ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಓಜೋನ್ ದಿನ; ಭೂಮಿ ಮತ್ತು ಜೀವಸಂಕುಲದ ಉಳಿವಿಗೆ ರಕ್ಷಾ ಕವಚ

|
Google Oneindia Kannada News

ನಮ್ಮ ಭೂಮಿಯಲ್ಲಿ ಕೋಟಿ ಕೋಟಿ ಜೀವರಾಶಿ ಬದುಕುತ್ತಿವೆ. ಈ ಭೂಮಿಯ ವಾತಾವರಣ ಸ್ವಲ್ಪ ಏರುಪೇರಾದರೂ ಅಸಂಖ್ಯ ಜೀವಗಳ ಪ್ರಾಣಕ್ಕೆ ಕುತ್ತು ಬರುತ್ತವೆ. ಜೀವಸಂಕುಲದ ರಕ್ಷಣೆಗೆ ಕಾರಣವಾಗಿರುವ ಹಲವು ಪ್ರಮುಖ ಸಂಗತಿಯಲ್ಲಿ ಓಝೋನ್ ಕೂಡ ಒಂದು. ಭೂಮಿಯ ಮೇಲಿನ ವಾತಾವರಣದಲ್ಲಿ ಇರುವ ಓಝೋನ್ ಪದರ ಒಂದು ರೀತಿಯಲ್ಲಿ ಜೀವಸಂಕುಲಕ್ಕೆ ರಕ್ಷಾ ಕವಚದಂತೆ ಕಾರ್ಯನಿರ್ವಹಿಸುತ್ತದೆ.

ಈ ಓಝೋನ್ ಮತ್ತು ಅದರ ಪದರದ ಮಹತ್ವ ತಿಳಿಯವುದು ಬಹಳ ಮುಖ್ಯ. ಇದಕ್ಕಾಗಿ ಪ್ರತೀ ವರ್ಷವೂ ಸೆಪ್ಟೆಂಬರ್ 16ರಂದು ಓಝೋನ್ ಡೇ ಆಚರಿಸಲಾಗುತ್ತದೆ. ವಿಶ್ವ ಓಝೋನ್ ದಿನವನ್ನು ಓಝೋನ್ ಪದರದ ಸಂರಕ್ಷಣೆಗೆ ಅಂತಾರಾಷ್ಟ್ರೀಯ ದಿನ ಎಂದು ಪರಿಗಣಿಸಲಾಗಿ ಆಚರಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾಲಿನ್ಯ ತಡೆಯಲು ಬರುತ್ತಿವೆ ನೀರಿನ ಕಾರಂಜಿಗಳು; ಇದು ಹೇಗೆ ಸಾಧ್ಯ?ಬೆಂಗಳೂರಿನಲ್ಲಿ ಮಾಲಿನ್ಯ ತಡೆಯಲು ಬರುತ್ತಿವೆ ನೀರಿನ ಕಾರಂಜಿಗಳು; ಇದು ಹೇಗೆ ಸಾಧ್ಯ?

ಓಝೋನ್ ಪದರದ ಮಹತ್ವ ಏನು, ಭೂಮಿಯ ಮೇಲಿನ ವಾತಾವರಣದಲ್ಲಿ ಓಝೋನ್ ನಶಿಸಿದರೆ ಭೂಮಿಗೆ ಆಗುವ ಅಪಾಯ ಏನು ಇತ್ಯಾದಿ ಅಂಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತದೆ.

ಓಝೋನ್‌ನಿಂದ ಏನು ಉಪಯೋಗ?

ಓಝೋನ್‌ನಿಂದ ಏನು ಉಪಯೋಗ?

ಸೂರ್ಯನ ಬಿಸಿಲು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರ ನಿಮಗೆ ಗೊತ್ತಿದ್ದಿರಬಹುದು. ಆದರೆ, ಸೂರ್ಯನಿಂದ ಯುವಿ ರೇ, ಅಥವಾ ಅತಿನೇರಳೆ(UV) ಕಿರಣವೂ ಬರುತ್ತದೆ. ಇದು ಮನುಷ್ಯನ ಆರೋಗ್ಯಕ್ಕೆ ಮಾರಕ. ಈ ಕಿರಣ ಮನುಷ್ಯನ ಚರ್ಮ ಮತ್ತು ಕಣ್ಣಿಗೆ ಹಾನಿ ಮಾಡುತ್ತದೆ. ಕ್ಯಾನ್ಸರ್ ರೋಗವೂ ಇದರಿಂದ ಆಗುತ್ತದೆ.

