ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017 ವರ್ಷದ ಹಿನ್ನೋಟ: ರಾಜ್ಯದಲ್ಲಿ ಸುದ್ದಿಯಾದ 5 ಮಾನಿನಿಯರು

|
Google Oneindia Kannada News

2017... ಹಲವರ ಪಾಲಿಗೆ ಸಿಹಿಯಾದರೆ, ಮತ್ತಷ್ಟು ಜನರ ಪಾಲಿಗೆ ಕಹಿ. ಆದರೆ ಕರ್ನಾಟಕದಲ್ಲಿ ಮಾತ್ರ 2017 ರಲ್ಲಿ ಮಹಿಳಾ ಪರ್ವ ಆರಂಭವಾಗಿತ್ತು. ಕರ್ನಾಟಕದ ಮಹಿಳೆಯರು, ಅಥವಾ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಸೇವೆ ಸಲ್ಲಿಸಿ, ಉನ್ನತ ಹುದ್ದೆಯನ್ನು ಪಡೆದ ಮಹಿಳೆಯರಿಂದ ಹಿಡಿದು, ವ್ಯವಸ್ಥೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಮಹಿಳೆಯರವರೆಗೆ ಕತೆ ಬಿಚ್ಚಿಕೊಳ್ಳುತ್ತದೆ.

2017 ವರ್ಷದ ಹಿನ್ನೋಟ: ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾದ 7 ಪ್ರಕರಣ2017 ವರ್ಷದ ಹಿನ್ನೋಟ: ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾದ 7 ಪ್ರಕರಣ

ಕನ್ನಡದ ನಟಿ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗುತ್ತಿದ್ದಂತೆಯೇ ಕನ್ನಡಿಗರೆಲ್ಲ ಸಂಭ್ರಮಿಸಿದ್ದೋ ಸಂಭ್ರಮಿಸಿದ್ದೇ. ನಂತರ ಭ್ರಷ್ಟ ವ್ಯವಸ್ಥೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಡಿವೈಎಸ್ಪಿ ಅನುಪಮಾ ಶೇಣೈ ಹೊಸ ಪಕ್ಷ ಕಟ್ಟಿದ್ದು, ನೀಲಮಣಿ ರಾಜು ಅವರು ಕರ್ನಾಟಕದ ಪ್ರಪ್ರಥಮ ಮಹಿಳಾ ಡಿಜಿಪಿಯಾಗಿ ನೇಮಕವಾಗಿದ್ದು, ಹಿರಿಯ ಐಎಎಸ್ ಅಧಿಕಾರಿ ರತ್ನಪ್ರಭಾ ಅವರನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ಜೊತೆಗೆ ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭಾರತೀಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ, ಮಹಿಳಾ ವಿಶ್ವಕಪ್ ನಲ್ಲಿ ಸಾಧನೆ ಮೆರಿದಿದ್ದು... ಎಲ್ಲವೂ ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿಯೇ.

ಹೀಗೇ 2017 ರಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಐದು ಪ್ರಮುಖ ಮಹಿಳೆಯರ ಪಟ್ಟಿ ನಿಮಗಾಗಿ ಇಲ್ಲಿದೆ.

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹೆಡ್ ರಮ್ಯಾ

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹೆಡ್ ರಮ್ಯಾ

ಕನ್ನಡ ನಟಿಯಾಗಿ ಚಿರಪರಿಚಿತರಾದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ, ಈ ವರ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯಾಗುವ ಮೂಲಕ ಹೆಚ್ಚು ಸುದ್ದಿಯಾಗಿದ್ದರು.
'ಅಭಿ' ಚಿತ್ರದ ಮೂಲಕ ಕನ್ನಡ ನೂರಾರು ಅಭಿಮಾನಿಗಳನ್ನು ಪಡೆದ ರಮ್ಯಾ, ಫಿಲ್ಮ್ ಫೇರ್ ಪ್ರಶಸಿಯನ್ನೂ ಪಡೆದ ಕನ್ನಡ ನಟಿ ಎಂಬ ಖ್ಯಾತಿ ಕಳಿಸಿದವರು. ಬೆಂಗಳೂರಿನಲ್ಲಿ ಜನಿಸಿದ ರಮ್ಯಾ, 2012 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 2013 ರಲ್ಲಿ ನಡೆದ ಮಂಡ್ಯ ಉಪಚುನಾವಣೆಯಲ್ಲಿ(ಲೋಕಸಭೆ) ಗೆಲುವು ಸಾಧಿಸಿದ್ದರು. ನಂತರ 2014 ರಲ್ಲಿ ನಡೆದ ಚುನಾವಣೆಯಲ್ಲಿ ಸೋತಿದ್ದರು.

