ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

By Mahesh
|
Google Oneindia Kannada News

ಬೆಂಗಳೂರು, ಮೇ 31:ತಂಬಾಕು ಸೇವನೆಯು ವಿಶ್ವ ಎದುರಿಸಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯದ ಅಪಾಯಗಳಲ್ಲೊಂದಾಗಿದೆ, ವಿಶ್ವಾದ್ಯಂತ 3 ಶತಕೋಟಿ ಧೂಮಪಾನಿಗಳು ತಮ್ಮನ್ನು ಅಪಾಯದಲ್ಲಿಟ್ಟುಕೊಂಡಿದ್ದಾರೆ, ಧೂಮಪಾನಿಗಳು ತಮ್ಮನ್ನು ಮಾತ್ರವಲ್ಲದೆ ಸುತ್ತಮುತ್ತಲಿನವರನ್ನೂ ಅಪಾಯಕ್ಕೆ ಒಡ್ಡುತ್ತಾರೆ.

ಭಾರತದಲ್ಲಿ ತಂಬಾಕು ನಿವಾರಿಸಬಹುದಾದ ರೋಗ ಮತ್ತು ಮರಣಗಳಲ್ಲಿ ಪ್ರಮುಖ ಕಾರಣವಾಗಿದೆ. ಪ್ರತಿವರ್ಷ ಸುಮಾರು 6 ದಶಲಕ್ಷ ಜನರನ್ನು ಧೂಮಪಾನ ಕೊಲ್ಲುತ್ತಿದೆ ಹಾಗೂ ತನ್ನದಲ್ಲದ ತಪ್ಪಿನಿಂದ 6 ಲಕ್ಷ ಜನರು ಇತರರ ಹೊಗೆಯಿಂದಾಗಿ ಸಾಯುತ್ತಿದ್ದಾರೆ. ಆದರೂ, ಲಕ್ಷಾಂತರ ಜನರು ಧೂಮಪಾನ ಮಾಡುತ್ತಾರೆ. ತಂಬಾಕು ಸೇವೆನಯು ಸಿಒಪಿಡಿ ಬರಲು ಅತಿಮುಖ್ಯ ಕಾರಣವಾಗಿದೆ. 4 ರಲ್ಲಿ 1 ನಿರಂತರ ಧೂಮಪಾನಿಗಳು ಸಿಒಪಿಡಿ ಪಡೆಯುವ ಅಪಾಯವನ್ನು ಹೊಂದಿದ್ದಾರೆ.

ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...

ಆಸ್ತಮಾ ಮತ್ತು ಸಿಒಪಿಡಿ ಎರಡರಲ್ಲೂ, ಧೂಮಪಾನವು ಇದರೊಂದಿಗೆ ಸಂಬಂಧಿಸಿದೆ - ಶ್ವಾಸಕೋಶದ ಕ್ರಿಯೆಯಲ್ಲಿ ಕ್ಷೀಣತೆ, ಹೆಚ್ಚಿದ ಮರಣ ಸಂಭವ, ಮತ್ತು ರೋಗಲಕ್ಷಣಗಳು ತೀವ್ರವಾಗುವುದು.

ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ, ಇ ಸಿಗರೇಟು ನಿಷೇಧಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ, ಇ ಸಿಗರೇಟು ನಿಷೇಧ

ಇತರರಿಗೆ ಹೋಲಿಸಿದಂತೆ ಧೂಮಪಾನಿಗಳು ಸಿಒಪಿಡಿ ಪಡೆಯುವ 3 ರಷ್ಟು ಹೆಚ್ಚು ಅಪಾಯವನ್ನು ಹೊಂದಿದ್ದಾರೆ. 40% ರಷ್ಟು ಧೂಮಪಾನಿಗಳು ದೀರ್ಘಕಾಲಿಕ ಬ್ರಾಂಖೈಟಿಸ್ ಪೀಡಿತರಾದರು ಮತ್ತು ಅವರಲ್ಲಿ ಅರ್ಧದಷ್ಟು ಜನರು (20%) ಸಿಒಪಿಡಿ ಪಡೆದರು. ಜೀವನಪರ್ಯಂತ ಧೂಮಪಾನಿಗಳು ತಮ್ಮ ಜೀವಿತಾವಧಿಯಲ್ಲಿ ಸಿಒಪಿಡಿ ಪಡೆಯುವ 50%ರಷ್ಟು ಸಾಧ್ಯತೆ ಹೊಂದಿದ್ದಾರೆ.

