ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಇಂದು ವಿಶ್ವ ಪ್ರವಾಸೋದ್ಯಮ ದಿನ, ನಮ್ಮ ಮಾನಸಿಕ ಒತ್ತಡವೆಲ್ಲವನ್ನೂ ಮರೆತು ಸಹಜಸ್ಥಿತಿಗೆ ತರುವಲ್ಲಿ ನಾವು ಕೈಗೊಳ್ಳುವ ಪ್ರವಾಸ ಪ್ರಮುಖಪಾತ್ರವಹಿಸುತ್ತದೆ.

ವಿಶ್ವ ಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27ರಂದು ಆಚರಿಸುತ್ತದೆ. ಹಲವಾರು ಪ್ರವಾಸಿ ಕೇಂದ್ರಗಳು, ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ಈ ದಿನವನ್ನು ಆಚರಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದೆ.

ಮೈಸೂರು, ಕೊಡಗು, ಗೋವಾ, ಕೊಡೈಕೆನಾಲ್, ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳನ್ನು ತೆರೆಯಲಾಗಿದೆ. ಜನರು ಮಾಸ್ಕ್ ಧರಿಸಿ ತಮ್ಮ ನೆಚ್ಚಿನ ಸ್ಥಳಗಳನ್ನು ನೋಡಲು ಹೋಗುತ್ತಿರುವುದು ನಾವು ನೋಡಬಹುದು.

World Tourism Day 2021: Know Its History And Significance

ಆಯಾ ರಾಜ್ಯ ಸರ್ಕಾರಗಳು ಸಹ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಪ್ರವಾಸಿ ಸ್ಥಳಗಳನ್ನು ನೋಡಲು ಅವಕಾಶ ಕಲ್ಪಿಸಿವೆ. ಹಾಗಾಗಿ ಪ್ರವಾಸಿ ಪ್ರಿಯರು ಕೊರೊನಾ ನಂತರ ಜಗತ್ತು ಹೇಗಿದೆ ಎಂದು ತಿಳಿಯಲು ಸಿದ್ಧತೆ ಮಾಡಿಕೊಳ್ಳಬಹುದು. ಇಂತಹ ಕೆಟ್ಟ ಸಮಯದಲ್ಲೂ ಪ್ರಯಾಣ ನಿಮ್ಮ ಮನಸ್ಸಿಗೆ ವಿಶ್ರಾಂತಿ ಕೊಡಬಹುದು.

ಪ್ರಯಾಣ ನಮಗೆಲ್ಲಾ ಭರವಸೆಯ ಮಿಂಚನ್ನು ಒದಗಿಸುತ್ತದೆ. ಸಾಹಸಿ ಪ್ರಿಯರಿಗೆ ಹುರುಪು ತಂದುಕೊಡುತ್ತದೆ. ಹೇಗಿದ್ದರೂ ಪ್ರಪಂಚದ ಅನೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳು ಸರಾಗವಾಗಿರುವುದರಿಂದ ನಾವು ಈಗ ನೋಡಬೇಕಾದ ಪ್ರವಾಸಿ ತಾಣಗಳ ಪಟ್ಟಿ ಮಾಡಿಕೊಂಡು ಹೊರಡಬಹುದು. ಆದರೆ ನಾವಿಲ್ಲಿ ಗಮನಿಸಬೇಕಾದ ವಿಷಯವೆಂದರೆ ಪ್ರಯಾಣಕ್ಕೆ ಮತ್ತೆ ಅನುಮತಿಸಿದರೂ, ಕೋವಿಡ್ -19 ವೈರಸ್ ಇನ್ನೂ ಗಾಳಿಯಲ್ಲಿ ಉಳಿದಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕಾಗಿದೆ.

ಪ್ರವಾಸೋದ್ಯಮ ದಿನದ ಇತಿಹಾಸ: 1997 ರಿಂದ ಆಚರಣೆಯಲ್ಲಿರುವ ಈ ಪ್ರವಾಸೋದ್ಯಮ ದಿನವನ್ನು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980ರಲ್ಲಿ ಸೆಪ್ಟಂಬರ್ 27ನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಘೋಷಣೆ ಮಾಡಿತು. ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ವೃದ್ಧಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸೆಪ್ಟಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ. 1997ರ ನಂತರ ಪ್ರತಿ ವರ್ಷವೂ ಒಂದೊಂದು ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡು ಅಧಿಕೃತವಾಗಿ ಪ್ರವಾಸೋದ್ಯಮ ದಿನ ಆಚರಿಸುವ ನಿರ್ಧಾರ ಕೈಗೊಂಡಿತು. ಈ ಕತಾರ್ ನಲ್ಲಿ "ಅಭಿವೃದ್ದಿಗಾಗಿ ಸುಸ್ಥಿರ ಪ್ರವಾಸ" ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿ:ಸಾಂಕ್ರಾಮಿಕ ವೈರಸ್‌ ಜಗತ್ತಿನ ಮೂಲೆ ಮೂಲೆಗಳನ್ನು ಬಿಡದೆ ಕಾಡುತ್ತಿದೆ. ಆದ್ದರಿಂದ ಪ್ರಯಾಣದ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಫೇಸ್ ಮಾಸ್ಕ್, ಜೋಡಿ ಕೈಗವಸುಗಳು, ಆಲ್ಕೋಹಾಲ್ ವೈಪ್ಸ್ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ ಗಳು ಹೀಗೆ.

