• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ZEE News Opinion Poll: ಪಂಜಾಬ್‌ನಲ್ಲಿ ಯಾರಿಗೆ ಸಿಎಂ ಕುರ್ಚಿ?

|
Google Oneindia Kannada News

ಚಂಡೀಗಢ, ಜನವರಿ 20: ಪಂಜಾಬ್ ವಿಧಾನಸಭೆ ಚುನಾವಣೆ 2022ರಲ್ಲಿ ಮುಖ್ಯಮಂತ್ರಿ ಕುರ್ಚಿ ಏರಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದೆ.

ಪಂಜಾಬ್ ಚುನಾವಣೆ 2022 ಸಂಬಂಧಿಸಿದಂತೆ ಜೀ ನ್ಯೂಸ್ ಅತಿದೊಡ್ಡ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹ ಸಮೀಕ್ಷೆಯನ್ನು ನಡೆಸುತ್ತಿದೆ. ಪಂಜಾಬ್‌ನ ಚುನಾವಣೆಯಲ್ಲಿ ಜನರ ಮುಂದಿನ ಆಯ್ಕೆ ಏನು ಎಂಬುದರ ಬಗ್ಗೆ ಅಂಕಿ-ಅಂಶಗಳನ್ನು ಪಟ್ಟಿ ಮಾಡಿಕೊಂಡಿದೆ. ರಾಜ್ಯವನ್ನು ಮಝಾ, ದೋಬಾ ಮತ್ತು ಮಾಲ್ವಾ ಎಂದು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದ್ದು, 1,05,000 ಜನರಿಂದ ಅಭಿಪ್ರಾಯ ಕಲೆ ಹಾಕಲಾಗಿದೆ.

Breaking news: ಪಂಜಾಬ್‌ ಚುನಾವಣೆ ದಿನಾಂಕ ಮರುನಿಗದಿ ಮಾಡಿದ ಚುನಾವಣಾBreaking news: ಪಂಜಾಬ್‌ ಚುನಾವಣೆ ದಿನಾಂಕ ಮರುನಿಗದಿ ಮಾಡಿದ ಚುನಾವಣಾ

ಜೀ ನ್ಯೂಸ್ ನಡೆಸಿದ ಅಭಿಪ್ರಾಯ ಸಂಗ್ರಹದ ಪ್ರಕಾರ, ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಕಡೆಗೆ ಅತಿಹೆಚ್ಚು ಮತದಾರರು ಒಲವು ಹೊಂದಿರುವುದು ಗೊತ್ತಾಗಿದೆ. ಸಿಎಂ ಚನ್ನಿ ಪರ ಶೇ.31ರಷ್ಟು ಜನರು ಮತ ಚಲಾಯಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಪ್ರಬಲ ಪೈಪೋಟಿ ನೀಡುತ್ತಿದ್ದು, ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಭಗವಂತ್ ಮನ್ ಕೂಡ ಶೇ.24ರಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಸಿಎಂ ಆಯ್ಕೆ ವಿಚಾರದಲ್ಲಿ ಪಂಜಾಬ್ ಮತದಾರರ ಚಿತ್ತ ಹೇಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಪಂಜಾಬ್ ಮತದಾರರ ಸಿಎಂ ಆಯ್ಕೆ:

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಪ್ರಶ್ನೆಗೆ 1 ಲಕ್ಷ 5 ಸಾವಿರ ಮಂದಿ ಉತ್ತರ ನೀಡಿದ್ದಾರೆ. ಈ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಮುಂದಿದ್ದಾರೆ. ಮತದಾರರ ಪ್ರಕಾರ ಯಾರಿಗೆ ಎಷ್ಟು ಮತ ಸಿಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.

ಚರಂಜಿತ್ ಸಿಂಗ್ ಚನ್ನಿ (ಕಾಂಗ್ರೆಸ್) - ಶೇ. 31

ಭಗವಂತ್ ಮಾನ್ (ಎಎಪಿ) - ಶೇ. 24

ಸುಖಬೀರ್ ಸಿಂಗ್ ಬಾದಲ್ (SAD) - ಶೇ. 22

ಅರವಿಂದ್ ಕೇಜ್ರಿವಾಲ್ (ಎಎಪಿ) - ಶೇ. 11

ಕ್ಯಾಪ್ಟನ್ ಅಮರಿಂದರ್ ಸಿಂಗ್ (ಬಿಜೆಪಿ+): ಶೇ. 7

ನವಜೋತ್ ಸಿಂಗ್ ಸಿಧು (ಕಾಂಗ್ರೆಸ್): ಶೇ. 4

ಮೂರು ತಿಂಗಳ ಮುಖ್ಯಮಂತ್ರಿ ಜನಪ್ರಿಯತೆ:

ಪಂಜಾಬ್‌ನಲ್ಲಿ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ರಾಜ್ಯದಲ್ಲಿ ಅಪಾರ ಜನ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜನಪ್ರಿಯತೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಚನ್ನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಆಗಿದ್ದು, ಈ ತಳಹದಿ ಮೇಲೆ ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಹೆಚ್ಚಿನ ಶೇಕಡಾವಾರು ದಲಿತ ಮತದಾರರು ಅವರನ್ನು ಬೆಂಬಲಿಸುತ್ತಾರೆ ಎಂಬ ನಿರೀಕ್ಷೆಯಿದೆ. ಕಾಂಗ್ರೆಸ್ ನಾಯಕನ ಜನಪ್ರಿಯತೆಯ ಹೊರತಾಗಿ ಎಎಪಿ ಅಭ್ಯರ್ಥಿ ಭಗವಂತ್ ಮಾನ್ ಕೂಡ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಪಂಜಾಬ್‌ನಲ್ಲಿ ಯಾವಾಗ ಚುನಾವಣೆ?:

ಪಂಜಾಬ್ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ನಡೆಯಲಿದೆ. ರಾಜ್ಯದ ಒಟ್ಟು 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳ ಫಲಿತಾಂಶದ ದಿನವೇ ಪಂಜಾಬ್ ವಿಧಾನಸಭೆ ಚುನಾವಣೆ ಭವಿಷ್ಯ ನಿರ್ಧಾರವಾಗಲಿದೆ.

2017ರಲ್ಲಿ ಪಂಜಾಬ್ ಫಲಿತಾಂಶ:

ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ. ಕಳೆದ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಗದ್ದುಗೆ ನೀಡಿದ್ದರು. 117 ಕ್ಷೇತ್ರಗಳಲ್ಲಿ ಕಾಂಗ್ರೆಸ್ 78 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷವು 20 ಕಡೆಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಶಿರೋಮಣಿ ಅಕಾಲಿ ದಳ 18 ಹಾಗೂ ಇತರರು ಎರಡು ಕಡೆಗಳಲ್ಲಿ ಗೆಲುವು ಸಾಧಿಸಿದ್ದರು.

English summary
ZEE News Opinion Poll: Who is CM Choice of the people in Punjab Election?, Charanjit Singh Channi or Bhagwant Mann.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X