ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೊರೊನಾ’ ಕೊಂದ ಮಹಿಳಾಮಣಿಗಳು, ಇದು ಸಾಧಕಿಯರ ವರ್ಷ..!

|
Google Oneindia Kannada News

ಒಂದು ಕಡೆ ಕೊರೊನಾ ಅಪ್ಪಳಿಸಿತ್ತು, ಮೊತ್ತೊಂದು ಕಡೆ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಇಂತಹ ಹೊತ್ತಲ್ಲಿ ಜಗತ್ತು ಸಹಜವಾಗಿ ವಿಶ್ವನಾಯಕರ ಕಡೆ ತಿರುಗಿತ್ತು. ಆದರೆ ಯಾವ ವಿಶ್ವ ನಾಯಕನೂ ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಜಯಿ ಆಗಲೇ ಇಲ್ಲ. ಆದರೆ ವಿಶ್ವ ನಾಯಕಿಯರು ಅದನ್ನ ಮಾಡಿ ತೋರಿಸಿದ್ದರು.

ಜಗತ್ತು ಕೊರೊನಾ ಕೂಪದಲ್ಲಿ ನರಳುವಾಗ ಅದರಿಂದ ಬಚಾವ್ ಆಗಿದ್ದು ಕೆಲವು ದೇಶಗಳು ಮಾತ್ರ. ಹೀಗೆ 2020ರಲ್ಲಿ ಸದ್ದು ಮಾಡಿರುವ ಮಹಿಳಾ ರಾಜಕಾರಣಿಗಳ ಪೈಕಿ ನ್ಯೂಜಿಲ್ಯಾಂಡ್ ಪ್ರಧಾನಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ನ್ಯೂಜಿಲ್ಯಾಂಡ್ ಅಕ್ಕಪಕ್ಕದ ರಾಷ್ಟ್ರಗಳು ಕೊರೊನಾ ಸುಳಿಗಾಳಿಗೆ ಸಿಲುಕಿ ತರಗೆಲೆಯಂತೆ ಹಾರುವಾಗ ವೈರಸ್ ವಿರುದ್ಧ ವಾರ್ ಮಾಡಿದ್ದವರು ಜಸಿಂಡಾ ಅರ್ಡೆರ್ನ್.

ನ್ಯೂಜಿಲ್ಯಾಂಡ್ ಪ್ರಧಾನಿಯಾಗಿ 2ನೇ ಅವಧಿಗೆ ಆಯ್ಕೆ ಆಗಿರುವ ಜಸಿಂಡಾ ಅರ್ಡೆರ್ನ್, ನ್ಯೂಜಿಲ್ಯಾಂಡ್‌ನಲ್ಲಿ ಕೊರೊನಾ ವ್ಯಾಪಕವಾಗಿ ಹರಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದರು. ಜಸಿಂಡಾ ಮಾತ್ರವಲ್ಲದೆ ಅನೇಕ ದೇಶಗಳ ನಾಯಕಿಯರು 2020ರಲ್ಲಿ ಜಾಗತಿಕವಾಗಿ ಸದ್ದು ಮಾಡಿದ್ದಾರೆ. ಅವರ ಸಾಧನೆ ಹಾಗೂ ವಿವರಗಳನ್ನ ಇಲ್ಲಿ ತಿಳಿಯೋಣ.

