ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡಿದ್ದುಣ್ಣೋ ಮಹರಾಯ: ಕೊರೊನಾವೈರಸ್ ಕಾಲದಲ್ಲಿ ಜಗತ್ತಿನ ಎದುರು ಮತ್ತೆ ಮುಗ್ಗರಿಸಿದ ಚೀನಾ!?

|
Google Oneindia Kannada News

ಬೀಜಿಂಗ್, ಏಪ್ರಿಲ್ 19: ಚೀನಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭವಾದ ದಿನದಿಂದ ಇದುವರೆಗೂ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. 2020ರಲ್ಲಿ ಮೊದಲು ಕಾಣಿಸಿಕೊಂಡ ಕೋವಿಡ್-19 ಸೋಂಕು ನೋಡ ನೋಡುತ್ತಿದ್ದಂತೆ ಜಗತ್ತಿಗೆ ವ್ಯಾಪಿಸಿದೆ.

ಕೋವಿಡ್-19 ಹಿನ್ನೆಲೆ ಚೀನಾದ ಬಹುದೊಡ್ಡ ನಗರ ಶಾಂಘೈನಲ್ಲಿ ಲಾಕ್‌ಡೌನ್‌ನನ್ನು ಘೋಷಿಸಲಾಗಿದೆ. ಕಳೆದ ಮೂರು ವಾರಗಳಿಂದ ಶಾಂಘೈನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕ್ವಾರೆಂಟೈನ್ ಕೇಂದ್ರದಲ್ಲಿ ಇರುವವರು ಸೂಕ್ತ ರೀತಿಯಲ್ಲಿ ಔಷಧಿ ಸಿಗುತ್ತಿಲ್ಲ, ಆಹಾರ ಸಿಗುತ್ತಿಲ್ಲ ಎಂದು ಸಾವಿರಾರು ಜನರು ದೂರುಗಳನ್ನು ನೀಡುತ್ತಿದ್ದಾರೆ.

ಚೀನಾ:ಲಾಕ್‌ಡೌನ್ ಬಳಿಕ ಶಾಂಘೈನಲ್ಲಿ ಕೋವಿಡ್‌ಗೆ ಮೊದಲ ಬಲಿಚೀನಾ:ಲಾಕ್‌ಡೌನ್ ಬಳಿಕ ಶಾಂಘೈನಲ್ಲಿ ಕೋವಿಡ್‌ಗೆ ಮೊದಲ ಬಲಿ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರದ ಶೂನ್ಯ-ಕೋವಿಡ್ ನೀತಿಯ ಅಡಿಯಲ್ಲಿ ಚೀನಾದ ಸುಮಾರು 24 ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಲಾಕ್‌ಡೌನ್‌ಗಳನ್ನು ಶುರು ಮಾಡಲಾಗಿದೆ. ಈ ಚೀನಾದ ನಗರಗಳಲ್ಲಿ ಅಂದಾಜು 375 ದಶಲಕ್ಷ ಜನರು ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿದ್ದಾರೆ. ಅದಾಗ್ಯೂ, ಚೀನಾದ ಶೂನ್ಯ ಕೋವಿಡ್-19 ನೀತಿಯನ್ನು ಜಗತ್ತು ಕಣ್ಣರಳಿಸಿ ನೋಡುತ್ತಿದೆ. ಈ ಶೂನ್ಯ ಕೋವಿಡ್-19 ನೀತಿ ಎಂದರೇನು?, ಚೀನಾದಲ್ಲಿ ಈ ನೀತಿಯನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ?, ಶೂನ್ಯ ಕೋವಿಡ್-19 ನೀತಿಯಡಿ ಯಾವೆಲ್ಲ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಕೊರಾನಾ ಕೇಸ್ ಉಲ್ಬಣ, ಕೇರಳ ತಲ್ಲಣ, ನೋಡಿ ಕೇಂದ್ರ ಕೊಟ್ಟ ಈ ಸೂಚನೆಯನ್ನಾ!ಕೊರಾನಾ ಕೇಸ್ ಉಲ್ಬಣ, ಕೇರಳ ತಲ್ಲಣ, ನೋಡಿ ಕೇಂದ್ರ ಕೊಟ್ಟ ಈ ಸೂಚನೆಯನ್ನಾ!

ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಅಳತೆಗೋಲು

ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಅಳತೆಗೋಲು

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಅಂಕಿ-ಸಂಖ್ಯೆಗಳನ್ನು ಹಂಚಿಕೊಳ್ಳುವಲ್ಲಿ ಚೀನಾ ತನ್ನದೇ ಆಗಿರುವ ಸಾಂಪ್ರದಾಯಿಕ ನೀತಿಯನ್ನು ಪಾಲಿಸುತ್ತಿದೆ. ಕೋವಿಡ್-19 ರೋಗದ ಲಕ್ಷಣವನ್ನು ಹೊಂದಿರುವವರನ್ನು ರೋಗಿಗಳು ಹಾಗೂ ಲಕ್ಷಣರಹಿತರನ್ನು ವಿಭಾಗಿಸಲಾಗುತ್ತದೆ. ಸ್ಪಷ್ಟವಾಗಿ ರೋಗದ ಲಕ್ಷಣಗಳನ್ನು ಹೊಂದಿದವರಿಗೆ ಮಾತ್ರ ರೋಗಿಗಳು ಎಂದು ಪರಿಗಣಿಸಲಾಗುತ್ತಿದ್ದು, ಉಳಿದವರನ್ನು ಲಕ್ಷಣರಹಿತರು ಎಂದು ಗುರುತಿಸಲಾಗುತ್ತದೆ. ಇದರ ಮಧ್ಯೆ ಚೀನಾದ ತನ್ನ ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ತೀರಾ ಕಡಿಮೆಯಾಗಿ ನೀಡುತ್ತಿದೆ ಎಂಬ ಆರೋಪವೂ ಇದೆ.

ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿರುವ ಕೊರೊನಾವೈರಸ್ ಪಿಡುಗಿನ ಅಲೆಯಲ್ಲಿ ದಿನವೊಂದಕ್ಕೆ 20,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಆದಾಗ್ಯೂ, ಪ್ರಸ್ತುತ ಕೋವಿಡ್ -19 ಅಲೆಯಲ್ಲಿ ಹರಡುವಿಕೆಯ ಪ್ರಮಾಣ, ಚಿಕಿತ್ಸೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರ ಪ್ರತಿಕ್ರಿಯೆಯಿಂದ ಪರಿಸ್ಥಿತಿಯನ್ನು ಅಳೆಯಬಹುದಾಗಿದೆ.

ಸಾರ್ವಜನಿಕರ ಕಣ್ಣು ಕೆಂಪಾಗಿಸಿದ ಘೋರ ಲಾಕ್‌ಡೌನ್ ನೀತಿ

ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಜಾರಿಗೊಳಿಸಿರುವ ಕಠಿಣ ಲಾಕ್‌ಡೌನ್ ನಿಯಮಗಳಿಂದ ಸಾರ್ವಜನಿಕರು ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಆದರೆ ಉಸಿರುಗಟ್ಟಿಸುವ ವಾತಾವರಣಕ್ಕೆ ರೋಸಿ ಹೋಗಿರುವ ಜನರು ಸರ್ಕಾರ ಮತ್ತು ಚೀನಾದ ಭದ್ರತಾ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಹಾರಕ್ಕಾಗಿ ಗಲಭೆಗಳೇ ಸೃಷ್ಟಿಯಾಗುತ್ತಿವೆ.

ಶಾಂಘೈನಲ್ಲಿ ಹಸಿದ ನಿವಾಸಿಗಳು ಆಹಾರ ಖರೀದಿ ಮಾಡಲು ತಮ್ಮ ಕಾಂಪೌಂಡ್‌ನಿಂದ ಹೊರಬರುತ್ತಿದ್ದಾರೆ. ನಾನು ಪ್ರತಿದಿನ ಈ ರೀತಿಯ ಹೆಚ್ಚು ಹೆಚ್ಚು ಅಸ್ತವ್ಯಸ್ತವಾಗಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಾಗಿಲು ತೆರೆಯುವಂತಿಲ್ಲ, ಕೂಗುವಂತಿಲ್ಲ, ಹಾಡು ಹೇಳುವಂತಿಲ್ಲ!