ಸದ್ಯಕ್ಕೆ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯಾಗಿರುವ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಾಯಕಿ ಸೋನಿಯಾಗಾಂಧಿ ಅವರೊಂದಿಗೆ ಆಪ್ತ ಒಡನಾಟವನ್ನೂ ಹೊಂದಿದ್ದಾರೆ.

ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!

ರಾಜ್ಯದ ಮೊದಲ ಮಹಿಳಾ ಡಿಜಿಪಿ ನೀಲಮಣಿ ರಾಜು

ರಾಜ್ಯದ ಮೊದಲ ಮಹಿಳಾ ಡಿಜಿಪಿ ನೀಲಮಣಿ ರಾಜು

ಕರ್ನಾಟಕ ರಾಜ್ಯದಲ್ಲಿ ಡಿಜಿಪಿ ಪದವಿಗೇರಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀಲಮಣಿ ರಾಜು.

ಇವರು ಉತ್ತರ ಪ್ರದೇಶದ ರೂರ್ಕಿಯಲ್ಲಿ 1960 ಜನವರಿ 17ರಂದು ಜನಿಸಿದ ಅವರು

ನೀಲಮಣಿ ರಾಜು 1983ನೇ ಸಾಲಿನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ನರಸಿಂಹರಾಜು ಅವರ ಪತ್ನಿಯಾಗಿರುವ ಅವರು ಒಂದಷ್ಟು ಕಾಲ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ 1993ರಲ್ಲಿ ಕೇಂದ್ರ ಸೇವೆಗೆ ತೆರಳಿದ್ದರು. 23ಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯದಿಂದ ಹೊರಗಿದ್ದ ನೀಲಮಣಿ ರಾಜು 2016ರಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದರು.

ಡಿಜಿಪಿ ಆರ್ ಕೆ ದತ್ತಾ ಅವರ ನಿವೃತ್ತಿಯ ನಂತರ ಈ ಸ್ಥಾನ ಅಲಂಕರಿಸಿದ ನೀಲಮಣಿಯವರು, ತಾವು ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡುವುದಾಗಿ ಹೇಳಿಕೊಂಡಿದ್ದಾರೆ.

ಕರ್ನಾಟಕದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿ ನೀಲಮಣಿ ರಾಜು ಪರಿಚಯಕರ್ನಾಟಕದ ಮೊತ್ತ ಮೊದಲ ಮಹಿಳಾ ಡಿಜಿ-ಐಜಿಪಿ ನೀಲಮಣಿ ರಾಜು ಪರಿಚಯ

