಿ ಬೆಲ್ಸರ್ ಮತ್ತು ಪರಿಂಚೆ ಗ್ರಾಮಗಳಿಂದ 41 ಮಾದರಿಗಳನ್ನು ಸಂಗ್ರಹಿಸಿದೆ. ಈ ಪೈಕಿ 25 ಮಂದಿಯಲ್ಲಿ ಚಿಕುನ್ ಗುನ್ಯಾ ದೃಢಪಟ್ಟಿದ್ದರೆ, ಮೂವರು ರೋಗಿಗಳಲ್ಲಿ ಡೆಂಗ್ಯೂ ದೃಢಪಟ್ಟಿದೆ," ಎಂದು ರಾಜ್ಯ ಅವಲೋಕನ ಇಲಾಖೆ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಡಾ.ಪ್ರದೀಪ್ ಅವಟೆ ತಿಳಿಸಿದ್ದಾರೆ.

ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯ

ಇನ್ನು ಕೇರಳದಲ್ಲಿ ಈಗಾಗಲೇ ಝಿಕಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು, ಶನಿವಾರ ಅಪ್ರಾಪ್ತ ಬಾಲಕಿ ಸೇರಿದಂತೆ ಇನ್ನಿಬ್ಬರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇತ್ತೀಚೆಗೆ ಝಿಕಾ ವೈರಸ್‌ ಪ್ರಕರಣ ದಾಖಲಿಸಿದ ಕೇರಳ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 63 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

 ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

ಝಿಕಾ ವೈರಸ್ ಸೋಂಕಿನ ಆರಂಭಿಕ ಹಂತಗಳು SARS-CoV2 ಸೋಂಕಿನ ಕೆಲವು ವೈದ್ಯಕೀಯ ಲಕ್ಷಣಗಳನ್ನು ಹೋಲುತ್ತವೆ ಎಂದು ವರದಿ ತಿಳಿಸಿದೆ. ಇದು ಕೋವಿಡ್ -19 ಗೆ ಕಾರಣವಾಗುತ್ತದೆ ಎಂದು ಕೂಡಾ ತಜ್ಞರು ಮಾಹಿತಿ ನೀಡಿದ್ದಾರೆ. "ಈ ಝಿಕಾ ವೈರಸ್‌ನಿಂದಾಗಿ ಕೋವಿಡ್‌ ಬರುವ ಸಾಧ್ಯತೆ ಹಿನ್ನೆಲೆ ರೋಗನಿರ್ಣಯವು ಒಂದು ಸವಾಲಿನ ಸಂಗತಿಯಾಗಿದೆ," ಎಂದು ಈ ವರ್ಷ ಏಪ್ರಿಲ್‌ನಲ್ಲಿ ವೈದ್ಯಕೀಯ ವೈರಾಲಜಿ ಜರ್ನಲ್‌ನಲ್ಲಿ ತಜ್ಞರು ಬರೆದಿದ್ದಾರೆ.

ಆದಾಗ್ಯೂ, ಝಿಕಾ ವೈರಸ್ ರೋಗ ಮತ್ತು ಕೊರೊನಾವೈರಸ್ ಕೆಲವು ಸಾಮ್ಯತೆಗಳನ್ನು ಹೊಂದಿದ್ದರೂ, ವಾಹಕಗಳು, ಪ್ರಸರಣ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರವು ವಿಭಿನ್ನವಾಗಿವೆ. ಝಿಕಾ ವೈರಸ್ ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಆದರೆ ಕೋವಿಡ್‌ ಕೊರೊನಾ ವೈರಸ್‌ನಿಂದ ಉಂಟಾಗುವುದು. ಝಿಕಾ ವೈರಸ್ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

 ಝಿಕಾ ವೈರಸ್‌ ರೋಗ ಲಕ್ಷಣಗಳೇನು?

ಝಿಕಾ ವೈರಸ್‌ ರೋಗ ಲಕ್ಷಣಗಳೇನು?

