ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Photography Day 2022 : ವಿಶ್ವ ಛಾಯಾಗ್ರಹಣ ದಿನದ ಮೂಲ ಯಾವ ದೇಶದ್ದು?

By ಎಸ್. ಆರ್. ವಸಂತ್, ಕೊಡಗು
|
Google Oneindia Kannada News

ಇಂದು ಛಾಯಾಗ್ರಹಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಬಂದ ಮೇಲಂತೂ ಪ್ರತಿಯೊಬ್ಬರೂ ಛಾಯಾಗ್ರಾಹಕರೇ ಆಗಿದ್ದಾರೆ. ಜನರು ಸೆಲ್ಫಿ ತೆಗೆದುಕೊಳ್ಳುವುದರಿಂದ ಹಿಡಿದು ಯುದ್ಧಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಾಖಲಿಸುವವರೆಗೆ ವಿವಿಧ ರೀತಿಯಲ್ಲಿ ಈ ಮಾಧ್ಯಮವನ್ನು ಬಳಸುತ್ತಾರೆ. ಛಾಯಾಗ್ರಹಣವು ಒಂದು ಕಲಾ ಪ್ರಕಾರವಾಗಿದ್ದು ಅದು ತೀವ್ರವಾಗಿ ವೈಯಕ್ತಿಕವಾಗಿರಬಹುದು ಮತ್ತು ಕಲ್ಪನೆಗಳನ್ನು ಸರಳ ರೀತಿಯಲ್ಲಿ ಸಾರ್ವಜನಿಕವಾಗಿ ಪ್ರಕ್ಷೇಪಿಸಬಹುದು. "ಒಂದು ಚಿತ್ರವು ಸಾವಿರ ಪದಗಳಿಗೆ ಯೋಗ್ಯವಾಗಿದೆ" ಎಂಬ ಮಾತು ಇಂದಿಗೂ ನಿಜವಾಗಿದೆ.

ಪ್ರತಿ ವರ್ಷ, ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ನಮ್ಮ ಜೀವನದಲ್ಲಿ ಕ್ಯಾಮೆರಾಗಳು ಮತ್ತು ಛಾಯಾಗ್ರಹಣದ ಪ್ರಾಮುಖ್ಯತೆಯನ್ನು ಸ್ಮರಿಸುತ್ತದೆ. ಪ್ರಪಂಚದಾದ್ಯಂತದ ಛಾಯಾಗ್ರಹಣ ಉತ್ಸಾಹಿಗಳು ಈ ಸಂದರ್ಭದಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಕಲೆಯನ್ನು ಆಚರಿಸುತ್ತಾರೆ. ವಿಶ್ವ ಛಾಯಾಗ್ರಹಣ ದಿನದ ಮೂಲ ಫ್ರಾನ್ಸ್‌ನಲ್ಲಿ ಮತ್ತು 1837 ರಷ್ಟು ಹಿಂದಿನದು. ಫ್ರಾನ್ಸ್‌ನಲ್ಲಿ, ಜೋಸೆಫ್ ನೈಸ್‌ಫೋರ್ ನೀಪ್ಸ್ ಮತ್ತು ಲೂಯಿಸ್ ಡಾಗೆರೆ ಅವರು ಡಾಗ್ಯುರೋಟೈಪ್ ಅನ್ನು ಕಂಡುಹಿಡಿದರು. ಇದು ಮೊಟ್ಟಮೊದಲ ಛಾಯಾಗ್ರಹಣ ಪ್ರಕ್ರಿಯೆಯಾಗಿದೆ.

ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ

ಫೋಟೋ ಬಂದ ದಾರಿ:

1861 ರಲ್ಲಿ, ಮೊದಲ ಬಾಳಿಕೆ ಬರುವ ಬಣ್ಣದ ಛಾಯಾಚಿತ್ರವನ್ನು ಸೆರೆಹಿಡಿಯಲಾಯಿತು. ಇದನ್ನು ಆಧುನಿಕ ಛಾಯಾಗ್ರಹಣ ಯುಗ ಎಂದು ಗುರುತಿಸಲಾಗುತ್ತದೆ. ಅಂದಿನಿಂದ, ಛಾಯಾಗ್ರಹಣ ಮಾಧ್ಯಮವು ವಿಕಸನಗೊಳ್ಳುತ್ತಲೇ ಇತ್ತು. ಮುಂದೆ ವಿಲಿಯಂ ಹೆನ್ರಿ ಫಾಕ್ಸ್‌ ಅವರು ಛಾಯಾಗ್ರಹಣವನ್ನು ಗಾಜಿನ ಮೇಲೆ ಮೂಡಿಸುವಲ್ಲಿ ಯಶಸ್ವಿ ಆದರು. ಇದನ್ನು ಸೂರ್ಯನ ಬೆಳಕಿನಲ್ಲಿ 15 ನಿಮಿಷಗಳ ಕಾಲ ತೆರೆದಿಟ್ಟರೆ ನೆಗೆಟಿವ್‌ ಸಿದ್ದಪಡಿಸಬಹುದಿತ್ತು. ಇದಾದ ನಂತರ ಲೆನ್ಸ್‌ಗಳನ್ನು ಕಂಡು ಹಿಡಿಯಲಾಯಿತು. ಡಿಜಿಟಲ್ ಕ್ಯಾಮೆರಾವನ್ನು ಕಂಡುಹಿಡಿಯುವ ಎರಡು ದಶಕಗಳ ಮೊದಲು 1957 ರಲ್ಲಿ ಮೊದಲ ಡಿಜಿಟಲ್ ಛಾಯಾಚಿತ್ರವನ್ನು ರಚಿಸಲಾಯಿತು.

World Photography Day 2022

ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಸಾರ್ವಜನಿಕರಿಗೆ 1839 ರಲ್ಲಿ ಡಾಗ್ಯುರೋಟೈಪ್ನ ಆವಿಷ್ಕಾರವನ್ನು ಅಧಿಕೃತವಾಗಿ ಘೋಷಿಸಿತು. 19 ಆಗಸ್ಟ್ 1839 ರಂದು, ಫ್ರೆಂಚ್ ಸರ್ಕಾರವು ಸಾಧನಕ್ಕಾಗಿ ಪೇಟೆಂಟ್ ಅನ್ನು ಖರೀದಿಸಿತು ಮತ್ತು ಅದನ್ನು ಜಗತ್ತಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ ಎಂದು ನಂಬಲಾಗಿದೆ. ನಂತರ, ದಿನವನ್ನು ವಿಶ್ವ ಛಾಯಾಗ್ರಹಣ ದಿನ ಎಂದು ಗುರುತಿಸಲು ಪ್ರಾರಂಭಿಸಿತು.

ನಂತರ 1886 ರಲ್ಲಿ ಡ್ರೈ ಫಿಲ್ಮ್‌ಗಳ ತಯಾರಿಕೆಯನ್ನು ಆರಂಬಿಸಲಾಯಿತು. ಈ ಫಿಲ್ಮ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಅಮೇರಿಕಾದ ಜಾರ್ಜ್‌ ಈಸ್ಟ್‌ ಮನ್‌ ಅವರು ಕೊಡಾಕ್‌ ಕಂಪೆನಿಯನ್ನೇ ಪ್ರಾರಂಬಿಸಿದರು. ಮೊದಲಿಗೆ ಕೊಡಾಕ್‌ ಕಂಪೆನಿಯು ನೂರು ನೆಗೆಟಿವ್‌ಗಳ ರೋಲ್‌ ಅನ್ನು ಗ್ರಾಹಕರ ಕ್ಯಾಮೆರಾಗೆ ತುಂಬಿಸಿ ಕೊಡುವ ಕೆಲಸ ಮಾಡುತಿತ್ತು. 100 ಫೋಟೋಗಳನ್ನು ತೆಗೆದಾದ ನಂತರ ಕ್ಯಾಮೆರಾವನ್ನು ಕೊಡಾಕ್‌ ಕಂಪೆನಿಗೆ ನೀಡಿದರೆ ಅವರು ನೆಗೆಟಿವ್‌ ಅನ್ನು ತೆಗೆದುಕೊಂಡು ಫೋಟೋ ಸಿದ್ದಪಡಿಸುತಿದ್ದರು ಮತ್ತು ನೂತನ ನೆಗೆಟಿವ್‌ ಅನ್ನು ಕ್ಯಾಮೆರಾಗೆ ತುಂಬಿಸಿ ಕೊಡುತಿದ್ದರು.

