ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಸಿನ್ ಮಲಿಕ್ ಯಾರು, ಉಗ್ರನಾಗಿದ್ದು ಯಾಕೆ? ಒಂದು ಟೈಮ್‌ಲೈನ್

|
Google Oneindia Kannada News

ನವದೆಹಲಿ, ಮೇ 25: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್‌ಗೆ ಬುಧವಾರ(ಮೇ 25) ಎನ್‌ಐಎ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 121 ಮತ್ತು ಯುಎಪಿಎ ಸೆಕ್ಷನ್ 17ರ ಅಡಿಯಲ್ಲಿ ಅವರಿಗೆ ಶಿಕ್ಷೆ ನೀಡಲಾಗಿದೆ. ಜೊತೆಗೆ 10 ಲಕ್ಷ ರೂ ದಂಡ ಹೇರಲಾಗಿದೆ. ಭಯೋತ್ಪಾದನೆಗೆ ಹಣದ ನೆರವು ಒದಗಿಸಿದ ಆರೋಪ ಇರುವ ಪ್ರಕರಣ ಇದಾಗಿದೆ.

ಜೆಕೆಎಲ್‌ಎಫ್ ಮುಖಂಡ ಯಾಸಿನ್ ಮಲಿಕ್ ವಿರುದ್ಧ ಹಲವು ಪ್ರಕರಣಗಳು ಇವೆ. ಹತ್ತು ಅಪರಾಧ ಕೃತ್ಯಗಳ ಸಂಬಂಧ ಎರಡರಲ್ಲಿ ಜೀವಾವಧಿ ಶಿಕ್ಷೆ ಪಡೆದಿದ್ದಾರೆ. ಹತ್ತು ವರ್ಷ ಕಠಿಣ ಸಜೆ ಶಿಕ್ಷೆ, ಜೊತೆಗೆ 10 ಲಕ್ಷ ರೂ ದಂಡ ವಿಧಿಸಲಾಗಿದೆ. ಒಂದು ಜೀವಾವಧಿ ಶಿಕ್ಷೆ ಎಂದರೆ ಕನಿಷ್ಠ 14 ವರ್ಷ ಜೈಲು ಶಿಕ್ಷೆ ಆಗುತ್ತದೆ. ಇವಿಷ್ಟೂ ಶಿಕ್ಷೆಗಳನ್ನ ಗಣಿಸಿದರೆ ಸುಮಾರು 40 ವರ್ಷ ಆಗುತ್ತದೆ. ಆದರೆ, ವಾಸ್ತವದಲ್ಲಿ ಎಲ್ಲಾ ಶಿಕ್ಷೆಗಳೂ ಕೂಡ ಏಕಕಾಲದಲ್ಲಿ ಜಾರಿಗೆ ಬರುತ್ತವೆ. ಅಂದರೆ, ಗರಿಷ್ಠ ಶಿಕ್ಷೆಯಾದ ಜೀವಾವಧಿ ಶಿಕ್ಷೆ ಇರುವ ಕಾಲಾವಧಿಯವರೆಗೂ, ಅಂದರೆ 14-16 ವರ್ಷಗಳವರೆಗೂ ಯಾಸಿನ್ ಮಲಿಕ್ ಜೈಲುವಾಸ ಅನುಭವಿಸಬೇಕಾಗುತ್ತದೆ.

ಶ್ರೀನಗರದಲ್ಲಿ ಯಾಸಿನ್‌ ಮಲಿಕ್‌ ಬೆಂಬಲಿಗರಿಂದ ದಾಂಧಲೆಶ್ರೀನಗರದಲ್ಲಿ ಯಾಸಿನ್‌ ಮಲಿಕ್‌ ಬೆಂಬಲಿಗರಿಂದ ದಾಂಧಲೆ

ಏನಿದು ಪ್ರಕರಣ?

ಏನಿದು ಪ್ರಕರಣ?

