• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾ

|

ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಖರೀದಿಯ ಯುಪಿಎ ಕಾಲದ ಮೂಲ ಒಪ್ಪಂದವನ್ನು ರದ್ದು ಮಾಡಿ, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಹೊಸದಾಗಿ ಮಾಡಿಕೊಂಡ ಕರಾರಿನ ಬಗ್ಗೆ ವಿರೋಧ ಪಕ್ಷಗಳಿಂದ ಭಾರೀ ತಕರಾರು ವ್ಯಕ್ತವಾಗುತ್ತಿದೆ. ವಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯಲ್ಲೇ ಇದ್ದ ಹಿರಿಯ ನಾಯಕರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಆ ರೀತಿ ತಮ್ಮ ಬೇಸರ ಹೇಳಿಕೊಂಡವರಲ್ಲಿ ಯಶವಂತ್ ಸಿನ್ಹಾ ಪ್ರಮುಖರು. ಭಾರತೀಯ ವಾಯುಸೇನೆಗೆ ಖರೀದಿಸಬೇಕಿದ್ದ ಯುದ್ಧ ವಿಮಾನಗಳ ಸಂಖ್ಯೆಯಲ್ಲಿ ಇಳಿಕೆ ಆಯಿತು. ತಂತ್ರಜ್ಞಾನ ವಿನಿಮಯ ಒಪ್ಪಂದದಲ್ಲಿ ಸರಕಾರಿ ಸ್ವಾಮ್ಯದ ಎಚ್ ಎಎಲ್ ಗೆ ಆಗಬೇಕಿದ್ದ ಲಾಭವನ್ನು ಕೈಬಿಟ್ಟು, ರಿಲಯನ್ಸ್ ಡಿಫೆನ್ಸ್ ಎಂಬ ಖಾಸಗಿ ಕಂಪನಿಗೆ ಅವಕಾಶ ನೀಡಲಾಯಿತು. ಜತೆಗೆ ವಿಮಾನದ ಖರೀದಿ ದರವೂ ಏರಿಕೆ ಆಯಿತು ಎಂಬುದು ಸಿನ್ಹಾರ ಪ್ರಮುಖ ತಕರಾರು.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಇದೀಗ ಯಶವಂತ್ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಎದುರು ಆರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಎಲ್ಲವೂ ರಫೇಲ್ ವಿಮಾನ ಖರೀದಿಗೆ ಸಂಬಂಧಿಸಿದ್ದು. ಬಹಳ ಆಸಕ್ತಿಕರವಾದ ಆ ಪ್ರಶ್ನೆಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

ಪ್ರಶ್ನೆ 1 ರಕ್ಷಣಾ ಖರೀದಿ ಒಪ್ಪಂದ ಪೂರ್ತಿ ಬದಲಾಯಿಸಿದ್ದೇಕೆ?

ಪ್ರಶ್ನೆ 1 ರಕ್ಷಣಾ ಖರೀದಿ ಒಪ್ಪಂದ ಪೂರ್ತಿ ಬದಲಾಯಿಸಿದ್ದೇಕೆ?

ಪ್ರಧಾನ ನರೇಂದ್ರ ಮೋದಿ ಅವರು ಅದಾಗಲೇ ಅಂತಿಮವಾಗಿದ್ದ ರಕ್ಷಣಾ ಖರೀದಿ ಒಪ್ಪಂದವನ್ನು ಪೂರ್ತಿಯಾಗಿ ಬದಲಾಯಿಸಿ, ಮೂವತ್ತಾರು ವಿಮಾನ ಮಾತ್ರ ಖರೀದಿಸುವ ನಿರ್ಧಾರವನ್ನು ಅಷ್ಟು ತರಾತುರಿಯಲ್ಲಿ, ಪ್ಯಾರಿಸ್ ಗೆ ಭೇಟಿ ನೀಡುವ ಸಂದರ್ಭದಲ್ಲಿ ಏಕೆ ತೆಗೆದುಕೊಂಡರು?

ಪ್ರಶ್ನೆ 2 ರಾಷ್ಟ್ರೀಯ ಭದ್ರತೆಯನ್ನು ಗಂಡಾಂತರಕ್ಕೆ ಸಿಲುಕಿಸಿದಂತೆ ಆಗಲಿಲ್ಲವೆ?

ಪ್ರಶ್ನೆ 2 ರಾಷ್ಟ್ರೀಯ ಭದ್ರತೆಯನ್ನು ಗಂಡಾಂತರಕ್ಕೆ ಸಿಲುಕಿಸಿದಂತೆ ಆಗಲಿಲ್ಲವೆ?

ಯುದ್ಧ ವಿಮಾನ ಖರೀದಿ ಸಂಖ್ಯೆಯು ಆರಂಭದಲ್ಲಿ 126 ಇತ್ತು. ಅದನ್ನು 36ಕ್ಕೆ ಇಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತೆಯನ್ನು ಗಂಡಾಂತರಕ್ಕೆ ಸಿಲುಕಿಸಿದಂತೆ ಆಗಲಿಲ್ಲವೆ?

