ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ್ಣುಗಳ ರಾಜನ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

|
Google Oneindia Kannada News

ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ. ಕೆಲವರಂತೂ ಮಾವು ಮಾರುಕಟ್ಟೆಗೆ ಬರುವುದನ್ನೇ ಕಾಯುತ್ತಿರುತ್ತಾರೆ. ಹೀಗಾಗಿನೇ ಈ ಹಣ್ಣನ್ನು ಹಣ್ಣುಗಳ ರಾಜ ಎಂತಲೂ ಕರೆಯುತ್ತಾರೆ. ಈ ಹಣ್ಣುಗಳ ರಾಜ ತಿನ್ನುವುದಕ್ಕೆ ಎಷ್ಟು ರುಚಿಯೋ ಅಷ್ಟೇ ದುಬಾರಿ ಕೂಡ ಹೌದು. ದುಬಾರಿ ಅಂದಾಕ್ಷಣ ಕೆಜಿಗೆ ಎಷ್ಟಿರಬಹುದು 300ರೂ ಅಥವಾ 500ರೂ ಇರಬಹುದು ಅಂತ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದ್ರೆ ನಾವು ಹೇಳಲು ಹೊರಟಿರುವ ಹಣ್ಣಿನ ಬೆಲೆ ಬರೋಬ್ಬರಿ ಕೆಜಿಗೆ 2.70 ಲಕ್ಷ ರೂಪಾಯಿ. ಅದ್ಯಾವುದಪ್ಪ ಅಂತ ಯೋಚನೆ ಮಾಡ್ತಾಯಿರಬೇಕು ಅಲ್ವಾ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಸಾಮಾಜ್ಯವಾಗಿ ಭಾರತದಲ್ಲಿ ಹಲವಾರು ರೀತಿಯ ಹಣ್ಣುಗಳು ಲಭ್ಯವಿದೆ. ಜೊತೆಗೆ ಬೈಂಗನ್‌ಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಇತರ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಈ ಹಣ್ಣುಗಳ ಬೆಲೆ ಅಬ್ಬಬ್ಬಾ ಅಂದ್ರೆ ಕೆಜಿಗೆ 250-300 ಇರಬಹುದು. ಆದ್ರೆ ಇಲ್ಲೊಂದು ಮಾವಿನ ಹಣ್ಣಿನ ಬೆಲೆ ಬರೋಬ್ಬರಿ ಕೆಜಿಗೆ 2.70 ಲಕ್ಷ ರೂಪಾಯಿ ಇದೆ. ನಂಬಲು ಅಸಾದ್ಯವಾದ್ರು ಇದು ನಿಜಾನೇ. ಜೊತೆಗೆ ಈ ಮಾವಿನ ಹಣ್ಣನ್ನು ವಿಶ್ವದ ಅತ್ಯಂತ ದುಬಾರಿ ಹಣ್ಣು ಎಂತಲೂ ಕರೆಯುತ್ತಾರೆ.

ನೇರಳೆ ಬಣ್ಣದ ಈ ಮಾವು ಮಿಯಾಜಾಕಿ ಮಾವು ಎಂದು ಕರೆಯಲಾಗುತ್ತದೆ. ಇದು ಜಪಾನ್‌ನ ಮಿಯಾಜಾಕಿ ನಗರದಲ್ಲಿ ಬೆಳೆಯುವ ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಕರೆಸಿಕೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಹಣ್ಣಿಗೆ ಕೆಜಿಗೆ ಸುಮಾರು 2.70 ಲಕ್ಷ ರೂಪಾಯಿ ಬೆಲೆ ಇದೆ. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ರೀತಿಯ ಎರಡು ಮಾವಿನ ಮರಗಳನ್ನು ಬೆಳೆಸಲಾಗುತ್ತಿದೆ ಮತ್ತು ಅವುಗಳನ್ನು ಭದ್ರತಾ ಸಿಬ್ಬಂದಿ ಮತ್ತು ನಾಯಿಗಳು ಕಾವಲು ಕಾಯುತ್ತಿವೆ.

