ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Space Week 2022- ಬಾಹ್ಯಾಕಾಶ ವಾರ ವಿಶೇಷತೆ ಏನು? ಯಾಕೆ ಆಚರಿಸಲಾಗುತ್ತದೆ?

|
Google Oneindia Kannada News

ಅಕ್ಟೋಬರ್ 4, ಇವತ್ತಿನಿಂದ ಒಂದು ವಾರ ಕಾಲ ವಿಶ್ವ ಬಾಹ್ಯಾಕಾಶ ವಾರವಾಗಿ ಆಚರಿಸಲಾಗುತ್ತಿದೆ. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತಾರಾಷ್ಟ್ರೀಯ ಸಂಭ್ರಮಾಚರಣೆ. ಮಾನವಕುಲದ ಒಳಿತಿಗೆ ವಿಜ್ಞಾನದ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಮತ್ತು ಗುರುತಿಸಲು ವರ್ಲ್ಡ್ ಸ್ಪೇಸ್ ವೀಕ್ ಅನ್ನು ಆಚರಿಸಲಾಗುತ್ತಿದೆ.

ವಿಶ್ವದಲ್ಲಿ ವಿವಿಧ ಸಂದರ್ಭಗಳಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಅತಿದೊಡ್ಡ ಬಾಹ್ಯಾಕಾಶ ಕಾರ್ಯಕ್ರಮವೆಂದರೆ ವರ್ಲ್ಡ್ ಸ್ಪೇಸ್ ವೀಕ್.

ಆಯುಧ ಪೂಜೆ 2022: ಕರ್ನಾಟಕದ ನಗರಗಳಲ್ಲಿ ಇಂದಿನ ಹೂವು, ಹಣ್ಣಿನ ಬೆಲೆಯನ್ನು ತಿಳಿಯಿರಿಆಯುಧ ಪೂಜೆ 2022: ಕರ್ನಾಟಕದ ನಗರಗಳಲ್ಲಿ ಇಂದಿನ ಹೂವು, ಹಣ್ಣಿನ ಬೆಲೆಯನ್ನು ತಿಳಿಯಿರಿ

ಬಾಹ್ಯಾಕಾಶ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಆಕರ್ಷಿಸಲು ಹಾಗು ಅಂತಾರಾಷ್ಟ್ರೀಯ ಸಹಕಾರ ನಿರ್ಮಿಸಲು ವರ್ಲ್ಡ್ ಸ್ಪೇಸ್ ವೀಕ್ ಒಂದು ಉತ್ತಮ ವೇದಿಕೆಯಾಗಿದೆ. ಪ್ರತೀ ವರ್ಷ ಅಕ್ಟೋಬರ್ 4ರಿಂದ 10ರವರೆಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತರಾಗಿರುವವರು ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ.

world-space-week-2022-theme-history-and-significance

ಈ ಬಾರಿಯ ಥೀಮ್

ಸ್ಪೇಸ್ ಮತ್ತು ಸಸ್ಟೈನಬಿಲಿಟಿ (ಬಾಹ್ಯಾಕಾಶ ಮತ್ತು ಸುಸ್ಥಿರತೆ) ಎಂಬುದು ಈ ವರ್ಷದ ಥೀಮ್. ಬಾಹ್ಯಾಕಾಶದಲ್ಲಿ ಮತ್ತು ಬಾಹ್ಯಾಕಾಶದಿಂದ ಸುಸ್ಥಿರತೆ ಸಾಧಿಸುವತ್ತ ಈ ವಾರ ಗಮನ ಹರಿಸಲಾಗುವುದು ಎಂದು ವಿಶ್ವಸಂಸ್ಥೆ ಹೇಳಿದೆ.

ಬಾಹ್ಯಾಕಾಶವನ್ನು ಮನುಷ್ಯರು ಹೇಗೆ ಉಪಯೋಗಿಸುತ್ತಾರೆ ಎಂಬುದರ ಮೇಲೆ ಬಾಹ್ಯಾಕಾಶ ಸುಸ್ಥಿರತೆ ಅವಲಂಬಿತವಾಗಿದೆ. ಅದರಲ್ಲೂ ಭೂಮಿಯ ಸುತ್ತ ಇರುವ ಕಕ್ಷೆಯ ಪ್ರದೇಶವನ್ನು ಮನುಷ್ಯರು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ. ಇದೇ ವಿಚಾರವು ಈ ವರ್ಷದ ವರ್ಲ್ಡ್ ಸ್ಪೇಸ್ ವೀಕ್‌ನ ಥೀಮ್ ಆಗಿದೆ.

ಇಂಧನ ಖಾಲಿ, ಸಿಗ್ನಲ್ ಖತಂ; ಭಾರತದ ಮಂಗಳಯಾನ ಅಂತಿಮಯಾತ್ರೆ?ಇಂಧನ ಖಾಲಿ, ಸಿಗ್ನಲ್ ಖತಂ; ಭಾರತದ ಮಂಗಳಯಾನ ಅಂತಿಮಯಾತ್ರೆ?

