ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶವಂತಪುರ ಕ್ಷೇತ್ರ ಪರಿಚಯ: ಯಶಸ್ಸು ಯಾರಿಗೂ ಸುಲಭವಲ್ಲ

|
Google Oneindia Kannada News

ಯಶವಂತಪುರವು ಈ ಹಿಂದೆ ಸಂಸದೆ ಮಾಜಿ ಸಚಿವ ಶೋಭಾ ಕರಂದ್ಲಾಜೆ ಸ್ಪರ್ಧಿಸಿದ್ದ ಕ್ಷೇತ್ರವಿದು. ಜಾತಿ ಹಾಗೂ ಕ್ಷೇತ್ರದ ವ್ಯಾಪ್ತಿ ಕಾರಣದಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಕಷ್ಟು ಮಹತ್ವವನ್ನು ಪಡೆದಿತ್ತು.

ಸತತ ಕಳೆದ ಎರಡು ಬಾರಿ ಇಂದ ಅಂದರೆ 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ಈಗ ಅನರ್ಹಗೊಂಡಿರುವ ಹಾಗೂ ಬಿಜೆಪಿಯನ್ನು ಸೇರಲಿದ್ದಾರೆ ಎನ್ನಲಾಗಿರುವ ಎಸ್‌ಟಿ ಸೋಮಶೇಖರ್ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

2ನೇ ಉಪ ಚುನಾವಣೆ ಎದುರಿಸುತ್ತಿರುವ ವಿಜಯನಗರ ಪರಿಚಯ2ನೇ ಉಪ ಚುನಾವಣೆ ಎದುರಿಸುತ್ತಿರುವ ವಿಜಯನಗರ ಪರಿಚಯ

ರಿಯಲ್ ಎಸ್ಟೇಟ್ ಏರು ಮುಖವಾಗಿರುವ ಈ ವ್ಯಾಪ್ತಿಯಲ್ಲಿ ಅತಿಕ್ರಮಣ, ಖಾತೆಗಳ ಸಮಸ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿದೆ. ಬೇಡಿಕೆಗಳ ಬಾಯಿಗೆ ಬೀಗ ಹಾಕಲು ಯಾರಿಗೆ ಸಾಧ್ಯ. ಯಶವಂತಪುರಕ್ಕೆ ಸಮಸ್ಯೆಗಳ ಬಂಧನಕ್ಕಿಂತ ಬಿಡುಗಡೆ ಅಗತ್ಯ ಇರುವಂತೆ ಕಾಣುತ್ತಿದೆ.

Yeshwanthpur Assembly Constituency Profile

ದೊಡ್ಡಬಿದರಕಲ್ಲು ಹೇರೋಹಳ್ಳಿ ಉಲ್ಲಾಳು ಕೆಂಗೇರಿ ಹೆಮ್ಮಿಗೆಪುರ ಯಶವಂಪುರ ಕ್ಷೇತ್ರದಲ್ಲಿ ಬರುವಂತಹ ವಾರ್ಡ್‌ಗಳಾಗಿವೆ.

ಒಕ್ಕಲಿಗ, ಬ್ರಾಹ್ಮಣ ಸಮುದಾಯದ ಹೆಚ್ಚಿನ ಮತಗಳನ್ನು ಹೊಂದಿರುವ ಈ ಕ್ಷೇತ್ರಕ್ಕೆ ಪ್ರಚಾರ ಮಾಡುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಈ ಕ್ಷೇತ್ರವು ಅತ್ಯಧಿಕ ಮತದಾರರು ಹಾಗೂ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಾಗಿದೆ.

ಕೆ. ಆರ್. ಪೇಟೆ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು?ಕೆ. ಆರ್. ಪೇಟೆ ಉಪ ಚುನಾವಣೆಯಲ್ಲಿ ಯಾರಿಗೆ ಗೆಲುವು?

ಕಳೆದ 2018ರ ಚುನಾವಣೆಯಲ್ಲಿ ಒಂದು ಲಕ್ಷ ಹತ್ತು ಸಾವಿರಕ್ಕೂ ಹೆಚ್ಚು ಮತ ಪಡೆದ ಎಸ್‌ಟಿ ಸೋಮಶೇಖರ್ ಸುಮಾರು ಆರು ಸಾವಿರ ಮತಗಳಿಂದ ಜೆಡಿಎಸ್‌ ಅಭ್ಯರ್ಥಿ ಜವರಾಯಿ ಗೌಡ ಸೋಲನ್ನು ಅನುಭವಿಸಿದ್ದರು.

Yeshwanthpur Assembly Constituency Profile

ಬಿಜೆಪಿ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ನಿರ್ಧರಿಸಿ ಜಗ್ಗೇಶ್ ಅವರನ್ನು ನಿಲ್ಲಿಸಿದ ಪರಿಣಾಮವಾಗಿ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಇದರಿಂದ ಯಶವಂತಪುರದಲ್ಲಿ ಬಿಜೆಪಿ ಪ್ರಭಾವ ಕುಗ್ಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿತ್ತು.

