ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಡುವೆ, ಏನಿದು ಝಿಕಾ ವೈರಸ್? ಏನಿದರ ಲಕ್ಷಣ?

|
Google Oneindia Kannada News

ತಿರುವನಂತಪುರಂ, ಜುಲೈ 09: ಕೊರೊನಾ ಸೋಂಕು ರೂಪಾಂತರಗಳನ್ನು ಸೃಷ್ಟಿಸಿ ಆತಂಕ ಮೂಡಿಸಿರುವ ಈ ಹೊತ್ತಿನಲ್ಲಿ ಕೇರಳದಲ್ಲಿ ಈಗ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ತಿರುವನಂತಪುರಂನಲ್ಲಿ ಹತ್ತು ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ನಡುವೆ ಮತ್ತೊಂದು ಭೀತಿ ತಂದೊಡ್ಡಿದೆ.

ಝಿಕಾ ವೈರಸ್ ಎಂದರೇನು? ಈ ವೈರಾಣು ಎಷ್ಟು ಅಪಾಯಕಾರಿ? ಯಾವುದರಿಂದ ಈ ಸೋಂಕು ಹರಡುತ್ತದೆ? ಇದುವರೆಗೂ ಎಲ್ಲೆಲ್ಲಿ ಈ ಸೋಂಕು ಪತ್ತೆಯಾಗಿದೆ? ಮುಂದಿದೆ ವಿವರ...

 Zika Virus; ಕೊರೊನಾ ಆತಂಕದ ನಡುವೆ ಕೇರಳದಲ್ಲಿ ಝಿಕಾ ವೈರಸ್ ಪತ್ತೆ Zika Virus; ಕೊರೊನಾ ಆತಂಕದ ನಡುವೆ ಕೇರಳದಲ್ಲಿ ಝಿಕಾ ವೈರಸ್ ಪತ್ತೆ

 ಕೇರಳದಲ್ಲಿ ಮೊದಲ ಬಾರಿ ಝಿಕಾ ವೈರಸ್ ಪತ್ತೆ

ಕೇರಳದಲ್ಲಿ ಮೊದಲ ಬಾರಿ ಝಿಕಾ ವೈರಸ್ ಪತ್ತೆ

ಕೇರಳದಲ್ಲಿ ಮೊದಲ ಬಾರಿ ಗುರುವಾರ ಝಿಕಾ ವೈರಸ್ ಪ್ರಕರಗಣ ಪತ್ತೆಯಾಗಿದೆ. ಮಹಿಳೆಯೊಬ್ಬರಲ್ಲಿ ಮೊದಲು ಈ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಹತ್ತು ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ. "24 ವರ್ಷದ ಮಹಿಳೆಯೊಬ್ಬರಲ್ಲಿ ಈ ಸೋಂಕು ಪತ್ತೆಯಾಗಿತ್ತು. ಜೂನ್ 28ರಂದು ಈ ಮಹಿಳೆ ಜ್ವರ, ತಲೆ ನೋವು ಹಾಗೂ ಕೆಂಪು ಕಲೆಗಳ ಕಾರಣವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಈ ವೈರಸ್ ಪತ್ತೆಯಾಗಿದೆ. ಈ ಸೋಂಕಿನ ಶಂಕೆ ಇದ್ದ ಹದಿಮೂರು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಣು ಪತ್ತೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಹತ್ತು ಮಾದರಿಗಳು ಪಾಸಿಟಿವ್ ಬಂದಿವೆ" ಎಂದು ತಿಳಿಸಿದರು.

 ಝಿಕಾ ವೈರಸ್ ಬರುವುದು ಹೇಗೆ?

ಝಿಕಾ ವೈರಸ್ ಬರುವುದು ಹೇಗೆ?

ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ಸೋಂಕು. ಏಡೆಸ್ ಜೆನಸ್ ಎಂಬ ಸೊಳ್ಳೆ ಈ ವೈರಾಣುವಿನ ಹರಡುವಿಕೆಗೆ ಕಾರಣವಾಗಿರುತ್ತದೆ. ಬೆಳಗ್ಗಿನ ಜಾವ, ಸಂಜೆ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಡೆಂಗೆ, ಚಿಕುನ್ ಗುನ್ಯಾಗೆ ಕಾರಣವಾಗುವ ಸೊಳ್ಳೆಯೇ ಈ ಸೋಂಕಿಗೂ ಕಾರಣವಾಗಿರುತ್ತದೆ. ಈ ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಸೋಂಕು ತಗುಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

 ಝಿಕಾ ಸೋಂಕಿನ ಲಕ್ಷಣಗಳೇನು?

