ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಚೀನಾದಲ್ಲದ ಸ್ಮಾರ್ಟ್‌ಫೋನ್‌ಗಳು!

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಭಾರತ-ಚೀನಾ ನಡುವಿನ ಗಡಿ ವಿವಾದವು ಹೆಚ್ಚು ಉಲ್ಬಣಗೊಳ್ಳುತ್ತಾ ಸಾಗಿದಂತೆ, ದೇಶದಲ್ಲಿ ಚೀನಿ ಉತ್ಪನ್ನಗಳ ನಿಷೇಧಿಸುವಂತೆ ದೊಡ್ಡ ಆಂದೋಲನವೇ ನಡೆದು ಹೋಗಿದೆ. ಚೀನಾ ವಸ್ತುಗಳನ್ನು ಬಳಸಬೇಡಿ, ದೇಶಿ ಉತ್ಪನ್ನಗಳನ್ನು ಬಳಸಿ ಎಂದು ಅನೇಕ ನಾಯಕರು ಕರೆ ಕೊಟ್ಟಿದ್ದಾರೆ.

ಅದರಲ್ಲೂ ಕೇಂದ್ರ ಸರ್ಕಾರ ಚೀನಾದ ನೂರಾರು ಆ್ಯಪ್‌ಗಳನ್ನು ನಿಷೇಧಿಸಿದ ಮೇಲಂತೂ ಅನೇಕರು ಚೀನಿ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಿದ್ದಾರೆ. ಇನ್ನೂ ಅನೇಕರು ಚೀನಿ ವಸ್ತುಗಳನ್ನು ಬಳಸುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಹೀಗಿರುವಾಗ ಭಾರತೀಯರ ಈ ದೃಢ ಹೆಜ್ಜೆಯು ಚೀನಾದ ಬಹುದೊಡ್ಡ ಭಾರತದ ಮಾರುಕಟ್ಟೆಗೆ ಹೊಡೆತ ನೀಡಿರುವುದು ಸುಳ್ಳಲ್ಲ.

600 ಮೆಗಾಪಿಕ್ಸೆಲ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಅಭಿವೃದ್ಧಿ ಪಡಿಸುತ್ತಿರುವ ಸ್ಯಾಮ್‌ಸಂಗ್600 ಮೆಗಾಪಿಕ್ಸೆಲ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಅಭಿವೃದ್ಧಿ ಪಡಿಸುತ್ತಿರುವ ಸ್ಯಾಮ್‌ಸಂಗ್

ಅದ್ರಲ್ಲೂ ಪ್ರಮುಖವಾಗಿ ಚೀನಾದ ಮೊಬೈಲ್‌ಗಳು ಭಾರತದಲ್ಲಿ ಸಾಕಷ್ಟು ಅಗಾಧವಾದ ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿತ್ತು. ಭಾರತವು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರ ಪರಿಣಾಮ ಚೀನಾದ ಅನೇಕ ಗುಣಮಟ್ಟವಲ್ಲದ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಾಗದೆ ಹಾಗೆಯೇ ಉಳಿದಿವೆ. ಇದರ ನಡುವೆ 2020ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಚೀನಾದಲ್ಲದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದು ಈ ಕೆಳಗಿದೆ ನೋಡಿ.

ಲಾವಾ

ಲಾವಾ

ಮೇಡ್ ಇನ್ ಇಂಡಿಯಾ ಲಾವಾ ಈ ವರ್ಷದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬಜೆಟ್ ಶ್ರೇಣಿಯಲ್ಲಿನ ಸ್ಮಾರ್ಟ್‌ಫೋನ್‌ ಆಗಿದ್ದು ಸ್ವಲ್ಪ ಹೆಚ್ಚು ಕೈಗೆಟುಕುವ ವ್ಯಾಪ್ತಿಗೆ ಒಳಗೊಂಡಿದೆ. ಲಾವಾ ಫ್ಲಿಪ್, ಲಾವಾ ಪಲ್ಸ್, ಲಾವಾ ಝಡ್ 66, ಲಾವಾ ಝಡ್ 61, ಲಾವಾ ಝಡ್ 61 ಪ್ರೊ ಈ ವರ್ಷ ಬಿಡುಗಡೆಗೊಂಡ ಸ್ಮಾರ್ಟ್‌ಫೋನ್‌ಗಳಾಗಿವೆ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ದೈತ್ಯ ಕಂಪನಿಯಾದ ಸ್ಯಾಮ್‌ಸಂಗ್ ಮೊಬೈಲ್‌ ವಿಶ್ವದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆ ಜಾಲವನ್ನು ಹೊಂದಿದ್ದು, ಭಾರತದಲ್ಲೂ ತನ್ನದೇ ಪ್ರಾಬಲ್ಯವನ್ನು ಹೊಂದಿದೆ.

