ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ ದಶಮಿಯಂದು ರಾವಣನಿಗೆ ಪೂಜೆ; ಮಥುರಾ ದೇವಸ್ಥಾನದಲ್ಲಿ ವಿಶೇಷ ಆಚರಣೆ

|
Google Oneindia Kannada News

ಮಥುರಾ, ಅಕ್ಟೋಬರ್ 15: ರಾಕ್ಷಸನ ಮೇಲೆ ರಾಮನ ವಿಜಯವನ್ನು ಗುರುತಿಸಲು ದೇಶಾದ್ಯಂತ ಇಂದು ದಸರಾವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಇಲ್ಲೊಂದು ಶಿವನ ದೇವಾಲಯದಲ್ಲಿ ರಾವಣನನ್ನು ಪೂಜಿಸುವ ಮೂಲಕ ಆಚ್ಚರಿ ಮೂಡಿಸಲಾಗಿದೆ. ರಾವಣ ಪ್ರತಿಕೃತಿ ದಹನ ಮಾಡುವವರ ನಡುವೆ ರಾವಣನನ್ನು ಪೂಜಿಸುವಂತ ಆಚರಣೆ ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ಮಥುರಾದ ಲಂಕೇಶ್ ಮಿತ್ರ ಮಂಡಳಿಯು ಯಮುನಾ ನದಿಯ ದಡದಲ್ಲಿರುವ ದೇವಸ್ಥಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಮಾಜ್ಯವಾಗಿ ರಾವಣನ ದೇಹವನ್ನು ಸುಟ್ಟು ಹಾಕಲಾಗುತ್ತದೆ. ಆದರೆ ರಾವಣನ ಪ್ರತಿಕೃತಿ ಸುಟ್ಟು ಹಾಕುವುದರ ವಿರುದ್ಧ ಆಚರಣೆ ಮಾಡಬೇಕು. ಇದಕ್ಕೆ ಚಾಲನೆ ನೀಡಬೇಕು ಎಂದು ಲಂಕೇಶ್ ಮಿತ್ರ ಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಓಂವೀರ್ ಸಾರಸ್ವತ್ ಹೇಳಿದರು. ಬೆಳೆ ಅವಶೇಷ(ಕಳೆ)ಗಳನ್ನು ಸುಡುವ ವಿರುದ್ಧದ ಕಾರ್ಯಾಚರಣೆಯಂತೆ ಸರ್ಕಾರ ರಾವಣನ ಪ್ರತಿಕೃತಿ ಸುಡುವುದರ ವಿರುದ್ಧ ಕಾನೂನು ರಚಿಸಬೇಕು ಎಂದು ಅವರು ಹೇಳಿದ್ದಾರೆ.

ಕೆಲವು ಉತ್ತರದ ರಾಜ್ಯಗಳಲ್ಲಿ ಬೆಳೆಯುವ ಬೆಳೆ ಉಳಿಕೆಗಳು ಚಳಿಗಾಲದಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಹೆಚ್ಚಿನ ಮಟ್ಟದ ವಾಯು ಮಾಲಿನ್ಯವನ್ನು ಉಂಟುಮಾಡುತ್ತವೆ. ಹಾಗೆಯೇ ರಾವಣ ಪ್ರತಿಕೃತಿ ದಹನದಿಂದಲೂ ಪ್ರಕೃತಿ ನಾಶವಾಗುತ್ತದೆ ಸರಸ್ವತ್ ಹೇಳಿದರು. ಸರಸ್ವತ್ ರಾವಣನ ಪ್ರತಿಮೆಗಳನ್ನು ಸುಡುವುದನ್ನು ನಿಲ್ಲಿಸಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವಾದ್ದರಿಂದ, ಈ ವಿಷಯವನ್ನು ಅರಿತುಕೊಳ್ಳುವಂತೆ ಅವರು ಭಾರತದ ಮುಖ್ಯ ನ್ಯಾಯಾಧೀಶರನ್ನು ಕೋರುತ್ತಾರೆ ಎಂದು ಹೇಳಿದರು.

ರಾವಣನ್ನು ಸುಡುವುದು ಯಾಕೆ?