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

ಧೂಮಪಾನವು ಕ್ರೋನಿಕ್ ಅಬ್ಸ್ಟ್ರಕ್ಟೀವ್ ಪಲ್ಮನರಿ ಡಿಸೀಸ್ (ಸಿಒಪಿಡಿ - ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶ ರೋಗ) ಕಾರ್ಡಿಯೊ ವಾಸ್ಕ್ಯುಲಾರ್ ಡಿಸೀಸ್ (ಸಿವಿಡಿ) ಮತ್ತು ಶ್ವಾಸಕೋಶದ ಕ್ಯಾನ್ಸರ್ ಪಡೆಯುವ ದೊಡ್ಡ ಅಪಾಯದ ಕಾರಣಗಳಲ್ಲೊಂದಾಗಿದೆ. ಸಿಒಪಿಡಿ ಯ ಸಹಜ ಬೆಳವಣಿಗೆಯನ್ನು ಬದಲಿಸಲು ಸಾನೀತಾದ ಏಕೈಕ ಮಾರ್ಗ ಧೂಮಪಾನ ನಿಲ್ಲಿಸುವುದು. ಇದು ಮಯೊಕಾರ್ಡಿಯಲ್ ಇನ್ಫ್ರಾಕ್ಶನ್ ಮತ್ತು ಶ್ವಾಸಕೋಶದ ಕ್ಯಾನ್ಸರ್‍ನ ಅಪಾಯಗಳನ್ನು ಕಡಿಮೆ ಮಾಡುವ ಪರಿಣಾಮಕಾರಿ ವಿಧಾನವೂ ಆಗಿದೆ.

ಒಟ್ಟು ಮರಣ ಸಾಧ್ಯತೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಪ್ರಮಾಣದ ಅಪಾಯವು ಶ್ವಾಸಕೋಶದ ಕ್ಯಾನ್ಸರ್ ನ ಆರಂಭಿಕ ಹಂತ ಅಥವಾ ಸ್ಮಾಲ್ ಸೆಲ್ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾದ ನಂತರ ಧೂಮಪಾನ ನಿಲ್ಲಿಸುವವರಲ್ಲಿ ಬಹಳ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಅಪಾಯವು ಸುಮಾರು 50%ರಷ್ಟಿದೆ. ಈಗಿನ ತಂಬಾಕು ಬಳಸುವವರಲ್ಲಿ ತಂಬಾಕಿನ ಹೊಗೆಯ ಸೇವೆನೆಯ ಪ್ರಮಾಣವು 35.1% ಇದೆ.

