• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು

|

ಕಳೆದ ಸುಮಾರು ಒಂದು ವರ್ಷದ ಅವಧಿಯಲ್ಲಿ ಜಗತ್ತು ಸಾಕಷ್ಟು ವಿಶೇಷತೆಗಳನ್ನು ಕಂಡಿದೆ. ಅದರಲ್ಲಿ ಸಂತಸ-ಸಂಭ್ರಮಗಳಿಗೆ ಹಾಗೆಯೇ ನೋವು-ಕಹಿಯ ಘಟನಾವಳಿಗಳೂ ಇವೆ.

ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾದ ಅನೇಕ ಸ್ಥಿತ್ಯಂತರಗಳು, ಹೊಸ ಬೆಳವಣಿಗೆಗಳಿಗೆ 2018 ಸಾಕ್ಷಿಯಾಗಿದೆ. ಹಾಗೆಯೇ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳು ನಡೆದಿವೆ.

ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು

ಎಂದಿನಂತೆ ಈ ವರ್ಷವೂ ಹಿನ್ನೋಟ ಹರಿಸಿದರೆ ಕಾಣುವುದು ಹೆಚ್ಚಾಗಿ ಸಾವಿನ ಸರಮಾಲೆಯೇ. ನೈಸರ್ಗಿಕ ವಿಕೋಪಗಳು, ಅಪಘಾತಗಳು, ಹತ್ಯಾಕಾಂಡ ಮುಂತಾದವು ಲೆಕ್ಕವಿಲ್ಲದಷ್ಟು ಜನರ ಬಲಿ ತೆಗೆದುಕೊಂಡಿದೆ.

ಅಫ್ಘಾನಿಸ್ತಾನ, ಅಮೆರಿಕ, ಭಾರತ, ಪಾಕಿಸ್ತಾನ, ಫ್ರಾನ್ಸ್, ರಷ್ಯಾ, ಸಿರಿಯಾ, ಇರಾಕ್, ಇರಾನ್ ಹೀಗೆ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿಯೂ ಒಂದಲ್ಲ ಒಂದು ರೀತಯ ಭಯೋತ್ಪಾದನಾ ದಾಳಿಗಳು ನಡೆಯುತ್ತಲೇ ಇವೆ. ಭಯೋತ್ಪಾದನೆಗೆ ಕಡಿವಾಣ ಹಾಕುವುದು ಈ ವರ್ಷವೂ ಸಾಧ್ಯವಾಗಿಲ್ಲ. ಮಿಗಿಲಾಗಿ ಭಯೋತ್ಪಾದಕರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ಇತ್ತೀಚೆಗೆ ವರದಿಯೊಂದು ಹೇಳಿತ್ತು.

ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ

ಇನ್ನು ರಾಜಕೀಯವಾಗಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ರಾಜಕೀಯ ಸಂಘರ್ಷಗಳು ನಡೆದಿವೆ. ಡಾಲರ್ ಮೌಲ್ಯ ಏರಿಕೆ, ಕಚ್ಚಾ ತೈಲದ ಬೆಲೆ ಹೆಚ್ಚಳದಂತಹ ಸಂಗತಿಗಳು ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದ ವರ್ಷವಿದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ 2018ರ ಅವಧಿಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೇಲಿನ ಕಿರುನೋಟ ಇಲ್ಲಿದೆ.