ರೈತರ ಸ್ಥಿತಿ ಕಂಡು ಪ್ರಧಾನಿ ಕಣ್ಣೀರು

ರೈತರ ಸ್ಥಿತಿ ಕಂಡು ಪ್ರಧಾನಿ ಕಣ್ಣೀರು

ಜಗತ್ತಿನಾದ್ಯಂತ ಅತಿಹೆಚ್ಚು ಮಿಂಕ್ ಸಸ್ತನಿಗಳನ್ನು ರಫ್ತು ಮಾಡುವ ದೇಶ ಡೆನ್ಮಾರ್ಕ್. ಮಿಂಕ್‌ ತುಪ್ಪಳ ಅಂದರೆ ಅವುಗಳ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಚರ್ಮದಿಂದ ಕೋಟ್, ಬ್ಯಾಗ್ ಹೀಗೆ ವಿವಿಧ ರೀತಿ ವಸ್ತುಗಳನ್ನು ತಯಾರಿಸುತ್ತಾರೆ. ಒಂದೊಂದು ಮಿಂಕ್‌ನ ಚರ್ಮಕ್ಕೂ ಲಕ್ಷಾಂತರ ರೂಪಾಯಿ ಬೆಲೆ ಇದೆ. ಡೆನ್ಮಾರ್ಕ್‌ನ ವಾತಾವರಣ ಮಿಂಕ್‌ ಸಾಕಾಣಿಕೆಗೆ ಉತ್ತಮ ಪರಿಸರ ಒದಗಿಸಿದೆ. ಹೀಗಾಗಿ ಅಲ್ಲಿ ಮಿಂಕ್‌ ಸಾಕಾಣಿಕೆ ದೊಡ್ಡ ಉದ್ಯೋಗ ಒದಗಿಸಿಕೊಟ್ಟಿದೆ. ಆದರೆ ಕೊರೊನಾ ಕಾರಣಕ್ಕೆ ಮಿಂಕ್‌ಗಳ ಹತ್ಯೆ ಮಾಡಿದ್ದು, ಮಿಂಕ್ ಸಾಕಾಣಿಕೆ ಉದ್ಯಮದ ಬೆನ್ನೆಲುಬನ್ನೇ ಮುರಿದಿದೆ. ವಾಸ್ತವ ಪರಿಶೀಲನೆಗೆ ಅಂತಾ ಮಿಂಕ್ ಸಾಕಾಣಿಕೆದಾರರ ಜಮೀನಿಗೆ ಭೇಟಿ ನೀಡಿದ್ದ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ರೈತರ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದರು.

ಲಕ್ಷ ಲಕ್ಷ ಕೋಟಿ ಉದ್ಯಮ

ಲಕ್ಷ ಲಕ್ಷ ಕೋಟಿ ಉದ್ಯಮ

ಭಾರತದಲ್ಲಿ ಹೈನುಗಾರಿಕೆ ರೀತಿಯಲ್ಲೇ ಡೆನ್ಮಾರ್ಕ್ ಮಿಂಕ್ ಉದ್ಯಮವನ್ನು ಅವಲಂಬಿಸಿದೆ. ಯುರೋಪ್‌ನಲ್ಲಿ ಮಿಂಕ್ ಸಾಕಾಣಿಕೆ ಉದ್ಯಮ ಲಕ್ಷಾಂತರ ಕೋಟಿ ವಹಿವಾಟು ನಡೆಸುತ್ತದೆ. ಇದರಲ್ಲೂ ಡೆನ್ಮಾರ್ಕ್‌ನ ಪಾಲು ತುಸು ಹೆಚ್ಚಾಗಿದೆ. ಆದರೆ ಮಿಂಕ್ ಸಾಕಾಣಿಕೆ ಅಷ್ಟು ಸುಲಭದ ಮಾತಲ್ಲ. ಮಿಂಕ್‌ಗಳ ಕುರಿತು ತುಂಬಾ ಕೇರ್ ತೆಗೆದುಕೊಳ್ಳಬೇಕು. ಅದರಲ್ಲೂ ಚಳಿ ಹೆಚ್ಚಾಗಿರುವ ಡೆನ್ಮಾರ್ಕ್‌ ರೀತಿಯ ವಾತಾವರಣದಲ್ಲಿ ಬೆಚ್ಚನೆ ಗೂಡನ್ನು ನಿರ್ಮಿಸಬೇಕಾಗುತ್ತದೆ. ಹೀಗೆ ಒಬ್ಬೊಬ್ಬ ಡೆನ್ಮಾರ್ಕ್ ರೈತನೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಈ ಮಿಂಕ್‌ಗಳನ್ನ ಸಾಕುತ್ತಾನೆ. ಆದರೆ ಈ ಪೀಡೆ ಕೊರೊನಾ ಡೆನ್ಮಾರ್ಕ್‌ನ ರೈತರ ಬದುಕನ್ನೂ ಬೀದಿಗೆ ತಳ್ಳಿದೆ. ಈ ಕಾರಣಕ್ಕೆ ನಾಯಕಿ ಹಾಗೂ ಹಾಲಿ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಕಣ್ಣೀರು ಹಾಕಿದ್ದರು.

ಯುರೋಪ್‌ನಲ್ಲಿ ಗೆದ್ದಿದ್ದು ಏಂಜೆಲಾ ಮಾತ್ರ..!

ಯುರೋಪ್‌ನಲ್ಲಿ ಗೆದ್ದಿದ್ದು ಏಂಜೆಲಾ ಮಾತ್ರ..!