ಕೋವಿಡ್-19 ಪೀಡಿತ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಪ್ರದೇಶದಲ್ಲಿ ಜನರು ಕೂಗುತ್ತಾ, ಅರಚುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಪ್ರದೇಶದಲ್ಲಿ ಜನರಿಗೆ ಸಂದೇಶ ತಲುಪಿಸಲು ಚೀನಾ ಸರ್ಕಾರವು ಡ್ರೋನ್ ಅನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಚ್ಚರಿಕೆ: "ದಯವಿಟ್ಟು ಕೋವಿಡ್ ನಿರ್ಬಂಧಗಳನ್ನು ಅನುಸರಿಸಿ. ಸ್ವಾತಂತ್ರ್ಯಕ್ಕಾಗಿ ನಿಮ್ಮ ಆತ್ಮದ ಬಯಕೆಯನ್ನು ನಿಯಂತ್ರಿಸಿ. ಕಿಟಕಿ ತೆರೆಯಬೇಡಿ ಅಥವಾ ಹಾಡಬೇಡಿ," ಎಂದು ಹೇಳಲಾಗುತ್ತಿದೆ.

ಚೀನಾದಲ್ಲಿ ಝೀರೋ ಕೋವಿಡ್-19 ನೀತಿ

ಚೀನಾದಲ್ಲಿ ಝೀರೋ ಕೋವಿಡ್-19 ನೀತಿ

2019ರ ಡಿಸೆಂಬರ್ ವೇಳೆಗೆ ಚೀನಾದ ವುಹಾನ್‌ನಲ್ಲಿ ಕೋವಿಡ್ -19 ಸ್ಫೋಟಗೊಂಡಾಗ, SARS-CoV-2 ರೋಗವು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂಬುದರ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡುವಲ್ಲಿ ಚೀನಾ ವಿಫಲವಾಯಿತು. ಇದರಿಂದ 2020ರ ಜನವರಿ ಮೂರನೇ ವಾರದ ವೇಳೆಗೆ ಕೊರೊನಾವೈರಸ್ ಪ್ರಪಂಚದ ಹಲವು ರಾಷ್ಟ್ರಗಳಿಗೆ ವ್ಯಾಪಿಸಿತು. ಆಗ ಎಚ್ಚೆತ್ತುಕೊಂಡ ಚೀನಾ ತನ್ನ ಝೀರೋ-ಕೋವಿಡ್ ನೀತಿಯನ್ನು ರೂಪಿಸಿತ್ತು. ಇದು ಕೋವಿಡ್ -19ರ ಮಾನವ ಪ್ರಸರಣದ ಪ್ರತಿಯೊಂದು ಮೂಲವನ್ನು ಲಾಕ್ ಮಾಡುವ ಉದ್ದೇಶವನ್ನು ಹೊಂದಿತ್ತು. ಚೀನೀ ಕಮ್ಯುನಿಸ್ಟ್ ಪಕ್ಷ (CPC) ಕೋವಿಡ್-19 ಪ್ರಕರಣಗಳನ್ನು ವರದಿ ಮಾಡುವ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಅನ್ನು ಜಾರಿಗೊಳಿಸಿತು.

ಒಬ್ಬ ವ್ಯಕ್ತಿಯು ಕೋವಿಡ್ -19 ನಿಂದ ಬಳಲುತ್ತಿದ್ದರೆ, ಅಂಥವರನ್ನು ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಆ ಕುಟುಂಬದ ಸದಸ್ಯರು ಕ್ವಾರಂಟೈನ್‌ಗೆ ಒಳಗಾಗುತ್ತಾರೆ, ಈ ಹಿನ್ನೆಲೆ ವಯಸ್ಸು ಮತ್ತು ಪ್ರಾಯಶಃ ಲಿಂಗಕ್ಕೆ ಅನುಗುಣವಾಗಿ ಪ್ರತ್ಯೇಕವಾದ ಕೇಂದ್ರಗಳ ವ್ಯವಸ್ಥೆಯನ್ನು ಮಾಡಲಾಯಿತು. ಲಕ್ಷಾಂತರ ಜನರನ್ನು ಲಾಕ್‌ಡೌನ್‌ನಲ್ಲಿ ಇರಿಸಲಾಗಿದ್ದು, ಜನರು ಹೊರ ಪ್ರಪಂಚದ ನಂಟು ಕಳೆದುಕೊಂಡರು. ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಈಗ ಅಂಥದ್ದೇ ನಿಯಮವನ್ನು ಮತ್ತೊಮ್ಮೆ ಚೀನಾದಲ್ಲಿ ಜಾರಿಗೊಳಿಸಲಾಗುತ್ತಿದೆ.