ಧೂಮಪಾನವು ಪಾನಿಗಳನ್ನು 7000ಕ್ಕೂ ಹೆಚ್ಚು ರಾಸಯನಿಕಗಳ ಅಪಾಯಕ್ಕೆ ಒಡ್ಡಿ

ಧೂಮಪಾನವು ಪಾನಿಗಳನ್ನು 7000ಕ್ಕೂ ಹೆಚ್ಚು ರಾಸಯನಿಕಗಳ ಅಪಾಯಕ್ಕೆ ಒಡ್ಡಿ

ಧೂಮಪಾನವು ಪಾನಿಗಳನ್ನು 7000ಕ್ಕೂ ಹೆಚ್ಚು ರಾಸಯನಿಕಗಳ ಅಪಾಯಕ್ಕೆ ಒಡ್ಡಿ, ಇವುಗಳಲ್ಲಿ 250 ಮತ್ತು ಸುಮಾರು 69 ರಾಸಾಯನಿಕಗಳು ಅನುಕ್ರಮವಾಗಿ ಅಪಾಯಕಾರಿ ಮತ್ತು ಕ್ಯಾನ್ಸರ್ ಕಾರಕವೆಂದು ಸಾಬೀತಾಗಿದೆ. ಬಾಯಿಯ ಮತ್ತು ಶ್ವಾಸಕೋಶದ ಕ್ಯಾನ್ಸರ್ ಭಾರತದಲ್ಲಿ ಎಲ್ಲಾ ಕ್ಯಾನ್ಸರ್ ಗಳ 30%ಕ್ಕೂ ಹೆಚ್ಚು ಪ್ರಮಾಣವನ್ನು ಹೊಂದಿದೆ. ಭಾರತದಲ್ಲಿ, ಬಾಯಿಯ ಕ್ಯಾನ್ಸರ್ ನ ಕಾಲು ಭಾಗದಷ್ಟು ತಂಬಾಕು ಬಳಕೆಯಿಂದ ಉಂಟಾಗುತ್ತದೆ.

ತಂಬಾಕಿನ ಹೊಗೆಯಲ್ಲಿರುವ 40ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಉಂಟು ಮಾಡುತ್ತವೆಂದು ಗುರುತಿಸಲಾಗಿದೆ. ಧೂಮಪಾನವು ನಿಮ್ಮ ಶ್ವಾಸಕೋಶಗಳನ್ನು ಮತ್ತು ಶ್ವಾಸ ವ್ಯವಸ್ಥೆಯ ಇತರ ಭಾಗಗಳನ್ನೂ ಹಾನಿಮಾಡುತ್ತದೆ, ನಿಮ್ಮ ರಕ್ತದೊತ್ತಡವನ್ನು ಏರಿಸುತ್ತದೆ, ಮತ್ತು ನಿಮ್ಮ ದೇಹಕ್ಕೆ ಆಮ್ಲಜನಕದ ಪುರೈಕೆಗೆ ಅಡ್ಡಿಯಾಗುತ್ತದೆ; ಇವು ಇದರ ಕೆಲವು ಹಾನಿಕಾರಕ ಪ್ರಭಾವಗಳು.

ಸರಾಸರಿ ಧೂಮಪಾನಿಯು ಈ ಕೆಳಕಂಡ ಅಪಾಯಗಳನ್ನು ಎದುರಿಸುತ್ತಾರೆ

ಸರಾಸರಿ ಧೂಮಪಾನಿಯು ಈ ಕೆಳಕಂಡ ಅಪಾಯಗಳನ್ನು ಎದುರಿಸುತ್ತಾರೆ

ಸರಾಸರಿ ಧೂಮಪಾನಿಯು ಈ ಕೆಳಕಂಡ ಅಪಾಯಗಳನ್ನು ಎದುರಿಸುತ್ತಾರೆ: ಶ್ವಾಸಕೋಶದ, ಗಂಟಲಿನ ಅಥವಾ ಬಾಯಿಯ ಕ್ಯಾನ್ಸರ್ ನಿಂದ ಸಾಯುವ ಅಪಾಯ 14 ಪಟ್ಟು ಹೆಚ್ಚು;ಈಸೊಫಾಗಸ್ ಕ್ಯಾನ್ಸರ್ ನಿಂದ ಸಾಯುವ ಅಪಾಯವು 4ಪಟ್ಟು ಹೆಚ್ಚು; ಹೃದಯಾಘಾತದಿಂದ ಸಾಯುವ ಅಪಾಯವು 2 ಪಟ್ಟು ಹೆಚ್ಚು; ಮತ್ತು ಬ್ಲಾಡರ್‍ನ ಕ್ಯಾನ್ಸರ್ ನಿಂದ ಸಾಯುವ ಅಪಾಯವು 2 ಪಟ್ಟು ಹೆಚ್ಚು.

