ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಜಾಗ ತುಂಬುವವರ್ಯಾರು?

|
Google Oneindia Kannada News

ಪಶ್ಚಿಮ ಘಟ್ಟದ ಅತ್ಯಂತ ಸುಂದರ ತಾಣಗಳಲ್ಲೊಂದಾದ ಯಲ್ಲಾಪುರ ಸಾತೊಡ್ಡಿ, ಮಾಗೋಡು ಮುಂತಾದ ಪ್ರಖ್ಯಾತ ಜಲಪಾತಗಳ ತವರೂರು.

ಕಳೆದ ಕೆಲವು ತಿಂಗಳುಗಳಿಂದ ಸುರಿದ ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ತತ್ತರಿಸಿರುವ ಈ ಕ್ಷೇತ್ರಕ್ಕೆ, ಉಪಚುನಾವಣೆಯ ಹುಮ್ಮಸ್ಸು ಖಂಡಿತ ಇಲ್ಲ. ಪ್ರವಾಹದ ಸಮಯದಲ್ಲಿ ಕ್ಷೇತ್ರದ ರಾಜಕೀಯ ಧುರಿಣರು ಪ್ರತಿಕ್ರಿಯಸಿದ ರೀತಿಯೇ ಮತದಾರರಿಗೆ ಮತದಾನದ ಮಾನದಂಡವಾದರೆ ಅಚ್ಚರಿಯೇನಿಲ್ಲ.

ಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕಯಲ್ಲಾಪುರ ಕ್ಷೇತ್ರ: ಹವ್ಯಕರ ಮತಗಳೇ ನಿರ್ಣಾಯಕ

ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿರುವ ಯಲ್ಲಾಪುರ ಹುಬ್ಬಳ್ಳಿಯನ್ನು ಅಂಕೋಲಾಗೆ ಸಂಪರ್ಕಿಸುವ NH63ರಲ್ಲಿ ಸಾಗಿದರೆ ಸಿಗುವ ಪ್ರಕೃತಿ ಸೊಬಗಿನ ರಮ್ಯ ತಾಣ. ಅಡಿಕೆ ಇಲ್ಲಿನ ಪ್ರಮುಖ ಆದಾಯ ಮೂಲ. ಏಲಕ್ಕಿ, ಮೆಣಸು, ಬಾಳೆ, ಭತ್ತ ಮುಂತಾದವು ಉಪಬೆಳೆಗಳು.

Yellapur Assembly Constituency Profile

ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಸೇರಿದಂತೆ ಹಲವು ಸಮುದಾಯದ ಜನರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಹವ್ಯಕರ ಮತಗಳೇ ನಿರ್ಣಾಯಕ. 2013 ರಲ್ಲೂ ಈ ಕ್ಷೇತ್ರದಲ್ಲಿ ಗೆದ್ದಿದ್ದ ಶಿವರಾಮ್ ಹೆಬ್ಬಾರ್, 2018 ರ ವಿಧಾಸನಭೆ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. ಹೆಬ್ಬಾರ್ 66290 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ವಿ ಎಸ್ ಪಟೇಲ್ 64807 ಮತಗಳನ್ನು ಪಡೆದು ಸೋಲನುಭವಿಸಿದ್ದರು.

85,999 ಪುರುಷರು ಮತ್ತು 82,117 ಮಹಿಳೆಯರು ಸೇರಿದಂತೆ ಕ್ಷೇತ್ರದ 1,68,193 ಮತದಾರರು ಕ್ಷೇತ್ರದ ಪ್ರತಿನಿಧಿಯ ಹಣೆಬರಹವನ್ನು ಅಕ್ಟೋಬರ್ 21 ರ ಉಪಚುನಾವಣೆಯಲ್ಲಿ ಬರೆಯಲಿದ್ದಾರೆ.

ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?

ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್ ಹೆಬ್ಬಾರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೆಬ್ಬಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರಿಂದ ಕ್ಷೇತ್ರಕ್ಕೆ ಉಪಚುನಾವಣೆಯ ಅಗತ್ಯಬಿದ್ದಿದ್ದು, ಅನರ್ಹ ಶಾಸಕರು ಚುನಾವನೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಹೇಳಿಬಿಟ್ಟಿದೆ.

ಬಿಜೆಪಿಯಿಂದ ಸ್ಪರ್ಧಿಸುವ ಯೋಚನೆಯಲ್ಲಿದ್ದ ಹೆಬ್ಬಾರ್ ಅವರಿಗೆ ಇದು ತೀವ್ರ ಆಘಾತವನ್ನುಂಟು ಮಾಡಿದ್ದು, ತಾವು ಚುನಾವಣೆಗೆ ನಿಲ್ಲದೆ ಹೋದರೆ, ತಮ್ಮ ಪುತ್ರ ಅಥವಾ ಪತ್ನಿಯನ್ನು ಅಖಾಡಕ್ಕಿಳಿಸಬೇಕು ಎಂಬ ಯೋಚನೆಯಲ್ಲಿ ಅವರಿದ್ದಾರೆ. ಆದರೆ ಶಿವರಾಮ್ ಹೆಬ್ಬಾರ್ ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರೆ ಅವರ ಕುಟುಂಬದ ಬೇರೆ ಸದಸ್ಯರಿಗೆ ಟಿಕೆಟ್ ನೀಡಲು ಬಿಜೆಪಿ ಸಿದ್ಧವಿಲ್ಲ. ಮತ್ತೆ ವಿ ಎಸ್ ಪಾಟೀಲ್ ಅವರೇ ಬಿಜೆಪಿಯಿಂದ ಚುನಾವಣೆಗೆ ನಿಲ್ಲುತ್ತಾರಾ? ಎಂಬುದು ಕುತೂಹಲದ ವಿಷಯವಾಗಿದೆ.

English summary
Karnataka By elections 2019: Yellapur Assembly Constituency Profile
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X