ಚೀನಾದಲ್ಲಿ ಕೋವಿಡ್-19 ಸಾವಿನ ಪ್ರಕರಣ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ಅಲೆಗೆ ಚೀನಾದ ಬಹುದೊಡ್ಡ ನಗರಿ ಶಾಂಘೈ ತತ್ತರಿಸಿದೆ. ಪ್ರಮುಖ ವ್ಯಾಪಾರಿ ನೆಲೆ, ಉತ್ಪಾನಾ ಕೇಂದ್ರ ಹಾಗೂ ಸರಬರಾಜು ಕೇಂದ್ರ ಎನಿಸಿರುವ ಶಾಂಘೈನಲ್ಲಿ ಕೋವಿಡ್-19 ಸೋಂಕಿನಿಂದ ಮೊದಲ ಸಾವಿನ ಪ್ರಕರಣ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಶಾಂಘೈ ನಗರವೊಂದರಲ್ಲೇ 3000 ಮಂದಿಗೆ ಕೋವಿಡ್-19 ಸೋಂಕು ತಗುಲಿದ್ದು, ಲಕ್ಷಣಗಳು ಗೋಚರಿಸಿವೆ. ಉಳಿದಂತೆ 17,000 ಮಂದಿ ಲಕ್ಷಣರಹಿತರಾಗಿದ್ದರೂ, ಸೋಂಕು ತಗುಲಿರುವುದು ಪಕ್ಕಾ ಆಗಿದೆ. ಇದೇ ಅವಧಿಯಲ್ಲಿ ಏಳು ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾವೈರಸ್ ಹೊಸ ಅಲೆಗೆ ತತ್ತರಿಸಿದ ಚೀನಾ

ಕೊರೊನಾವೈರಸ್ ಹೊಸ ಅಲೆಗೆ ತತ್ತರಿಸಿದ ಚೀನಾ

ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ತಳಿಯ ಬಿಎ.2 ಪ್ರಬೇಧವು ಚೀನಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದು, ಈ ಅವಧಿಯಲ್ಲೂ ಚೀನಾದ ತನ್ನ ಹಳೆಯ ನೀತಿಗೆ ಅಂಟಿಕೊಂಡಿದೆ. ಝೀರೋ-ಕೋವಿಡ್ ನೀತಿಗೆ ಬದ್ಧವಾಗಿರುವ ಏಕೈಕ ಪ್ರಮುಖ ಆರ್ಥಿಕತೆ ಚೀನಾ ಆಗಿದೆ. ಉಳಿದವರು ಕೋವಿಡ್-19 ಸಾಂಕ್ರಾಮಿಕದ ಆರೋಗ್ಯ ಮತ್ತು ಆರ್ಥಿಕ ವೆಚ್ಚಗಳ ನಡುವೆ ಸಮತೋಲನ ಸಾಧಿಸಲು 'ವೈರಸ್‌ನೊಂದಿಗೆ ಬದುಕುವ' ನೀತಿಯನ್ನು ಅನುಸರಿಸುತ್ತಿದ್ದಾರೆ.

