ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಹಿನ್ನೋಟ; 60 ಸೆಕೆಂಡುಗಳಲ್ಲಿ 100ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್ ಮಾಡಿದ ಭಾರತೀಯರು!

|
Google Oneindia Kannada News

2021ರಲ್ಲಿ ಬಿರಿಯಾನಿ ಖಂಡಿತವಾಗಿಯೂ ಹೆಚ್ಚಿನ ಭಾರತೀಯರಿಗೆ ಅತ್ಯಂತ ನೆಚ್ಚಿನ ಆಹಾರವಾಗಿದೆ ಮತ್ತು ಅದನ್ನು ಸಾಬೀತುಪಡಿಸಲು ಆನ್‌ಲೈನ್ ಆಹಾರ ವಿತರಣಾ ವೇದಿಕೆ Swiggy ತನ್ನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮಂಗಳವಾರ (ಡಿ.21)ದಂದು ಸ್ವಿಗ್ಗಿಯು ಬಿರಿಯಾನಿಯ ಮೇಲಿನ ಭಾರತೀಯರ ಪ್ರೀತಿಯನ್ನು ಬಹಿರಂಗಪಡಿಸಿದ್ದು, 2021ರಲ್ಲಿ ಪ್ರತಿ ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿಗಳನ್ನು ಭಾರತೀಯರು ಆರ್ಡರ್ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಸ್ವಿಗ್ಗಿ ಬರೆದುಕೊಂಡಿದ್ದು, "2021ರಲ್ಲಿ 6,04,44,000 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. 6,04,44,000 ಜನರು "ವಿತರಣೆ" ಅಧಿಸೂಚನೆ ಪಡೆದ ತಕ್ಷಣ ಮುಗುಳ್ನಕ್ಕಿದ್ದಾರೆ," ಎಂದು ಹೇಳಿಕೊಂಡಿದೆ.

ಸ್ವಿಗ್ಗಿಯ ವಾರ್ಷಿಕ ವರದಿ ಕಾರ್ಡ್‌ನಲ್ಲಿ 4.25 ಲಕ್ಷ ಹೊಸ ಬಳಕೆದಾರರು ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡುವ ಮೂಲಕ ಸ್ವಿಗ್ಗಿಯಲ್ಲಿ ಚೊಚ್ಚಲ ಅಭಿಯಾನವನ್ನು ಆರಂಭಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ವರ್ಷದ ಅತ್ಯಂತ ಬಿಂಗ್ಡ್ ತಿಂಡಿ ಸಮೋಸಾವಾಗಿದ್ದು, ಸ್ವಿಗ್ಗಿನಲ್ಲಿ ಸುಮಾರು 5 ಮಿಲಿಯನ್ ಆರ್ಡರ್‌ಗಳಾಗಿವೆ. ಅಂದರೆ ಇದು ನ್ಯೂಜಿಲೆಂಡ್ ದೇಶದ ಜನಸಂಖ್ಯೆಗೆ ಸಮಾನವಾಗಿದೆ.

Year End Special 2021; Indians Ordered Over 100 Biryani in 60 Seconds in 2021

ಸ್ವಿಗ್ಗಿಯ ಆರನೇ ವಾರ್ಷಿಕ StatEATstics ವರದಿಯು ಭಾರತೀಯರು ನಿಮಿಷಕ್ಕೆ 115 ಪ್ಲೇಟ್‌ಗಳ ಬಿರಿಯಾನಿ, ನ್ಯೂಜಿಲೆಂಡ್‌ನ ಜನಸಂಖ್ಯೆಗೆ ಸಮನಾದ ಸಮೋಸಾಗಳು ಮತ್ತು ಹನ್ನೊಂದು ವರ್ಷಗಳ ಕಾಲ ಸ್ಪ್ಯಾನಿಷ್ ಟೊಮಾಟಿನಾ ಹಬ್ಬ ಆಡುವಷ್ಟು ಸಾಕಷ್ಟು ಟೊಮೆಟೊಗಳನ್ನು ಆರ್ಡರ್ ಮಾಡಿದ್ದಾರೆ ಎಂಬುದನ್ನು ಸ್ವಿಗ್ಗಿ ಕಂಪನಿ ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿದೆ.

