ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಸಮೀಕ್ಷೆ; ಉತ್ತರಾಖಂಡದಲ್ಲಿ ಹರೀಶ್ ರಾವತ್ ಜನಪ್ರಿಯ ಸಿಎಂ ಆಯ್ಕೆ

|
Google Oneindia Kannada News

ಉತ್ತರಾಖಂಡ್, ಜನವರಿ 18: Zee News ಅಭಿಪ್ರಾಯ ಸಮೀಕ್ಷೆಯಲ್ಲಿ ಉತ್ತರಾಖಂಡದ ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲನ್ನನುಭವಿಸುವ ಸಾಧ್ಯತೆಯಿದೆ. ಆದರೆ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ 33-37 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ 2017ರ ಅವಮಾನದ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.

ಇದಲ್ಲದೆ, ಅಭಿಪ್ರಾಯ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುಪಾಲು ಶೇ.43ರಷ್ಟು ಜನ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಉತ್ತರಾಖಂಡ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ಮುನ್ನಡೆಸಬೇಕೆಂದು ಬಯಸಿದ್ದಾರೆ. ಆದರೆ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಮತ್ತು ಅನಿಲ್ ಬಲುನಿ ಅವರು ಕ್ರಮವಾಗಿ ಶೇ.31 ಮತ್ತು ಶೇ.11ರಷ್ಟು ಜನಮತ ಪಡೆದು ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

Zee News- ಅಭಿಪ್ರಾಯ ಸಮೀಕ್ಷೆಯ ಪ್ರಮುಖ ಸಂಶೋಧನೆಗಳು
ಜಾತಿ ಆಧಾರಿತ ಮತದಾನದ ಅಭಿಪ್ರಾಯವೇನು?
ಪ್ರಾಬಲ್ಯ ಹೊಂದಿರುವ ಬ್ರಾಹ್ಮಣ, ಠಾಕೂರ್ ಮತ್ತು ಒಬಿಸಿ ಸಮುದಾಯಗಳು ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಒಲವು ತೋರಿದರೆ, ಎಸ್‌ಸಿ ಮತ್ತು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆಯಿದೆ. 57% ಬ್ರಾಹ್ಮಣ ಮತ್ತು 60% ಠಾಕೂರ್‌ಗಳು ಬಿಜೆಪಿಗೆ ಮತ ಹಾಕುವ ನಿರೀಕ್ಷೆಯಿದೆ, ಆದರೆ 84% ಮುಸ್ಲಿಮರು ಮತ್ತು 62% ಎಸ್‌ಸಿಗಳು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ.

Zee News Opinion Poll; Harish Rawat is Most popular CM Choice in Uttarakhand

ಝೀ ನ್ಯೂಸ್‌ನೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್, ಮುಖ್ಯಮಂತ್ರಿ ಹುದ್ದೆಯ ಮುಖಾಂತರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ಅಭಿಪ್ರಾಯ ಸಂಗ್ರಹವು ಕಾಂಗ್ರೆಸ್ ಇನ್ನಷ್ಟು ಶ್ರಮಿಸಲು ಪ್ರೋತ್ಸಾಹಿಸಿದೆ. ಆದಾಗ್ಯೂ 70 ಸದಸ್ಯರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸುಮಾರು 50 ಸ್ಥಾನಗಳನ್ನು ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರಾಖಂಡದಲ್ಲಿ ಅತ್ಯಂತ ಆದ್ಯತೆಯ ಸಿಎಂ ಯಾರು?
ಉತ್ತರಾಖಂಡದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಬಹುತೇಕ ಶೇ.43ರಷ್ಟು ಜನ ಹರೀಶ್ ರಾವತ್ ಮುಂದಿನ ಸರ್ಕಾರದ ನೇತೃತ್ವವನ್ನು ಬಯಸಿದ್ದಾರೆ. ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಮತ್ತು ಅನಿಲ್ ಬಲುನಿ ಕ್ರಮವಾಗಿ 31% ಮತ್ತು 11% ನೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಝೀ ನ್ಯೂಸ್ ಅಭಿಪ್ರಾಯ ಸಮೀಕ್ಷೆಯ ಪ್ರಕಾರ, ಉತ್ತರಾಖಂಡ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 31-35 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಕಾಂಗ್ರೆಸ್ 33-37, ಎಎಪಿ-2, ಇತರರು- 1 ಸ್ಥಾನ ಗೆಲ್ಲುವ ಸಾಧ್ಯತೆಯಿದೆ.

