ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ

|
Google Oneindia Kannada News

ನವದೆಹಲಿ, ಡಿಸೆಂಬರ್ 11: ಕೊರೊನಾ ಸಾಂಕ್ರಾಮಿದಲ್ಲೇ ಮುಳುಗಿ ಹೋದ 2020ರ ವರ್ಷದಲ್ಲಿ ವಿಶ್ವದ ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿದ್ದವು. ಇದರಿಂದ ಆಟೋಮೊಬೈಲ್ ಕ್ಷೇತ್ರವೂ ಕೂಡ ಹೊರತಾಗಿಲ್ಲ. ದೇಶದ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ಪ್ರಮುಖ ವಾಹನ ತಯಾರಕಾ ಕಂಪನಿಗಳು ಶೂನ್ಯ ಮಾರಾಟವನ್ನು ದಾಖಲಿಸಿದವು.

ಆದರೆ ಲಾಕ್‌ಡೌನ್ ತೆರವಿನ ಬಳಿಕ ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನ ಆಕರ್ಷಿಸಿದವು. ಕೊರೊನಾ ನಡುವೆಯು ದ್ವಿತೀಯ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟದಲ್ಲಿ ಚೇತರಿಕೆ ಸಾಧಿಸಿತು. ಹಾಗಿದ್ದರೆ 2020 ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡ ಪ್ರಮುಖ ಕಂಪನಿಯ ಕಾರುಗಳು ಯಾವುವು ಎಂಬುದನ್ನು ಈ ಕೆಳಗೆ ನೋಡಿ.

ಹೋಂಡಾ ವರ್ಷಾಂತ್ಯದ ಆಫರ್: ಕಾರುಗಳ ಮೇಲೆ 2.5 ಲಕ್ಷ ರೂ. ತನಕ ಡಿಸ್ಕೌಂಟ್ಹೋಂಡಾ ವರ್ಷಾಂತ್ಯದ ಆಫರ್: ಕಾರುಗಳ ಮೇಲೆ 2.5 ಲಕ್ಷ ರೂ. ತನಕ ಡಿಸ್ಕೌಂಟ್

ಹುಂಡೈ ಕ್ರೆಟಾ ಹೊಸ ಮಾಡೆಲ್ ಕಾರು

ಹುಂಡೈ ಕ್ರೆಟಾ ಹೊಸ ಮಾಡೆಲ್ ಕಾರು

ಹುಂಡೈ ಮೋಟಾರ್ಸ್ ಈ ವರ್ಷ ತನ್ನ ಹೊಸ ಮಾದರಿಯ ಕ್ರೆಟಾ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ 1.15 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆಯಿತು.

ಕಂಪನಿಯು ಈಗಾಗಲೇ ಹೊಸ ಆವೃತ್ತಿಯ 58,000 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು 2015 ರಿಂದ ಒಟ್ಟಾರೆ ಮಾರಾಟವು 5.2 ಲಕ್ಷ ಯೂನಿಟ್‌ಗಳಷ್ಟಿದೆ. ಹುಂಡೈ ಎಸ್‌ಯುವಿಲ್ಲಿ ಈ ಕಾರಿನ ಮಾರಾಟ ಹೆಚ್ಚಿದ್ದು, ಕಾರುಗಳಲ್ಲಿ ನಾಯಕತ್ವದ ಸ್ಥಾನವನ್ನು ಮುಂದುವರಿಸಿದೆ.

ಕಿಯಾ ಸೆಲ್ಟೋಸ್ ಕಾರು

ಕಿಯಾ ಸೆಲ್ಟೋಸ್ ಕಾರು

ಕಿಯಾ ಮೋಟಾರ್ಸ್ ಇಂಡಿಯಾ, ಒಂದು ವರ್ಷದ ಮೈಲಿಗಲ್ಲನ್ನು ಆಚರಿಸಲು ಕಿಯಾ ಸೆಲ್ಟೋಸ್ ವಾರ್ಷಿಕೋತ್ಸವ ಆವೃತ್ತಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಸೀಮಿತ ಆವೃತ್ತಿ ಕಿಯಾ ಸೆಲ್ಟೋಸ್ ಪ್ರತ್ಯೇಕವಾಗಿ ಎಚ್‍ಟಿಎಕ್ಸ್ ಟ್ರಿಮ್‍ನಲ್ಲಿ ರೂ.13,75,000 (ಎಕ್ಸ್ ಶೋ ರೂಂ, ಪ್ಯಾನ್ ಇಂಡಿಯಾ) ಗಳ ಅತ್ಯಾಕರ್ಷಕ ಬೆಲೆಯಲ್ಲಿ ಪ್ರಾರಂಭವಾಗುತ್ತದೆ.