ಒಂದೊಮ್ಮೆ ಎಸ್‌ಟಿ ಸೋಮಶೇಖರ್ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅನುಮತಿ ನೀಡದಿದ್ದರೆ ಬಿಜೆಪಿ ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವುದು ಕೂಡ ಕಷ್ಟವೆನ್ನಲಾಗುತ್ತಿದೆ. ಜೆಡಿಎಸ್ ಕಳೆದ ಚುನಾವಣೆಯಲ್ಲಿ ಒಂದ ಲಕ್ಷಕ್ಕೂ ಅಧಿಕ ಮತವನ್ನು ಪಡೆದಿದ್ದರಿಂದ ಎಸ್‌ಟಿ ಸೋಮಶೇಖರ್ ಬಗ್ಗೆ ಗೊಂದಲ ಕಾಂಗ್ರೆಸ್‌ನಲ್ಲಿರುವ ಒಡಕು ಎಲ್ಲವನ್ನೂ ಉಪಯೋಗಿಸಿ ಜೆಡಿಎಸ್ ಗೆಲುವು ಸುಲಭವಾಗಬಹುದು, ಜೆಡಿಎಸ್‌ಗೆ ದಾರಿ ಸುಗಮವಾಗಬಹುದು ಎನ್ನಲಾಗುತ್ತಿದೆ.

ಹೊಸಕೋಟೆ ಕ್ಷೇತ್ರ ಪರಿಚಯ: ಎಂಟಿಬಿಗೆ ಪ್ರತಿಷ್ಠೆ, ಕಾಂಗ್ರೆಸ್‌ಗೆ ಪ್ರತೀಕಾರದ ಹಂಬಲಹೊಸಕೋಟೆ ಕ್ಷೇತ್ರ ಪರಿಚಯ: ಎಂಟಿಬಿಗೆ ಪ್ರತಿಷ್ಠೆ, ಕಾಂಗ್ರೆಸ್‌ಗೆ ಪ್ರತೀಕಾರದ ಹಂಬಲ

ಒಂದೊಮ್ಮೆ ಎಸ್‌ಟಿ ಸೋಮಶೇಖರ್ ಸ್ಪರ್ಧೆಗೆ ಸುಪ್ರೀಂ ಅನುಮತಿ ನೀಡಿದರೆ ಅವರು ಬಿಜೆಪಿಯಿಂದಲೇ ಸ್ಪರ್ಧಿಸಲು ಮುಂದಾದರೆ ಒಟ್ಟಾರೆ ರಾಜಕೀಯ ಚಿತ್ರಣದಲ್ಲಿ ಬದಲಾಗಲಿದೆ.

ಕಳೆದ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಯಾರು ಬಿಜೆಪಿ ಅಭ್ಯರ್ಥಿ ಎನ್ನುವ ಬಗ್ಗೆ ಕೊನೆಯ ಕ್ಷಣದವರೆಗೂ ನಿರ್ಧಾರವಾಗಿರಲಿಲ್ಲ. ಹೀಗಾಗಿ ಈ ಉಪ ಚುನಾವಣೆ ಖಾತ್ರಿಯಾಗುತ್ತಿದ್ದಂತೆ ಹೊಸ ಅಭ್ಯರ್ಥಿ ನಿಲ್ಲುವುದು ಕೂಡ ಖಾತ್ರಿಯಾಗಿದೆ.

ಈ ಕ್ಷೇತ್ರದ ಸಮಸ್ಯೆಗಳೇನು?: 2007ರಲ್ಲಿ ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ಮತ್ತು ಹೆಮ್ಮಿಗೆಪುರ ಬಿಬಿಎಂಪಿಗೆ ಸೇರ್ಪಡೆಯಾಗಿದೆ. ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ.

ಬೋರ್ ವೆಲ್ ಗಳನ್ನು ಕೊರೆಸಿದ್ದರೂ ನೀರಿನ ಟ್ಯಾಂಕರ್ ಗಳ ಮೇಲಿನ ಅವಲಂಬನೆ ತಪ್ಪಿಲ್ಲ ಎನ್ನುತ್ತಾರೆ ಸ್ಥಳೀಯರು. ಬಿಬಿಎಂಪಿಯೂ ಈ ಕುರಿತು ಕ್ರಮ ತೆಗೆದುಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಆಕ್ರಮಣ ಹೆಚ್ಚಿದೆ. ತ್ಯಾಜ್ಯವ ವಿಲೇವಾರಿಯ ಸಮಸ್ಯೆಯೂ ಅತಿಯಾಗಿದೆ.

ಉದ್ಯಮಿ ಡಾ. ಸುಬ್ರಹ್ಮಣ್ಯಂ ಶರ್ಮಾ ಅವರು ಬಿಜೆಪಿಯಿಂದ ಅಭ್ಯರ್ಥಿಯಾಗಲು ಪ್ರಯತ್ನ ನಡೆಸುತ್ತಿದ್ದಾರೆ.
2018ರ ಫಲಿತಾಂಶ: ಎಸ್‌ಟಿ ಸೋಮಶೇಖರ್(ಕಾಂಗ್ರೆಸ್)ಪಡೆದ ಮತಗಳು: 1,15,273.
ಜವರಾಯಿ ಗೌಡ(ಜೆಡಿಎಸ್), ಪಡೆದ ಪಮತಗಳು: 1,04,562
ಜಗ್ಗೇಶ್(ಬಿಜೆಪಿ), ಪಡೆದ ಮತಗಳು-59,308

English summary
Karnataka By Election 2019 Read All about Yeshwanthpur Constituency Of Bengaluru.Know about Yeshwanthpur candidates list, election, 2018 Assembly elections results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X