ಚೀನಾ ಕೂಡ ತನ್ನ ನೀತಿಯನ್ನು ಸ್ವಲ್ಪಮಟ್ಟಿಗೆ ತಿದ್ದುಪಡಿ ಮಾಡಿಕೊಂಡಿದೆ. ಇದು ಕ್ವಾರಂಟೈನ್ ಅವಧಿಯನ್ನು ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಸುಮಾರು 10 ದಿನಗಳಿಗೆ ಇಳಿಸಿದೆ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಕೋವಿಡ್-19 ರೋಗಿಗಳು ಗೊತ್ತುಪಡಿಸಿದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ಭೇಟಿ ನೀಡಬೇಕಾಗಿಲ್ಲ. ಸ್ವಯಂ-ಪರೀಕ್ಷಾ ಕಿಟ್‌ಗಳನ್ನು ಮನೆಯಲ್ಲಿ ಬಳಸಲು ಅನುಮತಿಸಲಾಗುತ್ತಿದೆ. ಚೀನಾದ ಮೇಲೆ ಪರಿಣಾಮ ಬೀರುತ್ತಿರುವ ಓಮಿಕ್ರಾನ್ ಅಲೆಯನ್ನು ನಿಯಂತ್ರಿಸಲು ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಈ ಬದಲಾವಣೆಗಳು ಮುಖ್ಯ ಪಾತ್ರ ವಹಿಸುತ್ತವೆ.

ಚೀನಾದ ಆರ್ಥಿಕತೆಗೆ ಪೆಟ್ಟುಕೊಟ್ಟ ಓಮಿಕ್ರಾನ್: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಓಮಿಕ್ರಾನ್ ಅಲೆಯು ಚೀನಾದ ಆರ್ಥಿಕತೆಗೆ ಪೆಟ್ಟು ಕೊಟ್ಟಿದೆ. ದೇಶದ ಚಿಲ್ಲರೆ ಮಾರಾಟವು ಮಾರ್ಚ್‌ನಲ್ಲಿ ಶೇ. 3.5ರಷ್ಟು ಕಡಿಮೆಯಾಗಿದೆ, ಇದು ಜುಲೈ 2020 ರಿಂದ ತೀವ್ರವಾಗಿ ಕುಸಿದಿದೆ. ನಿರುದ್ಯೋಗ ಪ್ರಮಾಣವು ಮೇ 2020 ರಿಂದ ಮತ್ತೆ ಶೇಕಡಾ 5.8ಕ್ಕೆ ಏರಿಕೆಯಾಗಿದೆ. ಈ ವರ್ಷ ಚೀನಾದ GDP ಬೆಳವಣಿಗೆ ದರವು ಶೇಕಡಾ 5.5ರ ಮುನ್ಸೂಚನೆಯ ವಿರುದ್ಧ ಶೇಕಡಾ 4.8 ರಷ್ಟಾಗಿದೆ.

ಚೀನಾದ ತಪ್ಪಿನಿಂದ ಜಗತ್ತು ಕಲಿಯಬೇಕಾದ ಪಾಠವೇನು?

ಚೀನಾದ ತಪ್ಪಿನಿಂದ ಜಗತ್ತು ಕಲಿಯಬೇಕಾದ ಪಾಠವೇನು?

ಝೀರೋ-ಕೊರೊನಾವೈರಸ್ ನೀತಿಯನ್ನು ಜಾರಿಗೊಳಿಸುವಲ್ಲಿ ಚೀನಾ ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸಿತು. ಆದರೆ ಅದೇ ರೀತಿ ಕೊವಿಡ್-19 ಲಸಿಕೆ ವಿತರಣೆಯ ವಿಷಯದಲ್ಲಿ ನಿಷ್ಕಾಳಜಿ ತೋರಿತು. ಅನಾರೋಗ್ಯದ ತೀವ್ರತೆಯನ್ನು ಕಡಿಮೆ ಮಾಡಲು ಅಥವಾ ಕೋವಿಡ್-19 ಹರಡುವುದನ್ನು ತಡೆಯುವಲ್ಲಿ ಚೀನಾದ ಲಸಿಕೆಗಳು ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ ಎಂಬ ದೂರುಗಳಿದ್ದವು. ಅದರ ಹೊರತಾಗಿಯೂ ಚೀನಾ ತನ್ನ ದೇಶದಲ್ಲಿ ಯಾವುದೇ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲಿಲ್ಲ. ರಾಷ್ಟ್ರದ ಜನತೆಗೆ ಲಸಿಕೆಯನ್ನು ವಿತರಿಸುವಲ್ಲಿ ಚೀನಾ ನೀತಿಯು ಪ್ರಜೆಗಳ ಪಾಲಿಗೆ ದುಬಾರಿ ಎನಿಸಿತು. ಸರ್ಕಾರ ಒಂದು ದಿಕ್ಕಿನಲ್ಲಿ ತನ್ನ ಆದಾಯ ಗಳಿಕೆಯ ಮೇಲೆಯಷ್ಟೇ ನಿಗಾ ವಹಿಸಿತು.