ಈ ಝಿಕಾ ವೈರಸ್ ಸೋಂಕಿತ ಹೆಚ್ಚಿನ ಜನರಲ್ಲಿ ರೋಗಲಕ್ಷಣಗಳನ್ನು ಅಭಿವೃದ್ಧಿಯಾಗುವುದಿಲ್ಲ ಎಂದು ವರದಿಗಳು ಹೇಳುತ್ತವೆ. ಝಿಕಾ ವೈರಸ್‌ನ ಲಕ್ಷಣಗಳು ಜ್ವರ, ಚರ್ಮದಲ್ಲಿ ಕೆಂಪು ಕಲೆಗಳು, ಕಣ್ಣುಗಳು ಕೆಂಪಾಗಿ ಊದಿಕೊಳ್ಳುವುದು, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಈ ಝಿಕಾ ವೈರಸ್‌ನ ಲಕ್ಷಣಗಳು ಆಗಿದೆ. ಇದು ಡೆಂಗ್ಯೂನಂತಹ ಇತರ ಅರ್ಬೊವೈರಸ್ ಸೋಂಕುಗಳಿಂದ ಉಂಟಾಗುವಂತೆಯೇ ಇರುತ್ತದೆ. ಸಾಮಾನ್ಯವಾಗಿ ಸೌಮ್ಯ ರೋಗಲಕ್ಷಣಗಳು ಕಂಡುಬರುತ್ತದೆ. ಈ ರೋಗ ಲಕ್ಷಣಗಳು 2-7 ದಿನಗಳವರೆಗೆ ಇರುತ್ತದೆ. ಸೋಂಕಿತ ನಾಲ್ಕು ಜನರಲ್ಲಿ ಒಬ್ಬರಿಗೆ ಮಾತ್ರ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರುಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರು

 ಝಿಕಾ ಹೆಚ್ಚು ಕಾಳಜಿ ವಹಿಸಬೇಕಾದ ವೈರಸ್‌?

ಝಿಕಾ ಹೆಚ್ಚು ಕಾಳಜಿ ವಹಿಸಬೇಕಾದ ವೈರಸ್‌?

ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ತಜ್ಞರು ಝಿಕಾ ವೈರಸ್ ಬಗ್ಗೆ ಕಾಳಜಿ ವಹಿಸಬಹುದು ಮತ್ತು ದೇಶದಲ್ಲಿ ಚಲಾವಣೆಯಲ್ಲಿರುವ ಝಿಕಾ ವೈರಸ್‌ನ ಒತ್ತಡವನ್ನು ಅರ್ಥಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ. ಝಿಕಾ ವೈರಸ್ ಸ್ಥಳೀಯವಾಗಿ ಏಕಾಏಕಿ ಸಂಭವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ ಈ ವೈರಸ್ ಸೋಂಕಿತ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಝಿಕಾ ಮೈಕ್ರೋಸೆಫಾಲಿಯೊಂದಿಗೆ (ಮಕ್ಕಳ ತಲೆ ಸಣ್ಣಗಿದ್ದು ದೇಹ ದೊಡ್ಡಗಿರುವುದು) ಸಂಬಂಧ ಹೊಂದಿರುವುದು 2015 ರಲ್ಲಿ ಮಾತ್ರ ಕಂಡುಬಂದಿದೆ. ಸಾಮಾನ್ಯವಾಗಿ, ವೈರಸ್ ಅನ್ನು ಗರ್ಭಿಣಿ ಮಹಿಳೆಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಪಾಯಕಾರಿ ಎಂದು ಪರಿಗಣಿಸಲಾಗುವುದಿಲ್ಲ. ಭಾರತದಲ್ಲಿ, ಮೊದಲ ಪ್ರಕರಣ 2017 ರಲ್ಲಿ ಗುಜರಾತ್‌ನಲ್ಲಿ ಮತ್ತು ನಂತರ ತಮಿಳುನಾಡಿನಲ್ಲಿ ವರದಿಯಾಗಿದೆ. ಏಕಾಏಕಿ ನಂತರ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2018 ರಲ್ಲಿ ಕಾಣಿಸಿಕೊಂಡಿತ್ತು. ಈಗ ಮೊದಲು ಕೇರಳದಲ್ಲಿ ಬಳಿಕ ಮಹಾರಾಷ್ಟ್ರದಲ್ಲಿ ಈ ಝಿಕಾ ವೈರಸ್‌ ಪತ್ತೆಯಾಗಿದೆ.