ಡಾ|| ಮುರಳಿ ಮೋಹನ್ ಬಿ.ವಿ, ಚೆಸ್ಟ್ ವೈದ್ಯ, ನಾರಾಯಣ ಮಜುಂದಾರ್ ಷಾ ಮೆಡಿಕಲ್ ಸೆಂಟರ್, ಬೆಂಗಳೂರು, ಅವರ ಪ್ರಕಾರ, "ನಿಕೋಟೀನ್ (ತಂಬಾಕಿನಲ್ಲಿರುವ ಪ್ರಚೋದಕ ರಾಸಾಯನಿಕ) ಗೆ ದೈಹಿಕ ವ್ಯಸನದಿಂದಾಗಿ ಈ ಅಭ್ಯಾಸವನ್ನು ಬಿಡುವುದು ಕಷ್ಟವಾಗಿದೆ. ನಿಕೋಟೀನ್ ತೀವ್ರವಾಗಿ ವ್ಯಸನಕಾರಕ ಔಷಧವಾಗಿದ್ದು, ಬಲವಾದ ದೈಹಿಕ ಹಂಬಲವನ್ನು ಮತ್ತು ವಾಪಸಿ ಲಕ್ಷಣಗಳನ್ನು ಉಂಟುಮಾಡುತ್ತದೆ, ನರಕೋಶಗಳನ್ನು ಪ್ರಚೋದಿಸುವ ಇತರ ಔಷಧಿಗಳಂತೆ. ಅದೃಷ್ಟವಶಾತ್, ಈ ವಾಪಸಿ ಲಕ್ಷಣಗಳನ್ನು ಮತ್ತು ಹಂಬಲವನ್ನು ನಿಯಂತ್ರಿಸಲು ಸಹಾಯಕವಾಗುವ ವೈದ್ಯಕೀಯ ಚಿಕಿತ್ಸೆಗಳು ಈಗ ಲಭ್ಯವಿದೆ. ಈ ಚಿಕಿತ್ಸೆಯಿಂದ, ಜೀವನದ ಗುಣಮಟ್ಟದಲ್ಲಿ ಮತ್ತು ದೈನಂದಿನ ಲಕ್ಷಣಗಳಲ್ಲಿ ಮತ್ತು ಬ್ರಾಂಖಿಯಲ್ ತೀವ್ರಚಟುವಟಿಕೆಗಳಲ್ಲಿ ಸುಧಾರಣೆಯನ್ನು ಕಾಣಬಹುದು."

ನಿರಂತರವಾಗಿ ಧೂಮಪಾನ ಮಾಡುವ ಸ್ತ್ರೀಯರು ಪುರುಷರಿಗೆ ಹೋಲಿಸಿದಂತೆ

ನಿರಂತರವಾಗಿ ಧೂಮಪಾನ ಮಾಡುವ ಸ್ತ್ರೀಯರು ಪುರುಷರಿಗೆ ಹೋಲಿಸಿದಂತೆ

ಆಶ್ಚರ್ಯಕರವಾಗಿ, ನಿರಂತರವಾಗಿ ಧೂಮಪಾನ ಮಾಡುವ ಸ್ತ್ರೀಯರು ಪುರುಷರಿಗೆ ಹೋಲಿಸಿದಂತೆ, ಅವರು ಸೇದುವ ಸಿಗರೆಟ್ ಗಳಿಗೆ ಹೆಚ್ಚು ಬೇಗನೆ ತಮ್ಮ ಶ್ವಾಸಕೋಶದ ಕ್ರಿಯೆಗಳಲ್ಲಿ ಕ್ಷೀಣೆತೆ ಕಂಡರು. ಆದರೆ, ಪುರುಷರಿಗೆ ಹೋಲಿಸಿದಂತೆ, ಅವರು ಧೂಮಪಾನ ನಿಲ್ಲಿಸಿದಾಗ, ಶ್ವಾಸಕೋಶದ ಕ್ರಿಯೆಯಲ್ಲಿ ಹೆಚ್ಚು ಲಾಭಗಳನ್ನೂ ಕಂಡರು.

