ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರ ಹಿನ್ನೋಟ; ಅಫ್ಘಾನ್‌ನಿಂದ ಜನರ ರಕ್ಷಿಸಿದ 'ಆಪರೇಷನ್ ದೇವಿ ಶಕ್ತಿ'

|
Google Oneindia Kannada News

2021ರ ಆಗಸ್ಟ್ ತಿಂಗಳಿನಲ್ಲಿ ಇಡೀ ಜಗತ್ತೇ ಬೆಚ್ಚಿ ಬೀಳಿಸುವ ಘಟನೆ ನಡೆಯಿತು. ಈ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ದೇಶದಲ್ಲಿ ಉಂಟಾದ ಅರಾಕತೆ ವಿವಿಧ ದೇಶಗಳಲ್ಲಿ ತಲ್ಲಣ ಉಂಟು ಮಾಡಿದೆ.

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದರು. ಪಡೆಗಳ ಸ್ಥಳಾಂತರ ಪ್ರಕ್ರಿಯೆ ಕಾರ್ಯವನ್ನು ಅಮೆರಿಕ ಆರಂಭಿಸಿಯೇ ಬಿಟ್ಟಿತ್ತು. ಆಗ ತಾಲಿಬಾನಿ ಉಗ್ರರು ಸಕ್ರಿಯರಾದರು.

Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಸ್ಫೋಟದ ಮರುದಿನವೇ ನೆರದ ಸಾವಿರಾರು ಜನ! Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಸ್ಫೋಟದ ಮರುದಿನವೇ ನೆರದ ಸಾವಿರಾರು ಜನ!

ಅಫ್ಘಾನಿಸ್ತಾನದ ಎರಡನೇ ಅತಿ ದೊಡ್ಡ ನಗರವಾದ ಕಂದಹಾರ್‌ ಅನ್ನು ಆಗಸ್ಟ್ 13ರಂದು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡವು. ಆಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ರಾಷ್ಟ್ರದ ರಾಜಧಾನಿ ಕಾಬೂಲ್‌ನತ್ತ ಆಗಮಿಸಲಾರಂಭಿಸಿದವು. ಈ ಬೆಳವಣಿಗೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು.

ಭಾರತ ಸೇರಿ ಯಾವುದೇ ದೇಶಗಳ ಜತೆ ಸಂಘರ್ಷ ಬಯಸುವುದಿಲ್ಲ ಎಂದ ತಾಲಿಬಾನ್ಭಾರತ ಸೇರಿ ಯಾವುದೇ ದೇಶಗಳ ಜತೆ ಸಂಘರ್ಷ ಬಯಸುವುದಿಲ್ಲ ಎಂದ ತಾಲಿಬಾನ್

Year End Operation Devi Shakti Indians Evacuated By Afghanistan

ತಾಲಿಬಾನಿಗಳು ಕಾಬೂಲ್ ನಗರವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪರಾರಿಯಾದರು. ಆಡಳಿತ ನಡೆಸುವ ನಾಯಕನೇ ಇಲ್ಲದೇ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತು. ಸರ್ಕಾರಿ ನೌಕರರು ಉಗ್ರರಿಗೆ ಬೆದರಿ ಕಚೇರಿಗಳ ಕಡೆ ತಲೆ ಹಾಕಲಿಲ್ಲ.

2021ರ ಹಿನ್ನೋಟ; ವರ್ಷದ ವ್ಯಕ್ತಿ ಬಸವರಾಜ ಬೊಮ್ಮಾಯಿ2021ರ ಹಿನ್ನೋಟ; ವರ್ಷದ ವ್ಯಕ್ತಿ ಬಸವರಾಜ ಬೊಮ್ಮಾಯಿ

ಪ್ರತಿ ಸರ್ಕಾರಿ ಕಚೇರಿಗಳನ್ನು ವಶಕ್ಕೆ ತೆಗೆದುಕೊಂಡ ತಾಲಿಬಾನಿಗಳು ದೇಶದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾದ ಹದಗೆಡಿಸಿದರು. ಆದರೆ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಮೆರಿಕ ಮತ್ತು ನ್ಯಾಟೋ ಪಡೆಗಳ ವಶದಲ್ಲಿಯೇ ಉಳಿಯಿತು.

ಬೆಚ್ಚಿ ಬಿದ್ದ ವಿವಿಧ ದೇಶಗಳು; ಅಫ್ಘಾನಿಸ್ತಾನ ತಾಲಿಬಾನಿ ಉಗ್ರರ ವಶವಾಗುತ್ತಿದ್ದಂತೆಯೇ ವಿವಿಧ ದೇಶಗಳು ಬೆಚ್ಚಿಬಿದ್ದವು. ದೇಶದಲ್ಲಿರುವ ತನ್ನ ನಾಗರಿಕರ ರಕ್ಷಣೆ ಬಗ್ಗೆ ಅವುಗಳಿಗೆ ಚಿಂತೆ ಆರಂಭವಾಯಿತು. ಕಾಬೂಲ್ ವಿಮಾನ ನಿಲ್ದಾಣದ ಮೂಲಕ ತನ್ನ ನಾಗರಿಕರನ್ನು ಏರ್ ಲಿಫ್ಟ್‌ ಮಾಡಲು ಪ್ರಯತ್ನ ಆರಂಭಿಸಿದವು. ವಿವಿಧ ದೇಶಗಳ ಬೆಂಬಲಕ್ಕೆ ನಿಂತ ಅಮೆರಿಕ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಯೋಧರನ್ನು ನಿಯೋಜನೆ ಮಾಡಿ, ಏರ್‌ಲಿಫ್ಟ್‌ಗೆ ಸಹಕಾರ ನೀಡಿತು.

