ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿದೂರದ ತಡೆರಹಿತ ವಿಮಾನ, ವಿಶೇಷತೆಗಳು

|
Google Oneindia Kannada News

ತಡೆ ರಹಿತವಾಗಿ ವಿಶ್ವದಲ್ಲೇ ಅತಿದೂರ ಕ್ರಮಿಸುವ ಕಮರ್ಷಿಯಲ್ ಫ್ಲೈಟ್ ಯೋಜನೆಯನ್ನು ಆಸ್ಟ್ರೇಲಿಯಾದ ಕ್ವಾಂಟಸ್ ಏರ್‌ಲೈನ್ ಸಂಸ್ಥೆ (Qantas Airline) ಅನಾವರಣಗೊಳಿಸಿದೆ. 2025ರಷ್ಟರಲ್ಲಿ ಈ ಸೇವೆ ಚಾಲನೆಗೆ ಬರುವ ನಿರೀಕ್ಷೆ ಇದೆ.

ಆಸ್ಟ್ರೇಲಿಯಾದ ಸಿಡ್ನಿ ನಗರದಿಂದ ಲಂಡನ್‌ವರೆಗೆ ತಡೆರಹಿತ 19 ಗಂಟೆಗಳ ಕಾಲ ವಿಮಾನ ಹಾರಾಟ ಸೇವೆ ಇದಾಗಿದೆ. ಇಷ್ಟು ಸುದೀರ್ಘ ಕಾಲ ಮತ್ತು ಇಷ್ಟು ದೂರ ಯಾವ ವಿಮಾನ ಕೂಡ ನಾನ್‌ಸ್ಟಾಪ್ ಆಗಿ ಹೋಗಿದ್ದಿಲ್ಲ. ಒಟ್ಟು 17,800 ಕಿಮೀ ದೂರ ಒಂದೂ ನಿಲುಗಡೆ ಇಲ್ಲದೇ ವಿಮಾನ ಹಾರಲಿರುವುದು ಇದೇ ಮೊದಲು.

ರನ್‌ವೇ 34ದಂತೆ SG-945 ಫ್ಲೈಟ್‌ನಲ್ಲಿ ಘಟನೆ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರುರನ್‌ವೇ 34ದಂತೆ SG-945 ಫ್ಲೈಟ್‌ನಲ್ಲಿ ಘಟನೆ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

5 ವರ್ಷಗಳ ಹಿಂದೆಯೇ ಇಂಥದ್ದೊಂದು ಸುದೀರ್ಘ ವಿಮಾನ ಹಾರಾಟಕ್ಕೆ ಕ್ವಾಂಟಸ್ ಯೋಜಿಸಿತ್ತು. ಇದೀಗ ಅದನ್ನ ಕಾರ್ಯಗತಗೊಳಿಸಲು ಸಂಸ್ಥೆ ಮುಂದಡಿ ಇಟ್ಟಿದೆ. ಪ್ರಾಜೆಕ್ಟ್ ಸನ್‌ರೈಸ್ (Project Sunrise) ಎಂದು ಕರೆಯಲಾಗಿರುವ ಈ ಯೋಜನೆಯಲ್ಲಿ ಏರ್‌ಬಸ್ A350-1000ನ 12 ವಿಮಾನಗಳಿಗೆ ಆರ್ಡರ್ ಮಾಡಿದೆ. ಇವು ಆಸ್ಟ್ರೇಲಿಯಾದಿಂದ ಲಂಡನ್ ಮತ್ತು ನ್ಯೂಯಾರ್ಕ್‌ಗೆ ಹಾರಾಟ ನಡೆಸಲಿವೆ.