ರಾವಣನ್ನು ಸುಡುವುದು ಯಾಕೆ?

ಹಿಂದೂಗಳ ಪವಿತ್ರ ಮಹಾ ಕಾವ್ಯವಾದ ರಾಮಾಯಣ, ಮಹಾಭಾರತವು ಮನುಕುಲಕ್ಕೆ ಸಾಕಷ್ಟು ಮಾರ್ಗದರ್ಶನವನ್ನು ನೀಡುತ್ತದೆ. ಅವುಗಳಲ್ಲಿ ಬರುವ ಕಥೆಗಳು ಮತ್ತು ಉಪಕಥೆಗಳು ಜೀವನದ ಅಗತ್ಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಲೋಕ ಕಲ್ಯಾಣ ಕಾರಣಕ್ಕಾಗಿ ವಿಷ್ಣು ದೇವನು ಮನುಷ್ಯನ ರೂಪದಲ್ಲಿ ಅವತರಿಸಿ ಬಂದ ಕಥೆಗಳೇ ರಾಮಾಯಣ, ಮಹಾಭಾರತ. ರಾಮಾಯಣವು ಆದರ್ಶ ಪುರುಷನಾದ ರಾಮನು ಅಹಂಕಾರಿಯಾದ ರಾವಣನನ್ನು ವಧಿಸುವ ಕಥೆಯನ್ನು ಒಳಗೊಂಡಿದೆ. ರಾಮನ ತಂದೆಯ ಎರಡನೇ ಹೆಂಡತಿ ಕೈಕೇಯಿಯ ಕುತಂತ್ರದಿಂದಾಗಿ ರಾಮನು 14 ವರ್ಷಗಳ ವನವಾಸವನ್ನು ಅನುಭವಿಸಬೇಕಾಯಿತು. ವನವಾಸಕ್ಕೆ ತೆರಳುವಾಗ ರಾಮನ ಪತ್ನಿ ಹಾಗೂ ಸಹೋದರನಾದ ಲಕ್ಷ್ಮಣನು ರಾಮನ ಜೊತೆಯಲ್ಲಿಯೇ ವನವಾಸಕ್ಕೆ ನಡೆದರು. ಸ್ವಯಂ ವರದಲ್ಲಿ ಸೋತಿದ್ದ ರಾವಣನು ಸೀತೆಯನ್ನು ಪಡೆಯಬೇಕು ಎನ್ನುವ ಹಂಬಲವನ್ನು ಹೊಂದಿದ್ದನು. ಆ ಕಾರಣಕ್ಕಾಗಿ ಒಂದು ದಿನ ಮಾಯಾವಿ ಭಿಕ್ಷುಕನ ವೇಶವನ್ನು ಧರಿಸಿ, ರಾಮನಿಲ್ಲದ ಸಮಯದಲ್ಲಿ ಸೀತೆಯನ್ನು ಅಪಹರಿಸಿದನು. ಭಿಕ್ಷೆಯನ್ನು ಬೇಡಲು ಬಂದ ರಾವಣನಿಗೆ ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ಬರಲು ಸಾಧ್ಯವಾಗಲಿಲ್ಲ.