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಭಯೋತ್ಪಾದನೆ ಚಟುವಟಿಕೆ, ಕಲ್ಲು ತೂರಾಟ ಇತ್ಯಾದಿ ಘಟನೆಗಳು ಸಾಕಷ್ಟು ಸಂಭವಿಸಿದ್ದವು. ಪಾಕಿಸ್ತಾನದಿಂದ ಹರಿದುಬಂದ ಹಣದ ನೆರವಿನಿಂದ ಈ ಕೃತ್ಯಗಳನ್ನ ಎಸಗಲಾಗಿದೆ ಎಂಬುದು ಭಾರತದ ರಾಷ್ಟ್ರೀಯ ತನಿಖಾ ದಳ ಎನ್‌ಐಎ ಆರೋಪ. ಅದರಲ್ಲೂ 2010ರಿಂದ 2016ರ ಅವಧಿಯಲ್ಲಿ ಪಾಕ್ ಪ್ರಾಯೋಜಿತ ಉಗ್ರ ಚಟುವಟಿಕೆಗಳು ಬಹಳ ನಡೆದಿದ್ದವೆನ್ನಲಾಗಿದೆ. ಭಯೋತ್ಪಾದನೆಗೆ ನಿಧಿ ಸಂಗ್ರಹಿಸಿದ ಆರೋಪದ ಮೇಲೆ 2017ರಲ್ಲಿ ಎನ್‌ಐಎ ಹಲವು ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿತು. 2019ರಲ್ಲಿ ಯಾಸಿನ್ ಮಲಿಕ್ ಸೇರಿದಂತೆ ಐವರ ಮೇಲೆ ಚಾರ್ಜ್‌ಶೀಟ್ ಹಾಕಲಾಯಿತು.

2022 ಮಾರ್ಚ್ ತಿಂಗಳಲ್ಲಿ ದೆಹಲಿ ಕೋರ್ಟ್ ಎನ್‌ಐಎ ಸಲ್ಲಿಸಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ಯಾಸಿನ್ ಮಲಿಕ್ ಮತ್ತಿತರರ ವಿರುದ್ಧ ಐಪಿಸಿ ಮತ್ತು ಯುಎಪಿಎ ಅಡಿಯಲ್ಲಿ ಆರೋಪ ದಾಖಲಿಸುವಂತೆ ಸೂಚಿಸಿತು. ಪಾಕಿಸ್ತಾನದಿಂದ ಬಂದ ಭಯೋತ್ಪಾದನೆಯ ಹಣವನ್ನು ಆರೋಪಿಗಳು ಪಡೆದಿರುವುದಕ್ಕೆ ಸಾಕ್ಷ್ಯಾಧಾರ ಇರುವುದನ್ನು ಕೋರ್ಟ್ ಗ್ರಹಿಸಿತ್ತು. ಕಣಿವೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ ಹಿಂಸಾಚಾರ, ಲೂಟಿ, ದಂಗೆಗಳಿಗೆ ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದು ಹೌದು ಎಂದು ಕೋರ್ಟ್ ಒಪ್ಪಿತ್ತು.

'ಜನ ಗಣ ಮನ'ಕ್ಕಿರುವ ಮಾನ್ಯತೆ ವಂದೇ ಮಾತರಂಗೂ ಸಿಗಲಿ: ಪಿಐಎಲ್ ಸಲ್ಲಿಕೆ'ಜನ ಗಣ ಮನ'ಕ್ಕಿರುವ ಮಾನ್ಯತೆ ವಂದೇ ಮಾತರಂಗೂ ಸಿಗಲಿ: ಪಿಐಎಲ್ ಸಲ್ಲಿಕೆ

ಯಾಸಿನ್ ಮಲಿಕ್ ಭಯೋತ್ಪಾದನೆ, ಜೈಲು ಹಾದಿ:

ಯಾಸಿನ್ ಮಲಿಕ್ ಭಯೋತ್ಪಾದನೆ, ಜೈಲು ಹಾದಿ:

1999, ಅಕ್ಟೋಬರ್: ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧನ
2002, ಮಾರ್ಚ್ 26: ಭಯೋತ್ಪಾದನೆ ನಿಯಂತ್ರಣ ಕಾಯ್ದೆ ಅಡಿ ಯಾಸಿನ್ ಮಲಿಕ್ ಬಂಧನ, ಒಂದು ವರ್ಷದವರೆಗೂ ಜೈಲುಪಾಲು
2007 ಮೇ: ಯಾಸಿನ್ ಮಲಿಕ್ ನಾಯಕತ್ವದಲ್ಲಿ ಜೆಕೆಎಲ್‌ಎಫ್ ಪಕ್ಷ ಸಫರ್-ಇ-ಆಜಾದಿ ಅಭಿಯಾನ ನಡೆಸಿದರು. ಇದು ಕಾಶ್ಮೀರಕ್ಕೆ ಸ್ವಾತಂತ್ರ್ಯ ಚಳವಳಿಯಂತೆ ಬಿಂಬಿಸಲಾಯಿತು. ಭಾರತ ವಿರೋಧಿ ಅಭಿಪ್ರಾಯ ಗಟ್ಟಿಗೊಳಿಸಲು ಇವರು ಕಾಶ್ಮೀರದ ಮೂರೂವರೆ ಸಾವಿರ ಪಟ್ಟಣ ಮತ್ತು ಗ್ರಾಮಗಳಿಗೆ ಹೋಗಿ ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡಿದರು.
2013, ಫೆಬ್ರವರಿ: ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮವೊಂದರಲ್ಲಿ ಲಷ್ಕರ್-ಎ-ತೈಯಬಾ ಮುಖ್ಯಸ್ಥ ಹಫೀಜ್ ಸಯೀದ್ ಜೊತೆ ಯಾಸಿನ್ ಮಲಿಕ್ ವೇದಿಕೆ ಹಂಚಿಕೊಂಡಿದ್ದರು.
2017: ಎನ್‌ಐಎ ಹಲವು ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಟೆರರ್ ಫಂಡಿಂಗ್ ಕೇಸ್ ದಾಖಲಿಸಿತು.
2019: ಯಾಸಿನ್ ಮಲಿಕ್ ಹಾಗು ಇತರ ನಾಲ್ವರ ವಿರುದ್ಧ ಟೆರರ್ ಫಂಡಿಂಗ್ ಕೇಸ್‌ನಲ್ಲಿ ಆರೋಪ ಪಟ್ಟಿ ದಾಖಲಿಸಲಾಯಿತು.
2019 ಫೆಬ್ರವರಿ: ಯಾಸಿನ್ ಮಲಿಕ್ ಮನೆ ಮೇಲೆ ದಾಳಿ ಮಾಡಿ ಮುಖ್ಯವಾದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
2019 ಏಪ್ರಿಲ್: ಭಯೋತ್ಪಾದನೆ ಕೃತ್ಯಗಳಿಗೆ ಹಣಕಾಸು ನೆರವು ಒದಗಿಸಿದ ಆರೋಪದ ಪ್ರಕರಣದಲ್ಲಿ ಯಾಸಿನ್ ಮಲಿಕ್‌ರನ್ನು ಎನ್‌ಐಎ ಬಂಧಿಸಿತು.
2020 ಮಾರ್ಚ್: 1990ರಲ್ಲಿ ಶ್ರೀನಗರದ ರಾವಲಪೋರಾದಲ್ಲಿ 40 ಭಾರತೀಯ ವಾಯುಪಡೆ ಸಿಬ್ಬಂದಿ ಮೇಲೆ ದಾಳಿ ಎಸಗಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಹಾಗೂ ಇತರ ಆರು ಮಂದಿಯ ವಿರುದ್ಧ ಟಾಡಾ ಸೇರಿದಂತೆ ವಿವಿಧ ಕಾಯ್ದೆ ಅಡಿ ಆರೋಪ ದಾಖಲಿಸಲಾಯಿತು.
2022 ಮೇ 10: ಯಾಸಿನ್ ಮಲಿಕ್ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡರು. ಕೋರ್ಟ್ ಏನೇ ಶಿಕ್ಷೆ ನೀಡಿದರೂ ಸ್ವೀಕರಿಸಲು ಸಿದ್ಧ ಎಂದು ಹೇಳಿದರು. ತನ್ನ ಪರ ವಾದ ಮಾಡಲು ವಕೀಲರೂ ಬೇಡ ಎಂದಿದ್ದರು.
2022, ಮೇ 19: ಯಾಸಿನ್ ಮಲಿಕ್ ಅಪರಾಧಿ ಎಂದು ಎನ್‌ಐಎ ಕೋರ್ಟ್ ತೀರ್ಮಾನಿಸಿತು. ಮೇ 25ರಂದು ಜೀವಾವಧಿ ಶಿಕ್ಷೆ ನೀಡಿತು.