 ಝಿಕಾ ವೈರಸ್‌ನಿಂದ ರಕ್ಷಣೆ ಪಡೆಯುವುದು ಹೇಗೆ?

ಝಿಕಾ ವೈರಸ್‌ನಿಂದ ರಕ್ಷಣೆ ಪಡೆಯುವುದು ಹೇಗೆ?

ಝಿಕಾ ವೈರಸ್ ಸೋಂಕಿನ ತಡೆಗಟ್ಟುವ ಮಾರ್ಗಸೂಚಿಗಳು ಡೆಂಗ್ಯೂನಂತಹ ಇತರ ಅರ್ಬೊವೈರಸ್ ಸೋಂಕುಗಳಂತೆಯೇ ಇರುತ್ತವೆ. ಏಡಿಸ್ ಸೊಳ್ಳೆಗಳು ಮತ್ತು ಅವುಗಳ ಸಂತಾನೋತ್ಪತ್ತಿ ತಾಣಗಳು ಝಿಕಾ ವೈರಸ್ ಸೋಂಕಿಗೆ ಗಮನಾರ್ಹವಾದ ಅಪಾಯಕಾರಿ ಅಂಶವಾಗಿದೆ. ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಭಾಗವಾಗಿ ಈ ಝಿಕಾ ವೈರಸ್‌ಗೆ ಕಾರಣವಾಗುವ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಾಶ ಮಾಡಬೇಕಾಗಿದೆ. ಈ ಮೂಲಕ ಝಿಕಾಗೆ ಕಾರಣವಾಗುವ ಸೊಳ್ಳೆಗಳನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ಸೊಳ್ಳೆಗಳು ಹಾಗೂ ಜನರ ನಡುವಿನ ಸಂಪರ್ಕವನ್ನು ಕಡಿಮೆ ಮಾಡುವುದು ಕೂಡಾ ಈ ರಕ್ಷಣೆ ಕ್ರಮದಲ್ಲಿ ಒಂದಾಗಿದೆ.

ಬಕೆಟ್, ಹೂವಿನ ಮಡಕೆ ಅಥವಾ ಟೈರ್ ನಂತಹ ನೀರನ್ನು ಸಂಗ್ರಹಿಸಬಲ್ಲ ವಸ್ತುಗಳನ್ನು ಆಗಾಗೇ ಶುಚಿಗೊಳಿಸಬೇಕು. ಹಾಗೆಯೇ ಪಾತ್ರೆಗಳಲ್ಲಿ ನೀರು ಇರಿಸಿದ್ದರೆ ಅದನ್ನು ಖಾಲಿ ಮಾಡಬೇಕು. ಅಥವಾ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಅಥವಾ ಮುಚ್ಚುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಲು ಸೂಚಿಸಲಾಗಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಲು ಸ್ಥಳಗಳು ಅಧಿಕ ಇಲ್ಲದಂತಾಗುತ್ತದೆ. ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಕ್ರಮಗಳನ್ನು ಸಹ ಜಾರಿಗೊಳಿಸಬೇಕು.

(ಒನ್‌ಇಂಡಿಯಾ ಸುದ್ದಿ)

English summary
Zika Virus Spreads in Maharashtra, Kerala: Link to Covid, Symptoms Explained in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X