ಆರೋಗ್ಯಕರ ಪ್ರಯೋಜನವೇನು?

ಆರೋಗ್ಯಕರ ಪ್ರಯೋಜನವೇನು?

ಮಿಯಾಜಾಕಿ ಮಾವು ವಿಶ್ವದ ಅತ್ಯಂತ ದುಬಾರಿ ಮಾವುಗಳಲ್ಲಿ ಒಂದಾಗಿದ್ದು, ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.70 ಲಕ್ಷ ರೂ.ಗೆ ಮಾರಾಟವಾಗಿತ್ತು. ಈ ಮಾವುಗಳನ್ನು 'ತೈಯೊ-ನೋ-ಟೊಮಾಗೊ' ಅಥವಾ 'ಎಗ್ಸ್ ಆಫ್ ಸನ್‌ಶೈನ್' ಎಂದು ಬ್ರಾಂಡ್ ಮಾಡಿ ಮಾರಾಟ ಮಾಡಲಾಗುತ್ತದೆ.

ಸಾಮಾನ್ಯವಾಗಿ ಮಾವು ಹಸಿರು ಹಳದಿ ಬಣ್ಣದಿಂದ ಕೂಡಿರುತ್ತವೆ. ಆದರೆ ಇದು ಹಳದಿ ಅಥವಾ ಹಸಿರು ಬಣ್ಣದಲ್ಲಿಲ್ಲ. ಇದು ಹಣ್ಣಾದಾಗ ನೇರಳೆ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಆಕಾರವು ಡೈನೋಸಾರ್‌ನ ಮೊಟ್ಟೆಗಳಂತೆ ಕಾಣುತ್ತದೆ. ಅದರ ಕೆಂಪು ಬಣ್ಣದಿಂದಾಗಿ ಇದಕ್ಕೆ ಮಿಯಾಜಾಕಿ ಮಾವಿನ ಹಣ್ಣುಗಳನ್ನು ಡ್ರ್ಯಾಗನ್ ಮೊಟ್ಟೆ ಎಂದೂ ಕರೆಯುತ್ತಾರೆ. ವರದಿಗಳ ಪ್ರಕಾರ, ಈ ಒಂದು ಮಾವು 350 ಗ್ರಾಂ ತೂಕವನ್ನು ಹೊಂದಿರುತ್ತದೆ. ಜೊತೆಗೆ 15 ಪ್ರತಿಶತ ಅಥವಾ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ.

ಈ ಮಾವಿನ ಉತ್ಪಾದನೆ ಆರಂಭವಾಗಿದ್ದು ಯಾವಾಗ?

ಈ ಮಾವಿನ ಉತ್ಪಾದನೆ ಆರಂಭವಾಗಿದ್ದು ಯಾವಾಗ?

ಮಿಯಾಜಾಕಿ ಮಾವಿನ ಹಣ್ಣನ್ನು ಹೆಚ್ಚು ಉತ್ಪಾದಿಸುವ ದೇಶ ಜಪಾನ್. ಮಿಯಾಜಾಕಿ ಮಾವುಗಳನ್ನು ಮುಖ್ಯವಾಗಿ ಜಪಾನ್‌ನ ಕ್ಯುಶು ಪ್ರಾಂತ್ಯದ ಮಿಯಾಜಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಮಿಯಾಜಾಕಿಯಲ್ಲಿ ಈ ಮಾವಿನ ಉತ್ಪಾದನೆಯು 70 ಮತ್ತು 80 ರ ದಶಕದಲ್ಲಿ ಪ್ರಾರಂಭವಾಯಿತು. ಬೆಚ್ಚನೆಯ ವಾತಾವರಣ, ಸುದೀರ್ಘವಾದ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯೊಂದಿಗೆ ಈ ಮಾವಿನ ಉತ್ಪಾದನೆಗೆ ನಗರವು ಅನುಕೂಲಕರ ವಾತಾವರಣವನ್ನು ಹೊಂದಿದೆ.

