ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020 ಹಿನ್ನೋಟ: ಭಾರತದ ರಾಜಕಾರಣಿಗಳ ವಿವಾದದ ಬೆನ್ನೇರಿದ ಹೇಳಿಕೆಗಳು

|
Google Oneindia Kannada News

2020ರ ವರ್ಷ ಮುಗಿಯಲು ಇನ್ನೇನು ಒಂದು ದಿನ ಬಾಕಿಯಿದೆ. ಪ್ರತೀ ವರ್ಷದಂತೆ ಹೊಸವರ್ಷವನ್ನು ಸ್ವಾಗತಿಸಲು ಗುಂಪು ಸೇರುವಂತಿಲ್ಲ, ತಂಡತಂಡವಾಗಿ ಎಲ್ಲೂ ಹೋಗುವಂತಿಲ್ಲ. ಇನ್ನು ಬೆಂಗಳೂರಿನಲ್ಲಿ ಡಿಸೆಂಬರ್ 31ರ ಸಂಜೆಯಿಂದ ಸೆಕ್ಷನ್ 144 ಜಾರಿಯಲ್ಲಿರುತ್ತದೆ.

ಮಾರ್ಚ್ ನಿಂದ ಇದುವರೆಗೂ ಕೊರೊನಾ ವೈರಸ್ ಕಾಟದಿಂದ ಜನಜೀವನ ಇನ್ನೂ ಸಂಪೂರ್ಣವಾಗಿ ಸರಿದಾರಿಗೆ ಬಂದಿಲ್ಲ. ಕೋವಿಡ್ ಹಾವಳಿಯ ನಡುವೆಯೂ, ಬಿಹಾರದ ಅಸೆಂಬ್ಲಿ ಚುನಾವಣೆ ಸುಸೂತ್ರವಾಗಿ ನಡೆದಿತ್ತು. ಇದರ ಜೊತೆಗೆ ಹಲವು ರಾಜ್ಯಗಳಲ್ಲಿ ಸ್ಥಳೀಯ ಚುನಾವಣೆಯೂ ನಡೆದಿತ್ತು.

Unforgettable 2020: ವರ್ಷದ ವಿವಾದಾತ್ಮಕ ಸುದ್ದಿಗಳುUnforgettable 2020: ವರ್ಷದ ವಿವಾದಾತ್ಮಕ ಸುದ್ದಿಗಳು

ವಿರೋಧಿಗಳ ವಿರುದ್ದ ಹರಿಹಾಯಲು ರಾಜಕಾರಣಿಗಳು ಅಸವಿಂಧಾನಿಕ ಪದಗಳನ್ನು ಬಳಸುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮಾಮೂಲಿ. ಕೆಲವರು ದೇಶ ಮತ್ತು ಕೋಮಿನ ಬಗ್ಗೆ ವಿವಾದಕಾರಿ ಹೇಳಿಕೆಯನ್ನು ನೀಡಿದ ಉದಾಹರಣೆಗಳೂ ಬೇಕಾದಷ್ಟು ಸಿಗುತ್ತವೆ.

Unforgettable 2020: ಲಾಕ್‌ಡೌನ್‌ನಲ್ಲಿ ಮಹಿಳೆಯರನ್ನು ಕೂಲ್ ಆಗಿರಿಸಿದ 'ಸೀರೆ ಚಾಲೆಂಜ್'Unforgettable 2020: ಲಾಕ್‌ಡೌನ್‌ನಲ್ಲಿ ಮಹಿಳೆಯರನ್ನು ಕೂಲ್ ಆಗಿರಿಸಿದ 'ಸೀರೆ ಚಾಲೆಂಜ್'

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಮುಂತಾದ ನಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಒಂದು ಝಲಕ್ ಹೀಗಿದೆ:

ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ

"ಕಾಶ್ಮೀರಿಗಳು ತಮ್ಮನ್ನು ಭಾರತಕ್ಕಿಂತ ಹೆಚ್ಚಾಗಿ ಚೀನಾದವರು ಆಳಿದರೆ ಉತ್ತಮ ಎನ್ನುವ ಭಾವನೆಯಲ್ಲಿದ್ದಾರೆ. ಚೀನಾ ಮುಸ್ಲಿಮರಿಗೆ ಒಳ್ಳೆಯದನ್ನು ಮಾಡಿದೆ. ಮೋದಿ ಸರಕಾರ ಎಲ್ಲಾ ರಂಗದಲ್ಲೂ ವೈಫಲ್ಯವನ್ನು ಕಂಡಿದೆ, ನೀಡಿದ ಒಂದು ಭರವಸೆಯನ್ನೂ ಕೇಂದ್ರ ಸರಕಾರ ಈಡೇರಿಸಲಿಲ್ಲ" ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ.

ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ

ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ

"ಮಮತಾ ಬ್ಯಾನರ್ಜಿಗೆ ಹುಚ್ಚು ಹಿಡಿದಿದೆ. ಇದು ಭಾರತ, ಪಾಕಿಸ್ತಾನ ಅಲ್ಲ ಎನ್ನುವ ಅರಿವು ಈಗ ಅವರಿಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸನ, ಹಿಂದೂ ಶಾಸನ ಸದ್ಯದಲ್ಲೇ ಬರಲಿದೆ. ಬಂಗಾಳವನ್ನು ದೇಶದಿಂದ ಪ್ರತ್ಯೇಕಿಸುವ ಪ್ರಯತ್ನವನ್ನು ಮಮತಾ ಮಾಡುತ್ತಿದ್ದರು - ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

