ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲಿಪಿಲಿ ಗುಬ್ಬಚ್ಚಿಯ ನಿಗೂಢ ಕಣ್ಮರೆ... ವಿಶ್ವ ಗುಬ್ಬಿ ದಿನದ ಆತಂಕ

|
Google Oneindia Kannada News

ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ. ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊದಲ ಕೆಲಸ!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹೆಣ್ಣು ಗುಬ್ಬಿಯ ಗರ್ಭದಲ್ಲಿ ಪುಟ್ಟದೊಂದು ಗುಬ್ಬಚ್ಚಿ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಗುಬ್ಬಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಜೋಪಾನ ಮಾಡುವುದೇನು.., ಕಾಳು ಕಡಿ ಸಂಗ್ರಹಿಸುವುದೇನು..! ಆ ಸಂಭ್ರಮ ಅವಕ್ಕೇ ಗೊತ್ತು! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ! ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ... ಆಹಾ ಅದನ್ನು ನೋಡಿಯೇ ಆನಂದಿಸಬೇಕು.

ಚಿಂವ್ ಚಿಂವ್ ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ...ಚಿಂವ್ ಚಿಂವ್ ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ...

ಆದರೆ... ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ...? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು 'ಈ ಮನುಷ್ಯರ ಸಹವಾಸವೇ ಸಾಕು' ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದಾವಾ..? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ?

ವಿಶ್ವ ಗುಬ್ಬಿ ದಿನದ ಸಂಕಲ್ಪ

ವಿಶ್ವ ಗುಬ್ಬಿ ದಿನದ ಸಂಕಲ್ಪ

ಅಳಿವಿನಂಚಿಗೆ ಸರಿಯುತ್ತಿರುವ 'ಮನೆಗುಬ್ಬಿ'ಗಳನ್ನು ರಕ್ಷಸಿ ಎಂದು ಕೂಗಿ ಹೇಳುವುದಕ್ಕಾಗಿ ಇಂದು 'ವಿಶ್ವ ಮನೆಗುಬ್ಬಿಗಳ ದಿನ'ವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಾ.20 ರಂದು ಆಚರಣೆಗೊಳ್ಳುವ ಈ ದಿನದಂದು ಗುಬ್ಬಿಗಳ ಸಂತತಿಯನ್ನು ರಕ್ಷಿಸುವುದಕ್ಕೆ ಪಣತೊಡಲಾಗುತ್ತದೆ. ಮನುಷ್ಯನ ಸ್ನೇಹಿತರಾದ ಈ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತ ಮನೆತುಂಬ ಓಡಾಡುತ್ತಿದ್ದರೇನೇ ಶೋಭೆ. ಆದರೆ ಕಾರಣಾಂತರಗಳಿಂದ ಅವುಗಳ ಸಂತತಿ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?

ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?

ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತ್ತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದಿದ್ದೇ ಮನೆಯ ಮಾಡಿನ ಸಂದಿ-ಗೊಂದಿಗಳಲ್ಲಿ. ಸದಾ ಮನೆಯಲ್ಲೇ ಕೂತು, ಹೊರಗೆಲ್ಲೂ ಸುತ್ತದವರಿಗೆ 'ಮನೆಗುಬ್ಬಿ' ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ.

Array

ವಿಶ್ವವನ್ನು ಸುಂದರವಾಗಿಸಿದ ಗುಬ್ಬಚ್ಚಿಗಳು

ವಿಶ್ವ ಗುಬ್ಬಿಗಳ ದಿನದಂದು ಈ ಪುಟ್ಟ ಪ್ರಭೇದವನ್ನು ರಕ್ಷಿಸಲು ಕೈಜೋಡಿಸೋಣ. ಅವುಗಳ ಚಿಲಿಪಿಲಿ ಸದ್ದು ಈ ವಿಶ್ವವನ್ನು ಮತ್ತಷ್ಟು ಸುಂದರವಾಗಿಸಿದೆ. ಅವುಗಳಿಗೆ ನೀರು, ಆಹಾರ, ನೆರಳು ನೀಡಿ ಸಲಹೋಣ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ಈ ಸುಂದರ ಗುಬ್ಬಿಗಳನ್ನು ರಕ್ಷಿಸೋಣ. ಇಲ್ಲವೆಂದರೆ ನಮ್ಮ ಮುಂದಿನ ತಲೆಮಾರಿಗೆ ಇವುಗಳ ಚಿತ್ರವನ್ನಷ್ಟೇ ತೋರಿಸಬೇಕಾದೀತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಬಿಜೆಪಿ ಮುಖಂಡ ಹರ್ಷವರ್ಧನ್.

Array

ರಕ್ಷಣೆಯ ಕುರಿತು ಅರಿವು ಮೂಡಿಸೋಣ

ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಈ ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸೋಣ ಎಂದಿದ್ದಾರೆ ಬಬುಲ್ ಸುಪ್ರಿಯೋ ಎಂಬುವವರು.

ಗುಬ್ಬಿಗಳ ಚಿಲಿಪಿಲಿ ಸದ್ದಿನಿಂದಲೇ ಈ ಜಗತ್ತು ಸುಂದರವಾಗಿದೆ. ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅವುಗಳಿಗೆ ನಮ್ಮ ಮನೆಯ ಒಂದು ಮಾಡಿನಲ್ಲಿ ಕೊಂಚ ಜಾಗ ಮಾಡಿಕೊಡೋಣ. ಅವುಗಳಿಗೆ ನೀರು, ಆಹಾರ ಒದಗಿಸೋಣ. ಈ ಬೇಸಿಗೆಯಲ್ಲಿ ಅವುಗಳ ರಕ್ಷಣೆ ನಮ್ಮ ಹೊಣೆ ಎಂದಿದ್ದಾರೆ ರಿಶಿಬಾ ದತ್ತಾ.

ದಯವಿಟ್ಟು ಗುಬ್ಬಚ್ಚಿಗಳನ್ನು ವಾಪಸ್ ಕರೆತನ್ನಿ ಎಂದು ಭಾವುಕರಾಗಿ ಹೇಳಿದ್ದಾರೆ ಸಮೀರ್ ಖಾನ್ ಎಂಬುವವರು.

English summary
World Sparrow Day is a day designated to raise awareness of the house sparrow and then other common birds to urban environments, and of threats to their populations, observed on 20 March
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X