ನವೆಂಬರ್‌ನಲ್ಲಿ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಹೆಚ್ಚಳ: ಟಾಟಾ ಮೋಟಾರ್ಸ್ ಶೇ. 26ರಷ್ಟು ಏರಿಕೆನವೆಂಬರ್‌ನಲ್ಲಿ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಹೆಚ್ಚಳ: ಟಾಟಾ ಮೋಟಾರ್ಸ್ ಶೇ. 26ರಷ್ಟು ಏರಿಕೆ

ಕಿಯಾ ಸೆಲ್ಟೋಸ್ ವಾರ್ಷಿಕೋತ್ಸವದ ಆವೃತ್ತಿಯು ಸಿಲ್ವರ್ ಡಿಫ್ಯೂಸರ್ ರೆಕ್ಕೆಗಳನ್ನು ಹೊಂದಿರುವ ಟಸ್ಕ್ ಶೇಪ್ ಸ್ಕಿಡ್ ಪ್ಲೇಟ್, ಟ್ಯಾಂಗರಿನ್ ಫಾಗ್ ಲ್ಯಾಂಪ್ ಬೇಜಲ್‌, ಟ್ಯಾಂಗರಿನ್ ಸೆಂಟರ್ ಕ್ಯಾಪ್ನೊಂದಿಗೆ 17 ರಾವೆನ್ ಬ್ಲ್ಯಾಕ್ ಅಲಾಯ್ ವೀಲ್ಸ್, ಕಪ್ಪು ಬಣ್ಣದ ಏಕತಾನತೆಯ ಇಂಟೀರಿಯರ್ಸ್, ರಾವೆನ್ ಬ್ಲ್ಯಾಕ್ ಲೆದರ್ ಆಸನಗಳು ಸೇರಿದಂತೆ ಸಾಮಾನ್ಯ ಸೆಲ್ಟೋಗಳಿಗಿಂತ ಅನೇಕ ಬಾಹ್ಯ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಇದು ಹೆಚ್ಚು ಧೃಢ, ಸೊಗಸು ಮತ್ತು ವಿಶಿಷ್ಟವಾಗಿದೆ.

ಹೋಂಡಾ ಸಿಟಿ 2020

ಹೋಂಡಾ ಸಿಟಿ 2020

ಹೋಂಡಾ ಕಂಪನಿಯು ತನ್ನ ಜನಪ್ರಿಯ ಕಾರುಗಳಲ್ಲಿ ಒಂದಾದ ಹೋಂಡಾ ಸಿಟಿ 2020 ಮಾಡೆಲ್ ಅನ್ನು ಬಿಡುಗಡೆ ಮಾಡಿತು. ಹೋಂಡಾ ಸಿಟಿ 2020 ನಾಲ್ಕನೇ ತಲೆಮಾರಿನ ಪೆಟ್ರೋಲ್ ರೂಪಾಂತರವಾಗಿದೆ.

ಹೋಂಡಾ ಸಿಟಿ ಕಾರಿನ ಜೊತೆಗೆ ಹೋಂಡಾ ಸಿಆರ್-ವಿ, ಹೋಂಡಾ ಅಮೇಜ್ ಎಕ್ಸ್‌ಕ್ಲೋಸಿವ್ ಮಾಡೆಲ್, ಹೋಂಡಾ ಡಬ್ಲ್ಯುಆರ್-ವಿ ಎಕ್ಸ್‌ಕ್ಲೂಸಿವ್ ಮಾಡೆಲ್‌ಗಳು ಸೇರಿವೆ.

ಟೊಯೊಟಾ ಇನೊವಾ ಕ್ರಿಸ್ಟಾ

ಟೊಯೊಟಾ ಇನೊವಾ ಕ್ರಿಸ್ಟಾ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ಕಳೆದ ನವೆಂಬರ್ 24 ರಂದು ತನ್ನ ಹೊಸ ಇನ್ನೋವಾ ಕ್ರಿಸ್ಟಾವನ್ನು ಬಿಡುಗಡೆ ಮಾಡಿದೆ. ಜನಪ್ರಿಯ ಕಾರು ಆದ ಇನೋವಾ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ದುಬಾರಿ ಬೆಲೆಯಲ್ಲಿ ಬಿಡುಗಡೆಗೊಂಡಿದೆ.