ಕೊರೊನಾ ಬಂದಪ್ಪಳಿಸಿದ ಸಂದರ್ಭದಲ್ಲಿ ನಮಗೇನೂ ಆಗೋದಿಲ್ಲ ಎಂಬಂತೆ ಯುರೋಪ್‌ನ ರಾಷ್ಟ್ರಗಳು ನೆಮ್ಮದಿಯಾಗಿದ್ದವು. ಆದರೆ ಒಂದೆರಡು ತಿಂಗಳು ಕಳೆದ ನಂತರ ವಾಸ್ತವ ಅರಿವಾಗಿತ್ತು. ಯುರೋಪ್‌ನಲ್ಲಿ ಅತಿ ವೇಗವಾಗಿ ಕೊರೊನಾ ಹಬ್ಬಿತ್ತು. ಲಕ್ಷಾಂತರ ಜನರಿಗೆ ಸೋಂಕು ತಗುಲಿ, ನೋಡ ನೋಡುತ್ತಿದ್ದಂತೆಯೇ ಹತ್ತಾರು ಸಾವಿರ ಜನರು ಬಲಿಯಾದರು. ಅದರಲ್ಲೂ ಇಟಲಿ, ಸ್ಪೇನ್, ಫ್ರಾನ್ಸ್ ಹಾಗೂ ಇಂಗ್ಲೆಂಡ್ ಪರಿಸ್ಥಿತಿ ಘೋರವಾಗಿತ್ತು. ಹೀಗೆ ಜರ್ಮನಿಯಲ್ಲೂ ಸೋಂಕಿತರ ಸಂಖ್ಯೆ ಲಕ್ಷದ ಲೆಕ್ಕಕ್ಕೆ ಮುಟ್ಟಿದಾಗ ಸೋಂಕಿತರಿಗೆ ಸಾವು ಪಕ್ಕಾ ಎಂಬ ಆತಂಕ ಮೂಡಿತ್ತು. ಆದರೆ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಪರಿಸ್ಥಿತಿಯನ್ನ ದಿಟ್ಟವಾಗಿ ಎದುರಿಸಿದರು. ಸಾವಿನ ಸಂಖ್ಯೆ ಕಡಿಮೆ ಮಾಡಿದರು, ಎಲ್ಲರಿಗೂ ಚಿಕಿತ್ಸೆ ಸಿಗುವಂತೆ ವ್ಯವಸ್ಥೆಯನ್ನ ಸೃಷ್ಟಿಸಿದರು. ಯುರೋಪ್ ರಾಷ್ಟ್ರಗಳ ಪೈಕಿ ಅತಿ ವೇಗವಾಗಿ ಸೋಂಕಿನಿಂದ ಜರ್ಮನ್ ಚೇತರಿಸಿಕೋಂಡಿತು.

ಜಸಿಂಡಾ ಸಾಧನೆ ಅವಿಸ್ಮರಣೀಯ

ಜಸಿಂಡಾ ಸಾಧನೆ ಅವಿಸ್ಮರಣೀಯ

ಹೌದು, ಆಸ್ಟ್ರೇಲಿಯಾ ಪಕ್ಕದಲ್ಲಿ ಚಾಚಿಕೊಂಡಿರುವ ಪುಟ್ಟ ದ್ವೀಪ ನ್ಯೂಜಿಲ್ಯಾಂಡ್ ಇಷ್ಟುದಿನ ತನ್ನ ಪ್ರಾಕೃತಿಕ ಸೌಂದರ್ಯದ ಕಾರಣಕ್ಕೆ ಗಮನ ಸೆಳೆಯುತ್ತಿತ್ತು. ಆದರೆ ಕೊರೊನಾ ಕಾಲದಲ್ಲಿ ತಾನು ತೋರಿದ ಹೋರಾಟ ಜಗತ್ತಿಗೆ ಮಾದರಿಯಾಗಿತ್ತು. ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ಕ್ರಮದಿಂದ ದ್ವೀಪರಾಷ್ಟ್ರ ನ್ಯೂಜಿಲ್ಯಾಂಡ್ ಕೊರೊನಾ ಸುಳಿಗಾಳಿಯಿಂದ ಬಚಾವ್ ಆಗಿತ್ತು. ಕೊರೊನಾ ಜಗತ್ತಿಗೆ ಅಪ್ಪಳಿಸಿ 1 ವರ್ಷವೇ ಉರುಳಿದ್ದರೂ ಈವರೆಗೂ ನ್ಯೂಜಿಲ್ಯಾಂಡ್‌ನಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ಕೇವಲ 2 ಸಾವಿರದಷ್ಟು. ಹಾಗೇ ಸೋಂಕಿತರ ಸಾವಿನ ಸಂಖ್ಯೆಯೂ ತೀರಾ ಕಡಿಮೆಯಿದ್ದು, ಈವರೆಗೂ 25 ನಿವಾಸಿಗಳು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಟ್ರಂಪ್ ತಪ್ಪುಗಳನ್ನು ತೋರಿಸಿದ್ದೇ ಕಮಲಾ..!

