ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಲ್ಲಿ ಯಡಿಯೂರಪ್ಪ ರಾಜೀನಾಮೆ; ಇದೇ ಮೊದಲಲ್ಲ

|
Google Oneindia Kannada News

ಬೆಂಗಳೂರು, ಜುಲೈ 26; ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು. 4 ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಒಂದು ಬಾರಿಯೂ ಸಹ ಅಧಿಕಾರ ಪೂರ್ಣಗೊಳಿಸಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.

ಜುಲೈ 26ರ ಸೋಮವಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷವಾಯಿತು. ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಷಣೆ ಮಾಡಿದ ಯಡಿಯೂರಪ್ಪ (79) ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.

 ಬಿಜೆಪಿ ಸಾಧನಾ ಭಾಷಣದಲ್ಲಿ ಭಾವುಕರಾದ ಸಿಎಂ ಯಡಿಯೂರಪ್ಪ ಬಿಜೆಪಿ ಸಾಧನಾ ಭಾಷಣದಲ್ಲಿ ಭಾವುಕರಾದ ಸಿಎಂ ಯಡಿಯೂರಪ್ಪ

ವಿಧಾನಸೌಧದಲ್ಲಿರುವ ಯಡಿಯೂರಪ್ಪ ಸಚಿವರ ಜೊತೆ ರಾಜಭವನಕ್ಕೆ ಸಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಕರ್ನಾಟಕದ ರಾಜಕೀಯ ಅಧ್ಯಾಯವೊಂದು ಅಂತಿಮ ಹಂತಕ್ಕೆ ಬಂದು ನಿಂತಿದೆ.

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ

Yediyurappa Announces Resignation In July This Is Not First Time

2019ರ ಜುಲೈ 26ರಂದು ಅಧಿಕಾರ ವಹಿಸಿಕೊಂಡಿದ್ದ ಯಡಿಯೂರಪ್ಪ 2021ರ ಜುಲೈ 26ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 2012ರಲ್ಲಿಯೂ ಯಡಿಯೂರಪ್ಪ ಜುಲೈ ತಿಂಗಳಿನಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಯಡಿಯೂರಪ್ಪ 4 ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಒಂದು ಸಲವೂ ಸಲ ಐದು ವರ್ಷ ಪರಿಪೂರ್ಣಗೊಳಿಸಿಲ್ಲ. ನಾಲ್ಕು ಅವಧಿ ಸೇರಿಸಿದರೆ ಒಟ್ಟು 5 ವರ್ಷ 79 ದಿನ ಅವರು ಮುಖ್ಯಮಂತ್ರಿಯಾಗಿದ್ದರು.

ಮುಖ್ಯಮಂತ್ರಿ ಆಗಿದ್ದ ಅವಧಿ; 2007ರ ನವೆಂಬರ್ 12 ರಿಂದ 19ರ ತನಕ ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಬಳಿಕ 2008ರ ಮೇ 30 ರಿಂದ 31 ಜುಲೈ 2012ರ ತನಕ 2ನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ಮೇ 17 2018ರಿಂದ 19 ಮೇ 2018ರ ತನಕ 3ನೇ ಬಾರಿಗೆ ಯಡಿಯೂರಪ್ಪ 3ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. 2019ರ ಜುಲೈ 26ರಿಂದ 2021ರ ಜುಲೈ 26ರ ತನಕ 4ನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ರಾಜಭವನಕ್ಕೆ ತೆರಳಿದ ಬಿ. ಎಸ್. ಯಡಿಯೂರಪ್ಪ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ಮುಖ್ಯಮಂತ್ರಿಗಳ ನೇಮಕವಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.

ಯಡಿಯೂರಪ್ಪ ರಾಜೀನಾಮೆ ಬಳಿಕ ಕರ್ನಾಟಕ ರಾಜಕೀಯದ ಅಧ್ಯಾಯವೊಂದು ಪೂರ್ಣಗೊಂಡಿದೆ. ಬೂಕನಕೆರೆ ಮೂಲದ ಯಡಿಯೂರಪ್ಪ ರೈತ ಹೋರಾಟಗಳ ಮೂಲಕವೇ ವಿವಿಧ ಹುದ್ದೆಗಳನ್ನು ಪಡೆಯುತ್ತ ಬಂದು ಅಂತಿಮವಾಗಿ ರಾಜ್ಯವನ್ನು ಆಳಿದರು.

English summary
Karnataka chief minister B. S. Yediyurappa announces resignation on July 26, 2021. This not 1st time he is resigned for chief minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X