ನಿಕೋಟಿನ್ ಬದಲಿ ಚಿಕಿತ್ಸೆಯು (ಎನ್‍ಆರ್‍ಟಿ) ಧೂಮಪಾನಿಗಳು ಧೂಮಪಾನವನ್ನು ತ್ಯಜಿಸಲು ಸಹಾಯಕವಾಗು ಪರಿಣಾಕಾರಿ ಚಿಕಿತ್ಸೆ ಎಂದು ಜಾಗತಿಕವಾಗಿ ಗುರುತಿಸಲಾಗಿದೆ.

ಮಿದುಳಿನ ಕಾಂಡಕ್ಕೆ ಬೇಗನೆ ನಿಕೋಟೀನ್ ಅನ್ನು ಒದಗಿಸಲು ಸಿಗಾರೆಟ್ ಒಂದು ಪರಿಣಾಮಕಾರಿ ವಿಧಾನವಾಗಿದ್ದು, ಅಲ್ಲಿ ಇದು ನಿಕೊಟೊನಿಕ್ ರಿಸೆಪ್ಟರ್ಸ್ ಮೂಲಕ ಡೊಪಮೈನ್ ನ ಬಿಡುಗಡೆಯನ್ನು ಪ್ರಚೋದಿಸುತ್ತದೆ. ನಿಕೊಟಿನಿಕ್ ರಿಸೆಪ್ಟರ್ಸ್ ಗೆ ಸ್ಥಿಮಿತವಾದ ಪ್ರಚೋದನೆ ಒದಗಿಸುವ ಮೂಲಕ ಮತ್ತು ಮುಂಬದಿ ಮಿದುಳಲ್ಲಿ ಡೊಪಾಮೈನ್ ನ ಬಿಡುಗಡೆಯಲ್ಲಿ ಕ್ಷಿಪ್ರ ಏರುಪೇರುಗಳನ್ನು ತಡೆಯುವ ಮೂಲಕ ಸಿಗರೆಟ್ ಗಳ ಹಂಬಲವನ್ನು ನಿವಾರಿಸಿ, ನಿಕೊಟೀನ್ ಹಿಂಪಡೆತ ಲಕ್ಷಣಗಳನ್ನು ತಡೆಯುವ ಉದ್ದೇಶ ಎನ್‍ಆರ್‍ಟಿ.

ಮೇಲಾಗಿ, ಡಾ|| ಮುರಳಿ ಮೋಹನ್ ಬಿ.ವಿ, ಹೇಳಿದರು, "ನಿಮ್ಮ ದೇಹಕ್ಕೆ ನಿಕೊಟೀನ್ ನೀಡುವ ಮೂಲಕ ನಿಕೊಟೀನ್ ಬದಲಿ ಚಿಕಿತ್ಸೆಯು (ಎನ್‍ಆರ್‍ಟಿ) ನಿಕೊಟೀನ್ ಹಿಂಪಡೆ ಮತ್ತು ಹಂಬಕವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. ಬಹಳಷ್ಟು ಸಿಗರೆಟ್ ಗಳಲ್ಲಿ ಕಂಡುಬರುವ ನಿಕೋಟೀನ್ ನ 1/3 ಅಥವಾ ಅರ್ಧ ಪ್ರಮಾಣದ ನಿಕೋಟೀನ್ ಅದರಲ್ಲಿರುತ್ತದೆ.