ದಕ್ಷಿಣ ಆಫ್ರಿಕಾ ಗಣಿ ಘಟನೆ

ದಕ್ಷಿಣ ಆಫ್ರಿಕಾ ಗಣಿ ಘಟನೆ

ದಕ್ಷಿಣ ಆಫ್ರಿಕಾದ ಬೀಟ್ರೆಕ್ಸ್ ಚಿನ್ನದ ಗಣಿಯಲ್ಲಿ ಫೆಬ್ರುವರಿಯಲ್ಲಿ ವಿದ್ಯುತ್ ಕಡಿತ ಸಂಭವಿಸಿ ಸುಮಾರು 950 ಗಣಿಕಾರ್ಮಿಕರು ಒಂದು ದಿನವಿಡೀ ಒಳಭಾಗದಲ್ಲಿ ಸಿಲುಕಿಕೊಂಡ ಘಟನೆ ನಡೆದಿತ್ತು. ಸುರಂಗದಲ್ಲಿ 3 ಸಾವಿರ ಅಡಿಗೂ ಒಳಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದ ಜನರು ಹೊರಗೆ ಬರಲು ಅವಕಾಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಗಾಳಿ, ನೀರು, ಆಹಾರವಿಲ್ಲದೆ ಒಂದು ದಿನ ಕಳೆದಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ತರುವಲ್ಲಿ ಕಾರ್ಯಪಡೆ ಯಶಸ್ವಿಯಾಗಿತ್ತು. ಆದರೆ, ಈ ಘಟನೆ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿತ್ತು.

ಫೇಸ್ ಬುಕ್ ದತ್ತಾಂಶ ಸೋರಿಕೆ

ಫೇಸ್ ಬುಕ್ ದತ್ತಾಂಶ ಸೋರಿಕೆ

ಫೇಸ್ ಬುಕ್ ದತ್ತಾಂಶಗಳ ಸೋರಿಕೆ ಪ್ರಕರಣ ಈ ವರ್ಷ ಜನರನ್ನು ತೀವ್ರ ಆತಂಕಕ್ಕೆ ದೂಡಿದ ಘಟನೆಗಳಲ್ಲಿ ಒಂದು. ಸುಮಾರು 50 ಮಿಲಿಯನ್ ಜನರ ಮಾಹಿತಿ ಕೇಂಬ್ರಿಡ್ಜ್ ಅನಾಲಿಟಿಕಾ ಮೂಲಕ ಸೋರಿಕೆಯಾಗಿದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ತಿಳಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಮತದಾರರ ಮೃಲೆ ಪ್ರಭಾವ ಬೀರಲು ರಾಜಕೀಯ ಪಕ್ಷಗಳು ಕೇಂಬ್ರಿಡ್ಜ್ ಅನಾಲಿಟಿಕಾ ಮೂಲಕ ಸಹಾಯ ಪಡೆದುಕೊಂಡಿದ್ದವು ಎನ್ನಲಾಗಿದೆ.

2018 ಅನ್ನು ಬೆಚ್ಚಿ ಬೀಳಿಸಿದ ಆ ನಿಗೂಢ ಪ್ರಕರಣಗಳು

ಟ್ರಂಪ್-ಕಿಮ್ ಭೇಟಿ

ಟ್ರಂಪ್-ಕಿಮ್ ಭೇಟಿ

ಬದ್ಧ ವೈರಿಗಳಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಮೊದಲ ಬಾರಿಗೆ ಭೇಟಿಯಾಗಿದ್ದು ಈ ವರ್ಷದ ಐತಿಹಾಸಿಕ ಘಟನೆಗಳಲ್ಲಿ ಒಂದು. ಸಿಂಗಪುರದ ಸೆಂತೋಸಾ ದ್ವೀಪದಲ್ಲಿ ಜೂನ್ 12ರಂದು ನಡೆದ ಶೃಂಗಸಭೆಯಲ್ಲಿ ಭಾಗವಹಿಸಲು ಬಂದ ಉಭಯ ಮುಖಂಡರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಕೊರಿಯಾ ದ್ವೀಪದಲ್ಲಿ ಅಣ್ವಸ್ತ್ರ ಸಂಪೂರ್ಣ ನಿಯಂತ್ರಿಸುವ ಒಪ್ಪಂದಕ್ಕೆ ಇಬ್ಬರೂ ಸಹಿ ಹಾಕಿದರು.