ಝಿಕಾ ಸೋಂಕಿನ ಲಕ್ಷಣಗಳೇನು?

ಎರಡು ದಿನಗಳಿಂದ ಏಳು ದಿನಗಳವರೆಗೆ ಈ ಲಕ್ಷಣಗಳು ಇರುತ್ತವೆ. ಸೋಂಕು ಅತಿ ಗಂಭೀರ ಸ್ವರೂಪ ತಾಳುವುದಿಲ್ಲ. ಈ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆಯೂ ಕಡಿಮೆ. ಜಾಂಡಿಸ್ ಬಗೆಯ ಲಕ್ಷಣಗಳು ರೋಗಿಯಲ್ಲಿ ಗೋಚರವಾಗಬಹುದು. ಕಣ್ಣು ಕೆಂಪಗಾಗುವುದು, ಜ್ವರ, ಗಂಟು ನೋವು, ಕೀಲು, ಸ್ನಾಯು ನೋವು ಇದರ ಸಾಮಾನ್ಯ ಲಕ್ಷಣ. ತಲೆನೋವು, ಕೆಂಪು ಕಲೆಗಳೂ ಆಗುತ್ತವೆ.

 ಗರ್ಭಿಣಿಯರಿಗೆ ಅಪಾಯ

ಗರ್ಭಿಣಿಯರಿಗೆ ಅಪಾಯ

ರೋಗ ನಿಯಂತ್ರಣ ಹಾಗೂ ನಿವಾರಣಾ ಕೇಂದ್ರದ ಪ್ರಕಾರ ಗರ್ಭಿಣಿಯರಿಗೆ ಈ ಝಿಕಾ ವೈರಸ್ ಅಪಾಯಕಾರಿಯಾಗಿದೆ. ಮಹಿಳೆಯಿಂದ ಮಗುವಿಗೂ ಈ ಸೋಂಕು ಹರಡುತ್ತದೆ. ಇದು ಹುಟ್ಟಲಿರುವ ಮಗುವಿನಲ್ಲಿ ಆರೋಗ್ಯ ತೊಂದರೆಗಳನ್ನು ತರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೂ ಸೋಂಕು ಹರಡುತ್ತದೆ.

Recommended Video

ಸಲುಗೆ ಕೊಟ್ಟಿದ್ದು ಜಾಸ್ತಿ ಆಯ್ತಾ ಎಂದು ಅಭಿಮಾನಿ ತಲೆಗೆ ಹೊಡೆದ ಡಿಕೆಶಿ | Oneindia Kannada
 ಝಿಕಾ ವೈರಸ್ ನಿವಾರಣಾ ಕ್ರಮವೇನು?

ಝಿಕಾ ವೈರಸ್ ನಿವಾರಣಾ ಕ್ರಮವೇನು?

ಝಿಕಾ ವೈರಸ್‌ಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಔಷಧವಿಲ್ಲ. ಈ ಸೋಂಕು ತಗುಲಿದವರಿಗೆ ಹೆಚ್ಚು ದ್ರವಾಹಾರ ಸೇವಿಸುವಂತೆ ತಿಳಿಸಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳದ ಆಹಾರ ಸೇವಿಸಲು ಸಲಹೆ ನೀಡಲಾಗಿದೆ. ಸೊಳ್ಳೆ ನಿರೋಧಕ ತೈಲಗಳನ್ನು ಬಳಸಬಹುದಾಗಿದೆ.
23 ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಕೆರೆಬಿಯನ್, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೋ, ಈಜಿಪ್ಟ್‌, ನೈಜೀರಿಯಾ, ಕೊಲಂಬಿಯಾ, ಮಲೇಷಿಯಾ, ಪಾಕಿಸ್ತಾನ, ಥೈಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಭಾರತದ ಕೇರಳ ರಾಜ್ಯದಲ್ಲಿಯೂ ಕಂಡುಬಂದಿದೆ.

English summary
10 cases of zika virus found in Kerala. What is zika virus, symptoms and preventions? Here is detail,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X