Zee News Opinion Poll; Harish Rawat is Most popular CM Choice in Uttarakhand

ಉತ್ತರಾಖಂಡದಲ್ಲಿ ಅಂತಿಮ ಮತ ಹಂಚಿಕೆ
ಬಿಜೆಪಿ- 39%
ಕಾಂಗ್ರೆಸ್- 40%
ಆಪ್- 12%
ಇತರೆ- 09%

ಉತ್ತರಾಖಂಡದ ಕುಮೌನ್ ಪ್ರದೇಶದ 29 ಸ್ಥಾನಗಳ ಪೈಕಿ ಬಿಜೆಪಿ 10 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಕುಮೌನ್ ಪ್ರದೇಶದಲ್ಲಿಯೂ ಹರೀಶ್ ರಾವತ್ ಶೇ.41ರಷ್ಟು ಮತಗಳೊಂದಿಗೆ ಉನ್ನತ ಹುದ್ದೆಗೆ ಅತ್ಯಂತ ನೆಚ್ಚಿನ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಇನ್ನೊಂದೆಡೆ ಸಿಎಂ ಸ್ಥಾನಕ್ಕೆ ಎರಡನೇ ಆಯ್ಕೆಯಾಗಿರುವ ಪುಷ್ಕರ್ ಸಿಂಗ್ ಧಾಮಿ ಶೇ.26ರಷ್ಟು ಮತ ಪಡೆದಿದ್ದಾರೆ.

ಮತಗಳಿಕೆಯಲ್ಲಿ ಯಾರು ಮುಂದೆ?
ಕುಮೌನ್ ಪ್ರದೇಶದಲ್ಲಿಯೂ ಕಾಂಗ್ರೆಸ್ ಮತಗಳಿಕೆಯಲ್ಲಿ ಬಿಜೆಪಿಗಿಂತ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷವು ಶೇಕಡಾ 41.6ರಷ್ಟು ಮತಗಳನ್ನು ಪಡೆಯಲಿದೆ. ಮತ್ತೊಂದೆಡೆ, ಕುಮೌನ್ ಪ್ರದೇಶದಲ್ಲಿ ಬಿಜೆಪಿ 37.8% ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಎಎಪಿ ಮತ್ತು ಇತರರು ಕ್ರಮವಾಗಿ 10.4 ಮತ್ತು 10.2 ಶೇಕಡಾ ಮತಗಳನ್ನು ಪಡೆಯುವ ನಿರೀಕ್ಷೆಯಿದೆ.

Zee News Opinion Poll; Harish Rawat is Most popular CM Choice in Uttarakhand

ಗರ್ವಾಲ್‌ನ 41 ಸ್ಥಾನಗಳ ಪೈಕಿ ಬಿಜೆಪಿ 23 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 16 ಸ್ಥಾನಗಳನ್ನು ಪಡೆಯಲಿದ್ದು, ಎಎಪಿ ಮತ್ತು ಇತರರು ತಲಾ 1 ಸ್ಥಾನ ಪಡೆಯುವ ಸಾಧ್ಯತೆಯಿದೆ.

ಉತ್ತರಾಖಂಡದ ಮುಂದಿನ ಮುಖ್ಯಮಂತ್ರಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಗರ್ವಾಲ್‌ನಲ್ಲಿ ಪ್ರತಿಕ್ರಿಯಿಸಿದವರಿಗೆ ಕೇಳಿದಾಗ, ಸಮೀಕ್ಷೆಯಲ್ಲಿ ಭಾಗವಹಿಸಿದ 43% ಜನರು ಕಾಂಗ್ರೆಸ್ ನಾಯಕ ಹರೀಶ್ ರಾವತ್‌ಗೆ ಮತ ಹಾಕಿದರೆ, 23% ಜನರು ಬಿಜೆಪಿ ನಾಯಕ ಪುಷ್ಕರ್ ಧಾಮಿಗೆ ಮತ ಹಾಕಿದ್ದಾರೆ. ಬಿಜೆಪಿಯ ಅನಿಲ್ ಬಲುನಿ 17% ನೊಂದಿಗೆ ಮೂರನೇ ಸ್ಥಾನದಲ್ಲಿದ್ದು ಮತ್ತು ಕೇವಲ 8 ಪ್ರತಿಶತದಷ್ಟು ಜನರು ಮಾತ್ರ ಆಪ್‌ನ ಕರ್ನಲ್ ಅಜಯ್ ಕೊತ್ಯಾಲ್ ಅವರನ್ನು ರಾಜ್ಯದ ಸಿಎಂ ಆಗಿ ನೋಡಲು ಬಯಸಿದ್ದಾರೆ.

2017ರಲ್ಲಿ ಫಲಿತಾಂಶವೇನು?
ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಉತ್ತರಾಖಂಡದ 70 ಸ್ಥಾನಗಳಲ್ಲಿ 57 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿತ್ತು. ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಫೆ.14ರಂದು ಮತದಾನ
ಉತ್ತರಾಖಂಡದಲ್ಲಿ ಜನವರಿ 21ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 21ರಿಂದ ಜ.28ರವರೆಗೆ ಅವಕಾಶವಿರುತ್ತದೆ. ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿದೆ.

ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

English summary
The majority of the 43% who participated in the Zee News poll said Congress leader Harish Rawat wants to lead the next government in the state of Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X