ಚೀನಾಗೆ ವಿರುದ್ಧವಾಗಿ ಯುಎಸ್, ಭಾರತ ಹಾಗೂ ಯುರೋಪ್ ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಮೊದಲ ಪ್ರಾಶಸ್ತ್ಯ ನೀಡಿದವು. ಇದು ದೇಶದ ಆರ್ಥಿಕತೆ ಹಾಗೂ ಪ್ರಜೆಗಳ ಆರೋಗ್ಯದ ದೃಷ್ಟಿಕೋನದಲ್ಲಿ ಸಹಾಯವಾಯಿತು. "ವೈರಸ್ ನೊಂದಿಗೆ ಬದುಕಿ" ಎನ್ನುವ ನೀತಿಯು ಈ ರಾಷ್ಟ್ರಗಳ ಆರ್ಥಿಕತೆಯ ಜೊತೆಗೆ ಪ್ರಜೆಗಳ ಆರೋಗ್ಯಕ್ಕೂ ಆದ್ಯತೆ ನೀಡಿದಂತಾಯಿತು.

ಚೀನಾ ನೀತಿ ಪಾಲನೆ ಮಾಡುವುದು ಎಲ್ಲ ರಾಷ್ಟ್ರಗಳಲ್ಲಿ ಸಾಧ್ಯವಿಲ್ಲ

ಚೀನಾ ನೀತಿ ಪಾಲನೆ ಮಾಡುವುದು ಎಲ್ಲ ರಾಷ್ಟ್ರಗಳಲ್ಲಿ ಸಾಧ್ಯವಿಲ್ಲ

ಚೀನಾದ ಝೀರೋ-ಕೊವಿಡ್-19 ನೀತಿಯನ್ನು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ವಾಕ್ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ಸಾಧ್ಯವಾಗುವುದಿಲ್ಲ. ಇಂತಹ ಕಟ್ಟುನಿಟ್ಟಿನ ನೀತಿಯು ಜನಸಂಖ್ಯೆಯಿಂದ ತೀವ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತದೆ. ಲಸಿಕೆ ವಿತರಣೆ ಸೇರಿದಂತೆ ಸರ್ಕಾರವು ಜಾರಿಗೊಳಿಸುವ ನೀತಿ ನಿಯಮಗಳ ವಿರುದ್ಧ ಜನಾಕ್ರೋಶ ಸೃಷ್ಟಿಯಾಗುವಂತೆ ಮಾಡುತ್ತದೆ. ಚೀನಾದಲ್ಲೂ ಕೂಡ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂಘೈ ನಗರದಲ್ಲಿ ಕೋವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿರುವ ಮೊದಲ ಎರಡು ಪ್ರಕರಣಗಳಲ್ಲಿ ಅದು ಸಾಬೀತಾಗಿದೆ. ಏಕೆಂದರೆ ಈ ಎರಡೂ ಸಾವಿನ ಪ್ರಕರಣಗಳಲ್ಲಿ ಮೃತರು ಕೋವಿಡ್-19 ಲಸಿಕೆಯನ್ನೇ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

Recommended Video

ಭಾರತೀಯರೇ ಎಚ್ಚರ!!!ಚೀನಾದಲ್ಲಿ ಕೊರೊನಾ ಸಾವು-ನೋವು ಮತ್ತೆ ಸ್ಟಾರ್ಟ್ | Oneindia Kannada

English summary
China adhering to the Zero-Covid policy. The rest of the world have opted for living with the virus policy to balance between the health and economic costs of the Covid-19 pandemic. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X