ಇದು ಒಂದು ಅತ್ಯುತ್ತಮ ಆಯ್ಕೆ ಮತ್ತು ಇದನ್ನು ಪ್ರೋತ್ಸಾಹಿಸಬೇಕಿದೆ

ಇದು ಒಂದು ಅತ್ಯುತ್ತಮ ಆಯ್ಕೆ ಮತ್ತು ಇದನ್ನು ಪ್ರೋತ್ಸಾಹಿಸಬೇಕಿದೆ

ಇದು ಒಂದು ಅತ್ಯುತ್ತಮ ಆಯ್ಕೆ ಮತ್ತು ಇದನ್ನು ಪ್ರೋತ್ಸಾಹಿಸಬೇಕಿದೆ. ಧೂಮಪಾನ ಮಾಡದೇ ನಿಮ್ಮ ರಕ್ತದಲ್ಲಿ ನಿಕೋಟೀನ್ ಅನ್ನು ಸೇರಿಸುವ ಒಂದು ವಿಧಾನ ಎನ್‍ಆರ್‍ಟಿ. ಮತ್ತೆ ಕೆಲವು ನಿಕೋಟೀನ್ ಗಂ, ಪ್ಯಾಚ್, ಇನ್ಹೇಲರ್ಸ್, ಟ್ಯಾಬ್ಲೆಟ್, ಕೊeóÉನ್ಜಸ್ ಮತ್ತು ಸ್ಪ್ರೇಗಳೂ ಸಿಗುತ್ತವೆ. ಬಹಳಷ್ಟು ವೈದ್ಯಕೀಯ ಪರೀಕ್ಷೆಗಳ ಪ್ರಕಾರ ನೆರವಿಲ್ಲದೆ ಧೂಮಪಾನಕ್ಕೆ ಹೋಲಿಸಿದಂತೆ ಎನ್‍ಆರ್‍ಟಿ ಯು ಧೂಮಪಾನವನ್ನು ತ್ಯಜಿಸುವ ಸಾಧ್ಯತೆಯನ್ನು 50-70%ರಷ್ಟು ಹೆಚ್ಚಿಸುತ್ತದೆ."

ಶ್ವಾಸಕೋಶ ರೋಗ ಮತ್ತು ಕ್ಯಾನ್ಸರ್ ಸೇರಿದಂತೆ, ತಂಬಾಕು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಆರೋಗ್ಯದ ಮೇಲೆ ಧೂಮಪಾನದ ದುಷ್ಪರಿಣಾಮಗಳ ನಮ್ಮ ತಿಳುವಳಿಕೆ ಹೆಚ್ಚುತ್ತಿದ್ದಂತೆ ಈ ಆರೋಗ್ಯದ ಪರಿಣಾಮಗಳು ಅಮಾಯಕ ಸುತ್ತಮುತ್ತಲಿನವರಿಗೂ ವಿಸ್ತರಿಸಿದೆ (ಧೂಮಪಾನಿಗಳ ಸುತ್ತಮುತ್ತ ಇರುವವರು). ನೀವು ಇದನ್ನು ತ್ಯಜಿಸಲು ಸಿದ್ಧವಾಗಿದ್ದಲ್ಲಿ, ನಿಮ್ಮ ವೈದ್ಯರೊಂದಿಗೆ ಮಾತನಾಡಿ. ನಿಕೋಟಿನ ನ ನಿಮ್ಮ ವ್ಯಸನವನ್ನು ಗುಣಪಡಿಸುವ ಮತ್ತು ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಲು ಮಾಹಿತಿ ನೀಡುವ ಮೂಲಕ ನೀವು ಯಶಸ್ವಿಯಾಗಿ ತ್ಯಜಿಸಲು ನಿಮಗೆ ಸಹಾಯ ಮಾಡುತ್ತಾರೆ.

ಎನ್‍ಆರ್‍ಟಿ ಮತ್ತು ಅದರ ಲಾಭಗಳ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ. ತಂಬಾಕು ಸೇವನೆಯು ಬಹಳ ಮುಖ್ಯವಾದ ವಿಷಯವಾಗಿದೆ ಮತ್ತು ಅದನ್ನು ಪರಿಹರಿಸಬೇಕಿದೆ ಮತ್ತು ಅಗಾಗ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ವ್ಯಸಕ್ಕಿಂತ ನಾವು ಬಲಿಷ್ಟರಾಗಿ ಹೊರಹೊಮ್ಮುವ ಸಮಯವಿದು. ತಂಬಾಕನ್ನು ನಿರಾಕರಿಸೋಣ ಮತ್ತು ಹಂಬಲವನ್ನು ಹತ್ತಿಕ್ಕೋಣ!

English summary
On this World NO Tobacco Day (May 31, 2018 – Thursday) all-out effort is being made to create awareness amongst the masses to look at options for helping smokers quit smoking. Against this background, doctors are of the view that Nicotine Replacement Therapy (NRT) could an effective form of treatment to help smokers to quit smoking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X