ಟ್ರಂಪ್ ತಪ್ಪುಗಳನ್ನು ತೋರಿಸಿದ್ದೇ ಕಮಲಾ..!

ಅಮೆರಿಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಧ್ಯಕ್ಷರು ನಿರಾಸಕ್ತಿ ತೋರಿಸಿದ್ದರು. ಕೊರೊನಾ ವೈರಸ್ ಬಗ್ಗೆ ತಮ್ಮ ಇಚ್ಛೆಗೆ ಬಂದಂತಹ ಹೇಳಿಕೆಯನ್ನ ನೀಡುತ್ತಿದ್ದರು. ಪರಿಣಾಮ ಅಮೆರಿಕನ್ನರು ಕೂಡ ಡೆಡ್ಲಿ ಕೊರೊನಾ ವೈರಸ್ ಬಗ್ಗೆ ಅಸಡ್ಡೆ ತೋರಿದರು. ಇದರ ಪರಿಣಾಮ ಬರೋಬ್ಬರಿ 1 ಕೋಟಿ 80 ಲಕ್ಷ ಅಮೆರಿಕನ್ನರಿಗೆ ಮಹಾಮಾರಿ ಅಂಟಿಕೊಂಡಿದ್ದರೆ, 3 ಲಕ್ಷ 23 ಸಾವಿರ ಜನರು ಡೆಡ್ಲಿ ಸೋಂಕಿಗೆ ಬಲಿಯಾಗಿದ್ದಾರೆ. ಹೀಗೆ ಟ್ರಂಪ್ ಎಡವಟ್ಟು ನಿರ್ಧಾರ ಕೈಗೊಂಡು ಸೋಂಕು ಹರಡುವಂತೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಮಹಿಳಾ ನಾಯಕರ ಸಾಲಿನಲ್ಲಿ ಕಮಲಾ ಹ್ಯಾರಿಸ್ ಮೊದಲಿಗರು. ಚುನಾವಣೆಯಲ್ಲೂ ಟ್ರಂಪ್ ಮಾಡಿದ್ದ ಎಡವಟ್ಟು ಅಮೆರಿಕನ್ನರಿಗೆ ತೋರಿಸಿ, ಬೈಡನ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಕಮಲಾ ಹ್ಯಾರಿಸ್. ಈ ಮೂಲಕ ಮೊದಲ ಬಾರಿಗೆ ಭಾರತ ಮೂಲದ ಅಮೆರಿಕನ್ ಒಬ್ಬರು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದಂತಾಗಿದೆ.

 2020 ಸಾಧಕಿಯರ ವರ್ಷ..!

2020 ಸಾಧಕಿಯರ ವರ್ಷ..!

ಮೇಲೆ ವಿವರಿಸಿದ ನಾಯಕಿಯರಷ್ಟೇ ಅಲ್ಲದೆ ಇನ್ನೂ ಅನೇಕ ಮಹಿಳಾ ರಾಜಕಾರಣಿಗಳು ಮಹತ್ತರ ಸಾಧನೆ ಮಾಡಿದ್ದಾರೆ. ರಾಜಕೀಯ ಹೊರತಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕ ಮಹಿಳಾ ಉದ್ಯಮಿಗಳು ಜನರ ನೆರವಿಗೆ ನಿಂತಿದ್ದರು. ಈ ಪೈಕಿ ಅಮೆಜಾನ್ ಮಾಲಿಕ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಜೆಫ್ ಬೆಜೂಸ್‌ರ ಮಾಜಿ ಪತ್ನಿ ಮ್ಯಾಕೆಂಜಿ ಸ್ಕಾಟ್ ಬೆಜೂಸ್ ಮೊದಲಿಗರು. ಜೆಫ್ ಬೆಜೂಸ್‌ಗೆ ವಿಚ್ಛೇದನ ನೀಡಿದ ನಂತರ ಪರಿಹಾರವಾಗಿ ಬಂದ ಮೊತ್ತದಲ್ಲಿ ಭಾರಿ ಪ್ರಮಾಣದ ಹಣವನ್ನು ಕೊರೊನಾ ಸಂಕಷ್ಟದಲ್ಲಿದ್ದ ಜನರಿಗೆ ಅವರು ದಾನ ಮಾಡಿದ್ದಾರೆ. ಹೀಗೆ 2020ರಲ್ಲಿ ಜಗತ್ತು ಕಷ್ಟವೆಂದು ನರಳುವಾಗ ಸಾಧಕಿಯರು ನೆರವಾಗಿದ್ದಾರೆ.

English summary
Unforgettable 2020: World was suffered from Coronavirus in 2020. In the pandemic situation, the women leaders have lead there countries towards victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X