2020 ರಲ್ಲಿ ಪ್ರತಿ ನಿಮಿಷಕ್ಕೆ 90 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು, ಈಗ 2021ರಲ್ಲಿ 115ಕ್ಕೆ ಏರಿದೆ. ಇದು ಪ್ರತಿ ಸೆಕೆಂಡಿಗೆ 1.91ಕ್ಕೆ ಬರುತ್ತದೆ ಎಂದು ಸ್ವಿಗ್ಗಿ ಹೇಳಿಕೆ ತಿಳಿಸಿದೆ.

Year End Special 2021; Indians Ordered Over 100 Biryani in 60 Seconds in 2021

ಸಮೋಸಾವನ್ನು ಚಿಕನ್ ವಿಂಗ್‌ಗಳಿಗಿಂತ ಆರು ಪಟ್ಟು ಹೆಚ್ಚು ಆರ್ಡರ್ ಮಾಡಲಾಗಿದ್ದರೆ, ಪಾವ್ ಭಾಜಿ 2.1 ಮಿಲಿಯನ್ ಆರ್ಡರ್‌ಗಳೊಂದಿಗೆ ಭಾರತದ ಎರಡನೇ ನೆಚ್ಚಿನ ತಿಂಡಿಯಾಗಿದೆ. ಒಟ್ಟು 2.1 ಮಿಲಿಯನ್ ಆರ್ಡರ್‌ಗಳೊಂದಿಗೆ ಗುಲಾಬ್ ಜಾಮೂನ್ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಸಿಹಿ ತಿಂಡಿಯಾಗಿದ್ದು, ನಂತರ 1.27 ಮಿಲಿಯನ್ ಆರ್ಡರ್‌ಗಳೊಂದಿಗೆ ರಾಸ್‌ಮಲೈ ಇದೆ.

ಬೆಂಗಳೂರು ಅತ್ಯಂತ ಆರೋಗ್ಯ ಪ್ರಜ್ಞೆಯ ನಗರ
ಸ್ವಿಗ್ಗಿಯಲ್ಲಿ ಆರೋಗ್ಯಕರ ಆಹಾರಕ್ಕಾಗಿ ಹುಡುಕಾಟವು 2021ರಲ್ಲಿ ದ್ವಿಗುಣಗೊಂಡಿದೆ ಮತ್ತು ಸ್ವಿಗ್ಗಿ ಹೆಲ್ತ್‌ಹಬ್‌ನಲ್ಲಿನ ಆರೋಗ್ಯ- ಕೇಂದ್ರಿತ ರೆಸ್ಟೋರೆಂಟ್‌ಗಳು ಆರ್ಡರ್‌ಗಳಲ್ಲಿ ಶೇಕಡಾ 200ರಷ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು ಅತ್ಯಂತ ಆರೋಗ್ಯ ಪ್ರಜ್ಞೆಯ ನಗರವಾಗಿ ಹೊರಹೊಮ್ಮಿದ್ದು, ನಂತರ ಹೈದರಾಬಾದ್ ಮತ್ತು ಮುಂಬೈ ಸ್ಥಾನ ಪಡೆದಿವೆ.

Year End Special 2021; Indians Ordered Over 100 Biryani in 60 Seconds in 2021

ಚೆನ್ನೈ, ಕೋಲ್ಕತ್ತಾ, ಲಕ್ನೋ ಮತ್ತು ಹೈದರಾಬಾದ್‌ ನಗರಗಳಿ ಚಿಕನ್ ಬಿರಿಯಾನಿ ಆರ್ಡರ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮುಂಬೈ ಚಿಕನ್ ಬಿರಿಯಾನಿಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ದಾಲ್ ಖಿಚಿಡಿಗಳನ್ನು ಆರ್ಡರ್ ಮಾಡಿದೆ ಎಂದು ಸ್ವಿಗ್ಗಿ ಅಧ್ಯಯನ ತಿಳಿಸಿದೆ.

