ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಕ್ ಸಾಂಪ್ರದಾಯಿಕ ಲೆಕ್ಕಾಚಾರದಲ್ಲಿ ಭೂ ಮಂಡಲದ ಸುರಸುಂದರಿಯರು

|
Google Oneindia Kannada News

ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಹೀಗೆ ಸುರಸುಂದರಿಯರನ್ನು ಗುರುತಿಸುವ- ಘೋಷಿಸುವ ರೀತಿ ಬಗ್ಗೆ ಕೇಳಿರುತ್ತೀರಿ. ಆದರೆ ಗಣಿತ- ವಿಜ್ಞಾನದ ಪ್ರಕಾರ ಅಪೂರ್ವ ಸುಂದರಿ ಇವರು ಎಂದು ಘೋಷಣೆ ಮಾಡಿರುವುದನ್ನು ಕೇಳಿದ್ದೀರಾ- ನೋಡಿದ್ದೀರಾ? ಹಾಗಿದ್ದರೆ ಈಗ ಅಂಥದ್ದೊಂದು ಇಂಟರೆಸ್ಟಿಂಗ್ ಸುದ್ದಿಯೊಂದು ಬಂದಿದೆ. ಸೂಪರ್ ಮಾಡೆಲ್ ಬೆಲ್ಲಾ ಹದೀದ್ ಜಗತ್ತಿನ ಅತ್ಯಂತ ಸುಂದರ ಮಹಿಳೆಯಂತೆ.

ಈ ವಿಚಾರವನ್ನು ಹೇಳುತ್ತಿರುವುದು ಗ್ರೀಕ್ ನ ಗಣಿತ ಲೆಕ್ಕಾಚಾರ. ಈ ಭೂ ಮಂಡಲದ ಮೇಲಿನ ಸುಂದರಿಯನ್ನು "ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ಫೀ ಸ್ಟ್ಯಾಂಡರ್ಡ್ಯ್" ಮೂಲಕ ವಿಜ್ಞಾನಿಗಳು ನಿರ್ಧರಿಸಿದ್ದಾರೆ. ಅವರ ಪ್ರಕಾರ, ವಿಕ್ಟೋರಿಯಾಸ್ ಸೀಕ್ರೆಟ್ ನ ರೂಪದರ್ಶಿ ಮುಖ ಪರ್ಫೆಕ್ಷನ್ ಗೆ ಹತ್ತಿರ ಇದೆಯಂತೆ.

ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಬೀದರ್ ಬೆಡಗಿ ನಿಶಾಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಗೆ ಬೀದರ್ ಬೆಡಗಿ ನಿಶಾ

ಗ್ರೀಕ್ ನ ಸಾಂಪ್ರದಾಯಿಕ ವಿಧಾನದಲ್ಲಿ ಸೌಂದರ್ಯ ಅಳೆಯುವ ವಿಧಾನ "ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ಫೀ ಸ್ಟ್ಯಾಂಡರ್ಡ್ಯ್"ನಲ್ಲಿ ಅಳವಡಿಸಲಾಗಿದೆ. ಗ್ರೀಕ್ ನ ವಿದ್ವಾಂಸರು ಸೌಂದರ್ಯವನ್ನು ವ್ಯಾಖ್ಯಾನಿಸಲು ಬಳಸುವ ವೈಜ್ಞಾನಿಕ ಸೂತ್ರವನ್ನು ಬಳಸಿ ಮುಖದ ಅಳತೆ ಮತ್ತಿತರ ಲೆಕ್ಕಾಚಾರವನ್ನು ತಿಳಿಸಲಾಗಿದೆ.

Worlds Most Beautiful Woman According To Greek Tradition

ಗೋಲ್ಡನ್ ರೇಷಿಯೋ ಅನ್ವಯ, ಇಪ್ಪತ್ಮೂರು ವರ್ಷದ ಬೆಲ್ಲಾ ಮುಖವು ಪರ್ಫೆಕ್ಷನ್ ಗೆ ಹತ್ತಿರ ಅಂದರೆ ಶೇ 94.35ರಷ್ಟು ಇದೆಯಂತೆ. ಇನ್ನು ಎರಡನೆ ಸ್ಥಾನದಲ್ಲಿ ಇರುವ ಬಿಯಾನ್ಸ್ 92.44 ಪರ್ಸೆಂಟ್, ನಟಿ ಆಂಬರ್ ಹರ್ಡ್ 91.85 ಪರ್ಸೆಂಟ್ ಹಾಗೂ ಪಾಪ್ ತಾರೆ ಅರಿಯಾನ ಗ್ರಾಂಡೆಗೆ 91.81 ಪರ್ಸೆಂಟ್ ನೀಡಲಾಗಿದೆ.

ಈ ಲೆಕ್ಕಾಚಾರವನ್ನು ನಡೆಸಿರುವವರು ಲಂಡನ್ ನ ಹಾರ್ಲೆ ಬಡಾವಣೆಯ ಪ್ರಖ್ಯಾತ ಕಾಸ್ಮೆಟಿಕ ಸರ್ಜನ್ ಡಾ. ಜೂಲಿಯನ್ ಡಿ ಸಿಲ್ವ.

English summary
Greek traditional standards explained most beautiful woman in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X