ಭೂಮಿಯ ಮೇಲೆ ಪದರದ ರೀತಿ ನಿರ್ಮಾಣವಾಗಿರುವ ಓಝೋನ್ ಒಂದು ರೀತಿಯಲ್ಲಿ ಸೂರ್ಯನ ಯುವಿ ಕಿರಣದಿಂದ ಮನುಷ್ಯರಿಗೆ ರಕ್ಷಾ ಕವಚವಾಗಿದೆ. ಈ ಓಝೋನ್ ಪದರವು ಸೂರ್ಯನ ಯುವಿ ಕಿರಣವನ್ನು ಸಾಧ್ಯವಾದಷ್ಟೂ ತಡೆಯುತ್ತದೆ. ಹೀಗಾಗಿ ಅಪಾಯಕಾರಿ ಎನಿಸುವಷ್ಟು ಮಟ್ಟಕ್ಕೆ ಯುವಿ ರೇಡಿಯೇಶನ್ ಭೂಮಿ ತಲುಪುವುದಿಲ್ಲ.

ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್ ಪಾಲಿಸಿ ಜಾರಿಗೆ; ಏನಿದು ಹೊಸ ನೀತಿ?ನರೇಂದ್ರ ಮೋದಿ ಜನ್ಮದಿನದಂದು ರಾಷ್ಟ್ರೀಯ ಲಾಜಿಸ್ಟಿಕ್ಸ್ ಪಾಲಿಸಿ ಜಾರಿಗೆ; ಏನಿದು ಹೊಸ ನೀತಿ?

ತೆಳವಾಗುತ್ತಿದೆ ಓಝೋನ್ ಪದರ

ತೆಳವಾಗುತ್ತಿದೆ ಓಝೋನ್ ಪದರ

ಆತಂಕದ ಸಂಗತಿ ಎಂದರೆ ಓಝೋನ್ ಪದರ ವರ್ಷ ವರ್ಷ ನಶಿಸುತ್ತಿದೆ. ಪ್ರತೀ ವರ್ಷವೂ ಓಝೋನ್ ಪದರ ಶೇ. 4ರಷ್ಟು ತೆಳುವಾಗುತ್ತಿದೆಯಂತೆ. ಇನ್ನೂ ಐದರಿಂದ ಹತ್ತು ವರ್ಷ ಕಾಲ ಓಝೋನ್ ಪದರದ ನಶಿಸುವಿಕೆಯನ್ನು ನಿಯಂತ್ರಿಸುವುದು ಕಷ್ಟ.

ಅಂಟಾರ್ಕ್ಟಿಕಾ ಮೇಲಿರುವ ಓಝೋನ್ ಪದರದಲ್ಲಿ ಒಂದು ರಂಧ್ರ ಇರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ರೀತಿ ರಂದ್ರ ಉಂಟಾಗಲು ಕ್ಲೋರೋಫ್ಲೋರೋಕಾರ್ಬಲ್ ಕಾರ್ಬನ್ ಟೆಟ್ರಾಕ್ಲೋರೈಡ್, ಮೀಥೈಲ್ ಬ್ರೋಮೈಡ್ ಮತ್ತು ಹೈಡ್ರೋಕ್ಲೋರೋಫ್ಲೋರೋಕಾರ್ಬನ್ಸ್ ಇವು ಪ್ರಮುಖ ಕಾರಣಗಳೆನ್ನಲಾಗಿದೆ. ಇವುಗಳಲ್ಲಿ ಬಹುತೇಕವು ಮನುಷ್ಯ ಸೃಷ್ಟಿತ ಮಲಿನಗಳೇ ಆಗಿವೆ.

ಓಝೋನ್ ನಾಶವಾಗುವುದು ಹೇಗೆ?

ಓಝೋನ್ ನಾಶವಾಗುವುದು ಹೇಗೆ?

