ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಬೋಡಿಯನ್ ಮೀನಾಗಾರರ ಬಲೆಗೆ ಸಿಕ್ಕ 300 ಕೆಜಿ ತೂಕದ ಮೀನು!

|
Google Oneindia Kannada News

ನವದೆಹಲಿ, ಜೂನ್ 21: ಮೆಕಾಂಗ್ ನದಿಗೆ ಬಲೆ ಎಸೆದ ಕಾಂಬೋಡಿಯನ್ ಮೀನುಗಾರರು ಜಗತ್ತಿನಲ್ಲೇ ಅತಿದೊಡ್ಡ ಸಿಹಿನೀರಿನ ಮೀನು ಸೆರೆ ಹಿಡಿಯುವುದರಲ್ಲಿ ಯಶಸ್ವಿ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮೀನುಗಾರರು ಸೆರೆ ಹಿಡಿದಿರುವ ಸಿಹಿ ನೀರಿನ ಮೀನಿನ ತೂಕವೇ ಬರೋಬ್ಬರಿ 300 ಕೆಜಿ ಇರುವುದು ಗೊತ್ತಾಗಿದೆ. ಒಟ್ಟು ಆರು ಮಂದಿ ಸೇರಿಕೊಂಡು ಈ ಮೀನನ್ನು ದಡಕ್ಕೆ ಎಳೆದುಕೊಂಡು ಬಂದಿದ್ದಾರೆ ಎಂಬುದರ ಕುರಿತು ವರದಿಯಾಗಿದೆ.

ನೀರಿನಿಂದ ಜಿಗಿದು ಮೀನುಗಾರನ ಗಂಟಲಿಗೆ ಸಿಲುಕಿಕೊಂಡ ಮೀನು: ಮುಂದೇನಾಯ್ತು? ನೀರಿನಿಂದ ಜಿಗಿದು ಮೀನುಗಾರನ ಗಂಟಲಿಗೆ ಸಿಲುಕಿಕೊಂಡ ಮೀನು: ಮುಂದೇನಾಯ್ತು?

ಕ್ರಿಸ್ಟೆನ್ಡ್ ಬೋರಮಿ ಎಂದರೆ ಖಮೇರ್ ಭಾಷೆಯಲ್ಲಿ "ಹುಣ್ಣಿಮೆ" ಎಂದು ಅರ್ಥ ನೀಡುತ್ತದೆ. ಅದರ 13 ಅಡಿ ಗಡ್ಡೆಯ ಆಕಾರದಿಂದಾಗಿ ವಿಶೇಷ ಎನಿಸಿರುವ ಅದಕ್ಕೆ ವಿದ್ಯುನ್ಮಾನವಾದ ಅಸ್ತ್ರವೊಂದನ್ನು ಟ್ಯಾಗ್ ಮಾಡಿ ಮತ್ತೆ ಸಮುದ್ರಕ್ಕೆ ಬಿಡಲಾಗಿದೆ. ಇದರಿಂದಾಗಿ ಅದರ ವರ್ತನೆ ಹಾಗೂ ಚಟುವಟಿಕೆಯನ್ನು ತಿಳಿದುಕೊಳ್ಳುವಲು ತಜ್ಞರಿಗೆ ಸಹಾಯಕವಾಗಲಿದೆ.

Worlds Largest Freshwater Fish Caught In Mekong River in Cambodia

ಇದು ವಿಶ್ವದ ಅತಿದೊಡ್ಡ ಮೀನು:

"ಇದು ತುಂಬಾ ರೋಮಾಂಚನಕಾರಿ ಸುದ್ದಿ ಆಗಿದೆ, ಏಕೆಂದರೆ ಇದು ವಿಶ್ವದ ಅತಿದೊಡ್ಡ ಮೀನು" ಎಂದು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲಿನ "ಮಾನ್ಸ್ಟರ್ ಫಿಶ್" ಕಾರ್ಯಕ್ರಮದ ಮಾಜಿ ಹೋಸ್ಟ್ ಮತ್ತು ಈಗ ನದಿಯ ಮೇಲಿನ ಸಂರಕ್ಷಣಾ ಯೋಜನೆಯ ಭಾಗವಾಗಿರುವ ಜೀವಶಾಸ್ತ್ರಜ್ಞ ಝೆಬ್ ಹೊಗನ್ ಹೇಳಿದರು. "ಇದು ರೋಚಕ ಸುದ್ದಿಯಾಗಿದೆ, ಏಕೆಂದರೆ ಮೆಕಾಂಗ್‌ನ ಈ ಸಮುದ್ರವು ಇನ್ನೂ ಆರೋಗ್ಯಕರವಾಗಿದೆ ಎಂದರ್ಥ. ಇಂಥ ದೊಡ್ಡ ದೊಡ್ಡ ಮೀನುಗಳು ಇನ್ನೂ ಈ ಸಮುದ್ರದಲ್ಲಿ ಬದುಕುಳಿದಿವೆ ಎಂಬ ಭರವಸೆಯ ಸಂಕೇತವಾಗಿದೆ," ಎಂದು ಹೇಳಿದರು.

2005ರಲ್ಲಿ 293 ತೂಕದ ಕ್ಯಾಟ್‌ಫಿಶ್‌ ಸೆರೆ:

ಉತ್ತರ ಕಾಂಬೋಡಿಯನ್ ನದಿಯ ಉದ್ದಕ್ಕೂ ಇರುವ ದ್ವೀಪವಾದ ಕೊಹ್ ಪ್ರೀಹ್‌ನಲ್ಲಿ ಕಳೆದ ವಾರ ಸೆರೆ ಹಿಡಿದಿರುವ ಬೋರಮಿ ಮೀನು, 2005ರಲ್ಲಿ ಉತ್ತರ ಥೈಲ್ಯಾಂಡ್‌ನಲ್ಲಿ ಅಪ್‌ಸ್ಟ್ರೀಮ್‌ನಲ್ಲಿ ಹಿಡಿದ 293 ಕೆಜಿ ದೈತ್ಯ ಕ್ಯಾಟ್‌ಫಿಶ್‌ಗಿಂತಲೂ ಹೆಚ್ಚು ತೂಕವನ್ನು ಹೊಂದಿದೆ. ಆ ಮೂಲಕ ಈ ಮೊದಲಿನ ದಾಖಲೆಯನ್ನು ಹಿಂದಿಕ್ಕಿದೆ.

ಮೀಕಾಂಗ್ ಸಮುದ್ರದಲ್ಲಿ ಜಲರಾಶಿ:

ಮೀಕಾಂಗ್ ಸಮುದ್ರವು ವಿಶ್ವದಲ್ಲಿಯೇ ಅತ್ಯಂತ ವೈವಿಧ್ಯಮಯ ಜಲಚರ ಮತ್ತು ಜೀವರಾಶಿಗಳನ್ನು ಹೊದಿರುವ ಮೂರನೇ ಸಮುದ್ರ ಎನಿಸಿದೆ. ಈ ಮಿತಿಮೀರಿದ ಮೀನುಗಾರಿಕೆ, ಮಾಲಿನ್ಯ, ಉಪ್ಪುನೀರು, ಕೆಸರು ಸವಕಳಿಯು ದಾಸ್ತಾನುಗಳು ಕುಸಿಯಲು ಕಾರಣವಾಗಿವೆ.

Recommended Video

ಎಲ್ಲರ ಮುಂದೆಯೇ ಪ್ರಿನ್ಸಿಪಾಲ್ ಗೆ ಕಪಾಳಮೋಕ್ಷ ಮಾಡಿದ ಮಂಡ್ಯ ಶಾಸಕ ಎಂ ಶ್ರೀನಿವಾಸ್ | Oneindia Kannada

English summary
Cambodian villagers on the Mekong River have caught what researchers say is the world's biggest freshwater fish stingray that weighed in at 300kg (661 lb) and took around a dozen men to haul to shore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X