2006ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಇನೋವಾ ಕಾರು 2016ರಲ್ಲಿ ಹೊಸ ಫೀಚರ್ಸ್‌ಗಳೊಂದಿಗೆ ಟೊಯೊಟೊ ಇನ್ನೊವಾ ಕ್ರಿಸ್ಟಾ ಬಿಡುಗಡೆಗೊಂಡಿತ್ತು. ಇದೀಗ 2021ರ ಮಾದರಿಯಲ್ಲಿ ಮತ್ತಷ್ಟು ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟೊಯೋಟಾ ಇನ್ನೋವಾ ಕ್ರಿಸ್ಟಾವನ್ನು 16.26 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ 24.33 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ ಬೆಲೆಗಳು) ಪ್ರಾರಂಭಿಸುವುದಾಗಿ ಘೋಷಿಸಿದೆ. ಹೊಸ ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಮಾದರಿಯು ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಫೀಚರ್ಸ್ ಅಳವಡಿಕೆ ನಂತರ ಕಾರಿನ ಬೆಲೆಯು ಮಾದರಿಗಳಿಗೆ ಅನುಗುಣವಾಗಿ 60 ಸಾವಿರದಿಂದ 70 ಸಾವಿರ ರೂಪಾಯಿಯಷ್ಟು ಹೆಚ್ಚುವರಿ ಬೆಲೆ ನೀಡಬೇಕಾಗುತ್ತದೆ.

ನಿಸಾನ್ ಮ್ಯಾಗ್ನೈಟ್ ಎಸ್‌ಯುವಿ

ನಿಸಾನ್ ಮ್ಯಾಗ್ನೈಟ್ ಎಸ್‌ಯುವಿ

ನಿಸಾನ್ ಇಂಡಿಯಾ ಇತ್ತೀಚೆಗಷ್ಟೇ ತನ್ನ ಬಹುನಿರೀಕ್ಷಿತ ಹೊಚ್ಚ ಹೊಸದಾದ ನಿಸಾನ್ ಮ್ಯಾಗ್ನೈಟ್ ನ ಬೆಲೆಯನ್ನು ಘೋಷಣೆ ಮಾಡಿದೆ ಮತ್ತು ದೇಶಾದ್ಯಂತ ಇರುವ ನಿಸಾನ್ ಡೀಲರ್ ಶಿಪ್ ಗಳಲ್ಲಿ ಬುಕಿಂಗ್ ಆರಂಭವನ್ನೂ ಪ್ರಕಟಿಸಿದೆ. ಇದಲ್ಲದೇ, ವೆಬ್‌ಸೈಟ್‌ನಲ್ಲಿಯೂ ಬುಕಿಂಗ್ ಆರಂಭಿಸಿದೆ.

ದೊಡ್ಡ, ಬೋಲ್ಡ್, ಸುಂದರ ಮತ್ತು ಚೆರಿಸ್ಮ್ಯಾಟಿಕ್ ಎಸ್ ಯುವಿ ಆಗಿರುವ ಈ ನಿಸಾನ್ ಮ್ಯಾಗ್ನೈಟ್ ವಿಶೇಷ ಆರಂಭಿಕ ಬೆಲೆಯಾದ 4,99,000 (ಎಕ್ಸ್-ಶೋರೂಂ) ರೂಪಾಯಿಗಳಲ್ಲಿ 2020 ರ ಡಿಸೆಂಬರ್ 31 ರವರೆಗೆ ಲಭ್ಯವಿದೆ.