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಪ್ರಶ್ನೆ 3 ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆನ್ನು ತೋರಿಸಿದಂತೆ ಅಲ್ಲವೆ?

ಪ್ರಶ್ನೆ 3 ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆನ್ನು ತೋರಿಸಿದಂತೆ ಅಲ್ಲವೆ?

ಯುದ್ಧ ವಿಮಾನ ಖರೀದಿ ಒಪ್ಪಂದದಿಂದ ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ನ(ಎಚ್ ಎಎಲ್) ಸಂಪೂರ್ಣವಾಗಿ ಹೊರಗಿಡುವ ಮೂಲಕ ತಾವೇ ವಿಪರೀತ ಪ್ರಚಾರ ಮಾಡಿದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆನ್ನು ತೋರಿಸಿದಂತೆ ಅಲ್ಲವೆ?

ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು

ಪ್ರಶ್ನೆ 4 ಖಾಸಗಿ ಕಂಪನಿ ಶಿಫಾರಸು ಮಾಡಿದ ಪ್ರಧಾನಿ ಬಗ್ಗೆ ಅನುಮಾನ ಬರಲ್ಲವೆ?

ಪ್ರಶ್ನೆ 4 ಖಾಸಗಿ ಕಂಪನಿ ಶಿಫಾರಸು ಮಾಡಿದ ಪ್ರಧಾನಿ ಬಗ್ಗೆ ಅನುಮಾನ ಬರಲ್ಲವೆ?

ಇಂಥದ್ದೊಂದು ಮಹತ್ವದ ರಕ್ಷಣಾ ಖರೀದಿ ಒಪ್ಪಂದದ ವೇಳೆ ಅನುಭವವೇ ಇಲ್ಲದ, ಖಾಸಗಿ ಕಂಪನಿಯೊಂದನ್ನು ಭಾರತದ ಪರವಾಗಿ ಭಾಗೀದಾರರಾಗಲು ಸ್ವತಃ ಪ್ರಧಾನಿಯೇ ಶಿಫಾರಸು ಮಾಡುವುದು ಈ ವ್ಯವಹಾರದಲ್ಲಿನ ಸಮಗ್ರತೆ ಬಗ್ಗೆ ಗಂಭೀರವಾದ ಅನುಮಾನಗಳನ್ನು ಹುಟ್ಟು ಹಾಕುವುದಿಲ್ಲವೆ?

ಪ್ರಶ್ನೆ 5 ಸತ್ಯವನ್ನು ಮುಚ್ಚಿಡುವ ಪ್ರಯತ್ನ ಏಕೆ?

ಪ್ರಶ್ನೆ 5 ಸತ್ಯವನ್ನು ಮುಚ್ಚಿಡುವ ಪ್ರಯತ್ನ ಏಕೆ?

ಈ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅನುಮಾನಾಸ್ಪದವಾದದ್ದು ಏನೂ ಇಲ್ಲ ಅಂತಾದರೆ ಕೇಂದ್ರ ಸರಕಾರದಿಂದ ತಾಂತ್ರಿಕ ಕಾರಣಗಳು ಎಂಬ ಕಾರಣ ನೀಡಿ, ಅದರ ಹಿಂದೆ ಅವಿತುಕೊಳ್ಳುವ ಹಾಗೂ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಏಕೆ?

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ಪ್ರಶ್ನೆ 6 ತನಿಖೆ ಮಾಡುವುದಕ್ಕೆ ಏಕೆ ತಕರಾರು?

ಪ್ರಶ್ನೆ 6 ತನಿಖೆ ಮಾಡುವುದಕ್ಕೆ ಏಕೆ ತಕರಾರು?

ಸರಕಾರದ ಕೈ ಸ್ವಚ್ಛವಾಗಿದೆ ಅಂತಾದರೆ ಖರೀದಿ ಬಗ್ಗೆ ವಿಚಾರಣೆ ನಡೆಸುವ ಪ್ರಸ್ತಾವಕ್ಕೆ ಏಕೆ ಹಿಂಜರಿಯುತ್ತಿದೆ? ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿರುವ ಈ ವಿಚಾರದ ಬಗ್ಗೆ ಪಾರದರ್ಶಕತೆ ತೋರದೆ ಮತ್ತು ರಹಸ್ಯ ಮಾಡುತ್ತಿರುವುದು ಏಕೆ? ಪರ್ಯಾಯ ವಾಸ್ತವಾಂಶಗಳು, ಅರ್ಧ ಸತ್ಯ, ಸುಳ್ಳು ಹಾಗೂ ಬೈಗುಳದ ಮೂಲಕ ಏಕೆ ಸಮರ್ಥನೆಗೆ ತೊಡಗಿದೆ?

English summary
Former BJP leader Yashwanth Sinha put 6 questions to PM Narendra Modi about controversial Rafale deal. Here are the questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more