ಈ ವರ್ಷವು ಸ್ಯಾಮ್‌ಸಂಗ್ ಅತ್ಯಾಕರ್ಷಕ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ಯಾಲಕ್ಸಿ ಎ 12, ಗ್ಯಾಲಕ್ಸಿ ಎ 02 ಎಸ್, ಗ್ಯಾಲಕ್ಸಿ ಎ 021, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಫ್ಯಾನ್ ಎಡಿಷನ್, ಗ್ಯಾಲಕ್ಸಿ ಎಂ 51, ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 2, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 31ಎಸ್ ಸೇರಿವೆ.

ಲಾಕ್‌ಡೌನ್ ಕಾಲ: ಏಪ್ರಿಲ್‌ನಿಂದ ನಿತ್ಯದ ಸ್ಮಾರ್ಟ್‌ಫೋನ್ ಬಳಕೆ ಶೇ.25ರಷ್ಟು ಹೆಚ್ಚಳಲಾಕ್‌ಡೌನ್ ಕಾಲ: ಏಪ್ರಿಲ್‌ನಿಂದ ನಿತ್ಯದ ಸ್ಮಾರ್ಟ್‌ಫೋನ್ ಬಳಕೆ ಶೇ.25ರಷ್ಟು ಹೆಚ್ಚಳ

ಮೈಕ್ರೋಮ್ಯಾಕ್ಸ್‌

ಮೈಕ್ರೋಮ್ಯಾಕ್ಸ್‌

ದೇಶೀಯ ಮೊಬೈಲ್ ಕಂಪನಿಯಾದ ಮೈಕ್ರೋಮ್ಯಾಕ್ಸ್‌ ಈ ವರ್ಷದ ನವೆಂಬರ್‌ನಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮರುಪ್ರವೇಶ ಮಾಡಿದೆ.

ಮೈಕ್ರೊಮ್ಯಾಕ್ಸ್ ಹೊಸ ಇನ್ ಸರಣಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು ಐಎನ್ 1 ಬಿ ಮತ್ತು ಐಎನ್ ನೋಟ್ 1 ಆಗಿದೆ. ಐಎನ್ 1 ಬಿ 2 + 32 ಮಾಡೆಲ್‌ಗೆ 6,999 ರೂಪಾಯಿಗಳಾಗಿದ್ದು, 4 + 64 ಮಾಡೆಲ್‌ಗೆ 7,999 ರೂಗಳಲ್ಲಿ ಲಭ್ಯವಿದೆ.

ಇನ್ನು ಮೈಕ್ರೋಮ್ಯಾಕ್ಸ್‌ನ ಎರಡನೇ ಕೊಡುಗೆಯಾದ IN 1B 10,999 ರೂಗಳಲ್ಲಿ ಲಭ್ಯವಿದೆ. ಇದರ ಜೊತೆಗೆ 4 + 64 ಮಾಡೆಲ್‌ಗೆ 12499 ರೂಪಾಯಿನಷ್ಟಿದೆ.

ನೊಕಿಯಾ C3

ನೊಕಿಯಾ C3

ಒಂದು ಕಾಲದಲ್ಲಿ ಭಾರತದ ನಂಬರ್ ಒನ್ ಮೊಬೈಲ್ ಆಗಿದ್ದ ನೋಕಿಯಾ ಭಾರತದಲ್ಲಿ ಸದ್ಯ ಅಷ್ಟಾಗಿ ಮಾರುಕಟ್ಟೆ ಪ್ರಭಾವ ಹೊಂದಿರದಿದ್ದರೂ, ಫೋನ್‌ಗಳ ತಯಾರಕರಾದ ಫಿನ್ನಿಷ್ ಮೊಬೈಲ್ ಫೋನ್ ಕಂಪನಿ ಎಚ್‌ಎಂಡಿ ಗ್ಲೋಬಲ್ ಸಹ ಈ ವರ್ಷ ಭಾರತದಲ್ಲಿ ಒಂದೆರಡು ಸ್ಮಾರ್ಟ್‌ಫೋನ್ ಬಿಡುಗಡೆಗಳನ್ನು ಹೊಂದಿದೆ.


ನೋಕಿಯಾ 2.4, ನೋಕಿಯಾ 5310 ಫೀಚರ್ ಫೋನ್, ನೋಕಿಯಾ 6.2 ಮೊಬೈಲ್ 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ ಕೆಲವು ಪ್ರಮುಖ ಫೋನ್‌ಗಳಾಗಿವೆ.

ಆ್ಯಪಲ್

ಆ್ಯಪಲ್

ಆ್ಯಪಲ್ ಮೊಬೈಲ್ ಪ್ರಿಯರಿಗೂ ಈ ವರ್ಷ ಕಂಪನಿಯು ಮೊಬೈಲ್ ಕೊಡುಗೆಗಳನ್ನು ನೀಡಿದೆ. ಆ್ಯಪಲ್ ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿತು.

English summary
Here is looking major non-Chinese smartphone brands that launched their smartphones in India in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X