ಹವಾಮಾನ ಬದಲಾವಣೆಯ ಅಧ್ಯಯನ, ನೀರು ಮತ್ತು ಮಣ್ಣಿನ ಮಾಲಿನ್ಯವನ್ನು ಗುರುತಿಸುವುದು, ಅಭಿವೃದ್ಧಿಶೀಲ ದೇಶಗಳಲ್ಲಿ ಕೃಷಿ ಪ್ರಗತಿಯನ್ನು ಬೆಂಬಲಿಸುವುದು ಈ ಮೂಲಕ ನಮ್ಮ ಭೂಮಿಯಲ್ಲಿ ಪರಿವರ್ತನೆ ತರುವ ಬಗ್ಗೆ ಬಾಹ್ಯಾಕಾಶ ಆಸಕ್ತರ ಮತ್ತು ವಿಜ್ಞಾನಿಗಳ ಗಮನ ಇರಲಿದೆ.

world-space-week-2022-theme-history-and-significance

"17 ಸುಸ್ಥಿರ ಅಭಿವೃದ್ಧಿ ಆಶಯಗಳನ್ನು (ಎಸ್‌ಡಿಜಿ- ಸಸ್ಟೈನಬಲ್ ಡೆಬಲಪ್ಮೆಂಟ್ ಗೋಲ್) ತಲುಪಲು ಇರಿಸಲಾಗಿರುವ 169 ಗುರಿಗಳ ಪೈಕಿ 65 ಗುರಿಗಳನ್ನು ಭೂ ವೀಕ್ಷಣಾ ಉಪಗ್ರಹ ಹಾಗೂ ಇತರ ತಂತ್ರಜ್ಞಾನಗಳ ನೆರವಿನಿಂದ ಈಡೇರಿಸಲಾಗುತ್ತಿದೆ. ಬಾಹ್ಯಾಕಾಶ ಶೋಧನೆಗೆ ವಿಜ್ಞಾನಗಳಿಗೆ ಲಭ್ಯ ಇರುವ ಸಾಧನ ಮತ್ತು ತಂತ್ರಜ್ಞಾನಗಳಿಲ್ಲದೇ ಈ ಎಸ್‌ಡಿಜಿಗಳನ್ನು ಸಾಧಿಸುವುದು ಬಹಳ ಕಷ್ಟ," ಎಂದು ವಿಶ್ವಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ವರ್ಲ್ಡ್ ಸ್ಪೇಸ್ ವೀಕ್ ಇತಿಹಾಸ

ವಿಶ್ವ ಬಾಹ್ಯಾಕಾಶ ವಾರದ ವಾರ್ಷಿಕ ಆಚರಣೆಯನ್ನು ವಿಶ್ವಸಂಸ್ಥೆ ಮತ್ತು ವರ್ಲ್ಡ್ ಸ್ಪೆಸ್ ವೀಕ್ ಸಂಸ್ಥೆ (ಡಬ್ಲ್ಯೂಎಸ್‌ಡಬ್ಲ್ಯೂಎ) ಜಂಟಿಯಾಗಿ ಆಯೋಜಿಜಸುತ್ತವೆ. 1999ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ವರ್ಲ್ಡ್ ಸ್ಪೆಸ್ ವೀಕ್ ಆಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ಆದರೆ, ಅಕ್ಟೋಬರ್ 4ರಿಂದ 10 ದಿನವನ್ನು ಬಾಹ್ಯಾಕಾಶ ವಾರವಾಗಿ ನಿಗದಿ ಮಾಡಲು ಕೆಲ ಕಾರಣಗಳುಂಟು. ಅಕ್ಟೋಬರ್ 4ರಂದು ಮೊದಲ ಮನುಷ್ಯನಿರ್ಮಿತ ಸೆಟಿಲೈಟ್ ಸ್ಪುಟ್ನಿಕ್-1 ಚಾಲನೆಗೊಂಡ ದಿನ. 1957ರಲ್ಲಿ ಸ್ಪುಟ್ನಿಕ್-1 ಅನ್ನು ಕಕ್ಷೆಗೆ ಕಳುಹಿಸಿದ್ದು, ಭವಿಷ್ಯದ ಮನುಷ್ಯನ ಗಗನ ಅನ್ವೇಷಣೆಗೆ ಹೆಬ್ಬಾಗಿಲು ತೆರೆದಂತಾಗಿತ್ತು.

ಅಮೆರಿಕ, ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ಬಾಹ್ಯಾಕಾಶ ಶೋಧನೆ ಕಾರ್ಯಕ್ರಮಗಳು ಆಯೋಜನೆಗೊಳ್ಳತೊಡಗಿದವು. 1967 ಅಕ್ಟೋಬರ್ 10ರಂದು ಬಾಹ್ಯಾಕಾಶ ಅನ್ವೇಷಣೆ ಮತ್ತು ಬಳಕೆ ಮಾಡಲು ನಿಯಮಗಳಿರುವ ಒಪ್ಪಂದವನ್ನು ರೂಪಿಸಲಾಯಿತು. ಎಲ್ಲಾ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದವು.

1999ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ವರ್ಲ್ಡ್ ಸ್ಪೇಸ್ ವೀಕ್ ಘೋಷಣೆಯಾಗಿದ್ದು. ಒಂದು ವರ್ಷದ ನಂತರ, ಅಂದರೆ 2000ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ವಾರವನ್ನು ಆಚರಿಸಲಾಯಿತು. ಮೊದಲ ಕಾರ್ಯಕ್ರಮದಲ್ಲಿ "ಬಾಹ್ಯಾಕಾಶ ಮನ್ವಂತರದ ಆರಂಭ" ಎಂಬುದು ಥೀಮ್ ಆಗಿತ್ತು. ಆದರೆ, 2021ರಲ್ಲಿ, ಅಂದರೆ ಕಳೆದ ವರ್ಷ ಈ ಕಾರ್ಯಕ್ರಮ ದಾಖಲೆ ಮಟ್ಟದಲ್ಲಿ ನಡೆದಿತ್ತು. ಒಂದು ವಾರದಲ್ಲಿ 96 ದೇಶಗಳಲ್ಲಿ 6,418 ಕಾರ್ಯಕ್ರಮಗಳು ನಡೆದಿದ್ದವು.

(ಒನ್ಇಂಡಿಯಾ ಸುದ್ದಿ)

English summary
World Space Week that begun from 2000, will be celebrated from October 4-10th. This year the theme is Space and Sustainability
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X