World Photography Day 2022: Know Its History, Evolution, Present Situation

ದುಃಸ್ಥಿತಿಯಲ್ಲಿ ಫೋಟೋಗ್ರಾಫರ್ಸ್:

ಇಂದು ವೃತ್ತಿಪರ ಛಾಯಾಗ್ರಾಹಕರು ಜಗತ್ತಿನೆಲ್ಲೆಡೆ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಆದರೆ ಛಾಯಾಗ್ರಹಕರ ಬದುಕು ಮಾತ್ರ ಹಸನಾಗಿಲ್ಲ. ಇಂದಿಗೂ ಛಾಯಾಗ್ರಾಹಕರದ್ದು ಮದ್ಮ ವರ್ಗದ ಬದುಕಿಗೆ ಸೀಮಿತವಾಗಿದೆ. ಛಾಯಾಗ್ರಾಹಕರದು ಸ್ವತಂತ್ರ ವೃತ್ತಿ ಆಗಿರುವುದರಿಂದ ವೃತ್ತಿ ಭದ್ರತೆ ಆಗಲಿ, ಆರೋಗ್ಯ ವಿಮಾ ಸೌಲಭ್ಯವಾಗಲೀ ಇಲ್ಲ. ಅಷ್ಟೇ ಅಲ್ಲ ವೃತ್ತಿಗೆ ತಕ್ಕುದಾದ ಗೌರವ ಘನತೆ, ಸೂಕ್ತ ಸಂಭಾವನೆಯೂ ದೊರೆಯುತ್ತಿಲ್ಲ. ಮಹಾನಗರಗಳ ಛಾಯಾಗ್ರಾಹಕರು ಇಂದು ಶ್ರೀಮಂತ ವಿವಾಹವೊಂದರ ಮೂರು ದಿನಗಳ ಛಾಯಾಗ್ರಹಣ, ವೀಡಿಯೋಗ್ರಫಿಗಾಗಿ 10 ಲಕ್ಷ ರೂಪಾಯಿಗಳವರೆಗೂ ಸಂಭಾವನೆ ಪಡೆಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಸಂಭಾವನೆ ಅತಿ ಕಡಿಮೆ ಆಗಿದೆ.

World Photography Day 2022: Know Its History, Evolution, Present Situation

ಅನೇಕ ವರ್ಷಗಳಿಂದಲೇ ಛಾಯಾಗ್ರಾಹಕ ಸಂಘವು ಛಾಯಾಗ್ರಾಹಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿ ಸೂಕ್ತ ವೃತ್ತಿ ಭದ್ರತೆ ಒದಗಿಸಿಕೊಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆಯಾದರೂ ಸರ್ಕಾರದಿಂದ ಯಾವುದೇ ಸವಲತ್ತು ಈವರೆಗೂ ಸಿಕ್ಕಿಲ್ಲ. ಬಹುಶಃ ರಾಜ್ಯ ಸರ್ಕಾರದ ಮಟ್ಟದಲ್ಲಿ ದೊಡ್ಡ ಮಟ್ಟದ ಲಾಬಿ ಮಾಡುವಲ್ಲಿ ಪ್ರಭಾವಿ ರಾಜಕಾರಣಿಗಳ ಕೊರತೆ ಇರುವುದರಿಂದಲೇ ಇಂದು ಛಾಯಾಗ್ರಾಹಕರು ಸವಲತ್ತು ಪಡೆಯುವುದರಲ್ಲಿ ವಿಫಲವಾಗಿದ್ದಾರೆ.

ಲೇಖಕರು: ಎಸ್. ಆರ್. ವಸಂತ್
ಜಿಲ್ಲಾಧ್ಯಕ್ಷರು, ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ (ರಿ)

English summary
World Photography Day falls on August 19th every year. It was first celebrated on 1837 in France. Here in this article we delve into its history and present situation of photographers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X