ಒಟ್ಟಿನಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಒಯ್ಯಿರಿ. ಎಲಿವೇಟರ್ ಅಥವಾ ಎಟಿಎಂ ಬಟನ್ ಪ್ರೆಸ್ ಮಾಡಲು ಟೂತ್‌ಪಿಕ್‌'ನಂತಹ ಸಣ್ಣ ಬಿಸಾಡಬಹುದಾದ ವಸ್ತುಗಳನ್ನು ಒಯ್ಯಿರಿ. ಬಳಕೆಯ ನಂತರ ಅವುಗಳನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡಿ. ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದು, ಪ್ಲಾಸ್ಟಿಕ್‌ ಕವರ್'ನಲ್ಲಿ ಇರಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ದೀರ್ಘ ಪ್ರವಾಸ ಕೈಗೊಂಡಾಗ ಸ್ಥಳೀಯ ಅಂಗಡಿಗಳಿಂದ ಇವುಗಳನ್ನೆಲ್ಲಾ ಖರೀದಿಸುವುದು ತಪ್ಪುತ್ತದೆ.

ಭಾರತದಲ್ಲಿನ ಪ್ರವಾಸೋದ್ಯಮ ಸ್ಥಿತಿಗತಿ: ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಪ್ರವಾಸಿ ತಾಣಗಳನ್ನು ಮುಚ್ಚಿದ್ದರಿಂದ ಭಾರತಕ್ಕೆ ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಇದೀಗ ಕೋವಿಡ್‌ ನಿಯಮಗಳೊಂದಿಗೆ ಒಂದೊಂದೇ ಪ್ರವಾಸ ತಾಣಗಳನ್ನು ತೆರೆಯಲಾಗಿದೆ.

ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಹಾಗೆಯೇ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ. ಇದು ರಾಷ್ಟ್ರೀಯ ಜಿಡಿಪಿಗೆ 6.23% ಹಾಗೂ ಭಾರತದಲ್ಲಿ ಒಟ್ಟು ಉದ್ಯೋಗಕ್ಕೆ 8.78%ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ 5 ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರವಾಸೋದ್ಯಮ ಸೇವಾ ವಲಯವು 2008ರಲ್ಲಿ ಸುಮಾರು US$100 ಶತಕೋಟಿ ಆದಾಯ ಗಳಿಸಿತು.

ವಾರ್ಷಿಕ 9.4% ಅಭಿವೃದ್ಧಿ ದರದಲ್ಲಿ, 2018ರೊಳಗೆ US$275.5 ಶತಕೋಟಿ ಆದಾಯ ತರುವ ಸಾಧ್ಯತೆಯಿದೆ. ವಿಶ್ವ ಪರ್ಯಟನ ಮತ್ತು ಪ್ರವಾಸೋದ್ಯಮ ಸಮಿತಿ ಯ ಪ್ರಕಾರ, ಪರ್ಯಟನ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯ ಸಾಮರ್ಥ್ಯ ಹೊಂದಿರುವ ಭಾರತ ಉಪಖಂಡಕ್ಕೆ ಮುಂದಿನ ಹತ್ತು ವರ್ಷಗಳ ವರೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ಅಗತ್ಯ ಸಾಮರ್ಥ್ಯವಿದೆ.

ವಿಶ್ವದಲ್ಲೇ ಅತಿ ಜನಪ್ರಿಯ ಪ್ರವಾಸಿ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ. ಭಾರತ ದರಗಳ ಸ್ಫರ್ಧೆಯಲ್ಲಿ ಆರನೆಯ ಸ್ಥಾನ ಹಾಗೂ ಸುರಕ್ಷತೆ ಹಾಗೂ ಭದ್ರತೆಯ ವಿಚಾರದಲ್ಲಿ 39ನೇ ಸ್ಥಾನದಲ್ಲಿದೆ.

English summary
World Tourism Day was first designated in September 1979 by the World Tourism Organization. It officially began in 1980. The reason behind choosing September 27 as the day to celebrate this is also important. On this day, the UNWTO statutes were adopted on September 27, 1970.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X