Worlds longest non-stop flight by Qantas, know details

ಇನ್ನು, ಏರ್‌ಬಸ್ ಕಂಪನಿಯಿಂದ 40 ವಿಮಾನಗಳಿಗೂ ಕ್ವಾಂಟಸ್ ಸಂಸ್ಥೆ ಆರ್ಡರ್ ಮಾಡಿದೆ. 2034 ರಷ್ಟರಲ್ಲಿ ಇನ್ನೂ 94 ವಿಮಾನಗಳು ಕ್ವಾಂಟಸ್ ಸೇವೆಗೆ ನಿಯೋಜನೆಗೊಳ್ಳಲಿವೆ. ಕ್ವಾಂಟಸ್ ಏರ್‌ಲೈನ್ ಸಂಸ್ಥೆ ಈಗಾಗಲೇ ತನ್ನ ನಿಲುಗಡೆ ರಹಿತ ವೈಮಾನಿಕ ಹಾರಾಟ ಸೇವೆಯ ಪರೀಕ್ಷೆಗಳನ್ನು ನಡೆಸುತ್ತಿದೆ.

Worlds longest non-stop flight by Qantas, know details

ಸಿಡ್ನಿಯಿಂದ ಲಂಡನ್‌ಗೆ ವೈಮಾನಿಕ ಹಾದಿ 17,800 ಕಿಮೀ ದೂರ ಇದ್ದು 19 ಗಂಟೆ 19 ನಿಮಿಷ ತೆಗೆದುಕೊಂಡಿತು. ಹಾಗೆಯೇ, ಸಿಡ್ನಿಯಿಂದ ನ್ಯೂಯಾರ್ಕ್ ನಗರಕ್ಕೆ 16,200 ಕಿಮೀ ದೂರ ಇದ್ದು 19 ಗಂಟೆ ತಗುಲಿದೆ. ಪರ್ತ್ ನಗರದಿಂದ ಲಂಡನ್ ನಗರಕ್ಕೆ 17 ಗಂಟೆ ಆಗಿದೆ. ಹಾಗೆಯೇ, ಮೆಲ್ಬೋರ್ನ್ ನಗರದಿಂದ ಲಂಡನ್ ಮತ್ತು ನ್ಯೂಯಾರ್ಕ್ ನಗರಗಳಿಗೆ ನಾನ್‌ಸ್ಟಾಪ್ ಫ್ಲೈಟ್‌ನ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಜರ್ಮನಿಯಲ್ಲಿ ಪ್ರಧಾನಿ ಮೋದಿ ಸಂದೇಶರಷ್ಯಾ-ಉಕ್ರೇನ್ ಯುದ್ಧದ ಕುರಿತು ಜರ್ಮನಿಯಲ್ಲಿ ಪ್ರಧಾನಿ ಮೋದಿ ಸಂದೇಶ

Worlds longest non-stop flight by Qantas, know details

ಹಲವು ವಿಶೇಷತೆಗಳು; 17 ಗಂಟೆಗೂ ಹೆಚ್ಚು ಕಾಲ ನಿಲುಗಡೆರಹಿತವಾಗಿ ಹಾರುವ ವಿಮಾನದಲ್ಲಿ ಪ್ರಯಾಣಿಕರಿಗಾಗಿ ಕೆಲ ವಿಶೇಷ ಸೌಲಭ್ಯಗಳನ್ನು ಒಳಗೊಳ್ಳಲಾಗಿದೆ. ವಿಮಾನದ ಕ್ಯಾಬಿನ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಫಸ್ಟ್ ಕ್ಲಾಸ್ ವಿಭಾಗದಲ್ಲಿ ಪ್ರತ್ಯೇಕ ಹಾಸಿಗೆ, ಇಳಿಜಾರಿನ ಕುರ್ಚಿ, ವಾರ್ಡ್‌ರೋಬ್ ಇತ್ಯಾದಿ ಸವಲತ್ತುಗಳು ಇರಲಿವೆ ಎಂಬುದು ಸದ್ಯ ಕ್ವಾಂಟಸ್ ಏರ್‌ಲೈನ್‌ನಿಂದ ಸಿಕ್ಕಿರುವ ಮಾಹಿತಿ.

(ಒನ್ಇಂಡಿಯಾ ಸುದ್ದಿ)

English summary
Qantas airline announced the launch of the world's longest non-stop commercial flight. This service will start by the end of 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X