"ಮುಸ್ಲಿಮರು ಭಾರತದಲ್ಲಿದ್ದರೂ ದೇಶಕ್ಕೆ ಏನೂ ಒಳ್ಲೆಯದನ್ನು ಮಾಡಿಲ್ಲ. ಅಂದು ದೇಶ ವಿಭಜನೆಯಾಗುವುದನ್ನು ಅವರು ವಿರೋಧಿಸಬೇಕಿತ್ತು. ಅಂದು ವಿರೋಧಿಸದೇ ಇದ್ದಿದ್ದರಿಂದ ಪಾಕಿಸ್ತಾನದ ಉದಯವಾಯಿತು"ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಹನುಮಂತ ಹುಟ್ಟಿದ ದಿನಾಂಕ ನಿನಗೆ ಗೊತ್ತಾ, ನಾನು ದನದ ಮಾಂಸವನ್ನು ತಿನ್ನುತ್ತೇನೆ. ಅದು ನನ್ನ ಆಹಾರ ಪದ್ದತಿ, ಅದನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ. ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರುವ ಹಿಂದೆ, ಬಿಜೆಪಿಯವರದ್ದು ಏನೋ ಷಡ್ಯಂತ್ರ್ಯವಿದೆ" ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

"ದೆಹಲಿಯ ಶಾಹೀನ್ ಭಾಗ್ ನಲ್ಲಿ ನಡೆಯುತ್ತಿರುವುದಾದರೂ ಏನೂ, ಬಹುಸಂಖ್ಯಾತರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಮತ್ತೆ ಮೊಘಲರ ದರ್ಬಾರ್ ಬರುವ ದಿನ ದೂರವಿಲ್ಲ. ಈ ವಿದ್ಯಮಾನಗಳು ಹಿಂದೂಗಳಿಗೆ ಒಂದು ಎಚ್ಚರಿಕೆಯ ಗಂಟೆ, ಎದ್ದೇಳಿ ಹಿಂದೂಗಳೇ" ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ.

ಶಿವಸೇನೆಯ ಮುಖಂಡ ಸಂಜಯ್ ರಾವತ್, ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ಟೀಕೆ

ಶಿವಸೇನೆಯ ಮುಖಂಡ ಸಂಜಯ್ ರಾವತ್, ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ಟೀಕೆ

"ಆಕೆ ಒಬ್ಬಳು ಹರಾಂಕೋರ್, ಬೇಮಾನ್, ನಾಟಿ ಗರ್ಲ್. ಈ ಮಣ್ಣಿನಲ್ಲಿ ದುಡಿದು, ಹೆಸರು ಸಂಪಾದಿಸಿ ಈಗ ಮುಂಬೈ ಅನ್ನು ದೂರುತ್ತಿದ್ದಾಳೆ. ಅವಳ ತಂದೆಯನ್ನು ಇಲ್ಲಿಗೆ ಕರೆದುಕೊಂಡು ಬರಬೇಕಾಗುತ್ತದೆಯೆಯೋ ಏನೋ, ಅಂತಹ ಹರಾಂಕೋರ್ ಹೆಂಗಸಿನ ಪರ ಯಾಕೆ ವಾದಿಸುತ್ತೀರಾ"ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್, ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ಟೀಕಿಸಿದ್ದರು.

ಬಿಹಾರದ ಸಿಎಂ ನಿತೀಶ್ ಕುಮಾರ್

ಬಿಹಾರದ ಸಿಎಂ ನಿತೀಶ್ ಕುಮಾರ್

ಜನರು ಎಂಟು, ಒಂಬತ್ತು ಮಕ್ಕಳನ್ನು ಹುಟ್ಟಿಸುತ್ತಾರೆ, ಹೆಣ್ಣು ಮಕ್ಕಳ ಮೇಲೆ ಅವರಿಗೆ ನಂಬಿಕೆ ಇರುವುದಿಲ್ಲ. ಇದರಿಂದ ಬಿಹಾರವನ್ನು ಹೇಗೆ ಮುನ್ನಡೆಸಲು ಸಾಧ್ಯ? ಇದೇ ಜನರ ಆದರ್ಶ ಎನ್ನುವುದಾದರೆ ಈ ಮಣ್ಣನ್ನು ದೇವರೇ ಕಾಪಾಡಬೇಕು. ಇಲ್ಲದಿದ್ದರೆ ಜಗತ್ತು ಸರ್ವನಾಶವಾಗಲಿದೆ" - ಬಿಹಾರದ ಸಿಎಂ ನಿತೀಶ್ ಕುಮಾರ್.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ

"ಎಲ್ಲರೂ ಬಂಗಾಳಕ್ಕೆ ಬರುತ್ತಿದ್ದಾರೆ, ಬರುವ ಮುನ್ನ ಅನುಮತಿಯನ್ನು ಪಡೆದಿದ್ದೀರಾ? ಎಷ್ಟೋ ಜನರಿಗೆ ಭದ್ರತೆಯನ್ನೂ ನೀಡಲಿಲ್ಲ. ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಏನಾದರೂ ಸಮಸ್ಯೆ ಉಂಟಾದಲ್ಲಿ ಅದನ್ನು ರಾಜ್ಯ ಸರಕಾರದ ಮೇಲೆ ಹೊರಿಸುತ್ತೀರಾ. ಸೋನಿಯಾ ಗಾಂಧಿ ವಿಕ್ಟೋರಿಯಾದ ರಾಣಿ, ಇನ್ನು ರಾಹುಲ್ ಗಾಂಧಿ ಕೋಡಂಗಿ ರಾಜಕುಮಾರ" ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ.

English summary
Year 2020: Indian Politicians Controversial Statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X