ಅಧ್ಯಯನದ ಪ್ರಕಾರ, ಹೆಚ್ಚಿನ ಜನರು ಸೋಮವಾರ ಮತ್ತು ಗುರುವಾರದಂದು ಆರೋಗ್ಯಕರ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಕೆಟೊ ಆರ್ಡರ್‌ಗಳು ಶೇ.23ರಷ್ಟು ಮತ್ತು ಸಸ್ಯಾಹಾರಿ ಮತ್ತು ಸಸ್ಯ ಆಧಾರಿತ ಆಹಾರ ಆರ್ಡರ್‌ಗಳಲ್ಲಿ ಶೇ.83ರಷ್ಟು ಏರಿಕೆಯಾಗಿದೆ.

ರಾತ್ರಿ 10 ಗಂಟೆಯ ನಂತರ ಚಿಪ್ಸ್ ಆರ್ಡರ್
2021ರಲ್ಲಿ ಸ್ವಿಗ್ಗಿ 1.4 ಮಿಲಿಯನ್ ಪ್ಯಾಕೆಟ್‌ಗಳ ತ್ವರಿತ ನೂಡಲ್ಸ್, 3.1 ಮಿಲಿಯನ್ ಪ್ಯಾಕೆಟ್‌ಗಳ ಚಾಕೊಲೇಟ್‌ಗಳು, 2.3 ಮಿಲಿಯನ್ ಟಬ್‌ಗಳ ಐಸ್‌ಕ್ರೀಮ್‌ಗಳು ಮತ್ತು 6.1 ಮಿಲಿಯನ್ ಚಿಪ್ಸ್ ಪ್ಯಾಕೆಟ್‌ಗಳನ್ನು ವಿತರಿಸಿದೆ. ವಾಸ್ತವವಾಗಿ ರಾತ್ರಿ 10 ಗಂಟೆಯ ನಂತರ ಚಿಪ್ಸ್ ಆರ್ಡರ್ ಮಾಡಿದ ಟಾಪ್ ಐಟಂ ಎಂದು ಅಧ್ಯಯನವು ಕಂಡುಹಿಡಿದಿದೆ.

Instamart 2021ರಲ್ಲಿ ಕೇವಲ 28 ಮಿಲಿಯನ್ ಪ್ಯಾಕ್‌ಗಳ ಹಣ್ಣುಗಳು ಮತ್ತು ತರಕಾರಿಗಳನ್ನು ವಿತರಿಸಿದೆ. ಟೊಮೆಟೊ, ಬಾಳೆಹಣ್ಣುಗಳು, ಈರುಳ್ಳಿ, ಆಲೂಗಡ್ಡೆ ಮತ್ತು ಹಸಿರು ಮೆಣಸಿನಕಾಯಿಗಳು 30 ನಿಮಿಷಗಳಲ್ಲಿ ವಿತರಿಸಲಾದ ಮೊದಲ ಐದು ಹಣ್ಣುಗಳು ಮತ್ತು ತರಕಾರಿಗಳಾಗಿವೆ. Instamartನಲ್ಲಿ ಆರ್ಡರ್ ಮಾಡಿದ ಒಟ್ಟು ಬಾಳೆಹಣ್ಣುಗಳು ಲಿಬರ್ಟಿ ಪ್ರತಿಮೆ ತೂಕಕ್ಕಿಂತ 2.6 ಪಟ್ಟು ಮೀರಿದೆ.

English summary
On Tuesday, Swiggy revealed the country’s love for biryani and that Indians ordered 115 plates of biryani per minute in 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X