ಆಗ ಸೀತಾ ದೇವಿಯ ಬಳಿಯೇ ಇಲ್ಲಿಗೆ ಬಂದು ಭಿಕ್ಷೆ ಹಾಕಿ ಎಂದು ಬೇಡಿಕೊಂಡನು. ಅದನ್ನು ನಂಬಿದ ಸೀತಾ ದೇವಿ ಭಿಕ್ಷೆ ಹಾಕಲು ಲಕ್ಷ್ಮಣ ಹಾಕಿದ ಗೆರೆಯನ್ನು ದಾಟಿ ಮುಂದೆ ನಡೆದಳು. ಆಗ ಸೀತೆಯನ್ನು ಹಿಡಿದು ತನ್ನೊಂದಿಗೆ ಪುಷ್ಪಕ ವಿಮಾನದಲ್ಲಿ ಕರೆದೊಯ್ದನು. ನಂತರ ರಾಮ ಲಕ್ಷ್ಮಣ ಇಬ್ಬರು ಸೀತಾಮಾತೆಯನ್ನುಹುಡುಕಲು ಹನುಮನ ಸಹಾಯಪಡೆಯುತ್ತಾರೆ. ಹನುಮಂತ ಮತ್ತು ವಾನರಗಳ ಸಹಾಯದಿಂದ ಅಂತಿಮವಾಗಿ ಸೀತೆಯನ್ನು ಹುಡುಕುವಲ್ಲಿ ರಾಮನು ಯಶಸ್ವಿಯಾದನು. ಜೊತೆಗೆ ಸಮಾಜದಲ್ಲಿ ದುಷ್ಟ ಶಕ್ತಿಯಾದ ರಾವಣನನ್ನು ಸದೆ ಬಡಿದನು. ಇದನ್ನು ವಿಜಯದ ದಿನವಾಗಿ ಆಚರಿಸಲಾಗುತ್ತದೆ. ಹೀಗಾಗಿ ರಾವಣನನ್ನು ಕೆಟ್ಟವನು ಎಂದು ನೋಡಲಾಗುತ್ತದೆ. ಕೆಟ್ಟದನ್ನು ಸುಟ್ಟ ಒಳ್ಳೆಯದನ್ನು ಉಳಿಸಿಕೊಳ್ಳುವ ಪದ್ಧತಿ ಇದೆ.

ರಾವಣನ ಕೃತ್ಯವು ಕ್ಷಮಿಸಬಹುದಾಗಿದೆ

ರಾವಣನ ಕೃತ್ಯವು ಕ್ಷಮಿಸಬಹುದಾಗಿದೆ

ಆದರೆ ತನ್ನ ಸಹೋದರಿ ಶೂರ್ಪನಖಿಯನ್ನು ಅವಮಾನಿಸಿದ ಲಕ್ಷ್ಮಣನ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಲು ಸೀತಾ ದೇವಿಯನ್ನು ಪ್ರಲೋಭಿಸಿದ್ದರಿಂದ ರಾವಣನ ಕೃತ್ಯವು ಕ್ಷಮಿಸಬಹುದಾಗಿದೆ ಎಂದು ಸರಸ್ವತ್ ಅವರು ಹೇಳಿದ್ದಾರೆ. ರಾವಣ ಕೇವಲ ರಾಮನ ವಿಜಯಕ್ಕಾಗಿ ಆಶೀರ್ವದಿಸಿದನು ಎಂದು ಸಾರಸ್ವತ ಹೇಳಿಕೊಳ್ಳುತ್ತಾರೆ. ದೇವಸ್ಥಾನದಲ್ಲಿ ರಾವಣನ ಪೂಜೆಗೂ ಮೊದಲು, ಮೊಸರು, ಹಾಲು, ಜೇನುತುಪ್ಪದೊಂದಿಗೆ ಶಿವನ ಸ್ನಾನ ಸಮಾರಂಭವನ್ನು ನಡೆಸಲಾಯಿತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಹಲ್ ಹೇಳಿದರು. ಕೋವಿಡ್ -19 ನಿರ್ಬಂಧಗಳಿಂದಾಗಿ ಮಥುರಾದ ಮುಖ್ಯ ರಾಮಲೀಲಾದಲ್ಲಿ ಈ ವರ್ಷ ರಾವಣ ಮತ್ತು ಮೇಘನಾಥರ ಪ್ರತಿಕೃತಿಗಳನ್ನು ಸುಡಲಾಗಿಲ್ಲ ಎಂದು ಅವರು ಹೇಳಿದರು.

'ರಾವಣ ಮಹಾನ್ ವ್ಯಕ್ತಿ'

ರಾವಣನ ಪ್ರತಿಕೃತಿ ದಹನ ಮಾಡುವವರ ನಡುವೆ ರಾವಣನನ್ನು ಪೂಜಿಸುವ ಜನರೂ ಇದ್ದಾರೆ. ರಾಮಾಯಣ ಸಿಂಹಳದ ಸಾಂಸ್ಕೃತಿಕ- ಧಾರ್ಮಿಕ ಮುಖ್ಯಧಾರೆಯ ಭಾಗ ಅಲ್ಲ. ಆದರೆ ರಾವಣಾವಳೀಯ ಮತ್ತು ಇತರೆ ಪ್ರಾಚೀನ ಸಿಂಹಳೀಯ ಕೃತಿಗಳು ಆತನನ್ನು ಮಹಾನ್ ಎಂದು ಬಿಂಬಿಸಿವೆ.