ಯಾಸಿನ್ ಮಲಿಕ್ ಉಗ್ರನಾಗಿದ್ದು:

ಯಾಸಿನ್ ಮಲಿಕ್ ಉಗ್ರನಾಗಿದ್ದು:

ಯಾಸಿನ್ ಮಲಿಕ್ ಶ್ರೀನಗರದಲ್ಲಿ 1966 ಏಪ್ರಿಲ್ 3ರಂದು ಜನಿಸಿದ್ದು. ವಿಕಿಪೀಡಿಯಾದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಯಾಸಿನ್ ಚಿಕ್ಕ ವಯಸ್ಸಿನಲ್ಲಿದ್ದಾಗ ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆಗಳ ದೌರ್ಜನ್ಯ ಕಂಡಿದ್ದ. 1980ರಲ್ಲಿ ಕಾಶ್ಮೀರಿ ಟ್ಯಾಕ್ಸಿ ಚಾಲಕರು ಮತ್ತು ಸೈನಿಕರ ಮಧ್ಯೆ ನಡೆದ ಸಂಘರ್ಷದ ಘಟನೆಯು ಯಾಸಿನ್ ಮಲಿಕ್‌ರನ್ನು ರೆಬೆಲ್ ಆಗಿಸಿತ್ತಂತೆ.

ಅಖಂಡ ಕಾಶ್ಮೀರದ ಸ್ವಾತಂತ್ರ್ಯದ ಕನಸು:

ಅಖಂಡ ಕಾಶ್ಮೀರದ ಸ್ವಾತಂತ್ರ್ಯದ ಕನಸು:

ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಗೊಳಿಸುವುದು ಮಾತ್ರವಲ್ಲ, ಪಾಕಿಸ್ತಾನದ ಆಡಳಿತದಲ್ಲಿರುವ ಕಾಶ್ಮೀರದ ಭಾಗವನ್ನೂ ಸ್ವತಂತ್ರಗೊಳಿಸಿ ಎರಡೂ ಸೇರಿ ಅಖಂಡ ಕಾಶ್ಮೀರ ದೇಶ ನಿರ್ಮಾಣವಾಗಬೇಕೆಂಬುದು ಯಾಸಿನ್ ಮಲಿಕ್‌ರ ಕನಸು ಎಂದು ಹೇಳಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸಿದ ಕ್ರಮವನ್ನೂ ಯಾಸಿನ್ ಮಲಿಕ್ ವಿರೋಧಿಸಿದ್ದರು. 2016ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೂ ಈ ಸಂಬಂಧ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Kashmiri separatist leader Yasin Malik, who was convicted in a terror funding case a few days ago, was awarded life imprisonment by the NIA Court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X