ಗುಹೆಯಿಂದ ಬಂದ ಬಾಲಕರು

ಗುಹೆಯಿಂದ ಬಂದ ಬಾಲಕರು

ಇಡೀ ಜಗತ್ತಿನ ಗಮನ ಸೆಳೆದ ಘಟನೆಗಳಲ್ಲಿ ಥಾಯ್ಲೆಂಡ್‌ನ 'ಗುಹೆ' ಕಾರ್ಯಾಚರಣೆ ಸಾಹಸವೂ ಒಂದು. ಉತ್ತರ ಥಾಯ್ಲೆಂಡ್‌ನ ವೈಲ್ಡ್ ಬಿಯರ್ ಎಂಬ ಶಾಲಾ ಬಾಲಕರ ಫುಟ್ಬಾಲ್ ತಂಡ ಸ್ನೇಹಿತನ ಜನ್ಮದಿನಾಚರಣೆಗಾಗಿ ಥಾಮ್ ಲುಂಗ್ ಎಂಬ ಗುಹೆಯೊಳಗೆ ಹೊಕ್ಕಿದ್ದವರು ಅದರೊಳಗೆ ಸಿಲುಕಿದ್ದರು. ಜೋರಾಗಿ ಸುರಿದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಹೊರಗೆ ಬರಲಾಗದ ಸ್ಥಿತಿಯಲ್ಲಿದ್ದರು. ಅವರನ್ನು ಹುಡುಕೊಂಡು ಬಂದ ಕೋಚ್ ಕೂಡ ಗುಹೆಯೊಳಗೆ ಸಿಲುಕಿಕೊಂಡಿದ್ದರು. 12 ಬಾಲಕರು ಮತ್ತು ಅವರ ಕೋಚ್‌ಅನ್ನು ವಾರಗಟ್ಟಲೆ ಸತತ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿತ್ತು.

2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು

ಬ್ರೆಕ್ಸಿಟ್ ಪ್ರಕ್ರಿಯೆಗೆ ಅಂತಿಮ ಗೆರೆ

ಬ್ರೆಕ್ಸಿಟ್ ಪ್ರಕ್ರಿಯೆಗೆ ಅಂತಿಮ ಗೆರೆ

ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಜನಾದೇಶ ಹೊರಬಿದ್ದು 17 ತಿಂಗಳ ಬಳಿಕ ಬ್ರಿಟನ್, ಅಧಿಕೃತವಾಗಿ 2019ರ ಮಾರ್ಚ್‌ ಬಳಿಕ ಸಂಪೂರ್ಣವಾಗಿ ಒಕ್ಕೂಟದಿಂದ ಬೇರ್ಪಡುವ ನಿರ್ಧಾರಕ್ಕೆ ನವೆಂಬರ್ 25ರಂದು ಒಕ್ಕೂಟ ಮತ್ತು ಬ್ರಿಟನ್ ಪರಸ್ಪರ ಒಪ್ಪಿಗೆ ಸೂಚಿಸಿದವು.

ಆದರೆ ಡಿಸೆಂಬರ್ 10ರಂದು ಸಂಸತ್‌ನಲ್ಲಿ ಈ ಬಗ್ಗೆ ಮತಕ್ಕೆ ಹಾಕುವ ಪ್ರಕ್ರಿಯೆ ತಿರಸ್ಕಾರವಾಗಲಿದೆ ಎಂಬುದನ್ನು ಅರಿತಿದ್ದ ಬ್ರಿಟನ್ ಪ್ರಧಾನಿ ತೆರೇಸಾ ಮೇ, ಅದನ್ನು ಮುಂದೂಡಿದರು. ಡಿಸೆಂಬರ್ 12ರಂದು ಪಕ್ಷದ ಒಳಗಿನ ಅವಿಶ್ವಾಸ ಮತದಲ್ಲಿ ತೆರೇಸಾ ಜಯಗಳಿಸಿದರು.

ಫ್ರಾನ್ಸ್ ನವ ಕ್ರಾಂತಿ

ಫ್ರಾನ್ಸ್ ನವ ಕ್ರಾಂತಿ

1789ರಲ್ಲಿ ನಡೆದ ಫ್ರೆಂಚ್ ಕ್ರಾಂತಿ ಅನೇಕ ದೇಶಗಳಲ್ಲಿನ ಕ್ರಾಂತಿಗಳಿಗೆ ಪ್ರೇರಣೆ ನೀಡಿದ ಘಟನೆ. ಈ ವರ್ಷದ ನವೆಂಬರ್ 17ರಂದು ಮತ್ತೊಂದು ಹೊಸ ಕ್ರಾಂತಿಗೆ ಫ್ರಾನ್ಸ್ ಸಾಕ್ಷಿಯಾಯಿತು.