ರಾವಣನ ಪೂಜೆ

ರಾವಣನ ಪೂಜೆ

ಮಧ್ಯಪ್ರದೇಶದ ಜಬ್ಬಲ್ಪುರದ ನಾಮದೇವ ಕಳೆದ 37 ವರ್ಷಗಳಿಂದ ರಾವಣನನ್ನು ಪೂಜಿಸುತ್ತಿದ್ದಾನೆ. ರಾವಣನ ಮಕ್ಕಳ ಹೆಸರುಗಳನ್ನೇ ಮಕ್ಕಳಿಗೆ ಇಟ್ಟಿದ್ದಾನೆ. ಆತನ ಅಂಗಡಿಯ ಹೆಸರು 'ಜೈ ಲಂಕೇಶ್ ಟೇಲರ್ಸ್'. ರಾಜಸ್ಥಾನದ ಜೋಧಪುರ- ಮಂಡೋರದ ಮುದ್ಗಲ್ ಗೋತ್ರದ ದವೆ ಬ್ರಾಹ್ಮಣರು ನವರಾತ್ರದಲ್ಲಿ ಯಜ್ಞ ನಡೆಸುವುದೇ ಅಲ್ಲದೆ ರಾವಣನ ಆತ್ಮಕ್ಕೆ ಶಾಂತಿ ಕೋರಿ ಶ್ರಾದ್ಧ ನಡೆಸುತ್ತಾರೆ. ಜೋಧಪುರದಲ್ಲಿ ಇವರು ಕಟ್ಟಿರುವ ರಾವಣ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ರಾವಣನ ಪತ್ನಿ ಮಂಡೋದರಿ ಪಶ್ಚಿಮ ರಾಜಸ್ಥಾನದ ಪಟ್ಟಣ ಮಂಡೋರದ ಮಗಳು. ಹೀಗಾಗಿ ರಾವಣನನ್ನು ಜೋಧಪುರದ ಅಳಿಯ ಎಂದೇ ಬಗೆಯುತ್ತದೆ ದವೆ ಬ್ರಾಹ್ಮಣ ಸಮುದಾಯ. ದಸರೆಯಲ್ಲಿ ರಾಮಲೀಲಾ ಆಚರಿಸಿ ರಾವಣನ ಬೃಹತ್ ಗೊಂಬೆಗಳನ್ನು ಸುಡುವುದನ್ನು ದವೆ ಬ್ರಾಹ್ಮಣರು ಒಪ್ಪುವುದಿಲ್ಲ.

ರಾವಣನ ದೇವಾಲಯ

ರಾವಣನ ದೇವಾಲಯ

ಉತ್ತರಪ್ರದೇಶದ ಕಾನ್ಪುರದ ರಾವಣ ದೇವಾಲಯ ನೂರು ವರ್ಷಗಳಿಗೂ ಹೆಚ್ಚು ಹಳೆಯದು. ದಸರೆಯಲ್ಲಿ ಪೂಜೆಗಾಗಿ ಬಾಗಿಲು ತೆರೆಯುವುದು ವರ್ಷಕ್ಕೊಮ್ಮೆ. ಈ ದೇವಾಲಯದ ಪೂಜಾರಿ ಹರಿಓಂ ತಿವಾರಿ ಮಾತುಗಳು ಅರ್ಥಗರ್ಭಿತ- ದ್ರಾವಿಡ ಗೌಡ್ ಬುಡಕಟ್ಟಿಗೆ ಸೇರಿದ ರಾವಣ. ವೈದಿಕ ಯುಗದಲ್ಲಿ ಅತ್ಯಂತ ಬುದ್ಧಿವಂತನೆಂದು ಹೆಸರಾಗಿದ್ದ. ರಾಕ್ಷಸ ಪಕ್ಷಪಾತಿಯಾಗಿದ್ದ ಆತ ಬ್ರಾಹ್ಮಣರಿಗಾಗಿ ಏನನ್ನೂ ಮಾಡಲಿಲ್ಲ . ಹೀಗಾಗಿ ಅವನ ಸೊಕ್ಕು ಮುರಿಯಲೆಂದೇ ವಿಷ್ಣು ಪರಮಾತ್ಮ ರಾಮನಾಗಿ ಜನಿಸಿದ.