ಅನುಪಮಾ ಶೆಣೈ ಹೊಸ ಪಕ್ಷ

ಅನುಪಮಾ ಶೆಣೈ ಹೊಸ ಪಕ್ಷ

ಭ್ರಷ್ಟ ಅಧಿಕಾರಿಗಳ ವಿರುದ್ಧ ದನಿ ಎತ್ತುವ ಮೂಲಕ 2016 ರಲ್ಲಿ ಸುದ್ದಿಯಾಗಿದ್ದ ಕೂಡ್ಲಿಗಿ ಡಿವೈಎಸಿ ಅನುಪಮಾ ಶೆಣೈ ಅವರು ರಾಜಕೀಯ ಪಕ್ಷ ಕಟ್ಟುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಫಣಿಯೂರಿನವರಾದ ಶೆಣೈ ಅವರು ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಮಾಡಿದವರು. ಅವರನ್ನು ಕೂಡ್ಲಿಗಿಯಿಂದ ವಿಜಯಪುರದ ಇಂಡಿಗೆ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಿದ ಸರ್ಕಾರದ ಕ್ರಮದ ವಿರುದ್ಧ ಸಿಡಿದೆದ್ದು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು. ಅವರ ಧಅಯರ್ಯದ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ನವೆಂಬರ್ 1 ರಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ಹೆಸರಿನೊಂದಿಗೆ ಅವರು ಹೊಸ ರಾಜಕೀಯ ಪಕ್ಷವೊಂದನ್ನು ಕಟ್ಟಿ, ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ.

ಅನುಪಮಾ ಶೆಣೈ ಅವರಿಂದ ಹೊಸ ಪ್ರಾದೇಶಿಕ ಪಕ್ಷಅನುಪಮಾ ಶೆಣೈ ಅವರಿಂದ ಹೊಸ ಪ್ರಾದೇಶಿಕ ಪಕ್ಷ

ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ

ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ

ಹಿರಿಯ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅವರನ್ನು ನವೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಈ ಮೂಲಕ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಡಾ.ಸುಭಾಷ್ ಚಂದ್ರ ಕುಂಟಿಯಾ ಅವರ ನಿವೃತ್ತಿಯ ನಂತರ ಈ ಸ್ಥಾನ ಪಡೆದ ರತ್ನಪ್ರಭಾ ಅವರು ಮೂಲತಃ ಆಂಧ್ರಪ್ರದೇಶದವರು.

ರತ್ನಪ್ರಭಾ, 1981 ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದವರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕೆಲಸ ಮಾಡಿರುವ ಇವರಿಗೆ ರಾಜ್ಯ ಕೈಗಾರಿಕಾ ಇಲಾಖೆ ಹೆಚ್ಚುವರಿ ಕಾರ್ದರ್ಶಿಯಾಗಿ ದಕ್ಷ ಕಾರ್ಯ ನಡೆಸಿದ ಅನುಭವವಿದೆ.

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ನೇಮಕರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ನೇಮಕ

ವಿಶ್ವಕಪ್ ನಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ವೇದಾ ಕೃಷ್ಣಮೂರ್ತಿ

ವಿಶ್ವಕಪ್ ನಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ವೇದಾ ಕೃಷ್ಣಮೂರ್ತಿ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ವೇದಾ ಕೃಷ್ಣಮೂರ್ತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ. ಈ ವರ್ಷ ಇವರು ಹೆಚ್ಚು ಸುದ್ದಿಯಲ್ಲಿದ್ದಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ವಿಶ್ವಕಪ್ ನಲ್ಲಿ ಫೈನಲ್ ಹಂತದವರೆಗೂ ಕೊಂಡೊಯ್ದವರಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣಕ್ಕೆ. 45 ಬಾಲ್ ಗಳಿಗೆ 70 ರನ್ ಗಳಿಸುವ ಮೂಲಕ, ವಿಶ್ವಕಪ್ ನಲ್ಲಿ ಅತೀ ವೇಗದ 70 ರನ್ ಗಳಿಸಿದ ದಾಖಲೆ ಬರೆದಿದ್ದರು.

ಆದರೆ ಇಂಗ್ಲೆಂಡ್ ಜೊತೆಗಿನ ಫೈನಲ್ ಪಂಮದ್ಯದಲ್ಲಿ ಭಾರತ ಕೇವಲ 9 ರನ್ ಗಳಿಂದ ಸೋತು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

English summary
Kannada actor and former member of parliament Ramya's appointment as Congress party's social media head, Nilamani Raju appointed as First woman DGP of Karnataka, Ratnprabha as Chief secretary of Karnataka, former DySP Anupama Shenoy's strong step to found a political party and cricketer Veda Krishnamurty's achievement in Women world cup... these 5 women made Karnataka proud in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X