ತೈಲ ಬೆಲೆ ಏರಿಕೆ ಮತ್ತು ಜೀವನೋಪಾಯದ ವೆಚ್ಚ ಹೆಚ್ಚಳವನ್ನು ವಿರೋಧಿ ದೇಶದಾದ್ಯಂತ ಆರಂಭವಾದ ಪ್ರತಿಭಟನೆ, ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಸರ್ಕಾರದ ನೀತಿಗಳ ವಿರುದ್ಧದ ಬೃಹತ್ ಚಳವಳಿಯಾಗಿ ಬೆಳೆಯಿತು.

ಪ್ರತಿಭಟನಾಕಾರರು ಹಳದಿ ಬಣ್ಣದ ಜಾಕೆಟ್ ಧರಿಸಿ ಬೀದಿಗಿಳಿದ ಪರಿಣಾಮ, ಪ್ರತಿಭಟನೆಗೆ 'ಎಲ್ಲೋ ವೆಸ್ಟ್' ಎಂಬ ಹೆಸರು ಬಂದಿತು. ಈ ಗಲಾಟೆ, ಪ್ಯಾರಿಸ್‌ನಲ್ಲಿ ದಂಗೆ ಮತ್ತು ಲೂಟಿಗೂ ಕಾರಣವಾಯಿತು. ಭಾರಿ ಪ್ರತಿಭಟನೆಯ ಬಳಿಕ ಸರ್ಕಾರ ಉದ್ದೇಶಿತ ತೈಲ ತೆರಿಗೆಯನ್ನು ಕೈಬಿಟ್ಟಿತು. ಜೊತೆಗೆ ಕನಿಷ್ಠ ಕೂಲಿ ಹೆಚ್ಚಳದ ಭರವಸೆ ಮೂಲಕ ಮ್ಯಾಕ್ರಾನ್, ಪ್ರತಿಭಟನೆಯ ಕಾವನ್ನು ತಣ್ಣಗಾಗಿಸಿದರು.

ಒಡಲ ಸುಟ್ಟ ಬೆಂಕಿ

ಒಡಲ ಸುಟ್ಟ ಬೆಂಕಿ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎರಡು ವಾರ ಕಾಡು, ಪಟ್ಟಣಗಳನ್ನು ಸುಟ್ಟ ಕಾಳ್ಗಿಚ್ಚು, ಈ ವರ್ಷದ ಅತ್ಯಂತ ಭೀಕರ ಅಗ್ನಿ ದುರಂತ. ಎರಡು ವಾರಗಳ ಕಾಲ ದಗದಗಿಸಿದ ಕಿಚ್ಚಿಗೆ 85 ಮಂದಿ ಪ್ರಾಣ ಕಳೆದುಕೊಂಡರು. 2018ರ ನವೆಂಬರ್ ಈ ವರ್ಷದ ನಾಲ್ಕನೆಯ ಅತ್ಯಂತ ಧಗೆಯ ತಿಂಗಳು ಎಂದು ಅಮೆರಿಕದ ಹವಾಮಾನ ಇಲಾಖೆ ಹೇಳಿತು.

ಅಮೆರಿಕದ ಮಧ್ಯಂತರ ಚುನಾವಣೆ

ಅಮೆರಿಕದ ಮಧ್ಯಂತರ ಚುನಾವಣೆ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಳಿಕ ನವೆಂಬರ್‌ನಲ್ಲಿ ನಡೆದ ಮಧ್ಯಂತರ ಚುನಾವಣೆ ಮಹತ್ವ ಪಡೆದಿತ್ತು. ನವೆಂಬರ್‌ 6ರಂದು ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಜನಪ್ರತಿನಿಧಿ ಸಭೆಯ ಮೇಲೆ ನಿಯಂತ್ರಣ ಪಡೆದುಕೊಂಡರೆ, ರಿಪಬ್ಲಿಕನ್ ಪಕ್ಷವು ಸೆನೆಟ್‌ನಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡಿತು.