ಭಾರತದ ಕಾರ್ಯಾಚರಣೆ; ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ರಾಜತಾಂತ್ರಿಕ ಸಂಬಂಧ ಚೆನ್ನಾಗಿತ್ತು. ಅಫ್ಘಾನಿಸ್ತಾನದ ವಿವಿಧ ಯೋಜನೆಗಳಲ್ಲಿ ಭಾರತೀಯರು ದುಡಿಯುತ್ತಿದ್ದರು. ಆದ್ದರಿಂದ ಸಾವಿರಾರು ಭಾರತೀಯರು ಅಲ್ಲಿದ್ದರು.

ಅಫ್ಘಾನಿಸ್ತಾನ ತಾಲಿಬಾನಿ ಉಗ್ರರ ವಶವಾಗುತ್ತಿದ್ದಂತೆಯೇ ಭಾರತದಲ್ಲಿಯೂ ತಲ್ಲಣ ಆರಂಭವಾಯಿತು. ದೇಶದಲ್ಲಿರುವ ನಾಗರಿಕರನ್ನು ಕರೆತರಲು ವಿವಿಧ ದೇಶಗಳಂತೆ ಭಾರತವೂ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಿತು.

ಭಾರತ ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಟ್ಟಿತ್ತು. ಈ ಕಾರ್ಯಾಚರಣೆಯಡಿಯಲ್ಲಿ 669 ಜನರನ್ನು ಸ್ಥಳಾಂತರ ಮಾಡಲಾಗಿದೆ, ಇವರಲ್ಲಿ 448 ಭಾರತೀಯರು, 206 ಅಫ್ಘಾನ್ ಪ್ರಜೆಗಳು ಸೇರಿದ್ದರು. ಅಫ್ಘಾನಿಸ್ತಾನದಲ್ಲಿದ್ದ ಹಿಂದೂ/ ಸಿಖ್ ಸಮುದಾಯದ ಜನರನ್ನು ಸಹ ಸ್ಥಳಾಂತರ ಮಾಡಲಾಯಿತು.

ಜನರನ್ನು ಸ್ಥಳಾಂತರ ಮಾಡುವ ಪಕ್ರಿಯೆಗೆ 'ಆಪರೇಷನ್ ದೇವಿ ಶಕ್ತಿ' ಎಂದು ಏಕೆ ಹೆಸರಿಡಲಾಗಿದೆ? ಎಂಬುದು ಇನ್ನೂ ತಿಳಿದಿಲ್ಲ. ಆಪರೇಷನ್‌ನಲ್ಲಿ ಭಾಗಿಯಾದ ಅಧಿಕಾರಿಗಳು ಹೇಳುವಂತೆ ನಿರ್ದೋಷಿ ಜನರನ್ನು ಕಾಪಾಡುವ ರೀತಿಯಲ್ಲಿಯೇ ಈ ಕಾರ್ಯಾಚರಣೆ ನಡೆಯಿತು. ಆದ್ದರಿಂದ ಇಂತಹ ಹೆಸರಿ ಇಟ್ಟಿರಬಹುದು ಎಂದು ಹೇಳುತ್ತಾರೆ.

ದುರ್ಗೆ ರಾಕ್ಷಸರಿಂದ ಅಮಾಯಕ ಜನರನ್ನು ರಕ್ಷಣೆ ಮಾಡಿದಳು. ಹಾಗೆಯೇ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಜನರನ್ನು ನಾವು ರಕ್ಷಣೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದರು. ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ತಾಲಿಬಾನಿ ಉಗ್ರರು ಇದಕ್ಕೆ ಯಾವುದೇ ವಿರೋಧ ವ್ಯಕ್ತ ಮಾಡಲಿಲ್ಲ.

ಆಗಸ್ಟ್ 31ರೊಳಗೆ ತಮ್ಮ ದೇಶದ ಜನರನ್ನು ಏರ್ ಲಿಫ್ಟ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ತಾಲಿಬಾನ್ ಉಗ್ರರು ಘೋಷಣೆ ಮಾಡಿದರು. ವಿವಿಧ ಪ್ರದೇಶಗಳಲ್ಲಿ ಸಿಲುಕಿದ್ದ ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲು ಸಹಕಾರ ಮಾಡಿದರು.

English summary
After Taliban took over Afghanistan in mid August 2021 in the name of operation Devi Shakti total of 669 people have been evacuated by India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X