ಭಾರತದಲ್ಲಿ ಮಿಯಾಜಾಕಿ ಮಾವಿನ ಬೆಳೆ

ಭಾರತದಲ್ಲಿ ಮಿಯಾಜಾಕಿ ಮಾವಿನ ಬೆಳೆ

ಮಧ್ಯಪ್ರದೇಶದ ಜಬಲ್ಪುರದಲ್ಲಿ ದಂಪತಿಗಳು ತಮ್ಮ ತೋಟದಲ್ಲಿ ಎರಡು ಮಿಯಾಜಾಕಿ ಮಾವಿನ ಮರಗಳನ್ನು ನೆಟ್ಟಿದ್ದಾರೆ. ಅವರು ತಮ್ಮ ರೈಲು ಪ್ರಯಾಣದ ಸಮಯದಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ಸಸಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರು ಸಸಿಗಳನ್ನು ಸ್ವೀಕರಿಸುವ ಸಮಯದಲ್ಲಿ, ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ತಿಳಿದಿರಲಿಲ್ಲ. ನಂತರ ಅವರು ಮಾವಿನ ಬಣ್ಣವು ವಿಭಿನ್ನವಾಗಿದೆ ಎಂದು ಕಂಡುಕೊಂಡರು ಮತ್ತು ಅಂತಿಮವಾಗಿ ಅವರು ವಿಶ್ವದ ಅತ್ಯಂತ ದುಬಾರಿ ಮಾವನ್ನು ನೆಟ್ಟಿದ್ದಾರೆ ಎಂದು ತಿಳಿದಿದ್ದಾರೆ. ಅವರು ಈಗ ಆ ಮಾವಿನಹಣ್ಣುಗಳನ್ನು 'ದಾಮಿನಿ' ಎಂದು ಕರೆಯುತ್ತಾರೆ.

ಹಣ್ಣನ್ನು ನೀಡಲು ನಿರಾಕರಣೆ

ಹಣ್ಣನ್ನು ನೀಡಲು ನಿರಾಕರಣೆ

ಈ ಮರದ ಎರಡು ಮಾವಿನ ಹಣ್ಣನ್ನು ಕಳ್ಳರು ಕದಿಯಲು ಯತ್ನಿಸಿದ್ದಾರೆಂಬ ವರದಿಯ ಮೇರೆಗೆ ದಂಪತಿ ಇದೀಗ ನಾಲ್ವರು ಭದ್ರತಾ ಸಿಬ್ಬಂದಿ ಹಾಗೂ ಆರು ನಾಯಿಗಳನ್ನು ರಕ್ಷಣೆಗೆ ನೇಮಿಸಿಕೊಂಡಿದ್ದಾರೆ. ಕಳೆದ ವರ್ಷ, ಉದ್ಯಮಿಯೊಬ್ಬರು ಮಾವಿನ ಹಣ್ಣಿಗೆ ಕೆಜಿಗೆ 21,000 ರೂ.ಗಳ ನೀಡುವುದಾಗಿ ಪ್ರಸ್ತಾಪಿಸಿದ್ದರು. ಆದರೆ ದಂಪತಿ ಅದನ್ನು ನಿರಾಕರಿಸಿದ್ದರು ಎಂದು ವರದಿಯಾಗಿದೆ. "ಮೊದಲ ಮಾವಿನ ಹಣ್ಣನ್ನು ದೇವರಿಗೆ ಅರ್ಪಿಸಲು ಉದ್ದೇಶಿಸಿದ್ದೇವೆ" ಎಂದು ದಂಪತಿ ತಿಳಿಸಿದ್ದಾರೆ.

English summary
The purple mango aka Miyazaki mango is the world’s most expensive mangoes cultivated in Miyazaki city in Japan. The Miyazaki mango is priced at around Rs 2.70 lakh per kg in the international market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X