ಆದರೆ, ಚುನಾವಣಾ ಪ್ರಚಾರದ ಕೊನೆಯ ದಿನ ಪಿಟ್ಸ್ ಬರ್ಗ್‌ನಲ್ಲಿ ನಡೆದ ಯಹೂದಿ ವಿರೋಧಿ ದಾಳಿಯಲ್ಲಿ 11 ಮಂದಿ ಬಲಿಯಾದರು. ಇದರ ಜೊತೆಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಿಲರಿ ಕ್ಲಿಂಟನ್ ಅವರ ನಿವಾಸದ ಬಳಿ ಬಾಂಬ್ ಪತ್ತೆಯಾಗಿದ್ದವು.

ಸೌದಿಯಲ್ಲಿ ಪತ್ರಕರ್ತನ ಹತ್ಯೆ

ಸೌದಿಯಲ್ಲಿ ಪತ್ರಕರ್ತನ ಹತ್ಯೆ

ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯ ವರದಿಗಾರನಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೊಗ್ಗಿ, ಇಸ್ತಾನ್‌ಬುಲ್‌ ಕಾನ್ಸುಲೇಟ್‌ ಒಳಗೆ ಪ್ರವೇಶಿಸಿದ್ದವರು ಮತ್ತೆ ಜೀವಂತ ಕಾಣಿಸಲೇ ಇಲ್ಲ.

ಕಾನ್ಸುಲೇಟ್‌ನಲ್ಲಿ ಜಗಳ ನಡೆದು ಖಶೊಗ್ಗಿ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಎರಡು ವಾರಗಳ ಬಳಿಕ ರಿಯಾದ್ ಒಪ್ಪಿಕೊಂಡಿತ್ತು. ಇದು ಅಮೆರಿಕ ಮತ್ತು ಸೌದಿ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಯಿತು. ಖಶೊಗ್ಗಿ ಅವರ ಹತ್ಯೆ ಬಳಿಕ ಅಂಗಗಳನ್ನು ಛೇದಿಸಿ ಹೊರಕ್ಕೆ ಸಾಗಿಸಲಾಗಿತ್ತು ಎನ್ನುವುದು ಬಹಿರಂಗವಾಯಿತು.

ಸಿರಿಯಾದ ಸಂಘರ್ಷ

ಸಿರಿಯಾದ ಸಂಘರ್ಷ

ಸಿರಿಯಾದ ಸೇನೆಯು ಎಲ್ಲ ಆಡಳಿತ ವಿರೋಧಿ ಸಂಘಟನೆಗಳನ್ನು ಪೂರ್ವ ಘೋಟಾದಿಂದ ಹೊರಹಾಕಿದ್ದಾಗಿ ಏಪ್ರಿಲ್‌ನಲ್ಲಿ ಹೇಳಿಕೊಂಡಿತು. ಎರಡು ತಿಂಗಳ ಕಾಲ ನಡೆದ ತೀವ್ರ ಕಾದಾಟಗಳಲ್ಲಿ 1,700 ಮಂದಿ ಬಲಿಯಾಗಿದ್ದರು.

2011ರಲ್ಲಿ ಆರಂಭವಾದ ಸಂಘರ್ಷ ಇಡೀ ದೇಶದಲ್ಲಿ ಕ್ಷೋಭೆಗೆ ಕಾರಣವಾಗಿತ್ತು. ಅದನ್ನು ಹತೋಟಿಗೆ ತರಲು ಸತತ ಪ್ರಯತ್ನ ಮಾಡಿದ್ದ ಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವು ಇದಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Year end special: 2018 is reaching its end. Many good and bad and also interesting things happened in this one year of period. Here is 10 big events happened in 2018 around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more