ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ತಂಬಾಕು ರಹಿತ ದಿನ 2022: ಸಿಗರೇಟು ಸೇದುತ್ತಾ ಸಾವಿನ ಮನೆ ಸೇರಿದ 80 ಲಕ್ಷ ಜನ!

|
Google Oneindia Kannada News

ನವದೆಹಲಿ, ಮೇ 31: ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಿಂದಾ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಪಂಚದಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 80 ಲಕ್ಷಕ್ಕೂ ಹೆಚ್ಚು ಜನರು ಸಾವಿನ ಮನೆ ಸೇರುತ್ತಾರೆ. ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವುದರ ಜೊತೆಗೆ ತಂಬಾಕುಯುಕ್ತ ವಸ್ತುಗಳು ಪರಿಸರವನ್ನೂ ಕೆಡಿಸುತ್ತದೆ.

ಧೂಮಪಾನಿಗಳಲ್ಲೇ ಹೆಚ್ಚಾಗುವ ಕೊರೊನಾವೈರಸ್ ತೀವ್ರತೆ ಮತ್ತು ಸಾವು! ಧೂಮಪಾನಿಗಳಲ್ಲೇ ಹೆಚ್ಚಾಗುವ ಕೊರೊನಾವೈರಸ್ ತೀವ್ರತೆ ಮತ್ತು ಸಾವು!

ತಂಬಾಕುಯುಕ್ತ ಬೀಡಿ, ಸಿಗರೇಟು ಹಾಗೂ ತಂಬಾಕು ಸೇವೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು?, ಪ್ರತಿ ವರ್ಷ ಮೇ 31ರಂದು ಏಕೆ ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ?, ಈ ದಿನದ ವಿಶೇಷವೇನು ಹಾಗೂ 2022ರ ಸಾಲಿನಲ್ಲಿ ಆಚರಣೆಯ ಗುರಿಯೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ತಂಬಾಕು ಸಂಬಂಧಿತ ರೋಗಗಳಿಗೆ ನಿಯಂತ್ರಣ

ತಂಬಾಕು ಸಂಬಂಧಿತ ರೋಗಗಳಿಗೆ ನಿಯಂತ್ರಣ

ತಂಬಾಕು ಸೇವನೆಯು 2030ರ ವೇಳೆಗೆ ವಿಶ್ವಸಂಸ್ಥೆಯು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯನ್ನು ಸಾಧಿಸುವ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಆದರೆ, 2030ರ ಹೊತ್ತಿಗೆ ತಂಬಾಕು-ಸಂಬಂಧಿತ ರೋಗಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.

2022ನೇ ಸಾಲಿನ ಗುರಿ

2022ನೇ ಸಾಲಿನ ಗುರಿ "ಪರಿಸರವನ್ನು ರಕ್ಷಿಸಿ

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987ರಲ್ಲಿ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಒಪ್ಪಿಕೊಂಡವು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷವೂ ಒಂದು ಸಂಬಂಧಿತ ವಿಷಯದೊಂದಿಗೆ ಗುರುತಿಸಲಾಗುತ್ತದೆ. ಈ ವರ್ಷದ "ಪರಿಸರವನ್ನು ರಕ್ಷಿಸಿ" ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, "ಪರಿಸರದ ಮೇಲೆ ತಂಬಾಕು ಉದ್ಯಮದ ಹಾನಿಕಾರಕ ಪರಿಣಾಮ ವಿಶಾಲವಾಗಿದೆ. ನಮ್ಮ ಗ್ರಹವು ಈಗಾಗಲೇ ವಿರಳವಾದ ಸಂಪನ್ಮೂಲ ಮತ್ತು ದುರ್ಬಲ ಪರಿಸರ ವ್ಯವಸ್ಥೆಗಳಿಗೆ ಅನಗತ್ಯ ಒತ್ತಡವನ್ನು ಹೆಚ್ಚಿಸುತ್ತದೆ."

ಜಾರ್ಖಂಡ್ ರಾಜ್ಯಕ್ಕೆ ವಿಶೇಷ ಗೌರವ

ಜಾರ್ಖಂಡ್ ರಾಜ್ಯಕ್ಕೆ ವಿಶೇಷ ಗೌರವ

ಪ್ರತಿವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಬಳಕೆಯನ್ನು ನಿಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿಭಿನ್ನ ಪ್ರಯತ್ನಗಳು ಮತ್ತು ಅದರ ಕೊಡುಗೆಗಳನ್ನು ಗುರುತಿಸಲಾಗುತ್ತದೆ. ಈ ಸಂಬಂಧ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಗುರುತಿಸಿ ಈ ದಿನ ಗೌರವಿಸಲಾಗುತ್ತದೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ತಂಬಾಕು ರಹಿತ ದಿನ (WNTD) ಪ್ರಶಸ್ತಿ-2022ಕ್ಕೆ ಜಾರ್ಖಂಡ್ ಅನ್ನು ಆಯ್ಕೆ ಮಾಡಿದೆ.

ತಂಬಾಕು ಸೇವನೆಯ ಆರೋಗ್ಯ ಪರಿಣಾಮಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಾರತವು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ನಡೆಸುತ್ತದೆ. ದೇಶವು ತನ್ನ ಗುರಿಯನ್ನು ಸಾಧಿಸಲು ಸಹಕಾರಿಯಾಗುವ ನೀತಿಗಳು ಮತ್ತು ಉಪಕ್ರಮಗಳನ್ನು ರೂಪಿಸಲು ಇದು ಸಹಾಯವಾಗುತ್ತದೆ. ಈ ಕಾರ್ಯಕ್ರಮವನ್ನು 2012ರಲ್ಲಿ ಜಾರ್ಖಂಡ್‌ಗೆ ವಿಸ್ತರಿಸಲಾಗಿತ್ತು.

ಶ್ವಾಸಕೋಶದ ಕ್ಯಾನ್ಸರ್‌ಗೆ ತಂಬಾಕು ಕಾರಣ

ಶ್ವಾಸಕೋಶದ ಕ್ಯಾನ್ಸರ್‌ಗೆ ತಂಬಾಕು ಕಾರಣ

ತಂಬಾಕು ಸೇವನೆಯು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದು ಗಣನೀಯವಾಗಿ ಸಿಗರೇಟ್ ಸೇದುವ ದುರಾಭ್ಯಾಸವನ್ನು ಹೊಂದಿರುವವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುಮಾರು 80 ರಿಂದ 90ರಷ್ಟು ಜನರು ತಂಬಾಕು ಸೇವನೆಯ ಹಿನ್ನೆಲೆಯನ್ನು ಹೊಂದಿದ್ದಾರೆ. ತಂಬಾಕು ಪುರುಷರ ಸಾವಿಗೆ ಪ್ರಮುಖ ಕಾರಣವಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಧೂಮಪಾನ ಮಾಡುವುದರಿಂದ ಸಾವಿನ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Recommended Video

Vladimir Putin ಬಗ್ಗೆ ಕೇಳಿ ಬಂದ ಆ ವಿಚಿತ್ರ ಸುದ್ದಿ ಏನು | OneIndia Kannada

English summary
World No Tobacco Day 2022: Date, Theme, History and Significance in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X