ಭೂಮಿಯ ಮೇಲಿನ ವಾತಾವರಣದಲ್ಲಿ ಓಝೋನ್ ಪದರ ರೂಪುಗೊಂಡಿರುತ್ತದೆ. ನಮ್ಮ ವಾತಾವರಣಕ್ಕೆ ಸೇರುವ ಕ್ಲೋರಿನ್ ಮತ್ತು ಬ್ರೋಮೈನ್ ಅಣುಗಳು ಓಝೋನ್ ಸಂಪರ್ಕಕ್ಕೆ ಬಂದರೆ ಓಝೋನ್ ಮಾಲಿಕ್ಯೂಲ್‌ಗಳನ್ನು ನಾಶ ಮಾಡುತ್ತವೆ. ವಿಜ್ಞಾನಿಗಳ ಪ್ರಕಾರ ಒಂದು ಕ್ಲೋರಿನ್ ಅಣುವು ಓಝೋನ್‌ನ ಒಂದು ಲಕ್ಷ ಮಾಲಿಕ್ಯೂಲ್‌ಗಳನ್ನು ನಾಶ ಮಾಡಬಲ್ಲುದು. ಓಝೋನ್ ಸೃಷ್ಟಿಯಾಗುವುದಕ್ಕಿಂತ ವೇಗದಲ್ಲಿ ನಾಶವಾಗುವುದು ದುರದೃಷ್ಟಕರ.

ಕ್ಲೋರಿನ್ ಮತ್ತು ಬ್ರೋಮೈನ್ ರಚನೆಯಾಗುವ ಸಂಗತಿಯೂ ಆಸಕ್ತಿಕರ. ಭೂಮಿಯ ವಾತಾವರಣ ಸೇರುವ ಕೆಲ ರಾಸಾಯನಿಕ ಸಂಯುಕ್ತಗಳ ಮೇಲೆ ಸೂರ್ಯನ ಯುವಿ ಕಿರಣ ಬಿದ್ದರೆ ಕ್ಲೋರಿಯನ್ ಮತ್ತು ಬ್ರೋಮೈನ್ ಬಿಡುಗಡೆ ಆಗುತ್ತವೆ. ಇವು ಓಝೋನ್ ಅನ್ನು ನಾಶ ಮಾಡುತ್ತವೆ. ಇಂಥ ರಾಸಾಯನಿಕ ಸಂಯುಕ್ತಗಳನ್ನು ಒಡಿಎಸ್‌ಗಳೆಂದು ಕರೆಯಲಾಗುತ್ತದೆ.

ಕ್ಲೋರೋಫ್ಲೋರೋಕಾರ್ಬನ್, ಕಾರ್ಬನ್ ಟೆಟ್ರಾಕ್ಲೋರೈಡ್, ಹೈಡ್ರೋಕ್ಲೋರೋಫ್ಲೋರೋಕಾರ್ಬನ್ ಮತ್ತು ಮೀಥೈಲ್ ಕ್ಲೋರೋಫಾರ್ಮ್‌ಗಳು ಇಂಥ ಒಡಿಎಸ್‌ಗಳಾಗಿದ್ದು, ಇವುಗಳಿಂದ ಕ್ಲೋರಿನ್ ಉತ್ಪತ್ತಿಯಾಗುತ್ತದೆ.

ಇನ್ನು, ಹೇಲಾನ್ಸ್, ಮೀತೈಲ್ ಬ್ರೋಮೈಡ್ ಮತ್ತು ಹೈಡ್ರೋಬ್ರೋಮೋಫ್ಲೋರೋಕಾರ್ಬನ್‌ಗಳಿಂದ ಬ್ರೋಮೈನ್ ರಚನೆಯಾಗುತ್ತದೆ.

ಈ ಮೇಲಿನ ಓಝೋನ್ ನಾಶಕಾರಿ ಒಡಿಎಸ್‌ಗಳು ವಾತಾವರಣಕ್ಕೆ ಬಿಡುಗಡೆ ಅಗದಂತೆ ಎಚ್ಚರಿಕೆ ವಹಿಸಲು ವಿಶ್ವರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ, ಮನುಷ್ಯನಿಂದ ಕ್ಲೋರೋಫ್ಲೋರೋಕಾರ್ಬನ್‌ಗಳು ಹೇರಳವಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತಿವೆ. ನಾವು ಬಳಸುವ ಫ್ರಿಡ್ಜ್, ಎಸಿ, ಡ್ರೈಕ್ಲೀನಿಂಗ್ ಇತ್ಯಾದಿಯಿಂದ ಈ ರಾಸಾಯನಿಕ ಸಂಯುಕ್ತಗಳು ವಾತಾವರಣ ಸೇರುತ್ತವೆ.