ಈ ವರ್ಷ ಅತ್ಯಂತ ಆಕರ್ಷಕ ಕಾರುಗಳಲ್ಲಿ ಇದು ಒಂದಾಗಿದ್ದು, ಗ್ರಾಹಕರಿಗೆ ಉತ್ತಮವಾದ ಅನುಭವವಗಳನ್ನು ನೀಡುವ ನಿಟ್ಟಿನಲ್ಲಿ ನಿಸಾನ್ ಈ ಎಸ್ ಯುವಿ ತಯಾರಿಕೆಯಲ್ಲಿಯೂ ಆವಿಷ್ಕಾರಗಳನ್ನು ಮುಂದುವರಿಸಿಕೊಂಡು ಬಂದಿದೆ. ನಿಸಾನ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದ್ದು, ಎಕ್ಸ್-ಟ್ರಾನಿಕ್ ಸಿವಿಟಿ, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ ಮತ್ತು ನಿಸಾನ್ ಕನೆಕ್ಟ್ ನಂತಹ ಎಲ್ಲಾ ಮಾದರಿಯ ಶ್ರೇಣಿಗಳಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬರುತ್ತಿದೆ. ನಿಸಾನ್ ಮ್ಯಾಗ್ನೈಟ್ ಅನ್ನು ಪ್ರತಿಯೊಂದು ಹಂತದಲ್ಲಿಯೂ ತುಂಬಾ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಭಾರತೀಯ ಗ್ರಾಹಕರ ನಿರೀಕ್ಷೆ ಮತ್ತು ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಲಾಗಿದೆ

ನಿಸಾನ್ ಮ್ಯಾಗ್ನೈಟ್ ವಿವಿಧ ಮಾಡೆಲ್‌ನ ಬೆಲೆ

ನಿಸಾನ್ ಮ್ಯಾಗ್ನೈಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.35 ಲಕ್ಷ ಬೆಲೆ ಪಡೆದುಕೊಂಡಿದೆ. XE, XL, XV ಪ್ರೀಮಿಯಂ ಮಾದರಿಗಳನ್ನು ಬಿಡುಗಡೆ ಮಾಡಿದೆ.

1.0 ಲೀ. ಪೆಟ್ರೋಲ್: ‍‍XE 4,99,000 ರೂಪಾಯಿ

XL 5,99,000 ರೂಪಾಯಿ

XV 6,68,000 ರೂಪಾಯಿ

XV ಪ್ರೀಮಿಯಂ 7,55,000 ರೂಪಾಯಿ

1.0 ಲೀ. ಟರ್ಬೋ ಪೆಟ್ರೋಲ್:

XL 6,99,000 ರೂಪಾಯಿ

XV 7,68,000 ರೂಪಾಯಿ

XV ಪ್ರೀಮಿಯಂ 8,45,000 ರೂಪಾಯಿ

1.0 ಲೀ. ಟರ್ಬೋ ಪೆಟ್ರೋಲ್ ಸಿವಿಟಿ:

XL 7,89,000 ರೂಪಾಯಿ XV 8.58,000 ರೂಪಾಯಿ XV ಪ್ರೀಮಿಯಂ 9,35,000 ರೂಪಾಯಿ

ಟೊಯೊಟಾ ಅರ್ಬನ್ ಕ್ರೂಸರ್ ಎಸ್‌ಯುವಿ

ಟೊಯೊಟಾ ಅರ್ಬನ್ ಕ್ರೂಸರ್ ಎಸ್‌ಯುವಿ

ಟೊಯೊಟಾ ತನ್ನ ಅರ್ಬನ್ ಕ್ರೂಸರ್ ಎಸ್‌ಯುವಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿತು. ಹೊಸ ಅರ್ಬನ್ ಕ್ರೂಸರ್ ಕಾರು ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಎಡ್ಎಕ್ಸ್ಐ ಪ್ಲಸ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 1.5 ಪೆಟ್ರೋಲ್ ಹೈಬ್ರಿಡ್ ಮಾದರಿಯನ್ನು ಹೊಂದಿರುವ ಹೊಸ ಕಾರು ಮೂಲ ಕಾರಿನ ಬೆಲೆಗಿಂತಲೂ ತುಸು ಹೆಚ್ಚಿದೆ.

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಈ ವರ್ಷ ಯಾವುದೇ ಪ್ರಮುಖ ಕಾರುಗಳನ್ನು ಬಿಡುಗಡೆಯನ್ನು ಹೊಂದಿಲ್ಲ. ಆದರೆ ಕಂಪನಿಯು ಮಾರುತಿ ಸುಜುಕಿ ಸೆಲೆರಿಯೊ ಎಸ್-ಸಿಎನ್‌ಜಿ ಮಾಡೆಲ್‌ಗಳನ್ನು, ಮಾರುತಿ ಸುಜುಕಿ 2020 ಎಸ್-ಕ್ರಾಸ್ , 1.5 ಲೀಟರ್ 15 ಬಿ ಎಂಜಿನ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಲಿಮಿಟೆಡ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದೆ.

English summary
Current year Many auto Sectory bounced back with new launches, facelift versions and many more. Here's looking at major auto launches in India in 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X