ರಾವಣಗ್ರಾಮ

ರಾವಣಗ್ರಾಮ

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲೊಂದು ರಾವಣಗ್ರಾಮ ಉಂಟು. ಇದೇ ಸೀಮೆಯ ಮಂಡಸೂರು ಜಿಲ್ಲೆಯ ರಾವಣ ರುಂಡಿ ಮತ್ತು ಶಾಜಪುರ ಜಿಲ್ಲೆಯ ಭದಖೇಡಿಯಲ್ಲೂ ರಾವಣ ಪೂಜೆ ನಡೆಯುತ್ತದೆ. ರಾವಣರುಂಡಿಯ ರಾವಣ ವಿಗ್ರಹದ ಎತ್ತರ 35 ಅಡಿಗಳು. ಮಧ್ಯಪ್ರದೇಶದ ಛಿಂದ್ವಾಡ ಮತ್ತು ಛತ್ತೀಸ್‌ಗಢದ ಗೊಂಡ ಬುಡಕಟ್ಟು ಜನಾಂಗದಲ್ಲಿ ಲಂಕಾಪತಿ ಪೂಜೆಯ ಪರಂಪರೆಯೇ ಉಂಟು. ಮಧ್ಯಪ್ರದೇಶದ ಇಂದೂರಿನ ಪರ್ದೇಸೀಪುರದ ವಾಲ್ಮೀಕಿ ಸಮಾಜಕ್ಕೆ ರಾವಣ ದಹನದ ವೀಕ್ಷಣೆ ನಿಷಿದ್ಧ. ಈ ಸಮುದಾಯದ ಪಾಲಿಗೆ ರಾವಣ ದೈವ.

ರಾವಣ ಕುಲಗುರು

ರಾವಣ ಕುಲಗುರು

ಜಾರ್ಖಂಡದ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಶಿಬು ಸೊರೇನ್ ರಾಮಲೀಲಾ ಆಚರಣೆಯಂದು ರಾವಣನ ಪ್ರತಿಕೃತಿ ಗೊಂಬೆಗೆ ಕೊಳ್ಳಿ ಇಡುವ ಆಮಂತ್ರಣವನ್ನು ನಿರಾಕರಿಸಿದ್ದರು. ರಾವಣನನ್ನು ತಮ್ಮ ಕುಲಗುರು ಎಂದು ಕರೆದಿದ್ದ ಸೊರೇನ್ ಮಹಾನ್ ವಿದ್ವಾಂಸನ ಪ್ರತಿಕೃತಿಯನ್ನು ಸುಡುವುದು ಸಲ್ಲದು ಎಂದಿದ್ದರು. ಈ ಸೀಮೆಗಳ ಬುಡಕಟ್ಟು ಜನಾಂಗಗಳ ಗುರುವಿನ ಹೆಸರಿನ ಅವಿಭಾಜ್ಯ ಭಾಗ ರಾವಣನಾಗಿದ್ದಾನೆ.

ಹೀಗೆ ದೇಶಾದ್ಯಂತ ರಾವಣನ ಕೆಟ್ಟವನು ಎನ್ನುವ ಬಲವಾದ ನಂಬಿಕೆ ನಡುವೆ ರಾವಣನನ್ನು ಪೂಜಿಸಲಾಗುತ್ತಿದೆ. ಇದರ ಪರ ವಿರೋಧ ವಾದಗಳು ಇಂದಿಗೂ ಚರ್ಚೆಯಲ್ಲಿವೆ.

English summary
Ravana was worshipped at a Shiva temple here on Friday when the country celebrated Dusshera to mark the victory of Lord Ram over the demon king. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X