ಅಗ್ನಿಶಾಮಕ ಸಲಕರಣೆಗಳು, ಏರೋಸಾಲ್‌ಗಳು ಇತ್ಯಾದಿಯೂ ಕೂಡ ಓಝೋನ್ ನಾಶಕ್ಕೆ ಕಾರಣವೆಂದು ಬಗೆಯಲಾಗಿದೆ.

ಇತರ ಕಾರಣಗಳು

ಇತರ ಕಾರಣಗಳು

ಅನಿಯಂತ್ರಿಕ ರಾಕೆಟ್ ಉಡಾವಣೆಗಳಿಂದಲೂ ಓಝೋನ್ ಪದರ ನಾಶವಾಗುತ್ತದೆ. ಕೆಲ ವರದಿಗಳ ಪ್ರಕಾರ ಕ್ಲೋರೋಫ್ಲೋರೋಕಾರ್ಬನ್‌ಗಳಿಂದ ಆಗುವ ಹಾನಿಗಿಂತ ಇಂಥ ರಾಕೆಟ್ ಉಡಾವಣೆಗಳಿಂದ ಹೆಚ್ಚು ಹಾನಿಯಾಗುತ್ತದೆ.

ಹಾಗೆಯೇ, ನೈಟ್ರೋಜನ್ ಡೈ ಆಕ್ಸೈಡ್, ನೈಟ್ರೋಜನ್ ಮಾನಾಕ್ಸೈಡ್ ಇತ್ಯಾದಿ ನೈಟ್ರೋಜನ್ ಸಂಯುಕ್ತಗಳೂ ಕೂಡ ಓಝೋನ್‌ಗೆ ಅಪಾಯಕಾರಿ ಎನಿಸಿವೆ.

ಗ್ರೀನ್‌ಹೌಸ್ ಗ್ಯಾಸ್‌ಗಳೂ ಓಝೋನ್ ಪದರ ನಾಶಕ್ಕೆ ಕಾರಣವಾಗಬಹುದು. ನಮ್ಮ ವಾಹನಗಳು ಇಂಥ ಹಸಿರುಮನೆ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ.

ಇದಲ್ಲದೇ, ಮನುಷ್ಯನ ನಿಯಂತ್ರಣದಲ್ಲಿ ಇಲ್ಲದ ನೈಸರ್ಗಿಕ ಕ್ರಿಯೆಗಳೂ ಓಝೋನ್ ನಾಶಕ್ಕೆ ಕಾರಣವಾಬಹುದು. ಸನ್-ಸ್ಪಾಟ್, ಸ್ಟ್ರಾಟೋಸ್ಫಿರಿಕ್ ಅಲೆ ಇವುಗಳ ಕಾರಣದಿಂದ ಶೇ ೨ಕ್ಕಿಂತ ಹೆಚ್ಚು ಮಟ್ಟದಲ್ಲಿ ಓಝೋನ್ ನಾಶವಾಗುವುದಿಲ್ಲ.

ಓಝೋನ್ ಡೇ ಇತಿಹಾಸ

ಓಝೋನ್ ಡೇ ಇತಿಹಾಸ

1994 ರಂದು ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರ ಸಂರಕ್ಷಣೆಗೆ ವಾರ್ಷಿಕ ಅಂತಾರಾಷ್ಟ್ರೀಯ ದಿನವಾಗಿ ಸೆಪ್ಟೆಂಬರ್ 16 ಅನ್ನು ನಿಗದಿ ಮಾಡಾಯಿತು. 1987ರಲ್ಲಿ ಭಾರತ ಸೇರಿ ವಿಶ್ವದ 46 ದೇಶಗಳ ಸರಕಾರಗಳು ಪ್ರೋಟೋಕಾಲ್‌ಗೆ ಸಹಿಹಾಕಿದವು. ಅದೀಗ ಮಾಂಟ್ರಿಯಲ್ ಪ್ರೋಟೊಕಾಲ್ ಎಂದೇ ಹೆಸರು ಪಡೆದಿದೆ.

(ಒನ್ಇಂಡಿಯಾ ಸುದ್ದಿ)

English summary
September 16th, World Ozone Day. Ozone layer protects us from dangerous effects of Sun's UV radiation. UN General Assembly declared September 16th as a day to observe and create awareness about Ozone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X